Dhanteras 2026: ಈ ಬಾರಿಯ ಧನತ್ರಯೋದಶಿ ಅತ್ಯಂತ ವಿಶೇಷವಾಗಿದೆ. ಸಂಪತ್ತಿನ ದೇವತೆ ಲಕ್ಷ್ಮಿಗೆ ಪ್ರಿಯವಾದ ಶುಕ್ರವಾರದಂದೇ 'ಮಾಳವ್ಯ' ಹಾಗೂ 'ಲಕ್ಷ್ಮೀ ನಾರಾಯಣ' ಎಂಬ 2 ಪ್ರಭಾವಶಾಲಿ ರಾಜಯೋಗಗಳು ಸೃಷ್ಟಿಯಾಗಿವೆ. ಇದರ ಪರಿಣಾಮವಾಗಿ 5 ರಾಶಿಯವರಿಗೆ ಡಬಲ್ ಜಾಕ್ಪಾಟ್ ಹೊಡೆಯಲಿದ್ದು, ಧನಲಾಭದ ಜೊತೆಗೆ ಅದೃಷ್ಟ ಖುಲಾಯಿಸಲಿದೆ. ಆ ಅದೃಷ್ಟದ ರಾಶಿಗಳು ಯಾವುವು? ಇಲ್ಲಿದೆ ನೋಡಿ ವಿವರ.
ಧನತ್ರಯೋದಶಿ 2026: ದೀಪಾವಳಿ ಹಬ್ಬದ ಮೊದಲ ದಿನದಂದು ಆಚರಿಸಲಾಗುವ ಹಬ್ಬವೇ ‘ಧನ್ತೇರಸ್’ (ಧನತ್ರಯೋದಶಿ). ಅಕ್ಷಯ ತೃತೀಯದಂತೆಯೇ ಈ ಧನತ್ರಯೋದಶಿ ದಿನವನ್ನು ಅತ್ಯಂತ ಮಂಗಳಕರ ಹಾಗೂ ಶುಭ ದಿನವೆಂದು ಪರಿಗಣಿಸಲಾಗುತ್ತದೆ. ಈ ವರ್ಷದ ಧನತ್ರಯೋದಶಿಯನ್ನು ನವೆಂಬರ್ 06 ರಂದು ಅಂದರೆ ಇಂದು ಆಚರಿಸಲಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬಾರಿಯ ಧನತ್ರಯೋದಶಿ ಅತ್ಯಂತ ವಿಶೇಷವಾಗಿದೆ. ಏಕೆಂದರೆ, ಈ ಶುಭ ದಿನದಂದು ಎರಡು ಮಂಗಳಕರ ಪಂಚಮಹಾಪುರುಷ ರಾಜಯೋಗಗಳು ಸೃಷ್ಟಿಯಾಗಿವೆ.
ಸೌಂದರ್ಯ, ಐಷಾರಾಮಿ ಜೀವನ, ಪ್ರೀತಿ, ಸಂಪತ್ತು ಮತ್ತು ಸಮೃದ್ಧಿಯ ಕಾರಕನಾದ ‘ಶುಕ್ರ’ ಗ್ರಹವು ತನ್ನ ಸ್ವಂತ ರಾಶಿಯಾದ ತುಲಾ ರಾಶಿಯಲ್ಲಿ ಸ್ಥಿತನಾಗಿರುವುದರಿಂದ ಅತ್ಯಂತ ಮಂಗಳಕರವಾದ ‘ಮಾಳವ್ಯ ರಾಜಯೋಗ’ ನಿರ್ಮಾಣವಾಗಿದೆ. ಇದರ ಜೊತೆಗೆ, ಇದೇ ತುಲಾ ರಾಶಿಯಲ್ಲಿ ಬುದ್ಧಿಕಾರಕನಾದ ‘ಬುಧ’ ಗ್ರಹ ಒಂದೇ ಕಡೆ ಸೇರಿರುವುದರಿಂದ ಶ್ರೇಷ್ಠವಾದ ‘ಲಕ್ಷ್ಮೀ ನಾರಾಯಣ ರಾಜಯೋಗ’ವೂ ನಿರ್ಮಾಣವಾಗಿದೆ.
ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವಿಗೆ ಅತ್ಯಂತ ಪ್ರಿಯವಾದ ಶುಕ್ರವಾರದಂದೇ ಧನತ್ರಯೋದಶಿ ಬಂದಿರುವುದು ಮತ್ತೊಂದು ವಿಶೇಷ. ಶುಕ್ರವಾರದ ಜೊತೆಗೆ ಈ ಎರಡು ಅಪರೂಪದ ರಾಜಯೋಗಗಳು ಒಟ್ಟಿಗೆ ಕೂಡಿ ಬಂದಿರುವುದರಿಂದ, ಕೆಲವು ರಾಶಿಯವರಿಗೆ ಈ ದಿನವು ಅತ್ಯಂತ ಅದೃಷ್ಟದಾಯಕವಾಗಿರಲಿದೆ. ಹಾಗಾದರೆ, ಧನತ್ರಯೋದಶಿಯಂದು ಸೃಷ್ಟಿಯಾಗಿರುವ ಈ ಎರಡು ರಾಜಯೋಗಗಳಿಂದ ಯಾವ 5 ರಾಶಿಯವರಿಗೆ ಡಬಲ್ ಜಾಕ್ಪಾಟ್ ಹೊಡೆಯಲಿದೆ ಎಂಬುದನ್ನು ನೋಡೋಣ..
1. ವೃಷಭ ರಾಶಿ
ಧನತ್ರಯೋದಶಿಯಂದು ಸೃಷ್ಟಿಯಾಗಿರುವ ಈ ಎರಡು ರಾಜಯೋಗಗಳಿಂದ ವೃಷಭ ರಾಶಿಯವರ ಹಣಕಾಸಿನ ಸಮಸ್ಯೆಗಳು ಕೊನೆಗೊಳ್ಳಲಿವೆ. ಆದಾಯದಲ್ಲಿ ಗಣನೀಯ ಏರಿಕೆಯಾಗಲಿದೆ. ಉದ್ಯೋಗದಲ್ಲಿರುವವರಿಗೆ ಬೋನಸ್ ಸಿಗುವ ಸಾಧ್ಯತೆ ಇದೆ. ಹೂಡಿಕೆಗಳಿಂದ ಉತ್ತಮ ಲಾಭ ದೊರೆಯಲಿದೆ. ವ್ಯಾಪಾರಸ್ಥರಿಗೆ ದುಪ್ಪಟ್ಟು ಲಾಭ ಗಳಿಸುವ ಅವಕಾಶವಿದೆ. ಆಸ್ತಿ-ಪಾಸ್ತಿಯಿಂದ ಉತ್ತಮ ಆರ್ಥಿಕ ಲಾಭ ಸಿಗಲಿದ್ದು, ದೀರ್ಘಕಾಲದಿಂದ ಬಾಕಿ ಉಳಿದಿದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.
2. ಕನ್ಯಾ ರಾಶಿ
ಈ ಎರಡು ರಾಜಯೋಗಗಳ ಶುಭ ಪ್ರಭಾವದಿಂದ ಕನ್ಯಾ ರಾಶಿಯವರಿಗೆ ಎಲ್ಲೋ ಸಿಲುಕಿಕೊಂಡಿದ್ದ ಹಣ ಕೈಸೇರಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಕೆಲವರಿಗೆ ಹೊಸ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರಲಿವೆ. ವ್ಯಾಪಾರ-ವ್ಯವಹಾರ ಮಾಡುವವರಿಗೆ ಉತ್ತಮ ಲಾಭ ಸಿಗಲಿದೆ.
3. ತುಲಾ ರಾಶಿ
ತುಲಾ ರಾಶಿಯವರಿಗೆ ಈ ರಾಜಯೋಗಗಳಿಂದ ನಾನಾ ಮಾರ್ಗಗಳಿಂದ ಹಣ ಹರಿದು ಬರಲಿದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ (ಪ್ರಮೋಷನ್) ಅಥವಾ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆಯಿದೆ. ಕೆಲವರು ನಿರೀಕ್ಷಿಸಿದ ಸ್ಥಳಕ್ಕೆ ವರ್ಗಾವಣೆ ಭಾಗ್ಯ ಸಿಗಬಹುದು. ಆರ್ಥಿಕ ವಹಿವಾಟುಗಳಿಂದ ಉತ್ತಮ ಲಾಭ ಗಳಿಸುವಿರಿ.
4. ಮಕರ ರಾಶಿ
ಮಕರ ರಾಶಿಯವರ ತಾಳ್ಮೆ ಮತ್ತು ಕಠಿಣ ಪರಿಶ್ರಮಕ್ಕೆ ಈ ರಾಜಯೋಗಗಳಿಂದ ಉತ್ತಮ ಪ್ರತಿಫಲ ಸಿಗಲಿದೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಉತ್ತಮ ಅವಕಾಶಗಳು ದೊರೆಯುತ್ತವೆ. ಧನಾಗಮನ ಹೆಚ್ಚಾಗಲಿದೆ. ಅನಿರೀಕ್ಷಿತ ಶುಭವಾರ್ತೆಗಳನ್ನು ಕೇಳುವಿರಿ. ವ್ಯಾಪಾರವನ್ನು ವಿಸ್ತರಿಸಲು ಇದು ಸುಸಮಯ. ವಿವಾಹಿತರ ಜೀವನದಲ್ಲಿ ಸುಖ-ಶಾಂತಿ ನೆಲೆಸಲಿದೆ.
5. ಕುಂಭ ರಾಶಿ
ಕುಂಭ ರಾಶಿಯವರು ಈ ದಿನದಂದು ಅಪಾರ ಆರ್ಥಿಕ ಲಾಭವನ್ನು ಪಡೆಯಲಿದ್ದಾರೆ. ಶುಕ್ರ ದೇವನ ಕೃಪೆಯಿಂದ ಕೈತುಂಬಾ ಹಣ ಸಂಪಾದಿಸುವ ಸುವರ್ಣಾವಕಾಶಗಳು ಒದಗಿ ಬರಲಿವೆ. ಹೀಗೆ ಬಂದ ಹಣವನ್ನು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಲಾಭವನ್ನು ಗಳಿಸಬಹುದು.
Disclaimer
ಮೇಲೆ ನೀಡಿರುವ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಈ ಲೇಖನದ ಮುಖ್ಯ ಉದ್ದೇಶ ಮಾಹಿತಿಯನ್ನು ನೀಡುವುದು ಮಾತ್ರ. ಯಾವುದೇ ಪರಿಹಾರಗಳನ್ನು ಕೈಗೊಳ್ಳುವ ಮುನ್ನ ಅಥವಾ ರತ್ನಗಳನ್ನು ಧರಿಸುವ ಮೊದಲು ಸಂಬಂಧಪಟ್ಟ ಪ್ರಮಾಣೀಕೃತ ಜ್ಯೋತಿಷಿಗಳನ್ನು ಸಂಪರ್ಕಿಸಿ ಸಲಹೆ ಪಡೆಯಲು ಸೂಚಿಸಲಾಗಿದೆ.





