ಪಠಾಣ್ ಟ್ರೇಲರ್ ಬಿಡುಗಡೆ ಬೆನ್ನಲ್ಲೇ ಶಾರುಖ್, ಜಾನ್ ಅಬ್ರಹಾಂ ನಡುವೆ ಬಿರುಕು?
ವಿವಾದಗಳ ಸುಳಿಯಲ್ಲಿ ಸಿಲುಕಿರುವ ಪಠಾಣ್ ಚಿತ್ರದ ಟ್ರೇಲರ್ ಯಶಸ್ವಿಯಾಗಿದೆ ಬಿಡುಗಡೆಯಾಗಿದೆ. ಆದರೆ....?
ಬಾಲಿವುಡ್ ನಟ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ 'ಪಠಾಣ್' ಚಿತ್ರದ ಟ್ರೇಲರ್ ಇತ್ತೀಚಿಗಷ್ಟೇ ಬಿಡುಗಡೆಯಾಗಿ ಭಾರಿ ಯಶಸ್ಸನ್ನೂ ಕಂಡಿದೆ. ಇನ್ನೇನು ಶೀಘ್ರದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಜಾನ್ ಅಬ್ರಹಾಂ (John Abraham), ದೀಪಿಕಾ ಮತ್ತು ಶಾರುಖ್ ಅವರನ್ನು ಆಕ್ಷನ್ ಅವತಾರದಲ್ಲಿ ನೋಡಲು ಅಭಿಮಾನಿಗಳು ಸಾಕಷ್ಟು ಉತ್ಸುಕರಾಗಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನವೇ ಭಾರಿ ಟ್ರೋಲ್ (Troll) ಆಗಿ, ಬೈಕಾಟ್ ಬಿಸಿ ಅನುಭವಿಸುತ್ತಿರುವ ಪಠಾಣ್ನ (Pathaan) ಟ್ರೇಲರ್ ಅಂತೂ ಯಶಸ್ವಿಯಾಗಿ ಬಿಡುಗಡೆಯಾಗಿದೆ ಎನ್ನುವ ಬೆನ್ನಲ್ಲೇ ಈ ಚಿತ್ರದ ನಟರಾದ ಶಾರುಖ್ ಖಾನ್ ಮತ್ತು ಜಾನ್ ಅಬ್ರಹಾಂ ನಡುಗೆ ಭಾರಿ ಬಿರುಕು ಮೂಡಿರುವ ಸಂದೇಹ ವ್ಯಕ್ತವಾಗತೊಡಗಿದೆ.
ಇದಕ್ಕೆ ಕಾರಣ ಜಾಬ್ ಅಬ್ರಹಾಂ 'ಪಠಾಣ್' ಚಿತ್ರದ ಟ್ರೇಲರ್‌ನಿಂದ ಸಂತೋಷವಾಗಿಲ್ಲವಂತೆ. ಇದೆ ಕಾರಣಕ್ಕೆ ಶಾರುಖ್ ಖಾನ್ (Shah Rukh Khan) ಅವರೊಂದಿಗೆ ವಿವಾದವನ್ನು ಹೊಂದಿರುವುದಾಗಿ ಸುದ್ದಿಯಾಗಿದೆ. ಇದಕ್ಕೆ ಇಂಬುಕೊಡಲು ಎಂಬಂತೆ, ಟ್ರೇಲರ್ ಬಿಡುಗಡೆಯಾಗುತ್ತಲೇ ಸಂದರ್ಶನವೊಂದರಲ್ಲಿ ಜಾನ್ ಅಬ್ರಹಾಂ ನಡೆದುಕೊಂಡಿರುವ ರೀತಿ ಈ ಇಬ್ಬರು ನಟರ ನಡುವೆ ಏನೋ ಸರಿಯಾಗಿಲ್ಲ ಎನ್ನುವುದನ್ನು ಒತ್ತಿ ಹೇಳಿದೆ.
ಶಾರುಖ್ ಖಾನ್‌ಗೆ ಗೌರಿಯೇ ಮೊದಲ ಲವ್ ಅಲ್ವಂತೆ! ಹೆಸರು ರಿವೀಲ್ ಮಾಡಿದ ಬಾಲಿವುಡ್ ಲವ್ ಬಾಯ್
ಜಾನ್ ಅಬ್ರಹಾಂ ಅವರು ಈವೆಂಟ್ (Event) ಒಂದಕ್ಕೆ ಹೋಗಿದ್ದರು. ಅಲ್ಲಿ ಅವರಿಗೆ ಪತ್ರಕರ್ತರು ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ಸಮಯದಲ್ಲಿ ನಟ ಶಾರುಖ್ ಖಾನ್‌ಗೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳಲಾಯಿತು. ಕೂಡಲೇ ಆ ಪ್ರಶ್ನೆಯತ್ತ ಅಸಡ್ಡೆ ಬೀರಿದ ಜಾನ್ ಅಬ್ರಾಹಂ ನೆಕ್ಸ್ಟ್ ಕ್ವೆಷ್ಚನ್ ಪ್ಲೀಸ್ (ಮುಂದಿನ ಪ್ರಶ್ನೆ ಕೇಳಿ) ಎಂದಿದ್ದಾರೆ. ಶಾರುಖ್ ಅವರ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ್ದು ಭಾರಿ ವೈರಲ್ ಆಗಿ, ಇಬ್ಬರ ನಡುವೆ ಜಟಾಪಟಿ ಶುರುವಾಗಿರುವುದು ತಿಳಿದಿತ್ತು. ಶಾರುಖ್ ಅವರ ಬಗ್ಗೆ ಜಾನ್ಗೆ ಸಮಸ್ಯೆಯೋ ಅಥವಾ ಚಿತ್ರದ ಬಗ್ಗೆಯೇ ಅಸಮಾಧಾನವೋ ತಿಳಿದಿರಲಿಲ್ಲ.
ಇದು ಭಾರಿ ಸುದ್ದಿಯಾಗುತ್ತಲೇ ಪಠಾಣ್ ಚಿತ್ರದ ಬಗ್ಗೆ ತಮಗೆ ಏನೂ ಸಮಸ್ಯೆ ಇಲ್ಲ ಎನ್ನುವಂಥ ಸಮಜಾಯಿಷಿ ಕೊಡಲು ಜಾನ್ ಅಬ್ರಹಾಂ ಮುಂದಾಗಿದ್ದಾರೆ. ಈ ಕುರಿತು ಅವರು ತಮ್ಮ ಇನ್ಸ್ಟಾಗ್ರಾಮ್ (Instagram) ಸ್ಟೋರಿಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು 'ಪಠಾಣ್' ಕುರಿತು ಬರೆದಿದ್ದಾರೆ. 'ಪಠಾಣ್ ಮಾಡಲು ನಾವು ಸಾಕಷ್ಟು ಶ್ರಮವನ್ನು ತೆಗೆದುಕೊಂಡಿದ್ದೇವೆ. ಇದು ಬಹಳ ಉತ್ತಮ ಹಾಗೂ ಬೃಹತ್ ಚಿತ್ರವಾಗಿದೆ. ಆದಿತ್ಯ ಚೋಪ್ರಾ (Aditya Chopra) ನನಗೆ ಅನೇಕ ಅತ್ಯುತ್ತಮ ಪಾತ್ರಗಳನ್ನು ನೀಡಿದ್ದಾರೆ. ನಾನು ಏನನ್ನು ಬಯಸುತ್ತೇನೆ, ಸಿದ್ಧಾರ್ಥ್ ಆನಂದ್ ಅವರು ನನ್ನೊಂದಿಗೆ ಮತ್ತು ಚಿತ್ರದೊಂದಿಗೆ ಏನು ಮಾಡಿದ್ದಾರೆ ಎಂಬುದನ್ನು ನಾನು ಈಗಲೇ ಹೇಳುವುದಿಲ್ಲ. ಪಠಾಣ್ ಚಿತ್ರ ಬಿಡುಗಡೆಯಾದಾಗ ಎಲ್ಲವೂ ಗೊತ್ತಾಗಲಿದೆ. ನಾನು ಪಠಾಣ್ ಬಗ್ಗೆ ಹೇಳಲು ಸಾಕಷ್ಟು ಇದೆ ಆದರೆ ಜನವರಿ 25ಕ್ಕೆ ಕಾಯೋಣ ಎಂದಿದ್ದಾರೆ.
ಶಾರುಖ್ ಖಾನ್‌ಗೆ ಗೌರಿಯೇ ಮೊದಲ ಲವ್ ಅಲ್ವಂತೆ! ಹೆಸರು ರಿವೀಲ್ ಮಾಡಿದ ಬಾಲಿವುಡ್ ಲವ್ ಬಾಯ್
ಶಾರುಖ್ ಮತ್ತು ಜಾನ್ ಅಬ್ರಾಹಂ ನಡುವೆ ಏನು ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗಿ ತಿಳಿದಿಲ್ಲವಾದರೂ ಪಠಾಣ್ ಬಗ್ಗೆ ಜಾನ್ ಅವರಿಗೆ ಯಾವುದೇ ಸಮಸ್ಯೆ ಇಲ್ಲ ಎನ್ನುವುದೇ ಸಂತೋಷ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಈಗೇನಿದ್ದರೂ ಪಠಾಣ್ ಚಿತ್ರವನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆ. ನಾಲ್ಕು ವರ್ಷಗಳ ನಂತರ ಮತ್ತೆ ತೆರೆಗೆ ಬಂದ ಶಾರುಖ್ ಖಾನ್ ಅವರಿಗೆ ಇದು ಕೈಹಿಡಿಯಲಿದೆಯೇ ಎನ್ನುವುದು ಪ್ರಶ್ನೆ. 2018 ರ 'ಝೀರೋ' (Zero) ಚಿತ್ರದಲ್ಲಿ ಕೊನೆಯದಾಗಿ ಶಾರುಖ್ ಕಾಣಿಸಿಕೊಂಡಿದ್ದರು. ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ಅಭಿನಯದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ (Flop) ಎಂದು ಸಾಬೀತಾಗಿತ್ತು. ಪಠಾಣ್ ಬಿಡುಗಡೆಗೆ ಮುನ್ನವೇ (Boycott) ಬಿಸಿ ಅನುಭವಿಸುತ್ತಿದೆ. ಟ್ರೇಲರ್ ಸಕ್ಸಸ್ ಆಗಿದ್ದರೂ ಚಿತ್ರದ ಗತಿ ಏನು ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.