ಜನರು ನಂಬಿಕೆಗಳ ಆಧಾರದ ಮೇಲೆ ಜೀವನ ನಡೆಸುತ್ತಿದ್ದಾರೆ. ಹಿರಿಯರು ಹೇಳಿದ ಕೆಲಸಗಳನ್ನು ನಂಬಿದರೆ, ಸಾಮಾಜಿಕ ಮಾಧ್ಯಮದಿಂದ ಅಪನಂಬಿಕೆಗಳು ಹುಟ್ಟಿಕೊಂಡಿವೆ. ವಾರದ ದಿನಗಳಲ್ಲಿ ಕೆಲವು ಕೆಲಸಗಳನ್ನು ಮಾಡಬಾರದೆಂದು ಹೇಳಲಾಗಿದೆ. ಸೋಮವಾರ ಹೊಸ ಉದ್ಯೋಗ, ಮಂಗಳವಾರ ಕಾನೂನು ಕೆಲಸ, ಬುಧವಾರ ಸಾಲ, ಗುರುವಾರ ಕ್ಷೌರ, ಶುಕ್ರವಾರ ದಾನ, ಶನಿವಾರ ಕಬ್ಬಿಣ ಖರೀದಿ, ಭಾನುವಾರ ತುಳಸಿ ಗಿಡಕ್ಕೆ ನೀರು ಹಾಕುವುದನ್ನು ನಿಲ್ಲಿಸಬೇಕು. ಇವುಗಳನ್ನು ಪಾಲಿಸುವುದರಿಂದ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ.

ನಾವೆಲ್ಲರೂ ಒಂದು ನಂಬಿಕೆಯಲ್ಲಿ ಜೀವನ ನಡೆಸುತ್ತಿದ್ದೀವಿ. ಅಯ್ಯೋ ಇದನ್ನು ಮಾಡಿಬಿಟ್ಟರೆ ಅಯ್ಯೋ ಇದು ಹೀಗಾಗಿಬಿಟ್ಟರೆ ಎಂದು ಯೋಚನೆ ಮಾಡಿಕೊಂಡು ಹೆಜ್ಜೆ ಇಡುತ್ತೀವಿ. ನಂಬಿಕೆಗಳು ಹುಟ್ಟುಕೊಂಡಿದ್ದು ನಮ್ಮವರು ನಮ್ಮ ಹಿರಿಯರು ಹೇಳಿಕೊಟ್ಟ ಕೆಲಸದಿಂದ ಆದರೆ ಅಪನಂಬಿಕೆ ಆಗಿರುವುದು ಸೋಷಿಯಲ್ ಮೀಡಿಯಾ ಬಂದ ಮೇಲೆ. ಈ ಕೆಲಸ ಮಾಡಬೇಡಿ ಆ ಕೆಲಸ ಮಾಡಿ ಎಂದು ಜನರ ತಲೆಗೆ ಹುಳ ಬಿಟ್ಟಿದ್ದಾರೆ. ಎನ್ ಮಾಡ್ಬೇಕು ಎನ್ ಮಾಡ ಬಾರದು ಎಂದು ಗೂಗಲ್‌ನಲ್ಲಿ ನೋಡಿದರೆ ಸರಿಯಾಗಿ ಉತ್ತರ ಸಿಗುವುದಿಲ್ಲ. ಹೀಗಾಗಿ ಇಲ್ಲಿಗೆ ನಿಮಗೆ ತೀರಾ ಸಿಂಪಲ್‌ ಆಗಿ ಮಾಹಿತಿ ನೀಡಲಾಗಿದೆ. 

ಸೋಮವಾರ - ಹೊಸ ಉದ್ಯೋಗವನ್ನು ಪ್ರಾರಂಭಿಸಬೇಡಿ. 
ಮಂಗಳುವಾರ - ಕಾನೂನಿನ ಕೆಲಸಗಳನ್ನು ಮಾಡಬೇಡಿ.
ಬುಧವಾರ- ಲೋನ್‌ ಹಣವನ್ನು ತೆಗೆದುಕೊಳ್ಳುವುದು ಮತ್ತು ಕೊಡುವುದು ಮಾಡಬೇಡಿ.
ಗುರವಾರ- ಉಗುರುಗಳನ್ನು ಕತ್ತರಿಸುವುದು ಮತ್ತು ಗಡ್ಡ ಶೇವ್ ಮಾಡುವುದು ನಿಲ್ಲಿಸಿ.
ಶುಕ್ರವಾರ- ಈ ದಿನ ಸಕ್ಕರೆ ದಾನ ಮಾಡುವುದನ್ನು ಮತ್ತು ಉಡುಗೊರೆ ನೀಡುವುದನ್ನು ತಪ್ಪಿಸಿ.
ಶನಿವಾರ- ಕಬ್ಬಿಣದ ವಸ್ತುಗಳನ್ನು ಹಾಗೂ ಕತ್ತರಿ ಖರೀದಿಸುವುದನ್ನು ನಿಲ್ಲಿಸಿ .
ಭಾನುವಾರ- ತುಳಸಿ ಗಿಡಕ್ಕೆ ನೀರುನ್ನು ಹಾಕಬೇಡಿ. 

ಉಪ್ಪು ಮತ್ತು ಹುಣಸೆ ಹಣ್ಣು ಪ್ಲಾಸ್ಟಿಕ್‌ ಡಬ್ಬದಲ್ಲಿದ್ದರೆ ಮನೆಗೆ ಹಣ ಬರಲ್ಲ; ಭಯವಾದರೆ ಇದನ್ನು ಪಾಲಿಸಿ

ಇದಕ್ಕೆ ಯಾಕೆ ಈ ದಿನವನ್ನು ಮೀಸಲಾಗಿದೆ ಎಂದು ಪ್ರಶ್ನೆ ಕೇಳಬೇಡಿ. ತಲೆಮಾರುಗಳಿಂದ ಅದನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ನಿಜ ಹೇಳಬೇಕು ಅಂದ್ರೆ ಇದು ತುಂಬಾ ಕಡಿಮೆ, ಕೂದಲು ಕಟ್ ಮಾಡಿಸಲು ಒಂದು ದಿನ ಇರುತ್ತದೆ, ಮದುವೆಯಾಗುವ ವಧು-ವರ ಯಾವ ದಿನ ಹೊರಗಡೆ ಓಡಾಡಬೇಕು. ಯಾರು ಯಾವ ಬಣ್ಣದ ಗಾಡಿಯನ್ನು ಖರೀದಿಸಬೇಕು ಹೀಗೆ...ಸಾಲು ಸಾಲು ನಡೆಯುತ್ತದೆ. ಜನರು ಹೆಚ್ಚಾಗಿ ನಂಬಿ ಕೆಲಸ ಮಾಡುವುದರ ಬಗ್ಗೆ ಇಲ್ಲಿದೆ. ಭಾನುವಾರದಿಂದ ಶನಿವಾರದವರೆಗೂ ನೀವು ಇದನ್ನು ತಪ್ಪದೆ ಪಾಲಿಸಿಬಿಟ್ಟರೆ ಖಂಡಿತ ಯಶಸ್ಸು, ಆಯಸ್ಸು, ಅರೋಗ್ಯ, ಹಣ ಮತ್ತು ನೆಮ್ಮದಿ ಸಿಗಲಿದೆ. ಕೆಲವರು ರಾಹುಗಾಲ, ಯಮಗಂಟ ಕಾಲ ಹಾಗೂ ಗುಳಿಗಾಲವನ್ನು ನೋಡಿ ಕೆಲಸ ಮಾಡುತ್ತಾರೆ. ಮಂಗಳುವಾರ ರಾಹುಗಾಲದಲ್ಲಿ ದೇವಿಗೆ ನಿಂಬೆ ಹಣ್ಣಿನ ದೀಪ ಹಚ್ಚಿದ್ದರೆ ಅಂದುಕೊಂಡ ಆಸೆಗಳು ಈಡೇರುತ್ತದೆ ಎಂದು ಕೆಲವರು ಹೇಳುತ್ತಾರೆ. ಇದನ್ನು ಪಾಲಿಸುವುದು ನಿಮ್ಮ ನಂಬಿಕೆಗೆ ಬಿಟ್ಟಿದ್ದು ಆದರೆ ಕೆಟ್ಟದಂತ್ತೂ ಆಗಲ್ಲ. 

ಕಿಂಡರ್‌ ಜಾಯ್ ಚಾಕೋಲೇಟ್‌ ತಿನ್ನುವವರಿಗೆ ಅಂಟಿಕೊಳ್ಳುತ್ತಿದೆ ಈ ಬ್ಯಾಕ್ಟೀರಿಯಾ; ಪ್ರಾಣಾಪಾಯದಿಂದ ದೂರವಾಗಿದೆ!

View post on Instagram