ಈ ರಾಶಿಯವರಿಗೆ ಕಡಿಮೆ ವಯಸ್ಸಿನ ಗಂಡಸರೆಡೆಗೆ ಅಟ್ರಾಕ್ಷನ್ ಜಾಸ್ತಿ!

ಸಾಮಾನ್ಯವಾಗಿ ಒಂದೆರಡು ವರ್ಷ ಹೆಚ್ಚಿನ ವಯಸ್ಸಿನ ಹುಡುಗರಿಗೆ ಹೆಣ್ಣು ಮಕ್ಕಳು ಅಟ್ರಾಕ್ಟ್ ಆಗೋದು ಕಾಮನ್. ಆದರೆ, ಈ ರಾಶಿಯ ಹೆಣ್ಣು ಮಕ್ಕಳು ಮಾತ್ರ ಸಣ್ಣ ವಯಸ್ಸಿನ ಗಂಡಸರಿಗೇ ಆಕರ್ಷಿತರಾಗುತ್ತಾರೆ. ನಿಮ್ಮ ರಾಶಿಯೂ ಸೇರಿದ್ಯಾ? 
 

Cancer Aries zodiac signs who likely to attract younger partners

ಪ್ರಾಯಕ್ಕೆ ಬಂದ ಹೆಣ್ಣು ತನಗಿಂತ ನಾಲ್ಕೈದು ವರ್ಷ ದೊಡ್ಡೋರನ್ನು ವರಿಸೋದು ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಸಂಪ್ರದಾಯ. ಗಂಡು ದೊಡ್ಡವನಾದರೆ ಆರ್ಥಿಕವಾಗಿ ಹೆಂಡತಿಯನ್ನು ಸಾಕಲು ಸಮರ್ಥನಾಗಿರುತ್ತಾನೆ ಎನ್ನುವುದರಿಂದ ಹಿಡಿದು ಪ್ರಬುದ್ಧತೆ ಹೆಚ್ಚಿರುತ್ತೆ ಎಂಬ ಕಾರಣಕ್ಕೂ ಗಂಡು ಸಾಮಾನ್ಯವಾಗಿ ದೊಡ್ಡವನೇ ಆಗಿರುತ್ತಾನೆ. ಹಾಗಂಥ ತಂದೆ ವಯಸ್ಸಿನ ಗಂಡಿಗೆ ಅಟ್ರ್ಯಾಕ್ಟ್ ಆಗಬಾರದು ಅಂತೇನೂ ಇಲ್ಲ. ಕಡಿಮೆ ವಯಸ್ಸಿನ ಹುಡುಗರಿಗೆ ಆಕರ್ಷಿತರಾಗುವುದರಲ್ಲಿಯೂ ಯಾವುದೇ ಅನುಮಾನವಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮಗಿಂತ ಹಿರಿಯ ಅಂಜಲಿಯನ್ನು ವರಿಸಿ, ಆದರ್ಶ ದಾಂಪತ್ಯ ನಡೆಸುತ್ತಿದ್ದಾರೆ. ಹೀಗೆ ಕಡಿಮೆ ವಯಸ್ಸಿನ ಗಂಡಿಗೆ ಆಕರ್ಷಿತರಾಗುವ ಕೆಲವು ರಾಶಿಗಳಿವೆ. ಅವು ಯಾವವು?

ಕಟಕ ರಾಶಿ (Cancer)
ಮಾತೃ ಹೃದಯ ಇರೋ ಕಟಕ ರಾಶಿಯವರು ತಮ್ಮ ಕುಟುಂಬದ ಎಲ್ಲರನ್ನೂ ಅಮ್ಮನಂತೆಯೇ ನೋಡಿ ಕೊಳ್ಳುತ್ತಾರೆ. ಈ ರಾಶಿಯವರು ಬಾಳ ಸಂಗಾತಿಯನ್ನು ಆರಿಸಿಕೊಳ್ಳುವಾಗಲೂ ಸಣ್ಣವರನ್ನೇ ಆರಿಸಿಕೊಳ್ಳುತ್ತಾರೆ. ತುಂಬಾ ಕೇರಿಂಗ್ (Caring) ತೆಗೆದುಕೊಳ್ಳುವ ಇವರು ತಮ್ಮ ತಪ್ಪುಗಳನ್ನು ಮಾತ್ರ ಮುಚ್ಚಿಡಲು ಯತ್ನಿಸುತ್ತಾರೆ. ಆ ಕಾರಣದಿಂದಲೇ ಏನೋ ಸಣ್ಣವರಿಗೆ ಆಕರ್ಷಿತರಾಗೋದು ಕಾಮನ್. ಸಾಮಾನ್ಯವಾಗಿ ಸಣ್ಣವರಾದರೆ ತಪ್ಪನ್ನು ಕ್ಷಮಿಸುವ ಉದಾರತೆ ಹೊಂದಿರುತ್ತಾರೆ ಎಂಬ ಕಾರಣಕ್ಕಿರಬಹುದು. 

ಮಿಲಿಂದ್‌ ಸೋಮನ್‌ನನ್ನು ಮದುವೆಯಾದ ಹುಡುಗಿಯ ಕ್ಯೂಟ್‌ ಲವ್‌ ಸ್ಟೋರಿ! ಜನ ಏನಂದ್ರು ನೋಡಿ!

ಮೇಷ ರಾಶಿ (Aries)
ತಾವು ಮಾಡುವ ಕೆಲಸವನ್ನು ಇನ್ನೊಬ್ಬರು ಅನುಸರಿಸಲಿ ಎನ್ನುವ ಕಾರಣದಿಂದ ಮೇಷ ರಾಶಿಯವರು ತಮಗಿಂತ ಚಿಕ್ಕವರನ್ನು ವರಿಸಲು ಬಯಸುತ್ತಾರೆ. ಇನ್ನೊಬ್ಬರ ಮೇಲೆ ಪ್ರಭಾವ ಬೀರುವುದು ಇವರಿಗೆ ಖುಷಿ ಕೊಡುವ ಕೆಲಸ. ಅದಕ್ಕೆ ತಮಗಿಂತ ಸಣ್ಣವರಲ್ಲಿಯೇ ತಮ್ಮ ಕೆಲಸವನ್ನು ಕಾಣುತ್ತಾರೆ.  ವಯಸ್ಸಾಗಿದ್ದನ್ನು ಒಪ್ಪಿ ಕೊಳ್ಳುವ ಜಾಯಮಾನ ಇವರದ್ದಲ್ಲ. ಸಣ್ಣವರನ್ನು ಆರಿಸಿಕೊಂಡರೆ, ಏನೋ ತಾವೂ ಚಿಕ್ಕವರಾದಂತೆ ಭಾವಿಸುತ್ತಾರೆ ಇವರು. ಸ್ವಲ್ಪ ಅಪ್ರಬುದ್ಧರು. ಹುಡುಗುತನ ತುಂಬಾ ಇಷ್ಟ. ಸಂಗಾತಿಯ ಸಣ್ಣಸಣ್ಣ ಬಾಲಿಶ ಕ್ರಿಯೆಗಳು ಇಷ್ಟ ಈ ರಾಶಿಯವರಿಗೆ. 

ವೃಷಭ ರಾಶಿ (Taurus)
ರಕ್ಷಣಾ ಸ್ವಭಾವವನ್ನು ಹೊಂದಿರುವ ವೃಷಭ ರಾಶಿಯವರಿಗೆ ಎಲ್ಲರಲ್ಲೂ ರಕ್ಷಣಾ ಮನೋಭಾವ ಸೃಷ್ಟಿಸುವುದೇ ಒಂದು ರೀತಿ ಖುಷಿ. ತಮಗಿಂತ ಚಿಕ್ಕವರ ಮೇಲೆ ಅಧಿಕಾರ ಚಲಾಯಿಸುವುದು ಇವರಿಗೆ ಇಷ್ಟ. ಅದರಲ್ಲಿಯೂ ಲೈಫ್ ಪಾರ್ಟ್ನರ್ ಸಣ್ಣವರಾಗಿದ್ದರಂತೂ ಡಾಮಿನೇಟ್ (Dominate) ಮಾಡಲು ಇಚ್ಛಿಸುತ್ತಾರೆ. ಆರ್ಡರ್ ಮಾಡಿ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಾರೆ. 


ಮಿಥುನ ರಾಶಿ  (Gemini)
ಸಮಾನ ಮನಸ್ಕರೊಂದಿಗೆ ಇವರು ಬೇಗ ಸ್ನೇಹ ಬೆಳೆಸುತ್ತಾರೆ. ಅದರಲ್ಲಿಯೂ ತಮ್ಮ ವಯಸ್ಸಿನ ಸಂಗಾತಿಗಳಾದರೆ ಇವರಿಗೆ ಬಲು ಖುಷಿ. ತಮ್ಮದೆ ರೀತಿಯ ಆಸೆ, ಆಕಾಂಕ್ಷೆಗಳಿದ್ದರೆ ಇವರಿಗೆ ಇಷ್ಟ. ಅವರ ಜೊತೆ ತಮಾಷೆ ಮಾಡುತ್ತ ಎಂಜಾಯ್ ಮಾಡುತ್ತಾರೆ. ಗಂಡಸಿಗೆ ಹೆಚ್ಚು ವಯಸ್ಸಾದರೆ ಸೀರಿಯಸ್ ಆಗಿರುತ್ತಾರೆ ಎನ್ನುವ ಭಾವನೆ ಇವರದ್ದು. ಅದಕ್ಕೆ ಇವರಿಗೆ ಕಿರಿಯರು ಇಷ್ಟ. ಅದರಲ್ಲಿ ಫ್ಲರ್ಟ್ ಮಾಡುವುದೂ ಇವರಿಗೆ ಸ್ವಲ್ಪ ಖುಷಿ ಕೊಡುತ್ತೆ. 

ಗಂಡ ಹೆಂಡತಿ ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ?

ವೃಶ್ಚಿಕ (Scorpio) ರಾಶಿ
ಇವರು ಪ್ಯಾಷನೇಟ್ ಆದ, ಇಂಟಿಮೇಟ್ (Intimate) ಆದ ಬಾಂಡಿಂಗ್ (Bonding) ಇಷ್ಟ ಪಡುತ್ತಾರೆ. ದಾಂಪತ್ಯವೂ ಹಾಗೆಯೇ ಇರಬೇಕೆಂದು ಬಯಸುತ್ತಾರೆ. ಕಿರಿಯರಲ್ಲಿ ಸಂಬಂಧಗಳ ಬಗ್ಗೆ ಗಾಢವಾದ ಪ್ಯಾಷನ್ ಇರುತ್ತದೆ. ಹಿರಿಯರಾದರೆ ಹೊಣೆಗಾರಿಕೆ ಇತ್ಯಾದಿಗಳನ್ನೆಲ್ಲ ಹೊತ್ತುಕೊಂಡು ಗಂಭೀರವಾಗಿರುತ್ತಾರೆ ಎಂಬ ಅಭಿಪ್ರಾಯ ಇವರದ್ದು. 

ಒಟ್ಟಿನಲ್ಲಿ ಒಬ್ಬೊಬ್ಬರ ಆಸೆ ಆಕಾಂಕ್ಷೆಗಳು ಒಂದೊಂದು ರೀತಿ ಇರುತ್ತದೆ. ಆದರೆ ಕೆಲವು ಸೀರಿಯಲ್‌ಗಳ  ಪ್ರಭಾವದಿಂದಲೋ ಏನೋ, ಹಲವು ಹುಡುಗಿಯರು ಅಪ್ಪನ ವಯಸ್ಸಿನ ಗಂಡಸರಿಗೂ ಅಟ್ರಾಕ್ಟ್ ಆಗಿ, ಮದುವೆ ಆಗೋದು ಹೆಚ್ಚುತ್ತಿದೆ. ಅವರವರ ಭಾವಕ್ಕೆ ಬಿಟ್ಟಿದ್ದು ಎಲ್ಲವೂ. 

Latest Videos
Follow Us:
Download App:
  • android
  • ios