Asianet Suvarna News Asianet Suvarna News

January Born: ಜನವರಿಯಲ್ಲಿ ಹುಟ್ಟಿದವರು ಹೇಗೆ ಗೊತ್ತಾ?

ಜನವರಿಯಲ್ಲಿ ಹುಟ್ಟಿದವರು ಹೇಗೆ..? ಅವರೇಕೆ ಹಾಗೆ? ನಮಗ್ಯಾಕೆ ಇಷ್ಟವಾಗುತ್ತಾರೆ? ಕಷ್ಟವೂ ಆಗುತ್ತಾರೆ? ಅವರಿಗೆ ಯಾವೆಲ್ಲ ಗುಣ, ಸ್ವಭಾವಗಳು ಇವೆ. ಈ ತಿಂಗಳಿನಲ್ಲಿ ಹುಟ್ಟಿದವರು ಬುದ್ಧಿಶಾಲಿಗಳಾ? ಧೈರ್ಯಶಾಲಿಗಳಾ ಎಂಬಿತ್ಯಾದಿ ವಿಚಾರಗಳನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಿಳಿಯೋಣ...

Personality traits of January born people and their nauture
Author
Bangalore, First Published Jan 5, 2022, 7:00 PM IST

ವ್ಯಕ್ತಿಗಳ ಗುಣ (Nature), ಸ್ವಭಾವಗಳನ್ನು ರಾಶಿ (Zodiac), ನಕ್ಷತ್ರಗಳ (Star) ಜೊತೆಗೆ ಅವರು ಹುಟ್ಟಿದ ತಿಂಗಳಿನಿಂದಲೂ (Birth Month) ಕಂಡುಕೊಳ್ಳಬಹುದು. ಕ್ಯಾಲೆಂಡರ್ ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿ (January) ಜನಿಸಿದವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತವೆ. ನೀವೇ ಜನವರಿಯಲ್ಲಿ ಹುಟ್ಟಿದ್ದರೆ ಅಥವಾ ನಿಮ್ಮವರು ಯಾರಾದರೂ ಹುಟ್ಟಿದ್ದರೆ ಅವರ ವ್ಯಕ್ತಿತ್ವ ಹೇಗೆ? ಗುಣ, ಸ್ವಭಾವ ಎಂಥದ್ದು, ಎಲ್ಲವುಗಳನ್ನು ಜ್ಯೋತಿಷ್ಯ ಶಾಸ್ತ್ರದ (Astrology) ಅನುಸಾರ ತಿಳಿದುಕೊಳ್ಳಬಹುದಾಗಿದೆ. ಈ ತಿಂಗಳಿನಲ್ಲಿ ಜನಿಸಿದ ವ್ಯಕ್ತಿಗಳು ಆತ್ಮವಿಶ್ವಾಸವುಳ್ಳವರು (Confidence),  ಧೈರ್ಯಶಾಲಿಗಳ ಸಹಿತ ಹಲವು ವಿಶೇಷ ಗುಣಗಳನ್ನು ಹೊಂದಿರುತ್ತಾರೆ. ಜೊತೆಗೆ ಒಂದಷ್ಟು ನ್ಯೂನತೆಗಳೂ ಇದ್ದು, ಅವುಗಳ ಬಗ್ಗೆ ನೋಡೋಣ..

ಇಂಪ್ರೆಸ್ಸಿಂಗ್ ಮತ್ತು ಇಂಟ್ರೆಸ್ಟಿಂಗ್ (Impress and Intresting)
ಜನವರಿಯಲ್ಲಿ ಜನಿಸಿದವರು ಬಹಳ ಬುದ್ಧಿವಂತರು. ಇವರಿಗೆ ವಿಶೇಷ ವರ್ಚಸ್ಸು ಇರುತ್ತದೆ. ತಾವೂ ಎಲ್ಲೇ ಇದ್ದರೂ ತಮ್ಮದೊಂದು ಛಾಪು ಮೂಡಿಸುವುದರಲ್ಲಿ ನಿಸ್ಸೀಮರು. ಹೀಗಾಗಿ ಇವರ ವ್ಯಕ್ತಿತ್ವ ಎಲ್ಲರನ್ನೂ ಇಂಪ್ರೆಸ್ ಮಾಡುತ್ತದೆ. ಇವರು ಸದಾ ಹಸನ್ಮುಖಿಗಳಾಗಿದ್ದು, ಯಾವುದಕ್ಕೂ ಟೆನ್ಶನ್ (Tension) ಮಾಡಿಕೊಳ್ಳುವವರಲ್ಲ. ಇನ್ನೊಬ್ಬರಿಗೆ ಖುಷಿ (Happy) ಹಂಚುವುದರಲ್ಲಿಯೂ ಮೊದಲಿಗರು.

ನಾಯಕತ್ವ ಮನೋಭಾವ (Leadership)
ಹುಟ್ಟಿನಿಂದಲೇ ಇವರು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಯಾರೇ ಇದ್ದರೂ ಇವರ ಮುಂದಾಳತ್ವ ಗುಣದಿಂದ ಮುನ್ನಡೆಸಿಕೊಂಡು ಹೋಗುತ್ತಾರೆ. ಪ್ರತಿ ವಿಷಯದಲ್ಲೂ ಎಲ್ಲರಿಗಿಂತ ಮುಂದಿರುವ ಸ್ವಭಾವ ಇವರದ್ದು. ಹೀಗಾಗಿ ಇವರು ಎಲ್ಲರಿಗೂ ಅಚ್ಚುಮೆಚ್ಚು. 

ಕೊಟ್ಟ ಮಾತಿಗೆ ತಪ್ಪಲಾರರು 
ಈ ತಿಂಗಳಿನಲ್ಲಿ ಜನಿಸಿದವರು ಯಾವುದೇ ಕಾರಣಕ್ಕೂ ಮಾತಿಗೆ ತಪ್ಪುವವರಲ್ಲ. ಜೊತೆಗೆ ನೇರ ನುಡಿ ಸ್ವಭಾವ (Straight Forward) ಹೊಂದಿರುವ ಇವರನ್ನು ಕಂಡರೆ ಹಲವರಿಗೆ ಆಗದು. ಈ ವ್ಯಕ್ತಿಗಳು ಏನೇ ವಿಷಯವಿದ್ದರೂ ಸರಿ ಹೆಚ್ಚು ಸಮಯ ಹಾಗೂ ಇನ್ನೊಬ್ಬರ ಸಲಹೆಗೂ ಕಾಯದೆ ನಿರ್ಧಾರವನ್ನು ತೆಗೆದುಕೊಂಡು ಬಿಡುತ್ತಾರೆ. ಇತರರು ಸಲಹೆ ನೀಡಿದರೂ, ನಿರ್ಣಯ (Decision)  ತೆಗೆದುಕೊಳ್ಳುವಾಗ ಸ್ವಂತವಾಗಿಯೇ ನಿರ್ಧರಿಸುವ ಸ್ವಭಾವ ಈ ವ್ಯಕ್ತಿಗಳದ್ದು. 

ಸ್ಮಾರ್ಟ್ ವರ್ಕ್ (Smart Work)
ಇವರು ಕೆಲಸದಲ್ಲಿ ಅತಿಯಾದ ಆಸಕ್ತಿ ತೋರುವುದಲ್ಲದೆ, ಶ್ರದ್ಧೆಯಿಂದ ಮಾಡುತ್ತಾರೆ. ಎಷ್ಟೇ ಕಠಿಣವಾದ ಕೆಲಸವಿದ್ದರೂ ಹಿಂದೆ ಸರಿಯುವವರಲ್ಲ. ಯಾವುದೇ ಕೆಲಸವನ್ನಾದರು ವೇಗವಾಗಿ ಮತ್ತು ಪ್ರಾಮಾಣಿಕತೆಯಿಂದ (Prompt) ಮಾಡುವ ಇವರು ಸ್ಮಾರ್ಟ್ ವರ್ಕರ್ ಆಗಿರುತ್ತಾರೆ.

ಇದನ್ನು ಓದಿ: ಅತ್ತೆ-ಸೊಸೆ ಜಗಳ ಹೆಚ್ಚಾಗಿದ್ರೆ ಈ Vaastu Tips ಪಾಲಿಸಿ ನೋಡಿ..

ನೋಡಲು ಆಕರ್ಷಕ (Attractive) 
ಜನವರಿಯಲ್ಲಿ ಜನಿಸಿದವರು ನೋಡಲು ಆಕರ್ಷಕವಾಗಿರುತ್ತಾರೆ. ಇವರನ್ನು ನೋಡಿ ವಯಸ್ಸು ನಿರ್ಧರಿಸಲಾಗದು. ನೋಡಲು ಅಂದವಾಗಿರುವುದಲ್ಲದೆ, ಆಕರ್ಷಕ ವ್ಯಕ್ತಿತ್ವವನ್ನೂ ಹೊಂದಿರುತ್ತಾರೆ. 

ಪ್ರೀತಿ ಜೀವನ (Love Life)
ಜನವರಿಯಲ್ಲಿ ಜನಿಸಿದ ವ್ಯಕ್ತಿಗಳು ಒಮ್ಮೆ ಪ್ರೀತಿಸಿದರೆ ಎಂದೂ ಕೈಬಿಡಲಾರರು. ಸಂಗಾತಿಯನ್ನು ಪ್ರೀತಿಯಿಂದ ಕಾಣುವ ಇವರು ಅವರಿಗೆ ಬೆಲೆ ಕೊಡುವ, ಗೌರವಿಸುವ ವ್ಯಕ್ತಿತ್ವದವರು. ಪ್ರಣಯದ ವಿಚಾರದಲ್ಲಿಯೂ ಉತ್ತಮವಾಗಿ ನಿಭಾಯಿಸಬಲ್ಲರು.

ಗಂಭೀರ ಸ್ವಭಾವ (Serious)
ಜನವರಿಯಲ್ಲಿ ಜನಿಸಿದವರು ಹಠವಾದಿಗಳು, ಮಹತ್ವಾಕಾಂಕ್ಷಿಗಳು ಮತ್ತು ಗಂಭೀರ ಸ್ವಭಾವವನ್ನು ಹೊಂದಿದವರಾಗಿರುತ್ತಾರೆ. ಇವರು ಆಲೋಚನೆಯಲ್ಲಿ ಇತರರನ್ನು ಮೀರಿಸುತ್ತಾರೆ. ಇವರು ಏನನ್ನು ಯೋಚಿಸುತ್ತಿದ್ದಾರೆಂಬುದನ್ನು ಎದುರಿನ ವ್ಯಕ್ತಿಗೆ ಊಹಿಸಲು ಸಾಧ್ಯವಿರುವುದಿಲ್ಲ. ಜೀವನದಲ್ಲಿ ಬೇಗ ಸಫಲತೆಯನ್ನು ಕಾಣುವ ಆಶಯ ಈ ತಿಂಗಳಿನಲ್ಲಿ ಜನಿಸಿದವರಿಗೆ ಹೆಚ್ಚಾಗಿರುತ್ತದೆ. 

ವೃತ್ತಿ ಭವಿಷ್ಯ (Career)
ಶ್ರಮದ ಜೊತೆ ಅದೃಷ್ಟವನ್ನು ಹೊಂದಿರುವ ವ್ಯಕ್ತಿಗಳು ಇವರಾಗಿರುತ್ತಾರೆ. ಪರಿಶ್ರಮದಿಂದ ಕೆಲಸವನ್ನು ನಿರ್ವಹಿಸುವ ಈ ವ್ಯಕ್ತಿಗಳು ಯಶಸ್ಸನ್ನು ಕಾಣುತ್ತಾರೆ. ಹೆಚ್ಚಿನ ಪರಿಶ್ರಮ ಮತ್ತು ಬುದ್ಧಿವಂತಿಕೆಯಿಂದ ಕಾರ್ಯಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಾರೆ.  

ಇದನ್ನು ಓದಿ: Vaastu Tips: ಮನೆಯಲ್ಲಿ ನವಿಲುಗರಿ ಇಟ್ಟರೆ ಧನಲಾಭ ಗ್ಯಾರಂಟಿ

ಉತ್ತಮ ವಾಗ್ಮಿಗಳು 
ಇವರು ಮಾತಿನ ಮಲ್ಲರು. ಉತ್ತಮ ವಾಗ್ಮಿಗಳಾಗಿದ್ದು, ಎಲ್ಲರನ್ನೂ ಮಾತಿನಿಂದಲೇ ಗೆಲ್ಲುವವರು. ಹಲವು ಬಾರಿ ಎದುರಿಗಿದ್ದವರ ಮಾತು ಪೂರ್ತಿಯಾಗಿ ಮುಗಿಯುವ ಮುಂಚೆಯೇ ಪ್ರತಿಕ್ರಿಯಿಸುವ ಸ್ವಭಾವವನ್ನು ಹೊಂದಿರುತ್ತಾರೆ.

Follow Us:
Download App:
  • android
  • ios