Personality Trait: ಬುಧವಾರ ಹುಟ್ಟಿದವರು ಹೀಗಿರ್ತಾರೆ..
ಬುಧವಾರ ಹುಟ್ಟಿದವರು ಹೇಗಿರುತ್ತಾರೆ..? ಅವರ ಆಲೋಚನೆಗಳು ಹೇಗಿರುತ್ತವೆ? ಅವರ ಚಿಂತನೆಗಳೇನು? ಅವರ ವ್ಯಕ್ತಿತ್ವ ಎಂಥದ್ದು? ಗುಣ- ಸ್ವಭಾವಗಳು ಹೇಗೆ? ತಮ್ಮ ಪ್ರೀತಿಪಾತ್ರರೊಂದಿಗೆ ಹೇಗಿರುತ್ತಾರೆ? ಎಂಬಿತ್ಯಾದಿಗಳ ಬಗ್ಗೆ ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿದುಕೊಳ್ಳಬಹುದಾಗಿದೆ. ಹೀಗಾಗಿ ಬುಧವಾರ ಜನಿಸಿದವರ ವ್ಯಕ್ತಿ ಚಿತ್ರಣವನ್ನು ತಿಳಿಯೋಣವೇ..
ಹುಟ್ಟಿದ ದಿನ, ರಾಶಿ, ನಕ್ಷತ್ರಗಳು ಹೇಗೆ ಒಬ್ಬ ಮನುಷ್ಯನ ಭವಿಷ್ಯದ (Future) ಮೇಲೆ ಪರಿಣಾಮವನ್ನು ಬೀರುತ್ತದೋ ಹಾಗೆಯೇ ಅವರು ಹುಟ್ಟಿದ ವಾರವೂ ಸಹ ಗುಣ, ಸ್ವಭಾವದ (Nature) ಮೇಲೆ ಪ್ರಭಾವವನ್ನು ಬೀರುತ್ತದೆ. ಒಂದೊಂದು ವಾರದಲ್ಲಿ ಹುಟ್ಟಿದವರ ಹೇಗೆ ಎಂಬುದನ್ನು ನಾವು ತಿಳಿದುಕೊಳ್ಳಬಹುದಾಗಿದೆ. ಜ್ಯೋತಿಷ್ಯ ಶಾಸ್ತ್ರದ ಅನುಸಾರ ಒಂದೊಂದು ವಾರಕ್ಕೆ ಒಂದೊಂದು ರೀತಿಯ ವಿಶೇಷ ಅರ್ಥವಿದೆ. ಹೀಗಾಗಿ ಬುಧವಾರ ಜನಿಸಿದವರು ಕೆಲವೊಂದು ಉತ್ತಮ ಗುಣಗಳನ್ನೂ ಮತ್ತೆ ಕೆಲವು ಅಸಹನೀಯ ಗುಣಗಳನ್ನೂ ಹೊಂದಿರುತ್ತಾರೆ. ಹಾಗಾದರೆ ಬುಧವಾರದಂದು (Wednes Day) ಜನಿಸಿದವರ ಗುಣ, ಸ್ವಭಾವ, ವ್ಯಕ್ತಿತ್ವ, ವೃತ್ತಿಜೀವನ, ಪ್ರಣಯ ಜೀವನದ (Love life) ಬಗ್ಗೆ ನೋಡೋಣ.
ಬುಧವಾರದ ಅಧಿಪತಿ ಗ್ರಹ ಬುಧ. ಇದು ಸೂರ್ಯನಿಗೆ ಹತ್ತಿರವಾದ ಹಾಗೂ ಎಲ್ಲಾ ಗ್ರಹಗಳಿಗಿಂತ ಚಿಕ್ಕದಾಗಿರುವ ಗ್ರಹವಾಗಿದೆ. ಬುಧವಾರ ಜನಿಸಿದವರು ಚಂಚಲ ಸ್ವಭಾವದವರಾಗಿದ್ದು, ಜೀವನದಲ್ಲಿ ಒಂದು ನಿಶ್ಚಿತತೆಯನ್ನು ಹೊಂದಿರುವುದಿಲ್ಲ. ಆದರೆ, ಇವರು ಬಹುಮುಖ ಪ್ರತಿಭೆಯಾಗಿದ್ದು, ಸಂವಹನಶೀಲರಾಗಿದ್ದಾರೆ. ಯಾವುದೇ ಸಮಸ್ಯೆಗಳಿರಲಿ (Problem) ಅದರಿಂದ ಹೊರಬರುವುದು ಹೇಗೆಂದು ಗೊತ್ತು. ಜೊತೆಗೆ ಅಜಾಗರೂಕ ವ್ಯಕ್ತಿತ್ವ ಇರುವುದರಿಂದ ಅಷ್ಟಾಗಿ ನಂಬಿಕೊಳ್ಳಲು ಅರ್ಹರಲ್ಲ ಎಂದೂ ಹೇಳಲಾಗಿದೆ. ಹೊಸ ವಿಷಯವನ್ನು ಕಲಿತುಕೊಳ್ಳಲು ಕಾತರರಾಗಿರುವ ಇವರು, ಸದಾ ಸಕ್ರಿಯರಾಗಿರುತ್ತಾರೆ.
ವ್ಯಕ್ತಿತ್ವ ಹೇಗೆ? (personality)
ಇನ್ನು ಬುಧವಾರ ಜನಿಸಿದವರ ವ್ಯಕ್ತಿತ್ವದ ಬಗ್ಗೆ ತಿಳಿಯಬೇಕೆಂದರೆ ಇವರು, ಎಲ್ಲವನ್ನೂ ವಿಶ್ಲೇಷಣಾತ್ಮಕವಾಗಿಯೇ ನೋಡುತ್ತಾರೆ. ಒಡಹುಟ್ಟಿದವರು ಮತ್ತು ನೆರೆಹೊರೆಯವರೊಂದಿಗೆ ನಿಕಟ ಸಂಬಂಧವನ್ನು ಹೊಂದಲು ಇಚ್ಛೆಪಡುತ್ತಾರೆ. ಸ್ಮಾರ್ಟ್ (Smart) ಚಿಂತನೆ ಇವರನ್ನು ಎಂತಹ ಸವಾಲುಗಳಿದ್ದರೂ ಪರಿಹಾರ ನೀಡುವಂತೆ ಮಾಡಿಬಿಡುತ್ತದೆ. ಇನ್ನೊಬ್ಬರ ಮನವೊಲಿಸುವಲ್ಲಿ ನಿಸ್ಸೀಮರು. ಇವರ ಮಾತನಾಡುವ ಸ್ವಭಾವ ಹಲವರಿಗೆ ಇಷ್ಟವಾಗದೇ ಹೋಗಬಹುದು, ಕೆಲವರಿಗೆ ಇದು ಗತ್ತು ಎಂದೆನಿಸಬಹುದು. ಇವರ ಅದೃಷ್ಟ ಸಂಖ್ಯೆ ಐದು (Five). ಅದೃಷ್ಟ ಮತ್ತು ಯಶಸ್ಸನ್ನು ಪಡೆಯಲು ಈ ಸಂಖ್ಯೆಯನ್ನು ಬಳಸಬಹುದು. ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಲು ಬುಧವಾರ ದೇವರ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಸೇರಿದಂತೆ ದಾನಗಳನ್ನು ಮಾಡಿದರೆ ಒಳಿತು.
ಇದನ್ನು ಓದಿ: Vaastu Tips: ಮನೆಯಲ್ಲಿ ನವಿಲುಗರಿ ಇಟ್ಟರೆ ಧನಲಾಭ ಗ್ಯಾರಂಟಿ
ವೃತ್ತಿಜೀವನ ಹೇಗೆ? (Career)
ಇವರ ವೃತ್ತಿಜೀವನ ಬಹಳ ಉತ್ತಮವಾಗಿರಲಿದ್ದು, ಇವರ ಲೆಕ್ಕಾಚಾರವುಳ್ಳ ಕೆಲಸವು ಕೈಹಿಡಿಯಲಿದೆ. ಜೊತೆಗೆ ಯಾವುದೇ ಕೆಲಸವಿದ್ದರೂ ಅದನ್ನು ಅಷ್ಟೇ ಕುತೂಹಲದಿಂದ ಮಾಡುವ ಸ್ವಭಾವದವರು. ಹೊಸತನ್ನು ಹುಡುಕಲು ಇಷ್ಟಪಡುವವರಾಗಿರುತ್ತಾರೆ. ಜೊತೆಗೆ ಪ್ರಯಾಣಗಳನ್ನು ಇಷ್ಟಪಡುವ ಇವರು, ಹೊಸ ಜನರನ್ನು ಭೇಟಿ ಮಾಡಲು ಕಾತರರಾಗಿರುತ್ತಾರೆ. ಆದರೆ, ವೃತ್ತಿಜೀವನದಲ್ಲಿ ಬಹಳ ಯಶಸ್ಸು ಗಳಿಸಬೇಕೆಂದಿದ್ದರೆ ತಮ್ಮ ಬುದ್ಧಿವಂತಿಕೆಗೆ ಹೆಚ್ಚು ಅವಕಾಶ ಇರುವ ಕ್ಷೇತ್ರದಲ್ಲಿಯೇ ಉದ್ಯೋಗವನ್ನು ಮಾಡಿದರೆ ಉತ್ತಮ.
ಪ್ರೀತಿ ವಿಷಯ ಹೇಗೆ? (Love)
ಮಾತು ಬಲ್ಲವನಿಗೆ ಜಗಳವಿಲ್ಲ ಎಂಬಂತೆ ಮೊದಲೇ ಮಾತುಗಾರರಾಗಿರುವ ಇವರು ತಮ್ಮ ಸಂಗಾತಿಯನ್ನು ಬಹುಬೇಗ ಮನವೊಲಿಸುವ ಕಲೆಯನ್ನು ಹೊಂದಿರುತ್ತಾರೆ. ಹೀಗಾಗಿ ಎಂಥದ್ದೇ ಸನ್ನಿವೇಶ ಎದುರಾದರೂ ತಮ್ಮ ಮಾತುಗಳಿಂದ ಅವರನ್ನು ಮೋಡಿ ಮಾಡಿ ಸಂಬಾಳಿಸಿಬಿಡುತ್ತಾರೆ. ಆದರೆ, ಇವರು ಪ್ರೀತಿಸುವ ಸಂಗಾತಿಯಿಂದ ತುಂಬಾ ಪ್ರೀತಿಸಲ್ಪಡುವ ಇವರಿಗೆ ಅವರಿಂದ ಹೆಚ್ಚಿನ ಬೇಡಿಕೆಗಳೂ ಇರುವುದಿಲ್ಲ. ಆದರೆ, ಎದುರಿನವರ ತಪ್ಪನ್ನು ಮನಸ್ಸಿಗೆ ತೆಗೆದುಕೊಳ್ಳದೇ ಬಹುಬೇಗ ಕ್ಷಮಿಸುವ ಗುಣವನ್ನು ಹೊಂದಿದ್ದಾರೆ.
ಇದನ್ನು ಓದಿ: ಅತ್ತೆ-ಸೊಸೆ ಜಗಳ ಹೆಚ್ಚಾಗಿದ್ರೆ ಈ Vaastu Tips ಪಾಲಿಸಿ ನೋಡಿ..
ಮದುವೆ ಕಥೆ ಏನು..? (Marriage)
ಸಂಬಂಧಗಳನ್ನು (relationship) ಕಾಪಾಡಿಕೊಳ್ಳುವ ವಿಷಯಕ್ಕೆ ಬಂದಾಗ ಕೆಲವೊಮ್ಮೆ ಅಸಡ್ಡೆ ತೋರುವ ವ್ಯಕ್ತಿತ್ವವೂ ಇವರದ್ದಾಗಿದೆ. ಕೆಲವೊಮ್ಮೆ ದ್ವಂದ್ವ ವ್ಯಕ್ತಿತ್ವ ಹಾಗೂ ನಿಲುವನ್ನು ಹೊಂದಿರುವುದು ಸಹ ಸಂಕಷ್ಟಕ್ಕೆ ದೂಡುತ್ತದೆ. ಹೀಗಾಗಿ ನಿಮ್ಮ ಸಂಗಾತಿಯುವ ನಿಮ್ಮನ್ನು ವಿಶ್ವಾಸಾರ್ಹನಲ್ಲ ಎಂಬ ತೀರ್ಮಾನಕ್ಕೆ ಬರಬಹುದು. ಹೀಗಾಗಿ ಕುಟುಂಬದ (Family) ಪ್ರತಿ ವಿಷಯಕ್ಕೂ ಪ್ರಾಮುಖ್ಯತೆ (Importance) ಹಾಗೂ ಆದ್ಯತೆಯನ್ನು ನೀಡಬೇಕಿದೆ. ಸಂಗಾತಿಯೊಂದಿಗೆ ಉತ್ತಮ ಬಂಧ ಸೃಷ್ಟಿಸಲು ಸಂವಹನ ಕೌಶಲ್ಯಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕು.