ದೀಪಿಕಾ ಪಡುಕೋಣೆ ಪ್ರಗ್ನೆಂಟಾ? ಏನಿದು ಸುದ್ದಿ?

ಬಾಲಿವುಡ್‌ನ ಬೇಡಿಕೆಯ ನಟಿ ದೀಪಿಕಾ ಪಡುಕೋಣೆ ಸದ್ಯ ಪಠಾಣ್ ಸಿನಿಮಾದ ಬಿಕಿನಿ ಸೀನ್‌ಗೆ ಸಂಬಂಧಿಸಿ ಸುದ್ದಿ ಆದದ್ದೂ ಆದದ್ದೇ. ಈಗ ದೀಪಿಕಾ ಪಡುಕೋಣೆ ಪ್ರಗ್ನೆಂಟಾ ಅಂತ ಜನ ಮಾತಾಡ್ಕೊಳ್ತಿದ್ದಾರೆ. ಏನಿದು ಸುದ್ದಿ?

Bollywood actress Deepika Padukine pregnancy gossip

ಇಂದು ದೀಪಿಕಾ ಪಡುಕೋಣೆ ಹ್ಯಾಪಿ ಬರ್ತ್ ಡೇ. ಈ ನಟಿಯ ಮೂಲ ನಮ್ಮ ಕುಂದಾಪುರದ ಪಡುಕೋಣೆ ಆದರೂ ಈ ನಟಿಯ ಹೆಸರಿನಲ್ಲಷ್ಟೇ ಆ ಊರಿದೆ. ಕುಂದಾಪ್ರ ಕನ್ನಡ ಬಿಡಿ, ಕನ್ನಡ ಮಾತಾಡಲೂ ಈಕೆಗೆ ಕಬ್ಬಿಣದ ಕಡಲೆ. ಬೆಳೆದಿದ್ದೆಲ್ಲ ಇಂಗ್ಲೀಷ್ ವಾತಾವರಣದಲ್ಲೇ ಆದ ಕಾರಣ ಈ ಬಗ್ಗೆ ನಾವೀಗ ಕೆಮ್ಮಂಗಿಲ್ಲ. ಇವತ್ತು ಡಿಪ್ಪಿಯ ಹ್ಯಾಪಿ ಬರ್ತ್ ಡೇ ಕೂಡ ಆಗಿರೋ ಕಾರಣ ಸದ್ಯಕ್ಕೆ ಶುಭ ಹಾರೈಸೋದಷ್ಟೇ ನಮ್ ಕೆಲ್ಸ. ಪಠಾಣ್ ನಟ ಶಾರೂಕ್ ಖಾನ್ ಸಹನಟಿ ದೀಪಿಕಾ ಬಗ್ಗೆ ಸ್ವೀಟ್‌ ಲೈನೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ' ನಂಬೋದಕ್ಕೆ ಅಸಾಧ್ಯವಾಗಿರುಷ್ಟು ಚೆನ್ನಾಗಿರೋ ಹುಡುಗಿ' ಅಂತ ದೀಪಿಕಾ ಬರ್ತ್ ಡೇ ದಿನದಂದೇ ಶಾರೂಕ್ ವಿಶ್ ಮಾಡಿದ್ದಾರೆ. ಇದೀಗ ವೈರಲ್ ಆಗಿದೆ.

ಶಾರೂಕ್‌ ಖಾನ್ ಜೊತೆಗಿನ 'ಪಠಾಣ್' ಸಿನಿಮಾದ ಹಾಡಿನ ಮೂಲಕ ದೀಪಿಕಾ ಸುದ್ದಿಯಲ್ಲಿದ್ದರು. ಈ ಸಿನಿಮಾದ 'ಬೇಶರಮ್‌ ರಂಗ್‌ ಅನ್ನೋ ಹಾಡೊಂದರಲ್ಲಿ ದೀಪಿಕಾ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು. ಆ ಬಿಕಿನಿ ನಾರ್ಮಲ್ ಬಿಕಿನಿಗಿಂತಲೂ ಹೆಚ್ಚು ಅಂಗಾಗ ಪ್ರದರ್ಶನ ಮಾಡುವ ಹಾಗಿತ್ತು, ಅದಕ್ಕೂ ಹೆಚ್ಚಾಗಿ ಕೇಸರಿ ಬಣ್ಣದ್ದಾಗಿತ್ತು ಅನ್ನೋ ಕಾರಣಕ್ಕೆ ಈ ಸಿನಿಮಾವನ್ನೇ ಬ್ಯಾನ್ ಮಾಡಬೇಕು ಅನ್ನೋ ಕೂಗು ಬಂತು. ಆದರೆ ಈ ಸಿನಿಮಾದ ಹಾಡು ಮಾತ್ರ ಸಖತ್ತಾಗಿ ವೀಕ್ಷಣೆ ದಾಖಲಿಸಿತು. ದಕ್ಷಿಣ ಭಾರತೀಯ ಸಿನಿಮಾಗಳ ಅರ್ಭಟಕ್ಕೆ ಬಾಲಿವುಡ್ ಸಿನಿಮಾಗಳೆಲ್ಲ ಮಕಾಡೆ ಮಲಗುತ್ತಿರುವಾಗ ಈ ಥರ ನೆಗೆಟಿವ್ ಪಬ್ಲಿಸಿಟಿ ಮೂಲಕವೇ 'ಪಠಾಣ್' ಸುದ್ದಿಯಲ್ಲಿತ್ತು. ಅದರಲ್ಲೂ ಟೆಂಪರೇಚರ್ ಹೆಚ್ಚಿಸುವಂತಿದ್ದ ಈ ಚಿತ್ರದ ಹಾಡನ್ನ ಜನ ಒಲ್ಲೆ ಒಲ್ಲೆ ಅನ್ನುತ್ತಲೇ ಮತ್ತೆ ಮತ್ತೆ ನೋಡಿದರು.

ಅರೆಬೆತ್ತಲೆ ಫೋಟೋ ಹಂಚಿಕೊಂಡ ಪೂನಂ ಪಾಂಡೆ; ಎಲ್ಲಾ ನೋಡಿದ್ದಾರೆ ಬಿಡಮ್ಮ ಎಂದು ಕಾಲೆಳೆದ ನೆಟ್ಟಿಗರು

ಇನ್ನೊಂದು ಕಡೆ ದೀಪಿಕಾ ಪಡುಕೋಣೆ ಹಾಟ್ ಆಗಿ ಕಾಣಿಸಿಕೊಂಡಿರೋ ಹಿಂಬದಿಯ ಸೀನ್‌, ಸೈಡ್ ಪೋಸ್‌ಗಳಿಗೆ ಸೆನ್ಸಾರ್ ಕತ್ತರಿ ಹಾಕಿದೆಯಂತೆ. ಈಗ ಬಂದಿರೋ ಲೇಟೆಸ್ಟ್ ಗಾಸಿಪ್ ಅಂದರೆ ಹೀಗೆಲ್ಲ ಹಾಟ್ ಆಗಿ ಕಾಣಿಸಿಕೊಂಡು ಟೀಕೆಗೆ ಕಾರಣವಾಗಿರೋ ದೀಪಿಕಾಗೆ ಯಾಕೋ ಆಕ್ಟಿಂಗ್(Acting), ಹಾಟ್ ಸೀನ್‌ಗಳ ಬಗ್ಗೆಯೇ ವೈರಾಗ್ಯ ಬಂದಿದೆ ಅನ್ನೋದು. ದೀಪಿಕಾ ಹೀಗೆಲ್ಲ ವೈರಾಗ್ಯ ಬರಿಸಿಕೊಂಡು ಮಾಡಿದ್ದೇನು ಅಂದರೆ ಫ್ಯಾಮಿಲಿಗೆ ಫುಲ್ ಟೈಮ್‌ (Full time)ಕೊಡ್ತೀನಿ ಅಂತ ಹೊರಟಿದ್ದು. ಅದರ ಮುಂದುವರಿಕೆಯಾಗಿ ಅವರೀಗ ಪ್ರಗ್ನೆಂಟ್ ಅನ್ನೋ ಸುದ್ದಿಯೂ ಎಲ್ಲೆಡೆ ಹರಿದಾಡ್ತಿದೆ.

ದೀಪಿಕಾ ಪಡುಕೋಣೆ ಮತ್ತು ರಣಬೀರ್‌ ಕಪೂರ್‌ ಮದುವೆ ಆಗಿ ನಾಲ್ಕು ವರ್ಷಗಳಾದವು. ಅದಕ್ಕೂ ಮುನ್ನ ಇವರಿಬ್ಬರೂ ಸುಮಾರು ಆರು ವರ್ಷಗಳ ಕಾಲ ರಿಲೇಶನ್‌ಶಿಪ್‌(Relationship)ನಲ್ಲಿದ್ದರು. ಸಖತ್ ರೊಮ್ಯಾಂಟಿಕ್‌(Romantic) ಆಗಿ ಗುರುತಿಸಿಕೊಂಡಿದ್ದ ಈ ಜೋಡಿ ಕೆಲವು ತಿಂಗಳ ಹಿಂದೆ ಬೇರ್ಪಡುತ್ತಿದ್ದಾರೆ ಅನ್ನೋ ಸುದ್ದಿ ಬಂದಿತ್ತು. ಹಲವು ದಿನಗಳಿಂದ ಜೊತೆಯಲ್ಲಿ ಹೊರಗೆಲ್ಲೂ ಕಾಣಿಸಿಕೊಂಡಿರಲಿಲ್ಲ. ಆಮೇಲೆ ತಮ್ಮ ನಡುವೆ ಅಂಥಾ ಅಂತರ ಏನೂ ಇಲ್ಲ. ತಾವಿಬ್ಬರೂ ಚೆನ್ನಾಗಿಯೇ ಇದ್ದೇವೆಂದು ಈ ಜೋಡಿ ಹೇಳಿತ್ತು. ಇದೀಗ ದೀಪಿಕಾ ಪ್ರೆಗ್ನೆಂಟ್ ಅನ್ನೋ ಸುದ್ದಿ ಬಂದಿದೆ. ದೀಪಿಕಾಗೆ ಇವತ್ತಿಗೆ 37 ವರ್ಷಗಳು ತುಂಬಿವೆ. ಮೂವತ್ತರ ಮೊದಲೇ ಮೊದಲ ಮಗು ಆದರೆ ಅದು ಆರೋಗ್ಯದಿಂದಿರುತ್ತೆ ಅಂತ ಡಾಕ್ಟರ್ಸ್(Doctors) ಹೇಳ್ತಾರೆ. ಆದರೆ ಬಾಲಿವುಡ್ ನಟಿಯರಲ್ಲಿ ಹಲವರು ನಲವತ್ತರ ನಂತರವೇ ಮಗು ಪಡೆದವರು. ಈಗ ನಲವತ್ತರ ಹತ್ತಿರ ಹತ್ತಿರ ಬರುತ್ತಿರುವ ದೀಪಿಕಾ ಈಗಲಾದರೂ ಗುಡ್‌ನ್ಯೂಸ್ ಕೊಡ್ತಾರ ಅಂತ ಅವರ ಫ್ಯಾನ್ಸ್ ಕಾಯುತ್ತಿದ್ದಾರೆ.

ಪಬ್ಲಿಕ್‌ ಫಿಗರ್‌ ಆದಾಗ ಹೂವಿನ ಜೊತೆ ಮೊಟ್ಟೆಯೂ ಬೀಳುತ್ತೆ: ಸುದೀಪ್‌

Latest Videos
Follow Us:
Download App:
  • android
  • ios