ಈ 4 ರಾಶಿಯವರಿಗೆ ಜೂನ್‌ನಲ್ಲಿ ಹರಿಯುತ್ತೆ ಹಣದ ಹೊಳೆ!
ಕೆಲವು ತಿಂಗಳುಗಳು ಬದಲಾದಂತೆ ಕೆಲವರ ಅದೃಷ್ಟಗಳೂ ಬದಲಾಗುತ್ತವೆ. ಈಗ ಜೂನ್ ತಿಂಗಳು ಬಂದಿದೆ. ಈ ತಿಂಗಳಿನಲ್ಲಿ 4 ರಾಶಿಯವರಿಗೆ ಅದೃಷ್ಟ ಒಲಿದು ಬಂದಿದೆ. ಈ ತಿಂಗಳು ಇವರು ಮುಟ್ಟಿದ್ದೆಲ್ಲ ಚಿನ್ನ... ಇವರ ಅದೃಷ್ಟದ ಬಾಗಿಲು ತೆರೆದಿದ್ದು, ಹಣದ ಹೊಳೆಯೇ ಹರಿಯಲಿದೆ. ಹಾಗಾದರೆ ಅವು ಯಾವ ರಾಶಿಗಳು ಎಂಬುದರ ಬಗ್ಗೆ ನೋಡೋಣ ಬನ್ನಿ...
ಅದೃಷ್ಟ (Luck) ಎಂಬುದು ಯಾವಾಗ? ಯಾವ ಸಮಯದಲ್ಲಿ? ಯಾರಿಗೆ ಬರುತ್ತದೆ ಎಂದು ಹೇಳುವುದು ಬಹಳ ಕಷ್ಟ. ಯಾಕೆಂದರೆ ಇದು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಕೆಲವರಿಗೆ ಅದೃಷ್ಟ ಸಮಯ ಬಹಳ ವಿಳಂಬವಾಗಿ ಪ್ರಾರಂಭವಾಗುತ್ತದೆ. ಮತ್ತೆ ಕೆಲವರಿಗೆ ಅದೃಷ್ಟ ಒಲಿದರೂ ಸಹ ಅದು ತಿಳಿಯುವುದೇ ಇಲ್ಲ.
ಕೆಲವು ಗ್ರಹಗತಿಗಳ (Planet) ಬದಲಾವಣೆಗಳಿಂದ ವ್ಯಕ್ತಿಗಳ ರಾಶಿಚಕ್ರಗಳ (Zodiac sign) ಮೆಲೆ ಪ್ರಭಾವ ಉಂಟಾಗುತ್ತದೆ. ಈ ಮೂಲಕ ಅವರ ಅದೃಷ್ಟಗಳೂ ಬದಲಾಗುತ್ತವೆ. ಇದೀಗ ಜೂನ್ ತಿಂಗಳು (June month) ಪ್ರಾರಂಭವಾಗಿದೆ. ಇದು ಕೆಲವು ರಾಶಿಚಕ್ರದವರಿಗೆ ಬಹಳ ಪ್ರಯೋಜನಕಾರಿಯಾಗಿದೆ. ಅವರಿಗೆ ಈ ತಿಂಗಳಲ್ಲಿ ಹಣದ (Money) ಹೊಳೆಯೇ ಹರಿಯಲಿದೆ. ಈ ಮೂಲಕ ಲಕ್ಷ್ಮಿ ದೇವಿಯ (Goddess Laxmi) ವಿಶೇಷ ಅನುಗ್ರಹಕ್ಕೆ ಪಾತ್ರರಾಗಲಿದ್ದಾರೆ.
ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಪ್ರತಿಯೊಂದು ರಾಶಿಚಕ್ರಗಳಿಗೂ ಅಧಿಪತಿ ಗ್ರಹ ಇರುತ್ತದೆ. ಗ್ರಹಗಳ ರಾಶಿ ಪರಿವರ್ತನೆಯು ವ್ಯಕ್ತಿಯ ಜೀವನದ (Life) ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಆದರೆ ಈ ಜೂನ್ ತಿಂಗಳಿನಲ್ಲಿ ಯಾರು ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದನ್ನು ನೋಡಬೇಕಿದೆ. ಈ ಬಾರಿ 4 ರಾಶಿಚಕ್ರವರಿಗೆ ಅದೃಷ್ಟ ಒಲಿದಿದ್ದು, ಅದು ಯಾವ ರಾಶಿಗಳು? ಅವರ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಬಗ್ಗೆ ತಿಳಿಯೋಣ.
ಮೇಷ ರಾಶಿ (Aries)
ಜೂನ್ 1 ಈ ರಾಶಿಚಕ್ರ ಚಿಹ್ನೆಯ ಜನರಿಗೆ ಬಹಳ ವಿಶೇಷ ದಿನವಾಗಲಿದೆ. ಈ ಬಾರಿ ಆಸ್ತಿ (Property) - ವ್ಯಾಪಾರ (Business), ವ್ಯವಹಾರ ಇತ್ಯಾದಿಗಳಿಂದ ಈ ರಾಶಿಯ ವ್ಯಕ್ತಿಗಳಿಗೆ ಪ್ರಯೋಜನವಾಗುವ ಸಾಧ್ಯತೆ ಹೆಚ್ಚಿದೆ. ಈ ಸಮಯದಲ್ಲಿ ವೃತ್ತಿ ಕ್ಷೇತ್ರದಲ್ಲಿ (Career) ಇರುವವರಿಗೆ ಬಹಳ ಯಶಸ್ಸು ಸಿಗಲಿದೆ. ಅಲ್ಲದೆ ನಿಯಮಿತ ಕೆಲಸದಿಂದ ಪ್ರಯೋಜನಗಳು (Benefit) ಸಹ ಇವರಿಗೆ ಆಗುತ್ತದೆ. ಒಂದು ವೇಳೆ ಕುಟುಂಬದಲ್ಲಿ (Family) ಸಮಸ್ಯೆಗಳು ಎದುರಾಗಿದ್ದಲ್ಲಿ ಅವುಗಳಿಗೆ ಪರಿಹಾರ ಸಹ ಈ ಸಂದರ್ಭದಲ್ಲಿ ಸಿಗುತ್ತದೆ. ಇದರ ಜತೆಯಲ್ಲೇ ಈ ರಾಶಿಯ ವ್ಯಕ್ತಿಯ ಗೌರವವು ಸಹ ಹೆಚ್ಚಾಗುತ್ತದೆ. ಅಲ್ಲದೆ ಇವರ ಮೇಲೆ ಲಕ್ಷ್ಮೀದೇವಿಯ ಕೃಪೆಯಿಂದ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿ, ಉತ್ತಮ ಪ್ರಗತಿ ಹೊಂದುತ್ತಾರೆ.
ಇದನ್ನು ಓದಿ: ಶಿವಮಂದಿರದಲ್ಲಿ ಹೀಗೆ ಪೂಜೆ ಮಾಡಿದ್ರೆ ಕಷ್ಟಗಳೆಲ್ಲ ದೂರ ದೂರ
ಮಿಥುನ ರಾಶಿ (Gemini)
ಈ ರಾಶಿಚಕ್ರ ಚಿಹ್ನೆಯ ಜನರು ಜೂನ್ ತಿಂಗಳಲ್ಲಿ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಎಷ್ಟೋ ದಿನಗಳಿಂದ ಬಾರದೆ ಉಳಿದಿದ್ದ ಹಣವು ಯಾವುದೋ ಮೂಲದಿಂದ ಇವರಿಗೆ ಬಂದು ಕೈ ಸೇರಬಹುದು. ಅಲ್ಲದೆ ಈ ವಾರ ಈ ರಾಶಿಚಕ್ರ ಚಿಹ್ನೆಗಳಿಗೆ ಶುಭಕರವಾಗಿರಲಿದೆ. ಆದರೆ ಇವರಿಗೆ ಒಂದು ಕಾಯಿಲೆ (Disease) ಬರುವ ಸಂಭವ ಇದ್ದರೂ ಸಹ ಅದು ಬೇಗ ನಿವಾರಣೆಯಾಗುತ್ತದೆ. ಅವರ ಅದೃಷ್ಟ ಯಾವ ಮಟ್ಟಿಗೆ ಇದೆಯೆಂದರೆ ಯಾವುದೇ ಹೊಸ ಯೋಜನೆಯನ್ನು (Project) ಇವರು ಪ್ರಾರಂಭ ಮಾಡಿದಲ್ಲಿ ಭವಿಷ್ಯಕ್ಕೆ (Future) ಪ್ರಯೋಜನಕಾರಿಯಾಗಿದೆ.
ವೃಶ್ಚಿಕ ರಾಶಿ (Scorpio)
ಈ ರಾಶಿಯ ವ್ಯಕ್ತಿಗಳಿಗೆ ಆಸ್ತಿ ಸೇರಿದಂತೆ ಇನ್ನಿತರ ವ್ಯವಹಾರಗಳಲ್ಲಿ ಧನ ಲಾಭವಾಗುವ ಅದೃಷ್ಟ ಒದಗಿ ಬರಲಿದೆ. ಈ ಸಮಯದಲ್ಲಿ ಈ ಸಮಯದಲ್ಲಿ ಈ ರಾಶಿಯವರು ಹೊಸ ಯೋಜನೆಗಳನ್ನು ಹಾಕಿಕೊಳ್ಳಬಹುದಾಗಿದ್ದು, ಇಂದು ಇವರಿಗೆ ವಿಶೇಷವಾದ ದಿನವಾಗಿದೆ. ಇವರಿಗೆ ವ್ಯಾವಹಾರಿಕವಾಗಿ ಒಳ್ಳೆಯ ಭವಿಷ್ಯವಿದ್ದರೂ ಸ್ವಲ್ಪ ಜಾಗರೂಕತೆಯಿಂದ (Careful) ಹೆಜ್ಜೆ ಹಾಕಿದರೆ ಉತ್ತಮ ಯಶಸ್ಸನ್ನು ಗಳಿಸಬಹುದು.
ಇದನ್ನು ಓದಿ: ಮನಶ್ಶಾಂತಿಗೆ ಮಂತ್ರ ಪರಿಹಾರ, ಅನುಸರಿಸಿ ಈ ಸರಳ ಟಿಪ್ಸ್!
ಕುಂಭ ರಾಶಿ (Aquarius)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುಂಭ ರಾಶಿಯವರಿಗೆ ಪ್ರತಿ ತಿಂಗಳು ಯಾವುದೇ ಆತಂಕ ಇರುವುದಿಲ್ಲ. ಅವರ ಎಲ್ಲ ಸಮಸ್ಯೆಗಳಿಗೂ ಮುಕ್ತಿ ದೊರೆಯುತ್ತದೆ. ಜತೆಗೆ ಇವರ ಆರ್ಥಿಕ ಪರಿಸ್ಥಿತಿ (Economic status) ಸಹ ಸುಧಾರಿಸಲಿದೆ. ಇವರಿಗೆ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗಲಿದ್ದು, ಸಂಪತ್ತಿನ ವೃದ್ಧಿ ಆಗಲಿದೆ. ಈ ತಿಂಗಳಿನಲ್ಲಿ ಇವರಿಗೆ ಭೂಮಿ ಹೆಚ್ಚಾಗಿ ಆಗಿ ಬರಲಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಬಹುದು.