ತಾಯಿ ಲಕ್ಷ್ಮಿಯ ಕೃಪೆ ಸದಾ ಇರಬೇಕು. ಪ್ರತಿಯೊಬ್ಬರೂ ಲಕ್ಷ್ಮಿಯ ಆಶೀರ್ವಾದ ಪಡೆಯಲು ಬಯಸ್ತಾರೆ. ಆದ್ರೆ ಎಲ್ಲರಿಗೂ ತಾಯಿ ಒಲಿಯುವುದಿಲ್ಲ. ಇದಕ್ಕೆ ನಮ್ಮ ಕೆಲ ಅಭ್ಯಾಸಗಳು ಕೂಡ ಕಾರಣವಾಗುತ್ವೆ ಎಂಬುದು ನಿಮಗೆ ಗೊತ್ತಾ? 

ಜೀವನ (Life) ಸುಖಮಯವಾಗಿರಬೇಕೆಂದು ಪ್ರತಿಯೊಬ್ಬ ವ್ಯಕ್ತಿ ಬಯಸ್ತಾನೆ. ಅದಕ್ಕೆ ಸಾಧ್ಯವಾದಷ್ಟು ಪ್ರಯತ್ನ (Effort) ಗಳನ್ನು ಮಾಡ್ತಾನೆ. ಆದ್ರೆ ಆತನಿಗೆ ತಿಳಿದೋ, ತಿಳಿಯದೆಯೋ ಅನೇಕ ತಪ್ಪು (Wrong) ಗಳನ್ನು ಮಾಡಿರ್ತಾನೆ. ಆ ತಪ್ಪುಗಳು ಅವನ ಮನೆಯ ಸಂತೋಷ (Happiness) ಮತ್ತು ಶಾಂತಿ (Peace) ಯನ್ನು ಹಾಳು ಮಾಡುತ್ತದೆ. ಕೆಲವರು ಹಗಲಿರುಳು ಶ್ರಮವಹಿಸಿ ಕೆಲಸ ಮಾಡ್ತಾರೆ. ದುಡಿಮೆಗೆ ತಮ್ಮ ಜೀವನವನ್ನು ಮುಡುಪಿಡ್ತಾರೆ. ಪ್ರಾಮಾಣಿಕವಾಗಿ ಪ್ರಯತ್ನವನ್ನು ನಡೆಸ್ತಾರೆ. ಆದ್ರೆ ಎಷ್ಟೇ ಪ್ರಯತ್ನಿಸಿದ್ರೂ ಅವರಿಗೆ ಯಶಸ್ಸು ಸಿಗುವುದಿಲ್ಲ. ಇದು ಅವರ ಹತಾಶೆಗೆ ಕಾರಣವಾಗುತ್ತದೆ. ಈ ಅಪಜಯಕ್ಕೆ ಕಾರಣ ಪ್ರತಿ ನಿತ್ಯ ನಾವು ಮಾಡುವ ಕೆಲ ಕೆಲಸಗಳಾಗಿರುತ್ತವೆ. ನಮಗೆ ಆ ಕೆಲಸಗಳು ನಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಸಂಗತಿಯೇ ತಿಳಿದಿರುವುದಿಲ್ಲ. ವ್ಯಕ್ತಿ ಜೀವನದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುವ ಸಂಗತಿಗಳು ಯಾವುವು ಎಂಬುದನ್ನು ನಾವಿಂದು ಹೇಳ್ತೇವೆ. ನೀವು ಆ ಕೆಲಸಗಳನ್ನು ಮಾಡ್ತಿದ್ದರೆ ಇಂದೇ ಅದನ್ನು ಬಿಡಿ. ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಪ್ರಯತ್ನಿಸಿ.

ಲಕ್ಷ್ಮಿ ಕೋಪಕ್ಕೆ ಕಾರಣವಾಗುತ್ತೆ ಈ ಕೆಲಸ :
ಉಗುರು ಕಚ್ಚುವ ಅಭ್ಯಾಸ: ಅನೇಕರಿಗೆ ಉಗುರು ಕಚ್ಚುವ ಅಭ್ಯಾಸವಿರುತ್ತದೆ. ಕುಳಿತಲ್ಲಿಯೇ ಉಗುರು ಕಚ್ಚಲು ಶುರು ಮಾಡ್ತಾರೆ. ಯಾವುದೋ ಗಾಢ ಆಲೋಚನೆಯಲ್ಲಿರುವಾಗ ಅಥವಾ ಸುಮ್ಮನೆ ಟಿವಿ ನೋಡ್ತಾ ಕುಳಿತಾಗ ಉಗುರನ್ನು ಕಚ್ಚಲು ಶುರು ಮಾಡ್ತಾರೆ. ಈ ಕೆಟ್ಟ ಅಭ್ಯಾಸವು ಅವರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜನರಿಗೆ ಅದರ ಬಗ್ಗೆ ತಿಳಿದಿಲ್ಲ. ಉಗುರುಗಳನ್ನು ಕಚ್ಚುವುದ್ರಿಂದ ವ್ಯಕ್ತಿ ಜಾತಕದಲ್ಲಿರುವ ಸೂರ್ಯನ ಪ್ರಭಾವ ದುರ್ಬಲವಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳಲಾಗಿದೆ. ಇದರಿಂದ ಉದ್ಯೋಗ-ವ್ಯವಹಾರ ಇತ್ಯಾದಿಗಳಲ್ಲಿ ವ್ಯಕ್ತಿ ನಷ್ಟ ಅನುಭವಿಸಬೇಕಾಗುತ್ತದೆ. ಅದೇ ಸಮಯದಲ್ಲಿ ವ್ಯಕ್ತಿಯ ಗೌರವಕ್ಕೆ ಧಕ್ಕೆಯಾಗುವ ಕೆಲಸವಾಗುತ್ತೆ. 

HAIRCUT ದಿನ ನಿಗದಿ ಮಾಡುವ ಮುನ್ನ, ಶುಭ-ಅಶುಭಗಳ ಕಡೆ ಇರಲಿ ಗಮನ

ಕಾಲನ್ನು ಸದಾ ಅಲ್ಲಾಡಿಸುವ ಅಭ್ಯಾಸ : ಮೊದಲೇ ಹೇಳಿದಂತೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮನುಷ್ಯನ ಕೆಟ್ಟ ಅಭ್ಯಾಸಗಳು ಅವನ ಉನ್ನತಿಗೆ ಅಡ್ಡಿಯುಂಟು ಮಾಡುತ್ತದೆ. ಅನೇಕರು, ಕುಳಿತಾಗ ಕಾಲುಗಳನ್ನು ಅಲುಗಾಡಿಸುತ್ತಿರುತ್ತಾರೆ. ಅದು ಅವರಿಗೆ ತಿಳಿಯದೇ ಆಗ್ತಿರುತ್ತದೆ. ಕಾಲನ್ನು ಅಲ್ಲಾಡಿಸುತ್ತಿದ್ದರೆ ವೈವಾಹಿಕ ಜೀವನದಲ್ಲಿ ಸುಖ-ಶಾಂತಿ ಕೊನೆಗೊಳ್ಳುತ್ತದೆ. ದಾಂಪತ್ಯ ಜೀವನದ ಮಧುರತೆ ಕೊನೆಗೊಳ್ಳುತ್ತದೆ. ಅಲ್ಲದೆ ಕುಟುಂಬಕ್ಕೆ ಸಂಬಂಧಿಸಿದ ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ, ಕುಳಿತಾಗ ಅಪ್ಪಿತಪ್ಪಿಯೂ ಕಾಲನ್ನು ಅಲುಗಾಡಿಸಬೇಡಿ. ಸಂಜೆ ಸಮಯದಲ್ಲಿ ಕಾಲುಗಳನ್ನು ಅಲುಗಾಡಿಸುತ್ತಿದ್ದರೆ ಮನೆಗೆ ಬಂದ ಲಕ್ಷ್ಮಿ ವಾಪಸ್ ಹೋಗ್ತಾಳೆ ಎಂಬ ನಂಬಿಕೆಯೂ ಇದೆ. ಕಾಲುಗಳನ್ನು ಅಲುಗಾಡಿಸುವುದು ಅನಾರೋಗ್ಯದ ಸಂಕೇತವೂ ಆಗಿದೆ.

Vastu Tips : ಎಣಿಸಿ ರೊಟ್ಟಿ ಮಾಡೋದು, ಲೆಕ್ಕ ಹಾಕಿ ತಿನ್ನೋದು ಒಳ್ಳೇದಲ್ಲ

ಅಸ್ತವ್ಯಸ್ತ ಅಡುಗೆ ಮನೆ : ಮನೆಯ ಮುಖ್ಯ ಭಾಗಗಳಲ್ಲಿ ಅಡುಗೆ ಮನೆ ಒಂದು. ಅಡುಗೆ ಮನೆ ಸದಾ ಸ್ವಚ್ಛವಾಗಿರಬೇಕು. ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಸರಿಯಾಗಿ ಜೋಡಿಸಿಟ್ಟಿರಬೇಕು. ಅಡುಗೆ ಮನೆಯ ವಸ್ತುಗಳು ಅಸ್ತವ್ಯಸ್ತವಾಗಿದ್ದರೆ ವೆಚ್ಚ ಹೆಚ್ಚಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅಡುಗೆ ಮನೆ ಕೊಳಕಾಗಿದ್ದರೆ, ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದರೆ ತಾಯಿ ಲಕ್ಷ್ಮಿ ಅಸಮಾಧಾನಗೊಳ್ಳುತ್ತಾಳೆ. ಸದಾ ಮನೆಯಲ್ಲಿ ಲಕ್ಷ್ಮಿ ನೆಲೆ ನಿಲ್ಲಬೇಕು, ಆರ್ಥಿಕ ವೃದ್ಧಿಯಾಗ್ಬೇಕು, ಆರೋಗ್ಯದಲ್ಲಿ ವೃದ್ಧಿಯಾಗ್ಬೇಕು, ಕುಟುಂಬದಲ್ಲಿ ಸಂತೋಷ ನೆಲೆಸಿರಬೇಕೆಂದ್ರೆ ಅಡುಗೆ ಮನೆ ಸದಾ ಕ್ಲೀನ್ ಆಗಿರುವಂತೆ ನೋಡಿಕೊಳ್ಳಬೇಕು. ಅಡುಗೆ ಮಾಡಿದ ನಂತ್ರ ಸಿಂಕ್ ನಲ್ಲಿ ಕೊಳಕು ಪಾತ್ರೆಯನ್ನು ಇಡಬಾರದು. ಅವುಗಳನ್ನು ಸ್ವಚ್ಛಗೊಳಿಸಬೇಕು. ಹಾಗೆಯೇ ಅಡುಗೆ ಮನೆ ಗ್ಯಾಸ್ ಸ್ಟೌವ್ ಹಾಗೂ ಗ್ಯಾಸ್ ಕಟ್ಟೆಯನ್ನು ಸ್ವಚ್ಛವಾಗಿಡಬೇಕು.