Success Mantras For Children: ಮಕ್ಕಳ ಯಶಸ್ಸಿಗೆ ಹೀಗ್ ಮಾಡಿ ಅನ್ನುತ್ತೆ ಜ್ಯೋತಿಷ್ಯ

ಮಕ್ಕಳಲ್ಲಿ ಸರ್ವ ಗ್ರಹ ದೋಷಗಳನ್ನೂ ನಿವಾರಿಸಿ, ಅವರನ್ನು ಜೀವನದಲ್ಲಿ ಯಶಸ್ವಿಯಾಗಿಸಲು ಏನೆಲ್ಲ ಮಾಡಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. 

Life Changing Astrological remedies for Children skr

ಮಕ್ಕಳು ಸಂತೋಷವಾಗಿರಬೇಕು, ಯಶಸ್ವಿಯಾಗಬೇಕು ಎಂಬ ಆಶಯ ಎಲ್ಲರಿಗೂ ಇರುತ್ತದೆ. ಮಕ್ಕಳ ಸಂತೋಷವೇ ಹೆತ್ತವರ ಸಂತೋಷ. ಮಕ್ಕಳ ಯಶಸ್ಸಿನಲ್ಲಿ ಪೋಷಕರ ಸಾರ್ಥಕತೆ ಇರುತ್ತದೆ. ಆದರೆ, ಕೆಲವೊಮ್ಮೆ ಮಕ್ಕಳು ಎಷ್ಟೇ ಶ್ರದ್ಧೆ, ಭಕ್ತಿ, ಪರಿಶ್ರಮದಿಂದ ಪ್ರಯತ್ನ ಹಾಕಿದಾಗಲೂ ಅದಕ್ಕೆ ನಿರೀಕ್ಷಿತ ಫಲ ಸಿಗುವುದಿಲ್ಲ. ಇಂಥ ಸಂದರ್ಭದಲ್ಲಿ ಅವರಿಗೆ ಗ್ರಹಗಳ ಅನುಗ್ರಹ ಒದಗಿಸಿಕೊಡುವುದು ಮುಖ್ಯವಾಗುತ್ತದೆ. ಹಾಗೆ ಗ್ರಹಗಳ ಆಶೀರ್ವಾದಕ್ಕಾಗಿ ಏನೆಲ್ಲ ಮಾಡಬೇಕು ಎಂಬ ಬಗ್ಗೆ ಜ್ಯೋತಿಷ್ಯ ಸಲಹೆಗಳನ್ನು ನೀಡುತ್ತದೆ. 

ಹೊರಾಂಗಣ ಆಟ(outdoor games)
ಮಂಗಳನು ಜೀವನದಲ್ಲಿ ಧೈರ್ಯ, ಆತ್ಮವಿಶ್ವಾಸ, ಹಟ, ಆತ್ಮರಕ್ಷಣೆ(self-defence)ಯಂಥ ವಿಷಯಗಳಿಗೆ ಕಾರಣ. ಅವನ ಅವಕೃಪೆಯಿಂದ ಈ ವಿಷಯಗಳಲ್ಲಿ ಮಗು ಹಿನ್ನಡೆ ಅನುಭವಿಸಬಹುದು. ಈಗಿನ ಜೀವನಶೈಲಿಯಲ್ಲಿ ಮಕ್ಕಳು ಮನೆಯಿಂದ ಹೊರ ಹೋಗುವುದೇ ಅಪರೂಪವಾಗಿದೆ. ಆದರೆ, ಮಂಗಳನ ಅನುಗ್ರಹ ಬೇಕೆಂದರೆ ಮಕ್ಕಳನ್ನು ಹೊರಗೆ ಆಡಲು ಬಿಡಬೇಕು. ಸಾಕಷ್ಟು ಆಟಗಳಲ್ಲಿ ತೊಡಗಲು ಬಿಡಬೇಕು. ಇದರಿಂದ ಮಗುವಿನ ಧೈರ್ಯ, ಆತ್ಮವಿಶ್ವಾಸ ಹೆಚ್ಚುತ್ತದೆ. 

ಗಾಯತ್ರಿ ಮಂತ್ರ(Gayatri Mantra)
ಗಾಯತ್ರಿ ಮಂತ್ರವು ಅತಿ ಶಕ್ತಿಯುತವಾದ ಮಂತ್ರಗಳಲ್ಲೊಂದು. ಬಹಳ ಹಿಂದಿನಿಂದಲೂ ಅದರ ಸ್ಥಾನ ಹಿರಿದಾಗಿದೆ. ಪ್ರತಿ ದಿನ ಗಾಯತ್ರಿ ಮಂತ್ರ ಜಪಿಸುವುದರಿಂದ ಬದುಕು ನಾಟಕೀಯವೆನ್ನುವಷ್ಟು ಬದಲಾಗಬಹುದು. ಮಗುವಿಗೆ ಪ್ರತಿ ದಿನ ಗಾಯತ್ರಿ ಜಪದಲ್ಲಿ ತೊಡಗುವುದನ್ನು ಅಭ್ಯಾಸ ಮಾಡಿಸಿ. ಇದರಿಂದ ಮಗುವಿನ ಜಾತಕದಲ್ಲಿ ಸೂರ್ಯನು ಬಲಗೊಳ್ಳುತ್ತಾನೆ. ಸೂರ್ಯ(Sun)ನ ಬಲವಿದ್ದರೆ ಮಗು ಹೆಚ್ಚು ಧನಾತ್ಮಕ ಶಕ್ತಿ ಗಳಿಸಿ ಯಶಸ್ಸಿನತ್ತ ಮುನ್ನುಗ್ಗುತ್ತದೆ. 

Astro Remedies For Pitra Dosh: ಪಿತೃದೋಷವಿದ್ದರೆ ಹೀಗ್ ಮಾಡಿ ಪರಿಹಾರ ಕಂಡ್ಕೊಳ್ಳಿ..

ಹಸಿರು ತರಕಾರಿಗಳು(green leafy vegetables)
ಹಸಿರು ಬಣ್ಣಕ್ಕೂ ಬುಧ ಗ್ರಹಕ್ಕೂ ನೇರ ಸಂಬಂಧವಿದೆ. ಹಾಗಾಗಿ, ಬುಧನ ತೊಂದರೆ ಇದ್ದಾಗ ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸಲು ಸಲಹೆ ನೀಡಲಾಗುತ್ತದೆ. ಅಂತೆಯೇ ಮಗುವಿಗೆ ಹಸಿರು ತರಕಾರಿಗಳು, ಸೊಪ್ಪನ್ನು ಹೆಚ್ಚು ಸೇವಿಸುವಂತೆ ಮಾಡುವುದರಿಂದ ದೇಹಕ್ಕೆ ಬೇಕಾದ ಪೋಷಕಸತ್ವಗಳು ಅಪಾರ ಪ್ರಮಾಣದಲ್ಲಿ ದೊರಕುತ್ತವೆ. ಇದರಿಂದ ಬುಧನ ಅನುಗ್ರಹ ದೊರೆತು ಮಗುವಿನ ನೆನಪಿನ ಶಕ್ತಿ(memory), ಏಕಾಗ್ರತೆ(concentration) ಹಾಗೂ ತಿಳಿವಳಿಕೆ ಹೆಚ್ಚುತ್ತವೆ. 

Lucky body feature: ಎಂಥ ಸಾಮಾನ್ಯನನ್ನೂ ಸಿರಿವಂತನಾಗಿಸುವ ಅದೃಷ್ಟದೇವತೆಗಳಿವರು..

ಬೆಳ್ಳಿಯ ಬಳೆ(silver bangle)
ಪದೇ ಪದೆ ಮಗು ಸುಳ್ಳು ಹೇಳುತ್ತಿದ್ದರೆ, ಅದಕ್ಕಿರುವ ಸುಲಭ ಪರಿಹಾರೋಪಾಯ ಎಂದರೆ ತಾಮ್ರದ ನಾಣ್ಯವನ್ನು ಅವರ ಹಣೆಯಲ್ಲಿ ಕೆಲ ಕಾಲ ಒತ್ತಿಡುವುದು. ಮಗು ಸಿಕ್ಕಾಪಟ್ಟೆ ತುಂಟಾಟ, ತರಲೆ ಮಾಡುತ್ತಿದ್ದರೆ, ಆಗ ಅದಕ್ಕೆ ಬೆಳ್ಳಿಯ ಬಳೆ ತೊಡಿಸಿ. ಇದರಿಂದ ಮಗು ಹೆಚ್ಚು ಶಿಸ್ತುಬದ್ಧವಾಗಿ ಗುರಿಸಾಧನೆಯ ಕಡೆ ಗಮನ ಹರಿಸುತ್ತದೆ. 

ಹಿರಿಯರೊಂದಿಗೆ ಸಮಯ(spend time with Elders)
ಮಕ್ಕಳು ಹಿರಿಯರೊಂದಿಗೆ ಸಾಧ್ಯವಾದಷ್ಟು ಸಮಯ ಕಳೆಯಲು ಪ್ರೋತ್ಸಾಹಿಸಿ. ಗುರುವಿನ ಬಲ ಪಡೆಯಲು ಇದು ಅತ್ಯುತ್ತಮ ಮಾರ್ಗ. ಬೆಳೆಯುವ ಮಕ್ಕಳಿಗೆ ದೊಡ್ಡವರ ಸಂಗದಲ್ಲಿ ನೈತಿಕತೆ, ಆದರ್ಶಗಳ ಮಾರ್ಗದರ್ಶನ ಸಿಗುತ್ತದೆ. ಹಿರಿಯರನ್ನು ಹೇಗೆ ಗೌರವಿಸುವುದೆಂದು ಕಲಿಯುತ್ತಾರೆ. 

ಸಹಾಯ(help)
ಶನಿಯು ನಮ್ಮೆಲ್ಲ ಕೆಲಸಕ್ಕೆ ತಕ್ಕ ಫಲ ಕೊಡುವವನು. ಹಾಗಾಗಿ, ಶನಿಯನ್ನು ಒಲಿಸಿಕೊಳ್ಳಲು, ಮಗುವಿನ ಜಾತಕದಲ್ಲಿ ಶನಿಯ ಅನುಗ್ರಹ ಪಡೆಯಲು ಮಕ್ಕಳಿಗೆ ಮತ್ತೊಬ್ಬರಿಗೆ ಸಹಾಯ ಮಾಡುವುದನ್ನು ಹೇಳಿಕೊಡಿ. ಇದರಿಂದ ಶನಿಯ ದೋಷ ನಿವಾರಣೆಯಾಗುತ್ತದೆ. 

ಸ್ವಚ್ಛತೆ(Cleanliness)
ಶುಕ್ರ ಗ್ರಹವು ಬದುಕಿನಲ್ಲಿ ಲಕ್ಷುರಿ, ಪ್ರೀತಿ, ರೊಮ್ಯಾನ್ಸ್, ಉತ್ತಮ ಆಹಾರ, ಬಟ್ಟೆ ಹಾಗೂ ವಿವಾಹಕ್ಕೆ ಕಾರಣ. ಶುಕ್ರ ಗ್ರಹದ ಅನುಗ್ರಹ ಪಡೆಯಲು ಮಕ್ಕಳಿಗೆ ಸ್ವಚ್ಛತೆಯ ಪಾಠ ಮಾಡಿ. ಯಾವಾಗಲೂ ಸ್ವಚ್ಛವಾಗಿರುವ ಬಟ್ಟೆ ಧರಿಸುವಂತೆ ನೋಡಿಕೊಳ್ಳಿ. 

ಇದಲ್ಲದೆ, ಮಕ್ಕಳಿಗೆ ಇತರೆ ಯಾವುದೇ ರೀತಿಯ ಗ್ರಹ ದೋಷ ಕಾಡುತ್ತಿದ್ದರೆ ಸ್ವಲ್ಪ ಬೇಳೆಕಾಳುಗಳಿಗೆ ಅರಿಶಿನ ಮಿಶ್ರಣ ಮಾಡಿ, ಮಗುವಿನ ಕೈಲಿ ಗುರುವಾರ ಗಿಳಿಗಳಿಗೆ ತಿನ್ನಿಸಿ. 

Latest Videos
Follow Us:
Download App:
  • android
  • ios