Daily Horoscope: ಸಿಂಹವಿಂದು ಸುಮ್ಮನಿರುವುದೇ ಜಾಣತನ!
8 ಡಿಸೆಂಬರ್ 2021, ಬುಧವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ? ಯಾರು ಎಚ್ಚರವಾಗಿರಬೇಕು?
ಮೇಷ(Aries): ಇಂದು ನೀವು ಕೈಗೊಳ್ಳುವ ಪ್ರಯಾಣದಿಂದ ಲಾಭ ದೊರಕಲಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷವಿದೆ. ಮನೆಯ ಸದಸ್ಯರೆಲ್ಲರೊಂದಿಗೆ ಕುಳಿತು ಮಾತನಾಡುವುದರಿಂದ ಮನಸ್ಸಿನ ಸಂತೋಷ ಹೆಚ್ಚುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಕ್ಕಲಿದೆ. ಹೊಸ ಅವಕಾಶವೂ ಬರಬಹುದು. ಕೃಷ್ಣನಿಗೆ ತುಳಸಿ ಅರ್ಪಿಸಿ.
ವೃಷಭ(Taurus): ವೃತ್ತಿಯಲ್ಲಿ ಮೇಲಧಿಕಾರಿಗಳಿಂದ ಕಿರಿಕಿರಿ, ಸ್ವಂತದ ಕೆಲಸಗಳಿಗೆ ಎದುರಾಗುವ ಅಡೆತಡೆಗಳು. ಸಂಯಮ ಕಾಯ್ದುಕೊಳ್ಳಿ. ಸಂತಾನ ಆಪೇಕ್ಷಿಸುತ್ತಿರುವ ದಂಪತಿಗೆ ಫಲ ಸಿದ್ಧಿ, ತಂದೆ-ಮಕ್ಕಳಲ್ಲಿ ಸಾಮರಸ್ಯ. ಕುಟುಂಬದ ವಿಚಾರದಲ್ಲಿ ಮೂರನೆಯ ವ್ಯಕ್ತಿಯ ಮಧ್ಯಸ್ಥಿಕೆಯನ್ನು ದೂರವಿಡಿ. ಗಣಪತಿ ಪ್ರಾರ್ಥನೆ ಮಾಡಿ.
ಮಿಥುನ(Gemini): ಬಹಳ ದಿನದಿಂದ ತಲೆಯಲ್ಲಿ ಕೊರೆಯುತ್ತಿರುವ ವಿಚಾರಕ್ಕೆ ಆತಂಕ ಬೇಡ, ಎಲ್ಲವೂ ಒಳಿತೇ ಆಗಿ ಸಮಾಧಾನ ಇರಲಿದೆ. ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಿಗಳಿಗೆ ಏಕಾಗ್ರತೆ ಭಂಗವಾಗುತ್ತದೆ. ಇದರಿಂದ ಕೆಲಸಗಳು ಅಪೂರ್ಣವಾಗುತ್ತವೆ. ಲಲಿತಾ ಸಹಸ್ರನಾಮ ಪಠಿಸಿ.
ಕಟಕ(Cancer): ಮಾತಿನ ಚಕಮಕಿಯಿಂದ ದಾಂಪತ್ಯದಲ್ಲಿ ಅಸಮಾಧಾನ, ಮನಸ್ಸಿಗೆ ಬೇಸರ. ಮಧ್ಯಾಹ್ನದ ನಂತರ ಸಮಾಧಾನ ಫಲವಿದೆ. ಬುದ್ಧಿ ಬಲವಿದೆ. ಘಟನೆಯ ಬಗ್ಗೆ ಪರಾಮರ್ಶಿಸಿ ತಪ್ಪನ್ನು ಬೊಟ್ಟು ಮಾಡದೆ ಮಾತುಕತೆ ನಡೆಸಿ. ಮಕ್ಕಳಿಗೆ ಸಂತಸ. ವಿದ್ಯಾರ್ಥಿಗಳಿಗೆ ಪ್ರಗತಿ. ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ.
Career Horoscope 2022: ಹೊಸ ವರ್ಷಕ್ಕೆ ಈ ರಾಶಿಯವರ ಲಕ್ ತಿರುಗ್ತು ಅಂತಾನೇ ಲೆಕ್ಕ!
ಸಿಂಹ(Leo): ವ್ಯವಹಾರದಲ್ಲಿ ಏರುಪೇರು, ಪ್ರಯಾಣದಲ್ಲಿ ಆತಂಕ, ವೃತ್ತಿಯಲ್ಲಿ ಎಚ್ಚರ ಇರಲಿ. ಕೆಲವೊಂದು ದುಡುಕಿನ ಕೆಲಸಗಳಿಂದ ನೆಮ್ಮದಿ ಹಾಳು. ದೊಡ್ಡ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳದೆ ಸುಮ್ಮನಿರುವುದೇ ಜಾಣತನ. ವ್ಯಾಜ್ಯಗಳಲ್ಲಿ ಹಿನ್ನಡೆ. ನಾಗ ಪ್ರಾರ್ಥನೆ ಮಾಡಿ.
ಕನ್ಯಾ(Virgo): ಮನೆ ಹಿರಿಯರ ಮಾತಿಗೆ ಬೆಲೆ ಕೊಡಿ. ಕುಟುಂಬ ಸದಸ್ಯರ ಆರೋಗ್ಯದಲ್ಲಿ ಏರುಪೇರು. ಹಿರಿಯರ, ಮಕ್ಕಳ ಆರೋಗ್ಯದ ಬಗ್ಗೆ ವಿಚಾರಿಸಿ. ವೈದ್ಯರ ಬಳಿ ಪರಿಶೀಲಿಸುವುದೂ ಒಳ್ಳೆಯದು. ನಿರುದ್ಯೋಗಿಗಳು ತಾಳ್ಮೆ ಕಳೆದುಕೊಳ್ಳಬೇಡಿ. ಧನ್ವಂತರಿ ಪ್ರಾರ್ಥನೆ ಮಾಡಿ.
Weekly Horoscope: ಆಸ್ತಿ ವ್ಯವಹಾರಗಳು ಈ ರಾಶಿಯವರಿಗೆ ಭಾರೀ ಲಾಭ ತಂದುಕೊಡಲಿವೆ!
ತುಲಾ(Libra): ಬಂದ ಅವಕಾಶವನ್ನು ಕಳೆದುಕೊಳ್ಳಬೇಡಿ. ಇದು ಭವಿಷ್ಯದಲ್ಲಿ ಭಾಗ್ಯದ ಬಾಗಿಲನ್ನು ತೆರೆಯಬಹುದು. ಗೃಹಸೌಖ್ಯ, ವಾಹನ ಸೌಖ್ಯ, ವ್ಯವಹಾರಗಳು ಸುಲಲಿತವಾಗುತ್ತವೆ. ವ್ಯಾಪಾರಿಗಳಿಗೆ ಒಳ್ಳೆಯ ಲಾಭ. ವಿವಾಹಾಕಾಂಕ್ಷಿಗಳಿಗೆ ಅನಿರೀಕ್ಷಿತ ಸಂಬಂಧ ಅರಸಿ ಬರುವುದು. ನವಗ್ರಹ ಪ್ರಾರ್ಥನೆ ಮಾಡಿ.
ವೃಶ್ಚಿಕ(Scorpio): ವೃತ್ತಿರಂಗದಲ್ಲಿ ವಿವೇಚನೆಯಿಂದ ನಡೆಯಿರಿ. ತಾಳಿದವನು ಬಾಳಿಯಾನು ಎಂಬ ಮಾತನ್ನು ಆಗಾಗ ಹೇಳಿಕೊಳ್ಳಿ. ಸಹೋದರರ ಸಹಕಾರದಿಂದ ಮನೆಯಲ್ಲಿ ಶುಭಕಾರ್ಯಕ್ಕೆ ನಾಂದಿ. ಪ್ರಯಾಣದಲ್ಲಿ ಎಚ್ಚರ ಅಗತ್ಯ. ಶಿವಸ್ಮರಣೆಯಿಂದ ಒಳಿತಾಗುವುದು.
ಧನುಸ್ಸು(Sagittarius): ಮನೆ ಹಿರಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಆಶೀರ್ವಾದ ಬಲ ಸಿಗಲಿದೆ. ನೆಂಟರಿಷ್ಟರ ಆಗಮನದಿಂದ ಸಂತಸ. ಆಹಾರ ಸಮೃದ್ಧಿ, ಹಣಕಾಸಿನ ಲಾಭ. ಶಿಕ್ಷಕರಿಗೆ ಸಂತಸದ ದಿನ. ಐಟಿ ಉದ್ಯೋಗಿಗಳಿಗೆ ಶ್ರಮ ಹೆಚ್ಚಾಗಲಿದೆ. ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ.
ಮಕರ(Capricorn): ಉದ್ಯೋಗಿಗಳಿಗೆ ಬಲ, ಕೆಲಸಗಳು ಸುಲಲಿತವಾಗಿ ಸಾಗುತ್ತವೆ. ಕೋರ್ಟು ಕಚೇರಿ ಕೆಲಸಗಳು ಸುಗಮವಾಗಿ ಸಾಗುತ್ತವೆ. ಹೊಸ ಹೂಡಿಕೆಯಿಂದ ಫಲವಿದೆ. ಆಸ್ತಿ ಖರೀದಿ ವ್ಯವಹಾರ ಮಾಡಬಹುದು. ಮಾತು ನಯವಾಗಿರಲಿ. ವಿಷ್ಣು ಸಹಸ್ರನಾಮ ಹೇಳಿಕೊಳ್ಳಿ.
ಕುಂಭ(Aquarius): ಅಧಿಕಾರಿ ವರ್ಗಕ್ಕೆ ಸ್ಥಾನ ಬದಲಾವಣೆ, ಕೈಕೆಳಗಿನವರನ್ನು ಆಪ್ತರಾಗಿಸಿಕೊಳ್ಳಿ. ಆರೋಗ್ಯದಲ್ಲಿ ಕೊಂಚ ಏರುಪೇರು. ಆಯಾಸ. ಕ್ರೀಡಾಳುಗಳಿಗೆ ಮನ್ನಣೆ. ಪ್ರಯಾಣಕ್ಕೆ ಮುನ್ನ ಮನೆದೇವರನ್ನು ಸ್ಮರಿಸಿ. ರೈತರಿಗೆ ಸಮಾಧಾನದ ದಿನ. ಸುಬ್ರಹ್ಮಣ್ಯನನ್ನು ಸ್ಮರಿಸಿ.
ಮೀನ(Pisces): ಕೌಟುಂಬಿಕವಾಗಿ ಹಿರಿಯರ ತಾಟಸ್ತ್ಯ ಧೋರಣೆಯಿಂದ ಬೇಸರ. ಧನ ನಷ್ಟ ಹಾಗೂ ವ್ಯಯ ಹೆಚ್ಚು. ವ್ಯಾಪಾರಿಗಳಿಗೆ ತಟಸ್ಥ ದಿನ. ಉದ್ಯೋಗದಲ್ಲಿ ಏರುಪೇರಿಲ್ಲ. ಪರರಿಂದ ವಂಚನೆ, ಮಾನ-ಮನಸ್ಸಿಗೆ ಭಂಗ. ಆರೋಗ್ಯ ಸುಧಾರಿಸಲಿದೆ. ಪಕ್ಷಿಗಳಿಗೆ ಧಾನ್ಯ ತಿನ್ನಿಸಿ.