Asianet Suvarna News Asianet Suvarna News

Birth Date and Food: ಹುಟ್ಟಿದ ದಿನಕ್ಕೂ ಆಹಾರಕ್ಕೂ ಇದೆ ನಂಟು

ಭಾರತೀಯ ಪದ್ಧತಿಯಲ್ಲಿ ಹುಟ್ಟಿದ ದಿನ, ಸಮಯದ ಮೇಲೆ ರಾಶಿ, ನಕ್ಷತ್ರ ಇತ್ಯಾದಿ ಗುಂಪುಗಳನ್ನಾಗಿ ವಿಂಗಡಿಸುವುದು ಗೊತ್ತೇ ಇದೆ. ಹಾಗೆಯೇ, ಹುಟ್ಟಿದ ದಿನಾಂಕದ ಮೇಲೆ ದೇಹ ಹಾಗೂ ಆರೋಗ್ಯ ಸ್ಥಿತಿಯನ್ನೂ ಅಂದಾಜಿಬಹುದು. ಅದರ ಪ್ರಕಾರ, ನಮ್ಮ ಆಹಾರಶೈಲಿ ರೂಢಿಸಿಕೊಂಡರೆ ಭಾರೀ ಉತ್ತಮ.
 

Eat food according to your birth date and zodiac signs
Author
Bangalore, First Published Feb 11, 2022, 6:13 PM IST | Last Updated Feb 11, 2022, 6:13 PM IST

ಕಂಡಿದ್ದನ್ನೆಲ್ಲ ತಿನ್ನುವ, ಕುಡಿಯುವ ಅಭ್ಯಾಸ (Habit) ನಮ್ಮದು. ದೇಹಕ್ಕೆ ಬೇಕೋ ಬೇಡವೋ, ಬಾಯಿಗೆ ರುಚಿಕರವೆಂದು ಏನೆಲ್ಲ ತಿಂದು ಆರೋಗ್ಯ (Health) ಹಾಳುಮಾಡಿಕೊಳ್ಳುತ್ತೇವೆ. ಬದಲಿಗೆ, ದೇಹಕ್ಕೆ ಅಗತ್ಯವಾದವುಗಳಷ್ಟನ್ನೇ ತಿಂದರೆ ನಮ್ಮ ಆರೋಗ್ಯ ಖಂಡಿತ ಚೆನ್ನಾಗಿರುತ್ತದೆ. ನಿಮಗೆ ಗೊತ್ತೇ ಇದೆ, ಎಲ್ಲರ ದೇಹಪ್ರಕೃತಿ(Nature)ಯೂ ಒಂದೇ ರೀತಿಯಲ್ಲಿರುವುದಿಲ್ಲ. ಒಬ್ಬರಿಗೆ ಆಗಿಬರುವ ಆಹಾರ (Food) ಇನ್ನೊಬ್ಬರಿಗೆ ಹಿತವನ್ನೇ ನೀಡುತ್ತದೆ ಎನ್ನುವ ಗ್ಯಾರಂಟಿಯಿಲ್ಲ. ಹೀಗಾಗಿ, ಹುಟ್ಟಿದ ದಿನಾಂಕಕ್ಕೆ (Birth Date) ತಕ್ಕಂತೆ ಆಹಾರವಸ್ತುಗಳ ಸೇವನೆ ಮಾಡುವುದರಿಂದ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ.

•   ಸಂಖ್ಯೆ 1 (1, 10, 19, 28)
ಈ ದಿನಗಳಂದು ಜನಿಸಿದವರು ಆರೋಗ್ಯವಂತರಾಗಿರುವುದು ಹೆಚ್ಚು. ರೋಗ(Illness)ದ ಸಮಸ್ಯೆ ಕಡಿಮೆ. ಹಾಗೂ ಇತರರಿಗಿಂತ ಬಹಳ ಬೇಗ ರೋಗದಿಂದ ಚೇತರಿಸಿಕೊಳ್ಳುತ್ತಾರೆ. ಆದರೂ ವಿಟಮಿನ್‌ ಸಿ ಉಳ್ಳ ಹಣ್ಣುಗಳು (Fruits), ಮೊಟ್ಟೆ, ಲಿಂಬೆ, ಅಂಜೂರ ಇತ್ಯಾದಿ ಸೇವನೆ ಮಾಡುವುದು ಒಳಿತು. ಜತೆಗೆ, ಜೇನುತುಪ್ಪ ಹಾಗೂ ಮೀಟ್‌ ಸೇವನೆ ಮಾಡುವುದು ಉತ್ತಮ.

•  ಸಂಖ್ಯೆ 2 (2, 11, 20, 29)
ಈ ವ್ಯಕ್ತಿಗಳ ಆರೋಗ್ಯ ಸೂಕ್ಷ್ಮವಾಗಿರುತ್ತದೆ. ಬಾಲ್ಯದಲ್ಲಿ ಹೊಟ್ಟೆ (Stomach) ಮತ್ತು ಜೀರ್ಣಾಂಗದ ಸಮಸ್ಯೆ ಹೊಂದಿರುವುದು ಸಾಮಾನ್ಯ. ಬೆಳೆದಂತೆಲ್ಲ ಆರೋಗ್ಯವೂ ಸುಧಾರಿಸುತ್ತದೆ. ಬೇಯಿಸಿದ ತರಕಾರಿಗಳು, ಹಣ್ಣುಗಳು, ನೈಸರ್ಗಿಕ ಸಿಹಿ (Natural Sweet) (ಅಂದರೆ ಜೇನು, ಬೆಲ್ಲ ಇತ್ಯಾದಿ) ಇವರಿಗೆ ಉತ್ತಮ ಆಹಾರ. ಮೀನು ಹಾಗೂ ರಸಭರಿತ ಹಣ್ಣುಗಳನ್ನು ಇವರು ಸೇವಿಸಬೇಕು.

ಈ ರಾಶಿಯವರು ಹುಟ್ಟಿನಿಂದಲೇ ಸಿರಿವಂತರು

•   ಸಂಖ್ಯೆ 3 (3, 12, 21, 30)
ಇವರಿಗೆ ಹೆಚ್ಚು ತಿನ್ನುವ (Overeat) ಅಭ್ಯಾಸವಿರುತ್ತದೆ. ಹೀಗಾಗಿ, ಬೊಜ್ಜು ಬರಬಹುದು. ಪ್ರೊಟೀನ್‌ ಯುಕ್ತ ಹಣ್ಣು ಮತ್ತು ತರಕಾರಿ (Vegetables) ಇವರಿಗೆ ಉತ್ತಮ. ಪ್ಲಮ್‌ ಹಾಗೂ ಟೊಮ್ಯಾಟೋ ಸೇವಿಸಬೇಕು. ಜತೆಗೆ, ಬೇರು ಮೂಲದ ತರಕಾರಿ ಅಂದರೆ, ಬೀಟ್‌ ರೂಟ್‌, ಕ್ಯಾರೆಟ್‌ ಇಂಥವುಗಳನ್ನು ಹೆಚ್ಚು ಬಳಸಬೇಕು. ಇವರಿಗೆ ಮಸಾಲೆಯುಕ್ತ (Spicy) ಆಹಾರ ಸೂಕ್ತವಲ್ಲ.

•    ಸಂಖ್ಯೆ 4 (4, 13, 22, 31)
ಸದೃಢ ಪರಿಚಲನೆ (Circulation) ವ್ಯವಸ್ಥೆ ಆರೋಗ್ಯಕ್ಕೆ ಅತ್ಯಂತ ಅಗತ್ಯ. ಆದರೆ, ಇವರಿಗೆ ಇದೇ ಸಮಸ್ಯೆಯಾಗಿರುತ್ತದೆ. ಹೃದಯಕ್ಕೆ (Heart) ಸುಸ್ತು (Strain) ಮಾಡುವ ಆಹಾರದಿಂದ ಇವರು ದೂರವಿರಬೇಕು. ಸೋಡಿಯಂ ಕ್ಲೋರೈಡ್‌ (ಅಂದರೆ ಉಪ್ಪು) ಅನ್ನು ಸೂಕ್ತ ಪ್ರಮಾಣದಲ್ಲಿ ಆಹಾರದೊಂದಿಗೆ ಬಳಕೆ ಮಾಡಬೇಕು. ಇವರ ಆರೋಗ್ಯಕ್ಕೆ ಹೊಂದುವ ಆಹಾರವೆಂದರೆ, ಕೆಂಪಕ್ಕಿ, ಧಾನ್ಯ, ಗೋಧಿ (ಸಂಸ್ಕರಣೆಯಾಗದ ಇಡೀ ಗೋಧಿ).

•   ಸಂಖ್ಯೆ 5 (5, 14, 23)
ಆತಂಕ (Anxiety), ಹೆಚ್ಚು ಚಿಂತಿಸುವುದು ಇವರ ಸ್ವಭಾವ. ಏಕಾಗ್ರತೆ ಇಲ್ಲದಿರುವುದು, ಮಾನಸಿಕವಾಗಿ ಸ್ವಲ್ಪ ದುರ್ಬಲ ಸ್ಥಿತಿ ಇವರದ್ದು. ಇದರಿಂದ ಇವರ ನರವ್ಯೂಹ ಹೆಚ್ಚು ಬಾಧಿತವಾಗುತ್ತದೆ. ಶ್ವಾಸಕೋಶ, ನ್ಯೂರಾಲಾಜಿಕಲ್‌ ವ್ಯವಸ್ಥೆಗೆ ಅನುಕೂಲವಾಗಲು ಇವರು ಪ್ಲಮ್‌ (Plum) ಜಾತಿಯ ಹಣ್ಣುಗಳು, ಹಸಿರು ಸೊಪ್ಪು, ಸಿಟ್ರಸ್‌ ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಹಾಗೂ ಸೂಕ್ತ ಪ್ರಮಾಣದಲ್ಲಿ ವಿಶ್ರಾಂತಿ ಪಡೆಯಬೇಕು.

•   ಸಂಖ್ಯೆ 6 (6, 15, 24)
ದೈಹಿಕವಾಗಿ ಸದೃಢತೆ ಹೊಂದಿರುತ್ತಾರೆ. ಸಾಕಷ್ಟು ತಿನ್ನುತ್ತಾರೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಇವರಿಗೆ ಭಾರೀ ಕಡಿಮೆ. ಥೈರಾಯ್ಡ್‌ ಹಾಗೂ ಮಲಬದ್ಧತೆ (Constipation) ಇವರು ಎದುರಿಸುವ ಸಾಮಾನ್ಯ ತೊಂದರೆಗಳು. ಕಾಲಿಫ್ಲವರ್‌, ಮೂಲಂಗಿ, ಕ್ರ್ಯಾನ್‌ ಬೆರಿ ಇವರಿಗೆ ಹೆಚ್ಚು ಸೂಕ್ತ.

•   ಸಂಖ್ಯೆ 7 (7, 16, 25)
ಇವರು ಆರೋಗ್ಯಕರ ಆಹಾರ ಸೇವನೆ ಮಾಡುವ ಅಭ್ಯಾಸ ಹೊಂದಿದ್ದಾರೆ. ಮಿದುಳು (Brain), ಲಿವರ್‌ ಕಾರ್ಯಕ್ಷಮತೆಗೆ ಪೂರಕ ಆಹಾರ ಸೇವನೆ ಮಾಡುವುದು ಉತ್ತಮ ವಿಚಾರ. ಪ್ರೊಟೀನ್‌ ಮತ್ತು ಕಬ್ಬಿಣಾಂಶಭರಿತ ಆಹಾರ, ಮೊಟ್ಟೆ, ಬಾರ್ಲಿ, ಒಣಹಣ್ಣುಗಳು ಇವರ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತವೆ. ಸಿಟ್ರಸ್‌ ಯುಕ್ತ ಅಂದರೆ, ಕಿತ್ತಳೆ, ಲಿಂಬೆ, ಟೊಮ್ಯಾಟೋದಂತಹ ಪದಾರ್ಥಗಳೂ ಉತ್ತಮ.

•    ಸಂಖ್ಯೆ 8 (8, 17, 26)
ಇವರ ಮೂಳೆಗಳು ಮತ್ತು ದಂತ ಸಾಮಾನ್ಯವಾಗಿ ದುರ್ಬಲವಾಗಿರುತ್ತವೆ. ಕ್ಯಾಲ್ಸಿಯಂ ಹೊಂದಿರುವ ಲೆಂಟಿಲ್ಸ್‌, ಹಾಲು (Milk) ಮುಂತಾದವುಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಬೇಕು. ಇದರಿಂದಾಗಿ ಮೂಳೆಗಳು ಸದೃಢಗೊಳ್ಳುತ್ತವೆ. ಇವರು ಹೊಟ್ಟೆಯಲ್ಲಿ ಉರಿಯುಂಟು ಮಾಡುವ ಆಹಾರ ವರ್ಜಿಸುವುದು ಸೂಕ್ತ.

ಸಂಖ್ಯಾಶಾಸ್ತ್ರ ಮತ್ತು ಸೂಪರ್ ಜೋಡಿ

•    ಸಂಖ್ಯೆ 9 (9, 18, 27)
ಇವರು ಆರೋಗ್ಯವಂತರು. ರೋಗನಿರೋಧಕ ಶಕ್ತಿ ಹೊಂದಿರುತ್ತಾರೆ. ಸಾಮಾನ್ಯವಾಗಿ ಮೊಡವೆ (Acne) ಮತ್ತು ಎದೆಯುರಿ ಸಮಸ್ಯೆಗಳನ್ನು ಹೊಂದಿರುತ್ತಾರೆ. ಹೀಗಾಗಿ, ಮಸಾಲೆಯುಕ್ತ ಆಹಾರ ಸೇವನೆ ಹಿತಕರವಲ್ಲ. ಹಸಿರು ತರಕಾರಿ, ಸೌತೆಕಾಯಿ, ಸೊಪ್ಪುಗಳನ್ನು ಬಳಕೆ ಮಾಡಬೇಕು.

Latest Videos
Follow Us:
Download App:
  • android
  • ios