Asianet Suvarna News Asianet Suvarna News

Astrology Tips : ರಾಶಿಗೆ ತಕ್ಕಂತೆ ಗಿಫ್ಟ್ ನೀಡಿದ್ರೆ ಹೆಚ್ಚಾಗುತ್ತೆ ಪ್ರೀತಿ

ಪ್ರೀತಿಸುವ ವ್ಯಕ್ತಿಗಳು ಪರಸ್ಪರ ಗಿಫ್ಟ್ ನೀಡೋದು ಸಾಮಾನ್ಯ. ಆದ್ರೆ ಯಾವ ಗಿಫ್ಟ್ ನೀಡ್ಬೇಕು ಎಂಬ ಪ್ರಶ್ನೆ ಕಾಡೋದು ಕೂಡ ಕಾಮನ್. ಉಡುಗೊರೆ ನೀಡೋದು ಟೆನ್ಷನ್ ಸ್ವಾಮಿ ಅನ್ನೋದು ರಾಶಿ ನೋಡಿ ಗಿಫ್ಟ್ ನೀಡಬಹುದು.
 

According To The Zodiac Give A Gift To The Partner
Author
First Published Oct 1, 2022, 4:05 PM IST

ಮದುವೆಯಾಗಿ ಎಷ್ಟೇ ವರ್ಷ ಕಳೆದಿರಲಿ, ಸಂಗಾತಿ ಮಧ್ಯೆ ಬಾಂಡಿಂಗ್ ಬೇಕು ಅಂದ್ರೆ ಆಗಾಗ ಒಂದಿಷ್ಟು ಉಡುಗೊರೆ ನೀಡ್ತಿರಬೇಕು. ಬೋರಿಂಗ್ ಸಂಬಂಧದಲ್ಲಿ ಚೈತನ್ಯ ತುಂಬಲು ಉಡುಗೊರೆ ಬಹಳ ಮುಖ್ಯ. ಗಿಫ್ಟ್ ಯಾವಾಗ್ಲೂ ಸ್ಪೇಷಲ್ ಆಗಿಯೇ ಇರುತ್ತೆ. ಗಿಫ್ಟ್ ನೀಡುವಾಗ ಆ ವ್ಯಕ್ತಿ ಸ್ವಭಾವ ತಿಳಿದಿದ್ದರೆ ಉಡುಗೊರೆ ನೀಡೋದು ಸುಲಭ. ನಿಮ್ಮಿಷ್ಟದ ವ್ಯಕ್ತಿಯ ಯಾಗ ಉಡುಗೊರೆ ನೀಡ್ಬೇಕು ಎಂಬ ಗೊಂದಲ ನಿಮಗಿದ್ದರೆ ನೀವು ಮೊದಲು ಅವರ ರಾಶಿಯನ್ನು ತಿಳಿದುಕೊಳ್ಳಿ. ರಾಶಿಗೆ ಅನುಗುಣವಾಗಿ ಕೂಡ ನೀವು ಗಿಫ್ಟ್ ನೀಡಬಹುದು. ಇದ್ರಿಂದ ನಿಮ್ಮಿಬ್ಬರ ಮಧ್ಯೆ ಪ್ರೀತಿ ಹೆಚ್ಚಾಗುವ ಜೊತೆಗೆ ಅವರ ಯಶಸ್ಸಿಗೆ ನೀವು ನೀಡಿದ ಉಡುಗೊರೆ ಕಾರಣವಾಗುತ್ತದೆ.

ರಾಶಿ ಪ್ರಕಾರ ನೀಡಿ ಉಡುಗೊರೆ (Gift) :

ಮೇಷ ರಾಶಿ : ಈ ರಾಶಿಯವರಿಗೆ ಉಡುಗೊರೆ ನೀಡಬೇಕೆಂದ್ರೆ ನೀವು ಸ್ವಲ್ಪ ಆಲೋಚನೆ ಮಾಡ್ಬೇಕು. ಯಾಕೆಂದ್ರೆ ಅವರಿಗೆ ದಿನನಿತ್ಯದ ಉಡುಗೊರೆ ಕೊಡೊದು ಒಳ್ಳೆಯದಲ್ಲ. ಅವರು ಸಾಹಸ (Adventure ) ಹಾಗೂ ಪ್ರಯೋಗ ಮಾಡಲು ಇಷ್ಟಪಡ್ತಾರೆ. ಹಾಗಾಗಿ ಅವರಿಗೆ ಅಂಥ ವಸ್ತುಗಳನ್ನು ನೀವು ನೀಡಬಹುದು. ಗೆಜೆಟ್, ವಿಡಿಯೋ ಗೇಮ್,ಗಾಲ್ಫ್ ಸೆಟ್, ಪ್ರಿಂಟ್ ಮಾಡಿರುವ ಕ್ಯಾಪ್ ಹೀಗೆ ಕ್ರೀಡೆ ಹಾಗೂ ಯುನಿಕ್ ವಸ್ತುಗಳನ್ನು ನೀವು ಅವರಿಗೆ ನೀಡಬೇಕು. 

ವೃಷಭ ರಾಶಿ : ವೃಷಭ ರಾಶಿಯವರನ್ನು ಖುಷಿಪಡಿಸಲು ನೀವು ಪರ್ಸ್ (Purse) ಖಾಲಿ ಮಾಡ್ಬೇಕಾಗುತ್ತದೆ. ಯಾಕೆಂದ್ರೆ ಅವರಿಗೆ ದುಬಾರಿ ವಸ್ತುಗಳ ಮೇಲೆ ಮೋಹ ಜಾಸ್ತಿ. ಹಾಗೆ ಈ ರಾಶಿಯವರು ಉದಾರ ಮತ್ತು ಸಂವೇದನಾಶೀಲ ವ್ಯಕ್ತಿತ್ವ ಹೊಂದಿರುತ್ತಾರೆ. ದುಬಾರಿ ಮಸಾಜ್, ಸಂಗೀತದ ಸೆಟ್ ಅಥವಾ ದುಬಾರಿ ಆಭರಣ ಹಾಗೂ ದುಬಾರಿ ಟಿಕೆಟನ್ನು ಉಡುಗೊರೆಯಾಗಿ ನೀಡಬಹುದು.

ಮಿಥುನ ರಾಶಿ : ಮಿಥುನ ರಾಶಿಯವರು ಆಕರ್ಷಕ ಮತ್ತು ಬುದ್ಧಿವಂತರಾಗಿರ್ತಾರೆ. ಅಗತ್ಯಗಳನ್ನು ಪೂರೈಸಲು ಗಿಫ್ಟ್ ನೀಡಬೇಕು. ಡೈರಿ ಸೆಟ್ ಅಥವಾ ಪೆನ್ ಸೆಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ಉಡುಗೊರೆಯಾಗಿ ನೀಡಿ. ಪುಸ್ತಕ, ವಿಡಿಯೋ ಟೇಪ್ ಗಳನ್ನು ಕೂಡ ನೀವು ನೀಡಬಹುದು.

Capricorn ಜೊತೆಗೆ ಡೇಟಿಂಗ್ ಮಾಡಲು ಇಲ್ಲಿವೆ ಟಿಪ್ಸ್!

ಕರ್ಕಾಟಕ ರಾಶಿ : ಈ ರಾಶಿಯವರು ಭೌತಿಕ ವಿಷಯಗಳನ್ನು ಇಷ್ಟಪಡುವುದಿಲ್ಲ. ಜೀವನದಲ್ಲಿ ಆಂತರಿಕ ಸಂತೋಷ ಇಷ್ಟಪಡ್ತಾರೆ.   ಭಾವನಾತ್ಮಕ ಮತ್ತು ಸಂವೇದನಾಶೀಲ ಸ್ವಭಾವದವರಾಗಿರ್ತಾರೆ. ಹಾಗಾಗಿ ಅವರು ಅಂಥಹ ವಸ್ತುಗಳನ್ನು ಇಷ್ಟಪಡುತ್ತಾರೆ. ಸ್ಕೆಚ್‌, ಫೋಟೋ ಫ್ರೇಮ್‌ ಸೇರಿದ ವಸ್ತುಗಳನ್ನು ನೀವು ನೀಡಬಹುದು.

ಸಿಂಹ ರಾಶಿ : ಸಿಂಹ ರಾಶಿಯ ಜನರು ಕಲಾವಿದರು. ಸೃಜನಶೀಲ ವ್ಯಕ್ತಿಗಳು ಇವರು. ಅವರ ವ್ಯಕ್ತಿತ್ವವನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಉಡುಗೊರೆ ನೀಡಬಹುದು. ಸಿನಿಮಾ, ಗಾಢ ಬಣ್ಣದ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಬಹುದು,

ಕನ್ಯಾ ರಾಶಿ : ಕನ್ಯಾ ರಾಶಿಯವರು ಸಂಪ್ರದಾಯ, ದಿನಚರಿ ಮತ್ತು ಸಮಯಕ್ಕೆ ಹೆಚ್ಚು ಗೌರವ ನೀಡ್ತಾರೆ. ದೈನಂದಿನ ದಿನಚರಿಗೆ ಸಹಾಯ ಮಾಡುವ ವಸ್ತುಗಳನ್ನು ನೀವು ನೀಡಬಹುದು. ಕನ್ಯಾ ರಾಶಿಯವರಿಗೆ ಸಾಕು ಪ್ರಾಣಿ ಇಷ್ಟಪಡ್ತಾರೆ. ಹಾಗಾಗಿ ಸಾಕು ಪ್ರಾಣಿಗಳನ್ನು ಉಡುಗೊರೆಯಾಗಿ ನೀಡಬಹುದು. 

ತುಲಾ ರಾಶಿ : ತುಲಾ ರಾಶಿಯವರು ಪ್ರೀತಿಯನ್ನು ಹೆಚ್ಚು ಇಷ್ಟಪಡ್ತಾರೆ. ಆಪ್ತರೊಂದಿಗೆ ಹಂಚಿಕೊಳ್ಳುವ ಬಂಧವನ್ನು ನೆನಪಿಸುವ ಯಾವುದಾದರೂ ವಸ್ತುಗಳನ್ನು ನೀವು ಉಡುಗೊರೆಯಾಗಿ ನೀಡಬಹುದು. ತುಲಾ ರಾಶಿಯವರಿಗೆ ಕಲೆಯನ್ನು ತುಂಬಾ ಇಷ್ಟಪಡ್ತಾರೆ. ಕವಿತೆ ಅಥವಾ ಹಾಡು, ಅಪರೂಪದ ಚಿತ್ರಕಲೆ, ಹೂವು,  ಮೇಕ್ಅಪ್ ವಸ್ತು ಉಡುಗೊರೆ ನೀಡಲು ಉತ್ತಮ ಆಯ್ಕೆಯಾಗಿದೆ.

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರು ನಿಗೂಢವಾಗಿದ್ದಾರೆ. ರೋಚಕ ವಿಷಯ ಇಷ್ಟಪಡುತ್ತಾರೆ. ವೃಶ್ಚಿಕ ರಾಶಿಯವರಿಗೆ ರೋಮಾಂಚನಕಾರಿ ಉಡುಗೊರೆ ಅಥವಾ ಆಭರಣವ ನೀಡಬಹುದು. ರೋಮಾಂಚನಕಾರಿ ಪುಸ್ತಕ, ಜಿಮ್,ಗ್ಯಾಲರಿ ಆಭರಣ ನೀಡಬಹುದು.

ಧನು ರಾಶಿ : ಆಧ್ಯಾತ್ಮಿಕತೆಯನ್ನು ಜನರು ಇಷ್ಟಪಡ್ತಾರೆ. ಶಿಕ್ಷಣದ ಬಗ್ಗೆ ಒಲವು ತೋರುತ್ತಾರೆ.  ಪ್ರಯಾಣವನ್ನು ಇಷ್ಟಪಡುತ್ತಾರೆ. ಈ ರಾಶಿಯವರನ್ನು ನೀವು ಐತಿಹಾಸಿಕ ಸ್ಥಳಕ್ಕೆ ಕಳುಹಿಸಬಹುದು.  ಪುಸ್ತಕಗಳು ಮತ್ತು ವಿಡಿಯೋ ಟೇಪ್‌ಗಳನ್ನು ನೀವು ಉಡುಗೊರೆಯಾಗಿ ನೀಡಬಹುದು.

ಮಕರ ರಾಶಿ : ಮಕರ ರಾಶಿಯವರು ಮಹತ್ವಾಕಾಂಕ್ಷೆ ಮತ್ತು ಜವಾಬ್ದಾರಿ ವ್ಯಕ್ತಿಗಳಾಗಿರುತ್ತಾರೆ. ವೃತ್ತಿಗೆ ಇವರು ಹೆಚ್ಚಿನ ಮಹತ್ವ ನೀಡ್ತಾರೆ. ದೈನಂದಿನ ಬೆಳವಣಿಗೆಗೆ ಪ್ರಾಮುಖ್ಯತೆ ನೀಡ್ತಾರೆ.  ಅವರಿಗೆ ನೀವು ಜೀವನಚರಿತ್ರೆಯ ಪುಸ್ತಕ, ಸ್ವ ಸಹಾಯದಂತ ಪುಸ್ತಕ ನೀಡಬಹುದು. ಹಾಗೆ ಐಷಾರಾಮಿ ಸಲೂನ್ ನಲ್ಲಿ ಸ್ಪಾ ಬುಕ್ ಮಾಡುವ ಮೂಲಕ ಉಡುಗೊರೆ ನೀಡಬಹುದು. 

ಕುಂಭ ರಾಶಿ : ಈ ರಾಶಿಯ ಜನರು ಬುದ್ಧಿವಂತರಾಗಿರುತ್ತಾರೆ. ಅವರು ಮುಕ್ತ ಮನಸ್ಸನ್ನು ಹೊಂದಿರುತ್ತಾರೆ. ಹೋದಲ್ಲೆಲ್ಲ ಅವರು ಆಕರ್ಷಕ ವ್ಯಕ್ತಿಯಾಗಿ ಕಾಣುತ್ತಾರೆ. ನೆಟ್‌ವರ್ಕಿಂಗ್, ತಂತ್ರಜ್ಞಾನ ಮತ್ತು ಅಭಿವೃದ್ಧಿ ಬಯಸುತ್ತಾರೆ. ಅವರಿಗೆ ನೀವು ಗೆಜೆಟ್ ನೀಡಬಹುದು, ಸಾಲ್ಸಾ ಕ್ಲಾಸ್ ಬುಕ್ ಮಾಡಬಹುದು. ಅವರಿಗಾಗಿ ದೊಡ್ಡ ಪಾರ್ಟಿ ಏರ್ಪಡಿಸಬಹುದು.

Numerology: ಈ ಸಂಖ್ಯೆಯ ಪತಿ ಪತ್ನಿಯರ ನಡುವೆ ಜಗಳ, ವೈಮನಸ್ಸು

ಮೀನ ರಾಶಿ : ಮೀನ ರಾಶಿಯವರು ಕನಸುಗಾರರು. ಕಲ್ಪನೆಯನ್ನು ಇವರು ಪ್ರೀತಿಸುತ್ತಾರೆ. ಅವರಿಗೆ ಪ್ರಪಂಚವು ಬೂದು ಬಣ್ಣದ್ದಾಗಿದೆ, ಕಪ್ಪು ಮತ್ತು ಬಿಳಿ ಅಲ್ಲ. ಮೀನ ರಾಶಿಯವರು ಸ್ವಯಂ ನಿರ್ಮಿತ ಉಡುಗೊರೆ ಇಷ್ಟಪಡ್ತಾರೆ. ಅವರಿಗೆ ಥೀಮ್ ಪಾರ್ಟಿ ಆಯೋಜನೆ ಮಾಡಿ. ಸಂತೋಷದ ಕವಿತೆಯನ್ನು ನೀವು ಹೇಳಬಹುದು.  ರಾಫ್ಟಿಂಗ್‌ಗೆ ಕರೆದೊಯ್ಯಬಹುದು. ಪೂಲ್ ಪಾರ್ಟಿ ಕೂಡ ಅವರಿಗೆ ಇಷ್ಟವಾಗುತ್ತದೆ. 
 

Follow Us:
Download App:
  • android
  • ios