ನಿಮ್ಮ ರಾಶಿಗೆ ಯಾವ ಬಣ್ಣ ಅದೃಷ್ಟ ತರುತ್ತೆ ಗೊತ್ತಾ..?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಣ್ಣಗಳಿಂದ ಅದೃಷ್ಟ ಒಲಿದು ಬರಲಿದೆ. ಆದರೆ, ಅವುಗಳು ರಾಶಿಗಳಿಗನುಸಾರವಾಗಿ ಆಯ್ಕೆ ಮಾಡಿಕೊಂಡರೆ ಹೆಚ್ಚಿನ ಯಶಸ್ಸನ್ನು ಸಾಧಿಸಬಹುದಾಗಿದೆ. ಇರುವ 12 ರಾಶಿಗಳ ವ್ಯಕ್ತಿಗಳಿಗೂ ಒಂದು ಅಥವಾ ಕೆಲವು ಬಣ್ಣಗಳು ಅದೃಷ್ಟವನ್ನು ತಂದುಕೊಡಲಿದ್ದು, ಯಾವ ರಾಶಿಗಳಿಗೆ ಯಾವ ಬಣ್ಣವು ಅದೃಷ್ಟವನ್ನು ತರುತ್ತದೆ ಎಂಬುದನ್ನು ನೋಡೋಣ...
ಪ್ರತಿಯೊಬ್ಬರಿಗೂ ಬಣ್ಣಗಳು (Colors) ಎಂದರೆ ಪ್ರೀತಿ ಇದ್ದೇ ಇರುತ್ತದೆ. ಎಲ್ಲರಿಗೂ ಇಷ್ಟದ ಬಣ್ಣ ಎಂದು ಒಂದಿದ್ದರೆ, ಹಲವರಿಗೆ ಕೆಲವು ಬಣ್ಣಗಳು ಇಷ್ಟಗಳ ಸಾಲಿಗೆ ಸೇರಿಕೊಂಡಿರುತ್ತವೆ. ಬಣ್ಣವು ಪ್ರತಿಯೊಬ್ಬರನ್ನು ಸೆಳೆಯುವಂತಹ, ಆಕರ್ಷಣೆಯನ್ನುಂಟು (Attraction) ಮಾಡುವಂತಹ ವಸ್ತುವಾಗಿದೆ. ಪ್ರತಿ ಬಣ್ಣಗಳಿಗೂ ವಿಶೇಷತೆ ಇದ್ದು, ಅವುಗಳದ್ದೇ ಆದ ಶಕ್ತಿ (Power) ಕೂಡಾ ಇರುತ್ತದೆ. ಒಬ್ಬರಿಗೆ ಇಷ್ಟವಾಗುವ, ಒಪ್ಪುವ ಬಣ್ಣವು ಬೇರೊಬ್ಬರಿಗೂ ಒಪ್ಪಬೇಕು, ಇಷ್ಟವಾಗಬೇಕು ಎಂದೇನೂ ಇಲ್ಲ. ಈ ಬಣ್ಣಗಳನ್ನು ಜ್ಯೋತಿಷ್ಯ ಶಾಸ್ತ್ರದ (Astrology) ಅನುಸಾರ ನೋಡಿದರೆ, ಅದೃಷ್ಟದ ಬಗ್ಗೆ ಉಲ್ಲೇಖವಿದೆ.
ಜ್ಯೋತಿಷ್ಯ ಶಾಸ್ತ್ರದ ಅನುಸಾರ ಯಶಸ್ಸು ಸಿಗಬೇಕೆಂದರೆ ರಾಶಿಗೆ ಅನುಸಾರವಾಗಿ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ನಿಯಮವನ್ನು ಪಾಲಿಸಿಕೊಂಡು ಬಂದರೆ, ಆ ಬಣ್ಣವು ಪಾಸಿಟಿವ್ (Positive) ಎನರ್ಜಿಯನ್ನು ಕೊಡುವುದರ ಜೊತೆಗೆ ಸಮಸ್ಯೆಗಳನ್ನು (Problems) ಸಹ ನಿವಾರಣೆ ಮಾಡುತ್ತದೆ. ಹೀಗಾಗಿ ಯಾವ ರಾಶಿಗೆ ಯಾವ ಬಣ್ಣಗಳು ಆಗಿಬರುತ್ತವೆ, ಅದೃಷ್ಟವನ್ನು ತರುತ್ತವೆ ಎಂಬುದನ್ನು ನೋಡೋಣ...
ಮೇಷ ರಾಶಿ (Aries)
ಮಂಗಳ ಗ್ರಹವು (Mars Planet) ಮೇಷ ರಾಶಿಯ ಅಧಿಪತಿ ಗ್ರಹವಾಗಿದೆ. ಈ ರಾಶಿಯವರಿಗೆ ಸದಾ ಕೆಂಪು ಬಣ್ಣವು ಅದೃಷ್ಟವನ್ನು ತಂದುಕೊಡುತ್ತದೆ. ಕೆಂಪು (Red) ಬಣ್ಣಕ್ಕೆ ವಿಶೇಷ ಶಕ್ತಿ ಇದ್ದು, ವ್ಯಕ್ತಿಯೊಳಗೆ ಅಡಗಿರುವ ಶಕ್ತಿಯನ್ನು ಹೊರಗೆ ತರುತ್ತದೆ. ಜೊತೆಗೆ ನಿಂಬೆ ಹಸಿರು ಇಲ್ಲವೇ ಹಸಿರು (Green) ಬಣ್ಣ ಅಥವಾ ಬಿಳಿ (White) ಬಣ್ಣವು ಸಹ ಇವರಿಗೆ ಒಪ್ಪಿತವಾಗುತ್ತದೆ.
ವೃಷಭ ರಾಶಿ (Taurus)
ವೃಷಭ ರಾಶಿಯು ಪೃಥ್ವಿ ತತ್ವ ರಾಶಿಗೆ ಸೇರಿದ್ದಾಗಿದೆ. ಈ ರಾಶಿಯವರಿಗೆ ಶುಭತರುವ ಬಣ್ಣ ಹಸಿರು. ಅಲ್ಲದೆ, ಹಳದಿ (Yellow) ಬಣ್ಣವೂ ಆಗಿಬರುತ್ತದೆ. ಇಲ್ಲವೇ ಹಳದಿ ಬಣ್ಣ ಮಿಶ್ರಿತ ಇತರ ಬಣ್ಣಗಳೂ ಇವರಿಗೆ ಶುಭಕಾರಕವಾಗಿವೆ. ಆದರೆ, ಈ ರಾಶಿಯವರಿಗೆ ಕೆಂಪು ಬಣ್ಣ ಮಾತ್ರ ಆಗಿಬಾರದು. ಹೀಗಾಗಿ ಇವರು ಈ ಬಣ್ಣದಿಂದ ಮಾತ್ರ ದೂರ ಇದ್ದರೆ ಒಳಿತು.
ಮಿಥುನ ರಾಶಿ (Gemini)
ಮಿಥುನ ರಾಶಿಯ ವ್ಯಕ್ತಿಗಳಿಗೆ ಹಳದಿ ಬಣ್ಣವು ಶುಭಕಾರಕವಾಗಿದೆ. ಹಳದಿ ಬಣ್ಣವು ಬುದ್ಧಿವಂತಿಕೆ, ಮನಸ್ಸು (Mind) ಹಾಗೂ ಪ್ರೇರಣೆ ನೀಡುವ ವಿಚಾರಗಳ ಪ್ರತೀಕವಾಗಿದೆ. ಹೀಗಾಗಿ ಈ ರಾಶಿಯವರು ಹಳದಿಯನ್ನು ಬಳಸಿದರೆ ಮಾಡುವ ಕೆಲಸದಲ್ಲಿ ಯಶಸ್ಸು (Success) ಸಿಗುವುದಲ್ಲದೆ, ಯಾವಾಗಲೂ ಪಾಸಿಟಿವ್ ಚಿಂತನೆಯನ್ನು ಪಡೆಯುತ್ತಾರೆ.
ಕರ್ಕಾಟಕ ರಾಶಿ (Cancer)
ಕರ್ಕಾಟಕ ರಾಶಿಯು ಚಂದ್ರನಿಂದ ಪ್ರಭಾವಿತವಾಗಿರುತ್ತದೆ. ಹೀಗಾಗಿ ಈ ರಾಶಿಯವರಿಗೆ ಮಾನಸಿಕ ಸಮಸ್ಯೆಯು ಆಗಾಗ ಕಾಡುತ್ತಿರುತ್ತದೆ. ಈ ಕಾರಣಕ್ಕಾಗಿ ಈ ರಾಶಿಯವರಿಗೆ ಬಿಳಿ ಬಣ್ಣವು ಉತ್ತಮ. ಈ ಬಣ್ಣವು ಮನಸ್ಸು, ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವಂತೆ ಮಾಡುತ್ತದೆ. ಜೊತೆಗೆ ಧನಾತ್ಮಕ (Positive) ಶಕ್ತಿಯನ್ನು ತಂದುಕೊಡುತ್ತದೆ.
ಸಿಂಹ ರಾಶಿ (Leo)
ಸಿಂಹ ರಾಶಿಯ ಅಧಿಪತಿ ಗ್ರಹವು ಸೂರ್ಯನಾಗಿದ್ದಾನೆ (Sun Planet). ಈ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಿರಲಿದ್ದು, ಇದರ ಆಧಾರದಲ್ಲಿಯೇ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆದಿರುತ್ತಾರೆ. ತಾಮ್ರ (copper) ಅಥವಾ ಬಂಗಾರದ (Gold) ಬಣ್ಣವು ಇವರಿಗೆ ಒಪ್ಪುತ್ತದೆ. ಈ ಬಣ್ಣದಿಂದ ಇವರು ಭಾಗ್ಯವನ್ನು ಪಡೆಯುತ್ತಾರೆ.
ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರಿಗೆ ನೀಲಿ (Blue) ಇಲ್ಲವೇ ಅಚ್ಚ ಕಂದು ಬಣ್ಣಗಳು (Brown color) ಶುಭಕಾರಕವಾಗಿವೆ. ಶುಭ ಕಾರ್ಯಗಳ ಸಂದರ್ಭದಲ್ಲಿ ಈ ಬಣ್ಣಗಳನ್ನು ಬಳಸಿದರೆ ಇವರಿಗೆ ಶ್ರೇಯಸ್ಕರ. ಇದು ಆತ್ಮವಿಶ್ವಾಸವನ್ನು (Confidence) ಹೊಂದಲು ಸಹಕಾರಿಯಲ್ಲದೆ, ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯಕಕಾರಿಯಾಗುತ್ತದೆ.
ತುಲಾ ರಾಶಿ (Libra)
ತುಲಾ ರಾಶಿಯ ವ್ಯಕ್ತಿಗಳಿಗೆ ಗುಲಾಬಿ (Pink) ಬಣ್ಣವು ಶುಭವನ್ನು ತರುತ್ತದೆ. ಸೌಭಾಗ್ಯದ ಪ್ರತೀಕ ಈ ಬಣ್ಣ ಎಂದು ಹೇಳಲಾಗಿದೆ. ಅಲ್ಲದೆ, ತಿಳಿ ಹಳದಿ ಬಣ್ಣವೂ ಇವರಿಗೆ ಒಳತನ್ನುಂಟು ಮಾಡುತ್ತದೆ.
ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಯ ವ್ಯಕ್ತಿಗಳಿಗೆ ಮೆರೂನ್ (Maroon) ಶುಭಕಾರವಾಗಿದೆ. ಕಪ್ಪು ಬಣ್ಣವೂ ಇವರಿಗೆ ಶುಭ ತರಲಿದೆ. ಈ ರಾಶಿಯ ವ್ಯಕ್ತಿಗಳು ಯಾವಾಗಲೂ ಉತ್ಸಾಹವನ್ನು ಹೊಂದಿರುತ್ತಾರೆ. ಕಪ್ಪು ಮತ್ತು ಮೆರೂನ್ ಬಣ್ಣಗಳು ಶಾಂತಿ, ನೆಮ್ಮದಿಯನ್ನುಂಟು ಮಾಡಲಿವೆ.
ಇದನ್ನು ಓದಿ: ಶಿವಮಂದಿರದಲ್ಲಿ ಹೀಗೆ ಪೂಜೆ ಮಾಡಿದ್ರೆ ಕಷ್ಟಗಳೆಲ್ಲ ದೂರ ದೂರ
ಧನು ರಾಶಿ (Sagittarius)
ಈ ರಾಶಿಯ ವ್ಯಕ್ತಿಗಳಿಗೆ ನೇರಳೆ (Purple) ಬಣ್ಣವು ಒಳಿತನ್ನುಂಟು ಮಾಡುತ್ತದೆ. ನೇರಳೆಯು ವಿಲಾಸಿ, ಭೋಗದ ಬಣ್ಣವಾಗಿದೆ. ಅಲ್ಲದೆ, ಇವರ ಪ್ರಬುದ್ಧತೆಯ ನಡೆಗೆ ಸಹಕಾರಿಯಾಗಿ ಈ ಬಣ್ಣವು ಕೆಲಸ ಮಾಡುತ್ತದೆ. ಇದೆಲ್ಲದರ ಜೊತೆಗೆ ಪ್ರತಿ ಕೆಲಸಕ್ಕೂ ಆತ್ಮವಿಶ್ವಾಸದಿಂದ ಮುನ್ನುಗ್ಗುವಂತೆ ಮಾಡುತ್ತದೆ.
ಮಕರ ರಾಶಿ (Capricorn)
ಮಕರ ರಾಶಿಯ ವ್ಯಕ್ತಿಗಳಿಗೆ ಕಪ್ಪು (Black) ಮತ್ತು ನೀಲಿ ಬಣ್ಣವು ಶುಭಕಾರಕವಾಗಿವೆ. ಯಾಕೆಂದರೆ ಈ ಬಣ್ಣವು ಶನಿದೇವರಿಗೆ ಪ್ರಿಯವಾಗಿದೆ. ಈ ಕಾರಣಕ್ಕಾಗಿ ಇವರಿಗೆ ಕಪ್ಪು, ಕಂದು, ಬೂದು, ಖಾಕಿ ಬಣ್ಣಗಳು ರಕ್ಷಣೆಯನ್ನು ನೀಡುತ್ತದೆ. ಜೊತಗೆ ಯಶಸ್ಸಿನ ಮಾರ್ಗವನ್ನು ತೋರಿಸುತ್ತವೆ.
ಕುಂಭ ರಾಶಿ (Aquarius)
ಕುಂಭ ರಾಶಿಯವರು ಸಫಲತೆಯನ್ನು ಸಾಧಿಸಲು ತಿಳಿ ನೀಲಿ ಇಲ್ಲವೇ ಆಕಾಶ ನೀಲಿ (Sky Blue) ಬಣ್ಣಗಳು ಬಹಳ ಉತ್ತಮ. ಇವರು ಈ ಬಣ್ಣಗಳನ್ನು ಬಳಸುವುದರಿಂದ ಹೋದ ಕಡೆಗಳಲ್ಲೆಲ್ಲ ಯಶಸ್ಸನ್ನು ಸಾಧಿಸಬಹುದು. ನೀಲಿ ಬಣ್ಣವು ಪ್ರಗತಿ ಹಾಗೂ ಸಕಾರಾತ್ಮಕತೆ ಸಂಕತೇವಾಗಿದೆ. ಜೊತೆಗೆ ಈ ಬಣ್ಣವು ಸದಾ ಆರೋಗ್ಯವಾಗಿರಲು ಸಹಕಾರಿಯಾಗಿರಲಿದೆ.
ಇದನ್ನು ಓದಿ: ಈ 4 ರಾಶಿಯವರಿಗೆ ಜೂನ್‌ನಲ್ಲಿ ಹರಿಯುತ್ತೆ ಹಣದ ಹೊಳೆ!
ಮೀನ ರಾಶಿ (Pisces)
ಮೀನ ರಾಶಿಯ ವ್ಯಕ್ತಿಗಳಿಗೆ ಹಳದಿ, ಕಿತ್ತಳೆ (Orange) ಹಾಗೂ ಕೇಸರಿ (Saffron) ಬಣ್ಣಗಳು ಶುಭವನ್ನು ತಂದುಕೊಡಲಿವೆ. ಈ ಬಣ್ಣಗಳು ನೆಮ್ಮದಿಯನ್ನು ತಂದುಕೊಡುವುದಲ್ಲದೆ, ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ.