Asianet Suvarna News Asianet Suvarna News

Career and Zodiacs: ನಿಮ್ಮ ರಾಶಿಗೆ ಯಾವ ವೃತ್ತಿ ಬೆಸ್ಟ್ ತಿಳ್ಕೊಳಿ..

ನೀವಿನ್ನೂ ಓದಿನ ಹಂತದಲ್ಲಿದ್ದರೆ ಅಥವಾ ಉದ್ಯೋಗ ಅರಸುತ್ತಿದ್ದರೆ, ವೃತ್ತಿಯನ್ನೇ ಬದಲಾಯಿಸುವ ಯೋಚನೆಯಲ್ಲಿದ್ದರೆ, ನಿಮ್ಮ ರಾಶಿಗೆ ಯಾವೆಲ್ಲ ವೃತ್ತಿಗಳು ಹೊಂದುತ್ತವೆ ಎಂಬುದನ್ನು ಅರಿತು ಮುಂದುವರಿಯಿರಿ. 

Do you know which is the best career for you skr
Author
Bangalore, First Published Dec 8, 2021, 10:32 AM IST

ಸುಮ್ಮನೆ ಅಲ್ಲ, 2008ರಲ್ಲಿ ರಾಶಿಗಳು ಹಾಗೂ ಉದ್ಯೋಗ ಸಂಬಂಧಿ ನಡೆಸಿದ ಸರ್ವೆಯೊಂದರ ಪ್ರಕಾರ, ವೃಶ್ಚಿಕ, ಸಿಂಹ, ವೃಷಭ ಹಾಗೂ ಕಟಕ ರಾಶಿಯವರು ಹೆಚ್ಚು ಆದಾಯ ಹೊಂದಿರುತ್ತಾರೆ. ಕುಂಭ, ಮಕರ ರಾಶಿಯವರ ಆದಾಯ ಕಡಿಮೆ ಇರುತ್ತದೆ. ಅಂದರೆ, ರಾಶಿಗೂ ವೃತ್ತಿಗೂ ಸಂಬಂಧವಿರಲೇಬೇಕಲ್ಲ.. ಹಾಗೆಂದು ಇದು ಬರೀ ಹಣದ ವಿಚಾರವಲ್ಲ, ಉದ್ಯೋಗ ತೃಪ್ತಿಯ ವಿಚಾರ ಕೂಡಾ ಮುಖ್ಯ. ಆದಾಯ ಹಾಗೂ ತೃಪ್ತಿ ಎರಡನ್ನೂ ಗಮನದಲ್ಲಿಟ್ಟುಕೊಂಡಾಗ ನಿಮ್ಮ ರಾಶಿಗೆ ಯಾವ ವೃತ್ತಿ ಹೆಚ್ಚು ಹೊಂದುತ್ತದೆ ಗೊತ್ತಾ..

ಮೇಷ (Aries)
ಮೇಷ ರಾಶಿಯವರು ಬಹಳ ಆತ್ಮವಿಶ್ವಾಸ ಉಳ್ಳವರು. ಬಹಳ ಉತ್ಸಾಹಿಗಳು, ಸ್ಪರ್ಧಾತ್ಮಕ ಮನಸ್ಥಿತಿ, ಡಾಮಿನೆಂಟ್ ಹಾಗೂ ಯಾರಿಗೂ ಹೆದರದ ವ್ಯಕ್ತಿತ್ವ. ಇವರಿಗೆ ಬೋನಸ್ ಚೆನ್ನಾಗಿದೆ ಎಂದರೆ ಕಮಿಶನ್ ಆದಾಯವಿರುವ ಕೆಲಸಗಳು(commission-based jobs) ಸೂಟಾಗುತ್ತವೆ. ಸಿಕ್ಕಾಪಟ್ಟೆ ಧೈರ್ಯ ಹಾಗೂ ತಕ್ಷಣ ಪ್ರತಿಕ್ರಿಯಿಸುವ ವ್ಯಕ್ತಿತ್ವದವರಾದ್ದರಿಂದ. ಪೋಲೀಸ್ ಆಫೀಸರ್, ಫೈರ್ ಫೈಟರ್ಸ್, ಅಡ್ವರ್ಟೈಸಿಂಗ್ ಮಾರ್ಕೆಟಿಂಗ್, ಪಿಆರ್(public relations) ವೃತ್ತಿಗಳು ಇವರ ಸ್ವಭಾವಕ್ಕೆ ಹೊಂದುತ್ತವೆ. 
ಇದಲ್ಲದೆ, ಸೈನಿಕ, ಸ್ವಉದ್ಯಮ, ಮನರಂಜನಾ ವೃತ್ತಿ, ಸರ್ಕಾರಿ ಕೆಲಸಗಳು ಹಾಗೂ ರಾಜಕಾರಣಿಯಾಗಿ ಇವರು ಬೆಳೆಯಬಲ್ಲರು. 

ವೃಷಭ(Taurus)
ಒಳ್ಳೆಯ ಲಾಭವಿದೆ, ರಜೆಗಳಿವೆ, ಸಂಬಳ ಚೆನ್ನಾಗಿದೆ, ಉದ್ಯೋಗ ಭದ್ರತೆ ಸಖತ್ತಾಗಿದೆ ಎಂದರೆ ಎಷ್ಟಾದರೂ ಕಷ್ಟ ಪಟ್ಟು ದುಡಿಯಲು ಸಿದ್ಧವಿರುವವರು ವೃಷಭ ರಾಶಿಯವರು. ತಾಳ್ಮೆ, ಪ್ರಾಮಾಣಿಕತೆ, ಶ್ರದ್ಧೆ ಹಾಗೂ ಬದ್ಧತೆಯ ಗುಣಗಳಿಂದಾಗಿ ಇವರು ಉತ್ತಮ ಟೀಂ ಸದಸ್ಯರಾಗಬಲ್ಲರು. ಇವರಿಗೆ ಸೌಂದರ್ಯದ ಬಗ್ಗೆ ಪ್ರೀತಿಯಿರುವುದರಿಂದ ಹೂವು, ಆಹಾರ, ಆಭರಣ ಹಾಗೂ ಲಕ್ಷುರಿ ಐಟಂಗಳಿಗೆ ಸಂಬಂಧಿಸಿದ ಉದ್ಯೋಗ ಲಾಭದಾಯಕವಾಗುತ್ತದೆ. ಕಡಿಮೆ ಮಾತಾಡಿದರೂ ಸ್ಪಷ್ಟವಾಗಿ ಮಾತನಾಡುವವರಾದ್ದರಿಂದ ಉತ್ತಮ ಭಾಷಣಕಾರರಾಗಬಹುದು. ಹೋಟೆಲ್ ಉದ್ಯಮ, ಶಿಕ್ಷಕ, ಎಂಜಿನಿಯರ್(engineer), ಲಾಯರ್(lawyer), ಡಿಸೈನರ್, ಶೆಫ್, ಲ್ಯಾಂಡ್‍ಸ್ಕೇಪರ್ ಕೆಲಸಗಳು ಹೊಂದುತ್ತವೆ. 

Daily Horoscope: ಸಿಂಹವಿಂದು ಸುಮ್ಮನಿರುವುದೇ ಜಾಣತನ!

ಮಿಥುನ(Gemini)
ಇವರನ್ನು ಮಾಡಿದ್ದೇ ಕೆಲಸ ಮಾಡಿ ಎಂದರೆ ಬೇಗ ಬೋರಾಗುತ್ತಾರೆ. ತಿರುಗಾಟ ಇರುವ ಕೆಲಸಗಳು, ಸೋಷ್ಯಲ್ ನೆಟ್ವರ್ಕಿಂಗ್ ವೃತ್ತಿ ಇವರಿಗೆ ಹೊಂದುತ್ತವೆ. ಬಹಳ ಆಶಾದಾಯಕ ಹಾಗೂ ಎನರ್ಜಿ ತುಂಬಿರುವ ಇವರಿಗೆ ನಿಯಮಗಳಿಂದ ಕಟ್ಟಿ ಹಾಕದಂತ ವೃತ್ತಿಗಳು ಹೊಂದುತ್ತವೆ. ಸ್ಟಾಕ್ ಬ್ರೋಕರ್, ಆರ್ಕಿಟೆಕ್ಟ್, ಮೆಶಿನ್ ಆಪರೇಟರ್, ರೆಸ್ಕ್ಯೂ ವರ್ಕರ್, ಟೀಚರ್(teacher), ಟೆಕ್ನಿಕಲ್ ಸಪೋರ್ಟ್ ವೃತ್ತಿಗಳು ಹೊಂದುತ್ತವೆ.

ಕಟಕ(Cancer)
ಬಹಳ ಸೂಕ್ಷ್ಮ ಸ್ವಭಾವದವರಾದ ಇವರಿಗೆ ಕಾಳಜಿ ವಹಿಸುವ ಕೆಲಸಗಳು ಹೊಂದುತ್ತವೆ. ಅಂದರೆ ಕೇವಲ ಮಕ್ಕಳು ಹಾಗೂ ಸಾಕುಪ್ರಾಣಿಗಳ(pets) ಜೊತೆಗಲ್ಲ, ಇವರು ಅತ್ಯುತ್ತಮ ಎಕ್ಸಿಕ್ಯೂಟಿವ್ಸ್, ಗಾರ್ಡನರ್, ಸೋಷ್ಯಲ್ ವರ್ಕರ್, ಎಚ್‍ಆರ್, ಲಾಯರ್, ಟೀಚರ್, ಸಿಇಒ ಹಾಗೂ ಸೈನಿಕರಾಗಬಲ್ಲರು. ಯಾವುದೇ ಜವಾಬ್ದಾರಿಯನ್ನೂ ಸುಲಭವಾಗಿ ನಿರ್ವಹಿಸಬಲ್ಲರು. 

No Haircut on Tuesday: ಮಂಗಳವಾರ ಕೂದಲು ಕತ್ತರಿಸೋಲ್ಲ, ಯಾಕೆ ಗೊತ್ತಾ?

ಸಿಂಹ(Leo)
ಇವರಿಗೆ ಸ್ಟೇಟಸ್ ಹಾಗೂ ಅಧಿಕಾರ ತಂದುಕೊಡುವ ಕೆಲಸಗಳೆಲ್ಲವೂ ಇಷ್ಟ. ಹೆದರದ, ಸ್ಫೂರ್ತಿಯಾಗಲ್ಲ, ಸ್ವತಂತ್ರರಾಗಿರ ಬಯಸುವ ಸಿಂಹ ರಾಶಿಯವರು ನಾಯಕತ್ವ ಹೊಂದಿರುವವರು. ಇವರು ಉತ್ತಮ ಸಿಇಒ, ಪರ್ಫಾಮರ್, ಟೂರ್ ಗೈಡ್, ರಿಯಲ್ ಎಸ್ಟೇಟ್ ಉದ್ಯಮಿ, ಒಳಾಂಗಣ ವಿನ್ಯಾಸಕ(interior decorator), ಫ್ಯಾಶನ್ ಡಿಸೈನರ್, ಸರ್ಕಾರಿ ಕೆಲಸ ಹಾಗೂ ಸೇಲ್ಸ್‌ಪರ್ಸನ್ ಆಗಬಲ್ಲರು. 

ಕನ್ಯಾ(Virgo)
ಇವರು ಪಕ್ಕಾ ಪರ್ಫೆಕ್ಷನಿಸ್ಟ್ ಜೊತೆಗೆ ಸಣ್ಣ ಸಂಗತಿಗಳಿಗೂ ಅತಿಯಾದ ಗಮನ ಹರಿಸುವವರು. ಇವರ ನೆನಪಿನ ಶಕ್ತಿ ಅಧಿಕ, ಯೋಚನಾ ಸಾಮರ್ಥ್ಯ ಅಗಾಧ, ಬಹಳ ಸ್ವಚ್ಛ ಹಾಗೂ ನೀಟ್‌ನೆಸ್ ಬಯಸುವವರು. ಇವರಿಗೆ ಬ್ಯೂಟಿಶಿಯನ್, ಬರಹ ವೃತ್ತಿ, ಸಂಶೋಧನೆ, ಸ್ಟ್ಯಾಟಿಸ್ಟಿಕ್ಸ್, ಟೀಚರ್, ಕ್ರಿಟಿಕ್, ಟ್ರಾನ್ಸ್‌ಲೇಟರ್(traslator), ಡಿಟೆಕ್ಟಿವ್ ವೃತ್ತಿಗಳು ಹೆಚ್ಚು ಕೈ ಹಿಡಿಯುತ್ತವೆ. 

ತುಲಾ(Libra)
ಬಹಳ ಸುಂದರವಾಗಿರುವವರು ಹಾಗೂ ಹೆಚ್ಚು ಮನರಂಜನೆ ನೀಡುವವರು. ಇವರ ಹೊಂದಿಕೊಳ್ಳುವ ಸ್ವಭಾವದಿಂದಾಗಿ ಇವರು ಅತ್ಯುತ್ತಮ ರಾಯಭಾರಿಗಳು ಹಾಗೂ ಟೀಂ ಲೀಡರ್ಸ್ ಆಗಬಲ್ಲರು. ಒಂದು ಕೋಣೆಯಲ್ಲಿರುವುದಕ್ಕಿಂತಾ ಜನರ ನಡುವೆ ಇರಬಯಸುವವರು. ಗ್ರಾಹಕ ಸೇವೆ ಉದ್ಯೋಗ, ಕಲೆ, ಗಾಯನ, ನಿರೂಪಣೆ, ಡ್ಯಾನ್ಸ್, ಟ್ರಾವೆಲ್ ಏಜೆಂಟ, ಸೂಪರ್‌ವೈಸರ್, ಹೋಸ್ಟ್, ಸೇಲ್ಸ್‌ಪರ್ಸನ್, ಡಿಪ್ಲೋಮ್ಯಾಟ್ ವೃತ್ತಿಗಳು(jobs) ಇವರಿಗೆ ಹೊಂದುತ್ತವೆ. 

Offering flowers to god: ಯಾವ ದೇವರಿಗೆ ಯಾವ ಹೂವಿಟ್ಟರೆ ಶ್ರೇಷ್ಠ?

ವೃಶ್ಚಿಕ(Scorpio)
ಇವರಿಗೆ ಕುತೂಹಲ ಹೆಚ್ಚು, ರಹಸ್ಯಗಳಿಷ್ಟ. ವಿಶೇಷವಾಗಿರುವುದರೆಡೆ ಸೆಳೆತ, ಸ್ವಾತಂತ್ರ್ಯ ಹಾಗೂ ನಂಬಿಕೆ ಬಯಸುವವರು. ಇವರು ಉತ್ತಮ ಡಿಟೆಕ್ಟಿವ್, ಲಾಯರ್, ಎಜುಕೇಟರ್, ವಿಜ್ಞಾನಿ, ಸರ್ಜನ್, ವೈದ್ಯರಾಗಬಲ್ಲರು. 

ಧನು(Sagittarius)
ಬಹಳ ಆದರ್ಶವಂತರು, ತತ್ವಜ್ಞಾನಿಗಳು, ಸದಾ ಚೈತನ್ಯಶೀಲರು. ಅತ್ಯುತ್ತಮ ನಿರ್ಧಾರ ಕೈಗೊಳ್ಳಬಲ್ಲರು, ಉದ್ಯೋಗಿಗಳ ನೆಚ್ಚಿನ ಬಾಸ್(boss) ಆಗುವ ಗುಣದವರು. ಪರಿಸರ, ಪ್ರಾಣಿಗಳು, ಕೌನ್ಸೆಲಿಂಗ್ ಹಾಗೂ ಧರ್ಮಕ್ಕೆ ಸಂಬಂಧ ಪಟ್ಟ ವತ್ತಿಗಳು ಹೊಂದುತ್ತವೆ. ಇವರು ಹೊರಗಿರಬಯಸುವವರಾದ್ದರಿಂದ ಪ್ರವಾಸ ಹೆಚ್ಚಿರುವ ಕೆಲಸವೂ ಹೊಂದುತ್ತದೆ. ಸಣ್ಣಪುಟ್ಟ ವಿಷಯಗಳಿಗೆಲ್ಲ ತಲೆ ಕೆಡಿಸಿಕೊಳ್ಳುವವರಲ್ಲ. ಮಂತ್ರಿ, ಎಡಿಟರ್, ಪಿಆರ್, ಕೋಚ್, ಎನಿಮಲ್ ಟ್ರೇನರ್, ವೈದ್ಯ ವೃತ್ತಿ ಕೂಡಾ ಇವರನ್ನು ಗೆಲ್ಲಿಸುತ್ತವೆ. 

ಮಕರ(Capricorns)
ಮಹತ್ವಾಕಾಂಕ್ಷಿಗಳು ಹಾಗೂ ಸವಾಲನ್ನು ಖುಷಿಯಿಂದ ಎದುರಿಸುವವರು. ಗುರಿಸಾಧನೆಗೆ ಎಷ್ಟೇ ತಡವಾದರೂ ಹಟ ಬಿಡದವರು. ವ್ಯಾಪಾರ, ಮ್ಯಾನೇಜರ್, ಆಡಳಿತಕಾರರು, ಎಡಿಟರಿ, ಬ್ಯಾಂಕರ್, ಐಟಿ, ವಿಜ್ಞಾನಕ್ಕೆ ಸಂಬಂಧಿಸಿದ ಉದ್ಯೋಗಗಳು ಹೊಂದುತ್ತವೆ. 

ಕುಂಭ(Aquarius)
ಬಹಳ ಮನುಷ್ಯತ್ವ ಉಳ್ಳವರು. ಇನ್ನೊಬ್ಬರ ಹೃದಯ ನೋಯಿಸಬಯಸದವರು. ಪ್ರತಿಯೊಂದು ಕೃತಿಗೂ ಮುನ್ನ ಮುಂದಿನ ಪರಿಣಾಮಗಳನ್ನು ಯೋಚಿಸುವವರು. ಸೃಜನಶೀಲ(creative)ರಾದ ಇವರಿಗೆ ಕಾರ್ಪೋರೇಟ್ ವೃತ್ತಿಗಳು ಇಷ್ಟವಾಗುವುದಿಲ್ಲ. ವಿಜ್ಞಾನಿ, ಅನ್ವೇಷಕ, ಜೈವಿಕ ರೈತ, ಏವಿಯೇಟರ್, ವಿನ್ಯಾಸಕ, ಸಂಗೀತ- ಇವೆಲ್ಲ ಕುಂಭ ರಾಶಿಗೆ ಹೊಂದುತ್ತವೆ. 

ಮೀನ(Pisces)
ಉತ್ತಮ ಕಲಾಕಾರರು. ಆರನೇ ಇಂದ್ರಿಯ ಚೆನ್ನಾಗಿ ಕೆಲಸ ಮಾಡುತ್ತದೆ. ಸಂಗೀತ, ಫೋಟೋಗ್ರಫಿ, ನೃತ್ಯ, ಚಿತ್ರಕಲೆ, ಫಿಸಿಕಲ್ ಥೆರಪಿಸ್ಟ್, ದಾನಿ, ಪ್ರಾಣಿತಜ್ಞ, ಮನೋತಜ್ಞ ವೃತ್ತಿಗಳು ಮೀನ ರಾಶಿಗೆ ಹೆಚ್ಚು ಹೊಂದುತ್ತವೆ. 

Follow Us:
Download App:
  • android
  • ios