Asianet Suvarna News Asianet Suvarna News

Dream Meanings: ಸ್ವಪ್ನದಲ್ಲಿ ಪತಿ ದರ್ಶನವಾದ್ರೆ ಏನು ಅರ್ಥ ಗೊತ್ತಾ? ಕನಸಿನಲ್ಲಿ ಬರುವ ಸಂಬಂಧಿಕರು ನೀಡ್ತಾರೆ ಈ ಸೂಚನೆ

ಅಮ್ಮ ನನಗೊಂದು ಕನಸು ಬಿತ್ತು ಅಂತ ಮಕ್ಕಳು ಶುರು ಮಾಡಿದ್ರೆ ಆ ಕನಸಿಗೆ ಒಂದಿಷ್ಟು ಕೊಂಡಿ ಸೇರಿ ಎಲ್ಲೆಲ್ಲೋ ಹೋಗಿರುತ್ತದೆ. ಮಕ್ಕಳಿಗೆ ನೆನಪಿದ್ದಷ್ಟು ದೊಡ್ಡವರಿಗೆ ಕನಸು ನೆನಪಿನಲ್ಲಿರುವುದಿಲ್ಲ. ಬಿದ್ದ ಸ್ವಪ್ನ ಶುಭ-ಅಶುಭ ಸೂಚನೆಯನ್ನು ನೀಡುತ್ತದೆ. ಹಾಗಾಗಿ ರಾತ್ರಿ ಕಂಡ ಕನಸನ್ನು ಬೆಳಿಗ್ಗೆ ನೆನಪಿಸಿಕೊಳ್ಳಿ.
 

Dreaming About A Relative is a hint of something related to future
Author
Bangalore, First Published Dec 21, 2021, 9:25 AM IST

ರಾತ್ರಿ (Night) ಮಲಗಿದಾಗ ಚಿತ್ರ ವಿಚಿತ್ರ ಕನಸು(Dream)ಗಳು ಬೀಳುತ್ತಿರುತ್ತವೆ. ಕೆಲವು ಕನಸುಗಳು ಪದೇ ಪದೇ ಬೀಳುವುದಿದೆ. ಮತ್ತೆ ಕೆಲ ಕನಸುಗಳು ಭಯ ಹುಟ್ಟಿಸುತ್ತವೆ. ರಾತ್ರಿ ಕಂಡ ಕನಸು ಬೆಳಿಗ್ಗೆ ಮನಸ್ಸು ಕೊರೆಯುವುದುಂಟು. ಎಷ್ಟು ವರ್ಷಗಳಿಂದ ನೋಡದ,ಮಾತನಾಡಿಸದ ವ್ಯಕ್ತಿಗಳು ಕೆಲವೊಮ್ಮೆ ಕನಸಿನಲ್ಲಿ ಬರುತ್ತಾರೆ. ನೀನು ಇಂದು ನನ್ನ ಕನಸಿನಲ್ಲಿ ಬಂದಿದ್ದೆ ಅಂತಾ ನಾವು ಅವರಿಗೆ ವಿಷ್ಯ ಮುಟ್ಟಿಸುತ್ತೇವೆ. ಅನೇಕರಿಗೆ ಇದು ಬರೀ ಕನಸು ಮಾತ್ರ. ಆದ್ರೆ ಜ್ಯೋತಿಷ್ಯ(Astrology) ಶಾಸ್ತ್ರದಲ್ಲಿ ಕನಸಿಗೆ ಮಹತ್ವದ ಸ್ಥಾನವಿದೆ. ನಮ್ಮ ಕನಸಿನಲ್ಲಿ ಕಾಣುವ ವಸ್ತು,ಘಟನೆ,ವ್ಯಕ್ತಿ ನಮ್ಮ ಮುಂದಿನ ಭವಿಷ್ಯವನ್ನು ಸೂಚಿಸುತ್ತಾರೆ ಎಂದು ನಂಬಲಾಗಿದೆ. ಕೆಲ ಕನಸು ದುರ್ಘಟನೆಗೆ ಮುನ್ಸೂಚನೆಯಾಗಿದ್ದರೆ ಮತ್ತೆ ಕೆಲವು ಶುಭ (Good )ಘಟನೆಗೆ ಸೂಚಕವಾಗಿರುತ್ತವೆ. ಯಾವ ಕನಸು ಬೀಳುತ್ತೆ ಎಂಬುದು ಕೆಲವರಿಗೆ ಗೊತ್ತಿರುವುದಿಲ್ಲ. ಮಲಗುವ ಮುನ್ನ ಹಾರರ್ ಚಿತ್ರ ನೋಡಿ ಮಲಗಿದ್ದಕ್ಕೆ ಕೆಟ್ಟ ಕನಸು ಬಿತ್ತು ಎನ್ನುವವರಿದ್ದಾರೆ. ಆದ್ರೆ ಏನೂ ನೋಡದೆ ಭಯಾನಕ ಕನಸು ಬೀಳುವುದುಂಟು. ಕನಸಿನಲ್ಲಿ ನಮ್ಮ ಪ್ರೀತಿ ಪಾತ್ರರು ಕಾಣಿಸಿಕೊಳ್ಳುತ್ತಾರೆ. ಕನಸಿನಲ್ಲಿ ಸಂಬಂಧಿಕರು ಕಾಣಿಸಿಕೊಂಡಲ್ಲಿ ಬೇರೆ ಬೇರೆ ಅರ್ಥವಿದೆ.

ಕನಸಿನಲ್ಲಿ ಮಾವ ಕಂಡರೆ ಏನರ್ಥ? : ಕನಸಿನಲ್ಲಿ ತಾಯಿಯ ಸಹೋದರ ಮಾವ ಕಾಣಿಸಿಕೊಂಡರೆ ನೀವು ಖುಷಿಪಡಿ. ಇದು ಶುಭ ಸಂಕೇತ. ಇದು ರಕ್ಷಣೆ, ಪ್ರೀತಿ, ಬುದ್ಧಿವಂತಿಕೆಯ ಸಂಕೇತವೆಂದು ನಂಬಲಾಗಿದೆ. ಆದ್ರೆ ಮಾವನ ಜೊತೆ ಮದುವೆ ಸಮಾರಂಭಕ್ಕೆ ಹೋದಂತೆ ಸ್ವಪ್ನ ಕಂಡಲ್ಲಿ ಅದು ಶುಭವಲ್ಲ. ಶೀಘ್ರವೇ ಕೆಟ್ಟ ಸುದ್ದಿಯನ್ನು ನೀವು ಕೇಳಲಿದ್ದೀರಿ. ಸಾವಿನ ಮನೆಗೆ ಹೋಗುವ ಸಾಧ್ಯತೆಯಿದೆ ಎಂಬುದು ಇದರ ಅರ್ಥವಾಗಿದೆ.

ಅಮ್ಮ (Mother) ಕನಸಿನಲ್ಲಿ ಬಂದರೆ : ತಾಯಿ ಕನಸಿನಲ್ಲಿ ಕಾಣಿಸಿಕೊಂಡರೂ ಅದು ಮಂಗಳಕರ. ಸ್ವಪ್ನ ಶಾಸ್ತ್ರದ ಪ್ರಕಾರ ತಾಯಿ ಕನಸಿನಲ್ಲಿ ಬಂದರೆ ಹಾಗೂ ಆಕೆಯನ್ನು ನೀವು ದಬ್ಬಿಕೊಂಡಂತೆ ಕಂಡರೆ ಅದೃಷ್ಟ ಬರಲಿದೆ ಎಂಬ ಸೂಚಕ.ಮುಂದಿನ ದಿನಗಳಲ್ಲಿ ನಿಮ್ಮ ಕಿವಿಗೆ ಒಳ್ಳೆಯ ಸುದ್ದಿ ಸಿಗಲಿದೆ ಎಂಬುದನ್ನು ಇದು ಸೂಚಿಸುತ್ತದೆ. 

ಕನಸಿನಲ್ಲಿ ಪತಿ(Husband) ಕಂಡರೆ : ಮಹಿಳೆಯೊಬ್ಬಳು ತನ್ನ ಪತಿಯನ್ನು ಕನಸಿನಲ್ಲಿ ಕಂಡರೆ ಇದು ಸಂತೋಷದ ಸಂಗತಿ. ಇಬ್ಬರ ದಾಂಪತ್ಯ ಮತ್ತಷ್ಟು ಗಟ್ಟಿಯಾಗಲಿದೆ. ಜೀವನ ಖುಷಿಯಿಂದ ತುಂಬಿರಲಿದೆ. 

ಸಹೋದರ (Brother )ಕನಸಿನಲ್ಲಿ ಬಂದರೆ : ಸಹೋದರ ಕನಸಿನಲ್ಲಿ ಬಂದರೂ ಚಿಂತಿಸುವ ಅಗತ್ಯವಿಲ್ಲ. ನಿಮಗೆ ಹೊಸ ಸ್ನೇಹಿತರು ಸಿಗಲಿದ್ದಾರೆ ಎಂಬ ಸೂಚನೆಯನ್ನು ಈ ಸ್ವಪ್ನ ನೀಡ್ತಿದೆ. 

Pet adoption: ನಿಮ್ಮ ರಾಶಿಗೆ ಯಾವ ಪ್ರಾಣಿ ಸಾಕಿದರೆ ಒಳ್ಳೇದು ನೋಡಿ..

ಕನಸಿನಲ್ಲಿ ಅಜ್ಜ-ಅಜ್ಜಿ : ಕೆಲಸದ ನಿರೀಕ್ಷೆಯಲ್ಲಿರುವವರು ಕನಸಿನಲ್ಲಿ ಅಜ್ಜ-ಅಜ್ಜಿ ಬಂದರೆ ಖುಷಿಪಡಿ. ಏಕೆಂದ್ರೆ ಇದು ಕೆಲಸದ ಮುನ್ಸೂಚನೆಯಾಗಿದೆ. ಜೊತೆಗೆ ಭದ್ರತೆ ಹೆಚ್ಚಾಗಲಿದೆ ಎಂಬ ಸೂಚನೆಯಾಗಿದೆ. ಒಂದು ವೇಳೆ ಕನಸಿನಲ್ಲಿ ಅಜ್ಜ-ಅಜ್ಜಿ ಗದರಿದಂತೆ ಕಂಡರೆ ಅಥವಾ ಅವರನ್ನು ನೋಡಿ ನೀವು ಭಯಗೊಂಡರೆ ಜೀವನದಲ್ಲಿ ಶಾಂತಿಯ ಕೊರತೆಯಿದೆ ಎಂದರ್ಥ.

ಸ್ವಪ್ನದಲ್ಲಿ ಶಿಕ್ಷಕ (Teacher) : ವಿದ್ಯಾರ್ಥಿಗಳು ಮಾತ್ರವಲ್ಲ ಶಿಕ್ಷಣ ಮುಗಿಸಿ ಎಷ್ಟೂ ವರ್ಷಗಳ ನಂತ್ರವೂ ಕೆಲವರ ಕನಸಿನಲ್ಲಿ ವಿದ್ಯೆ ಕಲಿಸಿದ ಗುರು ಕಾಣಿಸುತ್ತಾರೆ. ವಿದ್ಯೆ ಕಲಿಸಿದ ಶಿಕ್ಷಕ ಕನಸಿನಲ್ಲಿ ಬರುವುದು ಶುಭಕರ. ಗುರು ಕನಸಿನಲ್ಲಿ ಕಂಡರೆ ಆಧ್ಯಾತ್ಮಿಕತೆಯ ಕಡೆಗೆ ಒಲವು ಹೆಚ್ಚಾಗಬಹುದು.

Success Mantras For Children: ಮಕ್ಕಳ ಯಶಸ್ಸಿಗೆ ಹೀಗ್ ಮಾಡಿ ಅನ್ನುತ್ತೆ ಜ್ಯೋತಿಷ್ಯ

ಕನಸಿನಲ್ಲಿ ಸ್ನೇಹಿತ (Friend) : ಕನಸಿನಲ್ಲಿ ಸ್ನೇಹಿತರು ಕಂಡರೆ ಅದು ಮಂಗಳಕರ. ಬಾಲ್ಯದ ಸ್ನೇಹಿತರು ಕಂಡರೆ ಮತ್ತಷ್ಟು ಶುಭಕರ. ಬಾಲ್ಯದ ಸ್ನೇಹಿತರು ಆರ್ಥಿಕ ವೃದ್ಧಿಯ ಸಂಕೇತ ನೀಡುತ್ತಾರೆ. ಜೊತೆಗೆ ಜೀವನದಲ್ಲಿ ಶಾಂತಿ ಹಾಗೂ ಸಂತೋಷ ಸಿಗಲಿದೆ ಎಂಬುದನ್ನೂ ಇದು ಸೂಚಿಸುತ್ತದೆ. 

Follow Us:
Download App:
  • android
  • ios