Chikkamagaluru: ಇಂದು Eid Milad; ಭದ್ರತೆಗೆ 600 ಪೊಲೀಸರು ನಿಯೋಜನೆ
- ಇಂದು ಈದ್ ಮಿಲಾದ್: ಭದ್ರತೆಗೆ 600 ಪೊಲೀಸ್
- 27 ಜನ ಸೆಕ್ಟರಲ್ ಮ್ಯಾಜಿಸ್ಪ್ರೇಟ್ ನಿಯೋಜನೆ, 5 ಕಡೆಗಳಲ್ಲಿ ಚೆಕ್‌ಪೋಸ್ಟ್
- ಇಪ್ಪತ್ತು ಸಾವಿರ ಮುಸ್ಲಿಂ ಸಮುದಾಯದವರು ಭಾಗವಹಿಸುವ ಸಾಧ್ಯತೆ
ಚಿಕ್ಕಮಗಳೂರು (ಅ.9) : ಕೋವಿಡ್ ಸೋಂಕು ನಿಯಂತ್ರಣದ ನಿಬಂಧನೆಗಳಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಅದ್ಧೂರಿಯನ್ನು ಕಾಣದ ಈದ್ ಮಿಲಾದ್ ಹಬ್ಬವನ್ನು ಈ ಬಾರಿ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಮುಹಮ್ಮದ್ ಪೈಗಂಬರರ ಬೋಧನೆ ಇಸ್ಲಾಂಗೆ ಸೀಮಿತವಲ್ಲ, ಇಡೀ ಮಾನವಕುಲಕ್ಕೆ ದಾರಿದೀಪ
ಈದ್ ಮಿಲಾದ್ ಆಚರಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಭಾನುವಾರ ನಡೆಯಲಿರುವ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯದ ಸುಮಾರು 20 ಸಾವಿರ ಜನರು ಭಾಗವಹಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಇಲಾಖೆ ಅಂದಾಜು ಮಾಡಿದೆ.
ಚಿಕ್ಕಮಗಳೂರು ನಗರ ಮತೀಯವಾಗಿ ಸೂಕ್ಷ್ಮ ಪ್ರದೇಶ. ಮುಸ್ಲಿಂ ಸಮುದಾಯದ ಮೆರವಣಿಗೆ ಹಿಂದೂ ಧರ್ಮೀಯರು ವಾಸವಾಗಿರುವ ಪ್ರದೇಶದಿಂದ ಹಾದು ಹೋಗುವುದರಿಂದ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಸುಮಾರು 600 ಪೊಲೀಸರನ್ನು ಬಂದೋಬಸ್ತಿಗಾಗಿ ನಿಯೋಜನೆ ಮಾಡಲಾಗಿದೆ. ಧಾರ್ಮಿಕ ಕೇಂದ್ರಗಳ ಸುತ್ತಮುತ್ತ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದರ ಜತೆಗೆ ವಾಹನಗಳ ಸುಗಮ ಸಂಚಾರಕ್ಕಾಗಿ ಕೆಲವು ಮಾರ್ಗಗಳಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಬದಲಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ದಂಡಾಧಿಕಾರಿಗಳು:
ಹೆಚ್ಚಿನ ಬಂದೋಬಸ್‌್ತ ಜತೆಗೆ ಜಿಲ್ಲಾಡಳಿತ ಸ್ಥಳದಲ್ಲಿಯೇ ತಕ್ಷಣಕ್ಕೆ ಅಧಿಕಾರ ಚಲಾವಣೆ ಮಾಡಲು 27 ಮಂದಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ (ಸೆಕ್ಟರಲ್ ಮ್ಯಾಜಿಸ್ಪ್ರೇಟ್) ನಿಯೋಜನೆ ಮಾಡಿದೆ. ಜಿಲ್ಲಾ ಕೇಂದ್ರವನ್ನು ಸಂಪರ್ಕಿಸುವ ರಸ್ತೆಗಳಲ್ಲಿರುವ ಎಬಿಸಿ, ಹಿರೇಮಗಳೂರು, ಹಾಲೇನಹಳ್ಳಿ, ಉಪ್ಪಳ್ಳಿ, ಪವಿತ್ರವನ ಬಳಿ ಒಟ್ಟು 5 ತಾತ್ಕಾಲಿಕ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಇಲ್ಲಿಗೆ ದಿನದ 24 ಗಂಟೆ ಕಾರ್ಯನಿರ್ವಹಿಸಲು 10 ಮಂದಿ ಸೆಕ್ಟರಲ್ ಮ್ಯಾಜಿಸ್ಪ್ರೇಟ್ ನಿಯೋಜನೆ ಮಾಡಲಾಗಿದೆ. ಇದರ ಜತೆಗೆ 26 ಮಂದಿ ಸಹಾಯಕ ಸಿಬ್ಬಂದಿ ನಿಯೋಜಿಸಲಾಗಿದೆ. ಈ ಸಿಬ್ಬಂದಿ ಅ.7 ರಿಂದ ಅ.10ರ ಬೆಳಿಗ್ಗೆ 8 ಗಂಟೆಯವರೆಗೆ ಕಾರ್ಯ ನಿರ್ವಹಿಸಲಿದ್ದಾರೆ.
ಹನುಮಂತಪ್ಪ ವೃತ್ತ, ಎನ್‌ಎಂಸಿ ವೃತ್ತ, ಅಂಡೇಛತ್ರ ಸರ್ಕಲ್‌ನಲ್ಲಿ ತಲಾ ಓರ್ವ ಸೆಕ್ಟಲರ್ ಮ್ಯಾಜಿಸ್ಪ್ರೇಟ್ ಹಾಗೂ ಇಬ್ಬರು ಸಹಾಯಕ ಸಿಬ್ಬಂದಿ ನಿಯೋಜಿಸಲಾಗಿದೆ. ಇದರ ಜತೆಗೆ ಮೆರವಣಿಗೆ ಹೋಗುವ ಸಂದರ್ಭದಲ್ಲಿ ಮೆರವಣಿಗೆಯ ಮುಂಭಾಗ, ಹಿಂಭಾಗ ಹಾಗೂ ಎಡಭಾಗ, ಬಲಭಾಗದಲ್ಲಿ ಸೆಕ್ಟಲರ್ ಮ್ಯಾಜಿಸ್ಪ್ರೇಟ್ ಇರಲಿದ್ದಾರೆ. 10 ರಿಸವ್‌ರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಇದೇ ಮೊದಲ ಭಾರಿ ಚಿಕ್ಕಮಗಳೂರು ನಗರದಲ್ಲಿ 600 ಮಂದಿ ಪೊಲೀಸರು, 27 ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.
ಮೆರವಣಿಗೆ ರೂಟ್
ಚಿಕ್ಕಮಗಳೂರು ನಗರದ ಅಂಡೇಛತ್ರದಿಂದ ಭಾನುವಾರ ಮಧ್ಯಾಹ್ನ 2.30ಕ್ಕೆ ಈದ್ ಮಿಲಾದ್ ಮೆರವಣಿಗೆ ಹೊರಡಲಿದೆ. ಇಲ್ಲಿಂದ ಎಂ.ಜಿ. ರಸ್ತೆ, ಪೋಸ್ಟ್ ಆಫೀಸ್ ಸರ್ಕಲ್, ನಾಯ್ಡು ರಸ್ತೆ, ತೊಗರಿಹಂಕಲ್ ಸರ್ಕಲ್, ಐ.ಜಿ. ರಸ್ತೆ, ಎನ್.ಎಂ.ಸಿ. ವೃತ್ತ, ಶೃಂಗಾರ್ ಸರ್ಕಲ್, ಆಶೀರ್ವಾದ್ ಸರ್ಕಲ್, ಬಸವನಹಳ್ಳಿ ಶಾಲೆ ರಸ್ತೆ, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆ ಮುಖಾಂತರ ಅಂಡೇಛತ್ರಕ್ಕೆ ತಲುಪಲಿದೆ.
Krishna Janmabhoomi case: ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದ: ಅಕ್ಟೋಬರ್ 3 ರಿಂದ ವಿಚಾರಣೆ ಆರಂಭ
ಹಬ್ಬದ ಅಂಗವಾಗಿ ಚಿಕ್ಕಮಗಳೂರು ನಗರದ ನಿಗದಿತ ರಸ್ತೆಗಳಲ್ಲಿ ಭಾನುವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯ ರಾತ್ರಿ 12 ಗಂಟೆವರೆಗೆ ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ವಾಹನ ನಿಲುಗಡೆ ಎಲ್ಲೆಲ್ಲಿ ನಿಷೇಧ?
- ಎಂ.ಜಿ. ರಸ್ತೆಯಲ್ಲಿ ಹನುಮಂತಪ್ಪ ವೃತ್ತದಿಂದ ಪೋಸ್ಟ್ ಆಫೀಸ್ ವೃತ್ತ
- ಪೋಸ್ಟ್ ಆಫೀಸ್ ವೃತ್ತದಿಂದ ತೊಗರಿಹಂಕಲ್ ವೃತ್ತದವರೆಗೆ
- ತೊಗರಿಹಂಕಲ್ ವೃತ್ತದಿಂದ ಶೃಂಗಾರ್ ಸರ್ಕಲ್
- ಶೃಂಗಾರ್ ಸರ್ಕಲ್‌ನಿಂದ ಆಶೀರ್ವಾದ ಸರ್ಕಲ್
- ಆಶೀರ್ವಾದ ಸರ್ಕಲ್ ನಿಂದ ಬಸವನಹಳ್ಳಿ ಮುಖ್ಯ ರಸ್ತೆ
- ತಾಲೂಕು ಕಚೇರಿಯಿಂದ ಹನುಮಂತಪ್ಪ ವೃತ್ತದವರೆಗೆ