ಧನ್‌ತೇರಸ್ ಹಾಗೂ ದೀಪಾವಳಿ ಹಬ್ಬಕ್ಕೆ ಚಿನ್ನ ಖರೀದಿ ಕುಟುಂಬಕ್ಕೆ ಸಕಲ ಐಶ್ವರ್ಯಗಳನ್ನು ಕಲ್ಪಿಸಲಿದೆ ಅನ್ನೋ ನಂಬಿಕೆ ಇದೆ. ಈ ಹಬ್ಬಕ್ಕೆ ಯಾವ ಜ್ಯುವೆಲ್ಲರಿ ಶಾಪ್ ಅತೀ ಹೆಚ್ಚು ಆಫರ್ ನೀಡುತ್ತಿದೆ? ಇಲ್ಲಿದೆ ವಿವರ.

ದೇಶದೆಲ್ಲೆಡೆ ದನ್‌ತೇರಸ್ ಹಾಗೂ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ನಗರಗಳಿಂದ ಜನರ ತಮ್ಮ ಮನೆ ಸೇರಿಕೊಂಡು ಹಬ್ಬದ ಆಚರಣೆಯಲ್ಲಿದ್ದಾರೆ. ಪ್ರಮುಖವಾಗಿ ಧನ್‌ತೇರಸ್ ಹಾಗೂ ದೀಪಾವಳಿ ಹಬ್ಬಕ್ಕೆ ಹಲವು ಜ್ಯೂವೆಲ್ಲರಿ ಶಾಪ್ ಭರ್ಜರಿ ಆಫರ್ ಮೂಲಕ ಗ್ರಾಹಕರ ಸೆಳೆಯುತ್ತದೆ. ಈ ಬಾರಿಯೂ ಹಲವು ಜ್ಯೂವೆಲ್ಲರಿ ಶಾಪ್ ಕೆಲ ಆಫರ್ ಘೋಷಣೆ ಮಾಡಿದೆ.

ದೇಶದ ಪ್ರಮುಖ ಜ್ಯುವೆಲ್ಲರಿ ಬ್ರ್ಯಾಂಡ್‌ಗಳಾದ ತನಿಷ್ಕ್ , ಕಲ್ಯಾಣ್, ಮಾಲಾಬಾರ್ ಗೋಲ್ಡ್, ಜೋಯಾಲುಕ್ಕಾಸ್ ಸೇರಿದಂತೆ ಕೆಲ ಪ್ರಮುಖ ಜ್ಯೂವೆಲ್ಲರಿ ಬ್ರ್ಯಾಂಡ್ ರಿಯಾಯಿತಿ ಹಾಗೂ ಆಕರ್ಷಕ ಕೊಡುಗೆ ಘೋಷಿಸಿದೆ. ಮೇಕಿಂಗ್ ಚಾರ್ಜ್‌ಗಳಲ್ಲಿ ರಿಯಾಯಿತಿ, ಹಳೆಯ ಚಿನ್ನದ ಎಕ್ಸ್‌ಚೇಂಜ್ ಆಫರ್, ಗೋಲ್ಡ್ ರೇಟ್ ಪ್ರೊಟೆಕ್ಷನ್ ಸೇರಿದಂತೆ ಹಲವು ಸೌಲಭ್ಯಗಳನ್ನು ಘೋಷಿಸಿದೆ.

ತನಿಷ್ಕ್ (Tanishq) ದೀಪಾವಳಿ ಕೊಡುಗೆ

ಮೇಕಿಂಗ್ ಚಾರ್ಜ್ ರಿಯಾಯಿತಿ: ಚಿನ್ನದ ಆಭರಣಗಳ ಪ್ರತಿ ಗ್ರಾಮ್ ಮೇಕಿಂಗ್ ಚಾರ್ಜ್ ಮೇಲೆ ₹301 ರಷ್ಟು ನೇರ ರಿಯಾಯಿತಿ ಸಿಗಲಿದೆ.

ವಜ್ರದ ಆಭರಣಗಳು: ವಜ್ರದ (Diamond) ಮೌಲ್ಯ ಹಾಗೂ ಮೇಕಿಂಗ್ ಚಾರ್ಜ್ ಮೇಲೆ ಬರೋಬ್ಬರಿ ಶೇಕಡಾ 35 ರವರೆಗೆ ರಿಯಾಯಿತಿ ಲಭ್ಯವಿದೆ.

ಗೋಲ್ಡ್ ರೇಟ್ ಪ್ರೊಟೆಕ್ಷನ್: 25% ರಷ್ಟು ಮುಂಗಡ ಹಣ ಪಾವತಿಸಿ ಬುಕ್ ಮಾಡಿಕೊಂಡರೆ, ಬುಕಿಂಗ್ ದಿನದ ದರ ಅಥವಾ ಬಿಲ್ಲಿಂಗ್ ದಿನದ ದರ - ಇವೆರಡರಲ್ಲಿ ಯಾವುದು ಕಡಿಮೆಯಿರುತ್ತದೆಯೋ ಆ ದರದಲ್ಲಿ ಚಿನ್ನ ಖರೀದಿಸಬಹುದು.

ಹಳೆಯ ಚಿನ್ನದ ಎಕ್ಸ್‌ಚೇಂಜ್: 22 ಕ್ಯಾರಟ್ ಹಾಗೂ ಅದಕ್ಕಿಂತ ಹೆಚ್ಚಿನ ಶುದ್ಧತೆಯ ಹಳೆಯ ಚಿನ್ನಕ್ಕೆ ಶೇಕಡಾ 0 ರಷ್ಟು ಕಡಿತ (Zero Deduction) ಸೌಲಭ್ಯವಿದೆ. (9 ರಿಂದ 18 ಕ್ಯಾರಟ್ ಚಿನ್ನಕ್ಕೆ 2% ಕಡಿತ).

ಮಾಲಾಬಾರ್ ಗೋಲ್ಡ್ & ಡೈಮಂಡ್ಸ್

ಮೇಕಿಂಗ್ ಚಾರ್ಜ್ ಆಫರ್: ಚಿನ್ನ, ಅನ್‌ಕಟ್ ಮತ್ತು ರತ್ನದ ಆಭರಣಗಳ ಮೇಕಿಂಗ್ ಚಾರ್ಜ್‌ (Value Addition) ಮೇಲೆ ಶೇಕಡಾ 30 ರವರೆಗೆ ರಿಯಾಯಿತಿ ಇದೆ.

ಡೈಮಂಡ್ ಆಫರ್: ವಜ್ರದ ಆಭರಣಗಳ ಮೌಲ್ಯದ ಮೇಲೆ ಶೇಕಡಾ 30 ರವರೆಗೆ ರಿಯಾಯಿತಿ ಲಭ್ಯ. ಈ ಪ್ರಮುಖ ಆಫರ್ ಅಕ್ಟೋಬರ್ 9 ರಿಂದ ನವೆಂಬರ್ 15 ರವರೆಗೆ ಜಾರಿಯಲ್ಲಿರುತ್ತದೆ.

ಉಚಿತ ಬೆಳ್ಳಿ ನಾಣ್ಯ: 10% ಮುಂಗಡ ಹಣ ನೀಡಿ ಬುಕಿಂಗ್ ಮಾಡುವ ಗ್ರಾಹಕರಿಗೆ ಉಚಿತ ಬೆಳ್ಳಿ ನಾಣ್ಯ (Silver Coin) ದೊರೆಯಲಿದೆ.

ಬ್ಯಾಂಕ್ ಕ್ಯಾಶ್‌ಬ್ಯಾಕ್: ಎಸ್‌ಬಿಐ (SBI) ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವವರಿಗೆ ಗರಿಷ್ಠ ₹4,000 ವರೆಗೆ ಕ್ಯಾಶ್‌ಬ್ಯಾಕ್ ಸಿಗಲಿದೆ. ಹಳೆಯ ಚಿನ್ನದ ಎಕ್ಸ್‌ಚೇಂಜ್ ಮೇಲೆ ಶೂನ್ಯ ಕಡಿತದ ಆಫರ್ ಇದೆ.

ಕಲ್ಯಾಣ್ ಜ್ಯುವೆಲ್ಲರ್ಸ್

ಮೇಕಿಂಗ್ ಚಾರ್ಜ್‌ನಲ್ಲಿ ಭಾರಿ ರಿಯಾಯಿತಿ: ಆಭರಣಗಳ ಮೇಕಿಂಗ್ ಚಾರ್ಜ್‌ಗಳ ಮೇಲೆ ಬರೋಬ್ಬರಿ ಶೇಕಡಾ 40 ರವರೆಗೆ ಭರ್ಜರಿ ರಿಯಾಯಿತಿಯನ್ನು ಪ್ರಕಟಿಸಲಾಗಿದೆ.

ಮೆಗಾ ಪ್ರಶಸ್ತಿಗಳು: ಹಬ್ಬದ ಮಾರಾಟದ ಭಾಗವಾಗಿ ಒಟ್ಟು ₹50 ಕೋಟಿ ಮೌಲ್ಯದ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಕಲ್ಯಾಣ್ ಜ್ಯುವೆಲ್ಲರ್ಸ್ ಕಲ್ಪಿಸಿದೆ.

ಎಕ್ಸ್‌ಚೇಂಜ್ ಆಫರ್: ಹಳೆಯ ಚಿನ್ನದ ಆಭರಣಗಳ ವಿನಿಮಯದ ಮೇಲೆ ಶೇಕಡಾ 0 ರಷ್ಟು ಕಡಿತದ ಸೌಲಭ್ಯ ಲಭ್ಯವಿದೆ.

ಜೋಯಾಲುಕ್ಕಾಸ್

ಫ್ಲ್ಯಾಟ್ 50% ಮೇಕಿಂಗ್ ಚಾರ್ಜ್ ರಿಯಾಯಿತಿ: ಚಿನ್ನ, ವಜ್ರ, ಪ್ಲಾಟಿನಂ, ಸಿಲ್ವರ್ ಆಭರಣಗಳು ಹಾಗೂ ಗೋಲ್ಡ್/ಸಿಲ್ವರ್ ನಾಣ್ಯಗಳು (Bullion) ಸೇರಿದಂತೆ ಎಲ್ಲಾ ಮಾದರಿಯ ಮೇಕಿಂಗ್ ಚಾರ್ಜ್‌ಗಳ ಮೇಲೆ ಫ್ಲ್ಯಾಟ್ 50% ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

ಗೋಲ್ಡ್ ರೇಟ್ ಪ್ರೊಟೆಕ್ಷನ್: 10% ಮುಂಗಡ ನೀಡಿ ಪ್ರಸ್ತುತ ದರವನ್ನು ಬುಕ್ ಮಾಡಿಕೊಳ್ಳುವ ಅವಕಾಶವಿದ್ದು, ನವೆಂಬರ್ 8 ರವರೆಗೆ ಈ ಆಫರ್ ಇರಲಿದೆ.

ಹಳೆಯ ಚಿನ್ನಕ್ಕೆ ತತ್ಕ್ಷಣ ನಗದು: ಹಳೆಯ ಚಿನ್ನದ ಎಕ್ಸ್‌ಚೇಂಜ್‌ಗೆ 0% ಕಡಿತದ ಜೊತೆಗೆ, ಬೇರೆ ಯಾವುದೇ ಶೋರೂಂನಲ್ಲಿ ಖರೀದಿಸಿದ ಹಳೆಯ ಚಿನ್ನವನ್ನು ಮೌಲ್ಯಮಾಪನ ಮಾಡಿ ತಕ್ಷಣವೇ ನಗದು ನೀಡುವ ವಿಶೇಷ ಸೌಲಭ್ಯವನ್ನೂ ನೀಡುತ್ತಿದೆ.

ವಿಶೇಷ ಸೂಚನೆ

ಆಭರಣಗಳನ್ನು ಖರೀದಿಸುವ ಮುನ್ನ ಕೇವಲ ರಿಯಾಯಿತಿಯನ್ನು ಅಷ್ಟೇ ನೋಡದೆ, ಮೇಕಿಂಗ್ ಚಾರ್ಜ್‌ಗಳ ಒಟ್ಟು ಮೊತ್ತ, ಪ್ರಸ್ತುತ ದಿನದ ಚಿನ್ನದ ದರ, ಜಿಎಸ್‌ಟಿ (GST) ಹಾಗೂ ಆಫರ್‌ಗಳ ನಿಯಮಗಳನ್ನು ಪರಿಶೀಲಿಸುವುದು ಒಳಿತು. ಪ್ರತಿಯೊಂದು ಶೋರೂಂ ಹಾಗೂ ಡಿಸೈನ್‌ಗೆ ಅನುಗುಣವಾಗಿ ರಿಯಾಯಿತಿಯ ಶೇಕಡಾವಾರು ಬದಲಾಗುವ ಸಾಧ್ಯತೆ ಇರುವುದರಿಂದ ಹತ್ತಿರದ ಸ್ಟೋರ್‌ಗೆ ಭೇಟಿ ನೀಡಿ ಖಾತರಿಪಡಿಸಿಕೊಳ್ಳಿ. ರಾಜ್ಯದಿಂದ ರಾಜ್ಯ, ನಗರದಿಂದ ನಗರಕ್ಕೆ, ಜ್ಯೂವೆಲ್ಲರಿ ಶಾಪ್‌ಗೆ ಅನುಗುಣವಾಗಿ ಆಫರ್ ಬದಲಾಗುವ ಸಾಧ್ಯತೆ ಇದೆ. ಹೀಗಾಗಿ ಆಫರ್ ಖಚಿತಪಡಿಸಿಕೊಳ್ಳಿ.