ಉಡುಗೊರೆ ನೀಡ್ಬೇಕು ಎನ್ನುವ ಕಾರಣಕ್ಕೆ ಅನೇಕರು ಸೂಕ್ತವಲ್ಲದ ವಸ್ತುಗಳನ್ನೂ ಉಡುಗೊರೆಯಾಗಿ ನೀಡ್ತಾರೆ. ನಾವು ನೀಡುವ ಉಡುಗೊರೆ ಅದನ್ನು ಪಡೆದವರ ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತದೆ ಎಂಬುದು ನಮಗೆ ತಿಳಿದಿರೋದಿಲ್ಲ.
ಹುಟ್ಟಿದ ದಿನ (Birthday) ವಿರಲಿ, ದೀಪಾವಳಿ (Deepawali) ಹಬ್ಬವಿರಲಿ, ಸಖಾಸುಮ್ಮನೆ ಮನೆಗೆ ಬಂದು ಹೋಗುವ ಅತಿಥಿಯಿರಲಿ, ಗಿಫ್ಟ್ (Gift ) ನೀಡೋದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ (Fashion) ಆಗಿದೆ. ಎಲ್ಲ ಸಂದರ್ಭಗಳಲ್ಲಿಯೂ, ಅತಿಥಿತಿಯಿಂದ ಹಿಡಿದು ಸ್ನೇಹಿತ (Friend) ರವರೆಗೆ ಎಲ್ಲರಿಗೂ ಉಡುಗೊರೆ ನೀಡ್ತೇವೆ. ಮಾರುಕಟ್ಟೆ (Market) ಯಲ್ಲಿ ಸಾಕಷ್ಟು ವೆರೈಟಿ (Variety) ಉಡುಗೊರೆಗಳಿವೆ. ಹಾಗಾಗಿ, ಗಿಫ್ಟ್ ಆಯ್ಕೆ ನಮಗೆ ಕಷ್ಟವಾಗುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ, ಅವರಿಗೆ ಹೊಂದುವ ಉಡುಗೊರೆಯನ್ನು ನೀಡ್ತೇವೆ. ಬಟ್ಟೆಯಿಂದ ಮನೆಯವರೆಗೆ ಅನೇಕ ರೀತಿಯ ಉಡುಗೊರೆಯನ್ನು ನಾವು ನೀಡ್ಬಹುದು. ವಾಸ್ತು ಶಾಸ್ತ್ರದಲ್ಲಿ ಉಡುಗೊರೆ ಬಗ್ಗೆಯೂ ಹೇಳಲಾಗಿದೆ. ಎಲ್ಲ ಉಡುಗೊರೆಗಳನ್ನು ಎಲ್ಲರಿಗೂ ನೀಡ್ಬಾರದು. ಹಾಗೆಯೇ ಕೆಲ ಉಡುಗೊರೆ ನಮಗೆ ಸಿಕ್ಕಿದ್ರೆ ಅದು ನಮ್ಮ ಅದೃಷ್ಟ. ನಿಮ್ಮ ಸ್ನೇಹಿತರಿರಲಿ ಇಲ್ಲ ಬಂಧುಗಳಿರಲಿ, ನಿಮಗೆ ಕೆಲ ಉಡುಗೊರೆಯನ್ನು ನೀಡಿದ್ರೆ ನಿಮ್ಮ ಅದೃಷ್ಟ ಬದಲಾಗಲಿದೆ ಎಂದರ್ಥ. ಕೆಲವೇ ದಿನಗಳಲ್ಲಿ ಹಣದ ಹೊಳೆ ಹರಿಯಲಿದೆ, ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂಬುದರ ಸಂಕೇತವಾಗಿರುತ್ತದೆ. ಇಂದು ಯಾವ ವಸ್ತುಗಳು ಉಡುಗೊರೆ ರೂಪದಲ್ಲಿ ನಿಮಗೆ ಸಿಕ್ಕಿದರೆ ಮಂಗಳಕರ ಎಂಬುದನ್ನು ನಾವಿಂದು ಹೇಳ್ತೇವೆ.
ಈ ವಸ್ತುಗಳ ಉಡುಗೊರೆಯಾಗಿ ಸಿಕ್ಕಿದೆ ಬದಲಾಗುತ್ತೆ ಅದೃಷ್ಟ :
ಕ್ರಾಸ್ಸುಲಾ ( ಜೇಡ್ ಪ್ಲಾಂಟ್) : ಇತ್ತೀಚಿನ ದಿನಗಳಲ್ಲಿ ಗಿಡಗಳನ್ನು ಉಡುಗೊರೆ ರೂಪದಲ್ಲಿ ಕೊಡ್ತಾರೆ. ಇದು ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ವಾಸ್ತು ಶಾಸ್ತ್ರದಲ್ಲಿ ಮುಳ್ಳಿನ ಗಿಡಗಳನ್ನು ಅಶುಭವೆಂದು ಭಾವಿಸಲಾಗುತ್ತದೆ. ಮುಳ್ಳಿನ ಗಿಡಗಳು ಮನೆಯಲ್ಲಿ ಇರಬಾರದು, ಹಾಗೆ ಅವುಗಳನ್ನು ಉಡುಗೊರೆ ನೀಡಬಾರದು. ಆದ್ರೆ ನಿಮಗೆ ಉಡುಗೊರೆ ರೂಪದಲ್ಲಿ ಕ್ರಾಸ್ಸುಲಾ ಗಿಡ ಸಿಕ್ಕಿದ್ರೆ ಖುಷಿಪಡಿ. ಇದು ಬಹಳ ಶುಭಕರ ಸಂಕೇತವಾಗಿದೆ. ಕ್ರಾಸ್ಸುಲಾ ಗಿಡವನ್ನು ಧನದ ದೇವರು ಕುಬೇರನಿಗೆ ಹೋಲಿಕೆ ಮಾಡಲಾಗುತ್ತದೆ. ಇದನ್ನು ಮನೆಯಲ್ಲಿಟ್ಟರೆ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದರ ಜೊತೆಗೆ ಆರ್ಥಿಕ ವೃದ್ಧಿಯಾಗುತ್ತದೆ.
ASTRO TIPS: ಉಗುರು ಕಚ್ಚಿ, ಕಾಲು ಅಲ್ಲಾಡಿಸಿದ್ರೆ ಖಾತೇಲಿ ದುಡ್ಡು ಖಾಲಿ
ಆರ್ಥಿಕ ವೃದ್ಧಿ ಸಂಕೇತ ಲಾಫಿಂಗ್ ಬುದ್ಧ : ಉಡುಗೊರೆ ರೂಪದಲ್ಲಿ ನಿಮಗೆ ಲಾಫಿಂಗ್ ಬುದ್ಧ ಸಿಕ್ಕಿದ್ರೆ ಇದು ಬಹಳ ಒಳ್ಳೆಯದು. ಶೀಘ್ರದಲ್ಲಿಯೇ ನಿಮ್ಮ ಅದೃಷ್ಟ ಬದಲಾಗಲಿದೆ ಎಂಬ ಸಂಕೇತ. ವಾಸ್ತು ಶಾಸ್ತ್ರದ ಜೊತೆಗೆ ಫೆಂಗ್ಶುಯಿಯಲ್ಲಿ ಕೂಡ ಲಾಫಿಂಗ್ ಬುದ್ಧನನ್ನು ಶುಭಕರವೆಂದು ಭಾವಿಸಲಾಗಿದೆ. ಉಡುಗೊರೆಯಾಗಿ ಲಾಫಿಂಗ್ ಬುದ್ಧ ಸಿಕ್ಕಿದ್ರೆ ಸುಖ – ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎಂದು ಅರ್ಥೈಸಿಕೊಳ್ಳಿ.
ಪಿಯೋನಿಯಾ : ಹೂವಿನ ಗಿಡ ಮಾತ್ರವಲ್ಲ ಹೂವಿನ ಬೊಕ್ಕೆಯನ್ನು ಉಡುಗೊರೆಯಾಗಿ ನೀಡುವ ಫ್ಯಾಷನ್ ಹೆಚ್ಚಾಗಿದೆ. ಯಾವುದೇ ವ್ಯಕ್ತಿ ನಿಮಗೆ ಉಡುಗೊರೆ ರೂಪದಲ್ಲಿ ಪಿಯೋನಿಯಾ ಹೂವನ್ನು ನೀಡಿದ್ರೆ ಶೀಘ್ರದಲ್ಲೇ ನಿಮ್ಮ ಒಳ್ಳೆ ದಿನಗಳು ಶುರುವಾಗಲಿವೆ ಎಂದರ್ಥೈಸಿಕೊಳ್ಳಿ. ಈ ಹೂವು ನಿಮ್ಮ ಜೀವನದಲ್ಲಿ ಗುಡ್ ಲಕ್ ತರುತ್ತದೆ. ಫೆಂಗ್ಶುಯಿಯಲ್ಲಿ, ಪಿಯೋನಿಯಾ ಹೂವನ್ನು ಹೂವುಗಳ ರಾಣಿಯೆಂದು ಕರೆಯಲಾಗುತ್ತದೆ. ಪಿಯೋನಿಯಾವನ್ನು ಪ್ರೀತಿ ಹಾಗೂ ಸೌಂದರ್ಯದ ಪ್ರತೀಕವೆಂದು ಭಾವಿಸಲಾಗುತ್ತದೆ. ನೀವು ಪ್ರೀತಿಸುವ ವ್ಯಕ್ತಿಗೆ ಈ ಹೂವನ್ನು ನೀವು ಉಡುಗೊರೆಯಾಗಿ ನೀಡಬಹುದು.
ಶಿವಮಂದಿರದಲ್ಲಿ ಹೀಗೆ ಪೂಜೆ ಮಾಡಿದ್ರೆ ಕಷ್ಟಗಳೆಲ್ಲ ದೂರ ದೂರ
ಐದು ಕುದುರೆಗಳಿರುವ ಫೋಟೋ : ವಾಸ್ತು ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಗೆ ಓಡ್ತಿರುವ ಕುದುರೆ ಸಿಕ್ಕಿದ್ರೆ ಅದು ಕೂಡ ಶುಭದ ಸಂಕೇತವಾಗಿರುತ್ತದೆ. ಐದು ಕುದುರೆಗಳಿರುವ ಹಾಗೂ ಓಡ್ತಿರುವ ಕುದುರೆ ಫೋಟೋವನ್ನು ಬಹಳ ಶುಭವೆಂದು ನಂಬಲಾಗುತ್ತದೆ. ಇದನ್ನು ಬಹಳ ಶಕ್ತಿಶಾಲಿ ಎನ್ನಲಾಗುತ್ತದೆ. ಇದು ಉಡುಗೊರೆಯಾಗಿ ಸಿಕ್ಕಿದ್ರೆ ಶೀಘ್ರವೇ ನಿಮಗೆ ಪ್ರಮೋಷನ್ ಆಗಲಿದೆ. ಕುದುರೆಯನ್ನು ಪರಿಶ್ರಮ ಹಾಗೂ ಸಮಯಕ್ಕೆ ಹೋಲಿಕೆ ಮಾಡಲಾಗುತ್ತದೆ. ಹಾಗಾಗಿಯೇ ಮನೆಯಲ್ಲಿ ಕುದುರೆ ಫೋಟೋಗಳನ್ನು ಹಾಕುವಂತೆ ವಾಸ್ತು ಶಾಸ್ತ್ರದಲ್ಲಿ ಸಲಹೆ ನೀಡಲಾಗುತ್ತದೆ.

