Asianet Suvarna News Asianet Suvarna News

ಶಿವಮಂದಿರದಲ್ಲಿ ಹೀಗೆ ಪೂಜೆ ಮಾಡಿದ್ರೆ ಕಷ್ಟಗಳೆಲ್ಲ ದೂರ ದೂರ

ಶಿವನ ಜೊತೆಗೆ ಶಕ್ತಿಯನ್ನು ಮತ್ತು ಹನುಮಂತನನ್ನು ಸಹ ಪೂಜಿಸಲಾಗುತ್ತದೆ. ಶಿವನ ದೇವಸ್ಥಾನದಲ್ಲಿ ಹನುಮಂತನನ್ನು ಆರಾಧಿಸುವುದರಿಂದ ಕಷ್ಟಗಳೆಲ್ಲ ನಿವಾರಣೆಯಾಗಿ ಜೀವನದಲ್ಲಿ ಸುಖ ಮತ್ತು ಸಮೃದ್ಧಿ ಪ್ರಾಪ್ತವಾಗುತ್ತದೆ. ಹಾಗಾಗಿ ಶಿವನ ದೇವಸ್ಥಾನದಲ್ಲಿ ವಿಶೇಷವಾಗಿ ಶಕ್ತಿ ಮತ್ತು ಹನುಮಂತನನ್ನು ಆರಾಧಿಸುವುದರಿಂದಾಗುವ ಲಾಭಗಳ ಬಗ್ಗೆ ತಿಳಿಯೋಣ...

Doing hanuman pooja in Shiv mandir relieves from all difficulties
Author
Bangalore, First Published May 31, 2022, 6:50 PM IST | Last Updated May 31, 2022, 6:50 PM IST

ಆಗಾಗ ಕಷ್ಟಗಳು (Problems) ಬರುತ್ತಿದ್ದರೆ, ಎಷ್ಟೇ ಜಪ – ತಪಗಳನ್ನು ಮಾಡಿದರೂ, ಪೂಜೆ – ಪುನಸ್ಕಾರಗಳನ್ನು ಕೈಗೊಂಡರೂ ಕಷ್ಟದ ತೀವ್ರತೆ ಅಷ್ಟಾಗಿ ಕಡಿಮೆಯಾಗದಿದ್ದರೆ ಇದಕ್ಕೆ ಹಲವಾರು ಕಾರಣಗಳು (Reasons) ಇರುತ್ತವೆ. ಕಷ್ಟಗಳ ನಿವಾರಣೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಅನೇಕ ರೀತಿಯ ಪರಿಹಾರಗಳನ್ನು (Solution) ತಿಳಿಸಿರುವುದರ ಜೊತೆಗೆ ದೇವರುಗಳ ಪೂಜೆಯನ್ನು ಮಾಡಬೇಕೆಂದು ಸೂಚಿಸಿದ್ದಾರೆ. ಅಂತಹ ಪರಿಹಾರಗಳಲ್ಲಿ ಶಿವಮಂದಿರದಲ್ಲಿ ಹನುಮಂತನನ್ನು ಪೂಜಿಸುವುದು ಸಹ ಒಂದಾಗಿದೆ.

ಹೌದು. ಕೇಳಲು ವಿಚಿತ್ರವೆನಿಸಿದರೂ ಕಷ್ಟ ನಿವಾರಣೆಗೆ ಇದು ಸಿದ್ಧ ಉಪಾಯವಾಗಿದೆ. ಶಿವ ಮಂದಿರದಲ್ಲಿ (Shiva Temple) ಶಿವಗಣಗಳು, ಮಹಾಶಕ್ತಿ ಮತ್ತು ಹನುಮಂತನ ವಿಗ್ರಹ ಇರುವುದನ್ನು ನೋಡಿರಬಹುದು. ಹಾಗಾಗಿ ಶಿವನ ದೇವಸ್ಥಾನಗಳಲ್ಲಿ ಮಹಾದೇವನ  ಜೊತೆಯಲ್ಲಿ ಮಹಾಶಕ್ತಿಯನ್ನು ಪೂಜಿಸಲಾಗುತ್ತದೆ. ಜೊತೆಗೆ ಹನುಮಂತನನ್ನು (Hanumanta) ಸಹ ವಿಶೇಷವಾಗಿ ಆರಾಧಿಸಲಾಗುತ್ತದೆ. ಹನುಮಂತನನ್ನು ರುದ್ರ ದೇವರ ಅವತಾರವೆಂದು ಕರೆಯಲಾಗುತ್ತದೆ. ಹಾಗಾಗಿ ಶಿವನ ದೇವಸ್ಥಾನಗಳಲ್ಲಿ ಹನುಮಂತನಿಗೆ ವಿಶೇಷ ಪೂಜೆ ಮತ್ತು ಅರ್ಚನೆಗಳು ನೆರವೇರುತ್ತವೆ. ಅಷ್ಟೇ ಅಲ್ಲದೆ ವ್ಯಕ್ತಿಯ ಜೀವನದ ಎಲ್ಲ ಕಷ್ಟಗಳು ಕಳೆದು ಸುಖ – ಸಂತೋಷ ಬರಬೇಕೆಂದರೆ ಶಿವನ ದೇವಸ್ಥಾನದಲ್ಲಿ ಹನುಮಂತನಿಗೆ ವಿಶೇಷವಾದ ಪೂಜೆಯನ್ನು (Pooja) ಸಲ್ಲಿಸಬೇಕೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ಇನ್ನಷ್ಟು ವಿಚಾರಗಳನ್ನು ತಿಳಿಯೋಣ...

ಈ ರಾಶಿವರು ಖರ್ಚು ಮಾಡೋದು ಕಡಿಮೆ, ಹಾಗಾದ್ರೆ Savings ಮಾಡ್ತಾರಾ?

ಶಿವಶಕ್ತಿ ಪೂಜೆ (Shivashakti Pooja)
ಶಿವನ ಜೊತೆಗಿರುವ ಶಕ್ತಿಯನ್ನು ಆರಾಧಿಸುವುದರಿಂದ ಶಕ್ತಿಯ ಕೃಪೆಯ ಜೊತೆಗೆ ಶಿವನ ಪ್ರಸನ್ನತೆಯನ್ನು ಸಹ ಪಡೆಯಬಹುದಾಗಿದೆ. ಇದರಿಂದ ಧನ ಸಂಪತ್ತು (Wealth), ಸುಖ – ಸಮೃದ್ಧಿ ನೆಲೆಸುತ್ತದೆ. ಹಾಗಾಗಿ ಭಕ್ತಿ (Devotion) ಮತ್ತು ಶ್ರದ್ಧೆಯಿಂದ ಶಿವನ ಜೊತೆಗಿರುವ ಶಕ್ತಿಯನ್ನು (Power) ಆರಾಧಿಸುವಾಗ ವಿಶೇಷವಾದ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ಜಪಿಸುತ್ತಾ ಶಿವನ ಆರಾಧನೆ ಮಾಡುವುದು ಅತ್ಯಂತ ಶ್ರೇಯಸ್ಕರವೆಂದು ಹೇಳಲಾಗುತ್ತದೆ. ಪ್ರಾತಃಕಾಲದಲ್ಲಿ ಮತ್ತು ಸಂಧ್ಯಾ ಸಮಯದಲ್ಲಿ ಸ್ನಾನ (Bath) ಮಾಡಿ ಸ್ವಚ್ಛ ವಸ್ತ್ರ (Clean Dress) ಧಾರಣ ಮಾಡಿಕೊಂಡು ಶಿವಲಿಂಗದ ಮೇಲೆ ನೀರು (Water) ಅಥವಾ ಹಾಲಿನಿಂದ (Milk) ಅಭೀಷೇಕ ಮಾಡಬೇಕು. ಇದರಿಂದ ಸಕಲ ಕಷ್ಟಗಳು ನಿವಾರಣೆಯಾಗುವುದಲ್ಲದೆ, ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿ ನೆಲೆಸುತ್ತದೆ.

ಮಂತ್ರ ಹೀಗಿದೆ : ಓಂ ನಮೋ ಮಹಾದೇವಾಯ, ಓಂ ನಮಃ ಶೂಲಪಾಣಯೇ. ಓಂ ನಮೋ ಮಹೇಶಾಯ, ಓಂ ನಮೋ ಹರಾಯ, ಓಂ ನಮಃ ಶಿವಾಯ, ಓಂ ನಮೋ ಪಶುಪತಯೇ. ಓಂ ನಮಃ ಪಿನಾಕಿನೇ /

ಶಿವ ಮಂತ್ರವನ್ನು ಪಠಿಸಿದ ನಂತರ ದತೂರ, ಬಿಲ್ವ ಪತ್ರೆ, ಶ್ವೇತ ಪುಷ್ಪ, ಶ್ವೇತ ವಸ್ತ್ರಗಳನ್ನು ಶಿವನಿಗೆ ಅರ್ಪಿಸಬೇಕು. ಅದಾದ ಬಳಿಕ ಸಿಹಿಯನ್ನು ನೈವೇದ್ಯ ಮಾಡಬೇಕು. ಶಿವನ ಕೃಪೆಗೆ ಶಿವ ಸ್ತ್ರೋತ್ರವನ್ನು ಪಠಿಸಬೇಕು. ಕೊನೆಯಲ್ಲಿ ಶಿವನಿಗೆ ಆರತಿ ಮಾಡುವಾಗ ಮನೋಕಾಮನೆಗಳನ್ನು ಈಡೇರಿಸುವಂತೆ ಪ್ರಾರ್ಥನೆ (Prayer)  ಮಾಡಿಕೊಳ್ಳಬೇಕು. ಕುಟುಂಬಕ್ಕೆ (Family) ಒಳಿತಾಗಲೆಂದು, ತಪ್ಪಾಗಿದ್ದರೆ ಕ್ಷಮಿಸುವಂತೆ ಬೇಡಿಕೊಳ್ಳುವುದರಿಂದ ಜೀವನದಲ್ಲಿ (Life) ಸುಖ – ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ.

ಮನಶ್ಶಾಂತಿಗೆ ಮಂತ್ರ ಪರಿಹಾರ, ಅನುಸರಿಸಿ ಈ ಸರಳ ಟಿಪ್ಸ್!

ಹನುಮಂತನ ಪೂಜೆ 
ಶಿವಾಲಯದಲ್ಲಿ ಹನುಮಂತನನ್ನು ಪೂಜಿಸುವುದರಿಂದ ವಿಶೇಷ ಫಲ ಪ್ರಾಪ್ತಿಯಾಗುತ್ತದೆ. ಹನುಮಂತನನ್ನು ಪೂಜಿಸುವುದರಿಂದ ಬುದ್ಧಿ ಮತ್ತು ಧೈರ್ಯ (Wisdom and Courage) ಸಿಗುತ್ತದೆ. ಅಷ್ಟೇ ಅಲ್ಲದೆ ಸಹನೆ ಸಹ ಪ್ರಾಪ್ತವಾಗುತ್ತದೆ. ಹನುಮಂತನ ಮಂತ್ರಗಳನ್ನು, ಹನುಮಾನ್ ಚಾಲಿಸಾ, ಹನುಮಾನ್ ಅಷ್ಟಕಗಳನ್ನು ಪಠಿಸುವುದರಿಂದ ಆಂಜನೇಯನ ಕೃಪೆ ಪ್ರಾಪ್ತವಾಗುವುದಲ್ಲದೆ, ಶಿವನ ಆಶೀರ್ವಾದವೂ ಸಹ ಸಿಗುತ್ತದೆ. ಹನುಮಂತನಿಗೆ ಸುಗಂಧ ಬರಿತ ಎಣ್ಣೆಯನ್ನು, ಸಿಂಧೂರ, ಬೆಲ್ಲ, ಬಾಳೆ ಹಣ್ಣನ್ನು ಅರ್ಪಿಸಬೇಕು. ಇದರಿಂದ ಕಷ್ಟಗಳೆಲ್ಲ ನಿವಾರಣೆಯಾಗಿ, ಜೀವನದಲ್ಲಿ ಸುಖ ಮತ್ತು ಸಮೃದ್ಧಿ ನೆಲೆಸುತ್ತದೆ.

Latest Videos
Follow Us:
Download App:
  • android
  • ios