Diwali 2022 : ಇವರಿಗೆಲ್ಲಾ ಏನಾದರೂ ಉಡುಗೊರೆ ಕೊಡೋದ ಮರೀಬೇಡಿ

ಕತ್ತಲು ಸರಿದು ಬೆಳಕು ಮೂಡುವ ಸಮಯ ದೀಪಾವಳಿ. ಈ ಹಬ್ಬದಲ್ಲಿ ಪ್ರತಿಯೊಬ್ಬರೂ ಖುಷಿಯಾಗಿರಬೇಕು. ಉಡುಗೊರೆ ನೀಡಿ ಆಪ್ತರನ್ನು ಖುಷಿಪಡಿಸುವ ತಯಾರಿಯಲ್ಲಿದ್ದರೆ ಹಬ್ಬದ ಸಂದರ್ಭದಲ್ಲಿ ಇವರನ್ನು ಮರೆಯಬೇಡಿ. ಭವಿಷ್ಯ ಸುಖಕರವಾಗಿರಬೇಕೆಂದ್ರೆ ಕೆಲವರಿಗೆ ಅಗತ್ಯವಾಗಿ ಗಿಫ್ಟ್ ನೀಡಿ. 
 

Diwali 2022 Gifts

ದೀಪದಿಂದ ದೀಪ ಬೆಳಗುವ ಹಬ್ಬ ದೀಪಾವಳಿ ಹತ್ತಿರ ಬರ್ತಿದೆ. ಇದೇ ಅಕ್ಟೋಬರ್ 24ರಿಂದ ದೀಪಾವಳಿ ಸಂಭ್ರಮ ಶುರುವಾಗಲಿದೆ. ಬುಧವಾರ ಅಕ್ಟೋಬರ್ 26ರವರೆಗೆ ದೀಪಾವಳಿ ಸಡಗರ ದೇಶದೆಲ್ಲೆಡೆ ಮನೆ ಮಾಡಲಿದೆ. ದೀಪಾವಳಿ ಹಬ್ಬವನ್ನು ಭಾರತದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶುಭ ಕೆಲಸಕ್ಕೆ ದೀಪಾವಳಿ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ದೀಪಾವಳಿಯ ದಿನ ಮನೆಗೆ ಅನೇಕ ಹೊಸ ವಸ್ತುಗಳನ್ನು ತರಲಾಗುತ್ತದೆ.  ದೀಪಾವಳಿಯಲ್ಲಿ ಜನರು ಪರಸ್ಪರ ಉಡುಗೊರೆ ನೀಡುತ್ತಾರೆ. ಮನೆ ಮಂದಿಗೆಲ್ಲ ಉಡುಗೊರೆ ನೀಡಲಾಗುತ್ತದೆ. ಸಂಬಂಧಿಕರು, ಸ್ನೇಹಿತರಿಗೆ ಉಡುಗೊರೆ ನೀಡುವ ಸಂಪ್ರದಾಯವೂ ನಮ್ಮ ದೇಶದಲ್ಲಿದೆ. 

ದೀಪಾವಳಿ (Diwali) ಸಡಗರದ ಹಬ್ಬ (Festival). ಕತ್ತಲು ತೊಲಗಿ ಬೆಳಕು (Light) ಮೂಡಬೇಕಾದ ಹಬ್ಬ ದೀಪಾವಳಿ. ಈ ಹಬ್ಬದಲ್ಲಿ ಮನೆ ಮಂದಿಯೆಲ್ಲ ಸಂತೋಷ (Happiness) ವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಇದೇ ಕಾರಣಕ್ಕೆ ಸಿಹಿ (sweet) ಯನ್ನು ಹಂಚುತ್ತಾರೆ. ಹೊಸ ಬಟ್ಟೆ ಧರಿಸಿ, ಪಟಾಕಿ ಸಿಡಿಸಿ ಎಲ್ಲರೂ ಸಂಭ್ರಮಿಸುತ್ತಾರೆ. ಈ ಹಬ್ಬದಲ್ಲಿ ಉಡುಗೊರೆಗೆ ವಿಶೇಷ ಮಹತ್ವವಿದೆ. ಅನೇಕ ವಸ್ತುಗಳನ್ನು ಉಡಗೊರೆಯಾಗಿ ನೀಡಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಾಗೆಯೇ ಮನೆ ಮಂದಿಗೆ ಮಾತ್ರವಲ್ಲದೆ ಕೆಲವರಿಗೆ ಉಡುಗೊರೆ ನೀಡಬೇಕೆಂದು ಹೇಳಲಾಗಿದೆ. ನಾವಿಂದು ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರನ್ನು ಹೊರತುಪಡಿಸಿ ಯಾರಿಗೆ ಉಡುಗೊರೆ ನೀಡಬೇಕು ಎಂಬುದನ್ನು ಹೇಳ್ತೇವೆ.

ಇವರಿಗೂ ನೀಡಿ ದೀಪಾವಳಿ ಉಡುಗೊರೆ :

ಕೆಲಸದವರು: ಮನೆ, ಕಚೇರಿ ಅಥವಾ ಅಂಗಡಿಯಲ್ಲಿ ಕೆಲಸ ಮಾಡುವ ಸೇವಕರಿಗೂ ನಾವು ದೀಪಾವಳಿ ಹಬ್ಬದಲ್ಲಿ ಉಡುಗೊರೆ ನೀಡಬೇಕು. ಇವರು ನಮ್ಮ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತಾರೆ. ಅನೇಕ ಕಷ್ಟದ ಸಮಯದಲ್ಲಿ ನಮಗೆ ನೆರವಾಗ್ತಾರೆ. ದೀಪಾವಳಿಯಂದು ಅನೇಕ ಕಚೇರಿಗಳಲ್ಲಿ ಬೋನಸ್ ನೀಡಲಾಗುತ್ತದೆ. ಇದು ಕಚೇರಿಗೆ ಮಾತ್ರ ಸೀಮಿತವಾಗಬಾರದು. ಮನೆ ಕೆಲಸ ಮಾಡುವ ಆಯಾಗಳಿಗೆ ಕೂಡ ದೀಪಾವಳಿಯಂದು ಉಡುಗೊರೆ ನೀಡಬೇಕು. ದುಬಾರಿ ಬೆಲೆಯ ವಸ್ತುವಾಗ್ಬೇಕೆಂದೇನೂ ಇಲ್ಲ. ನೀವು ಸಿಹಿ ತಿಂಡಿ, ಡ್ರೈ ಫ್ರೂಟ್ಸ್, ಬೋನಸ್ ಅಥವಾ ಬಟ್ಟೆಯನ್ನು ಅವರಿಗೆ ನೀಡಬಹುದು. ಉಡುಗೊರೆ ಅವರ ಕೆಲಸವನ್ನು ನೀವು ಪ್ರಶಂಸಿಸುತ್ತೀರಿ ಎಂಬ ಅರ್ಥವನ್ನು ನೀಡುತ್ತದೆ. ನೀವು ಕೊಡುವ ಸಣ್ಣಪುಟ್ಟ ಉಡುಗೊರೆ ಕೂಡ ಅವರಲ್ಲಿ ದೊಡ್ಡ ಬದಲಾವಣೆ ತರುತ್ತದೆ.

Astrology Tips : ರಾಶಿಗೆ ತಕ್ಕಂತೆ ಗಿಫ್ಟ್ ನೀಡಿದ್ರೆ ಹೆಚ್ಚಾಗುತ್ತೆ ಪ್ರೀತಿ

ಮಂಗಳಮುಖಿಯರು (Transgenders) : ಸಮಾಜದಿಂದ ಹೊರಗಿರುವವರು ಮಂಗಳಮುಖಿಯರು. ಸಮಾಜ ಅವರನ್ನು ಕೆಟ್ಟದಾಗಿ ನೋಡುತ್ತದೆ. ಕೆಲಸವಿಲ್ಲದೆ ಬೇಡಿ ತಿನ್ನುವ ಮಂಗಳಮುಖಿಯರ ಸಂಖ್ಯೆ ಸಾಕಷ್ಟಿದೆ. ದೀಪಾವಳಿಯ ಶುಭ ಸಂದರ್ಭದಲ್ಲಿ ನೀವು ಮಂಗಳಮುಖಿಯರಿಗೆ ಉಡುಗೊರೆ ನೀಡಬಹುದು. ದೀಪಾವಳಿಯ ದಿನದಂದು ಮಂಗಳಮುಖಿಯರಿಗೆ ಸಿಹಿ ತಿಂಡಿ ಅಥವಾ ಹಣವನ್ನು ನೀಡಿ. ಹಾಗೆಯೇ ಅವರಿಂದ ಒಂದು ರೂಪಾಯಿ ನಾಣ್ಯವನ್ನು ನೀವು ಕೇಳಿ ಪಡೆಯಿರಿ. ಅವರು ಮನಸ್ಸಿನಿಂದ ನಿಮಗೆ ಹಣ ನೀಡಿದ್ರೆ ಮಂಗಳವಾಗಲಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. 

ನಿರ್ಗತಿಕರಿಗೆ ನೆರವಾಗಿ : ಹಬ್ಬದ ಊಟವನ್ನು ಹಂಚಿ ತಿಂದ್ರೆ ಅದ್ರ ಮಜವೇಬೇರೆ. ನೀವಷ್ಟೇ ಅಲ್ಲ, ಹಬ್ಬವನ್ನು ಪ್ರತಿಯೊಬ್ಬರೂ ಖುಷಿಯಿಂದ ಆಚರಿಸಬೇಕು. ಅನೇಕರಿಗೆ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲ. ಅಂಥವರ ಬಾಳನ್ನು ನೀವು ಬೆಳಗಬಹುದು. ಅವರಿಗೆ ಅಗತ್ಯವಿರುವ ವಸ್ತುವನ್ನು ನೀವು ಉಡುಗೊರೆ ರೂಪದಲ್ಲಿ ನೀಡಬಹುದು. ರಸ್ತೆ ಬದಿಯಲ್ಲಿ ಜೀವನ ಸಾಗಿಸುವ ಜನರು ಅಥವಾ ಅನಾಥಾಶ್ರಮದಲ್ಲಿರುವ ಜನರಿಗೆ ನೀವು ಸಹಾಯ ಮಾಡಬಹುದು.

ಈ ರಾಶಿಯವರಿಗೆ ಕಡಿಮೆ ವಯಸ್ಸಿನ ಗಂಡಸರೆಡೆಗೆ ಅಟ್ರಾಕ್ಷನ್ ಜಾಸ್ತಿ!

ಮದುವೆಗೆ ನೆರವಾಗಿ : ಹೆಣ್ಮಕ್ಕಳ ಮದುವೆ ಅನೇಕ ಪಾಲಕರಿಗೆ ಈಗ್ಲೂ ಹೊಣೆ. ನೀವು ಅಂಥ ಪಾಲಕರ ಕೈ ಹಿಡಿಯಬಹುದು. ಮಗಳ ಮದುವೆ ಮಾಡಲು ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರಿಗೆ ನೀವು ಹಣದ ಸಹಾಯ ಮಾಡಬಹುದು. 
 

Latest Videos
Follow Us:
Download App:
  • android
  • ios