ಧನಯೋಗದಿಂದ ಇವರಿಗೆ ಅದೃಷ್ಟ; ಹರಿದು ಬರಲಿದೆ ಹಣದ ಹೊಳೆ..!
ಗ್ರಹಗಳ ಸ್ಥಾನವು ಅನೇಕ ಬಾರಿ ಮಂಗಳಕರ ಯೋಗವನ್ನು ಸೃಷ್ಟಿಸುತ್ತದೆ. ಈ ಯೋಗದ ಪರಿಣಾಮವು ಎಲ್ಲಾ ರಾಶಿಗಳ ಮೇಲೆ ಕಂಡುಬರುತ್ತದೆ. ಆದರೆ ಕೆಲವು ರಾಶಿಚಕ್ರ ಚಿಹ್ನೆಗಳು ವಿಶೇಷ ಪ್ರಯೋಜನಗಳನ್ನು ಪಡೆಯುತ್ತವೆ. ಜುಲೈ 26ರಂದು ಈ ರಾಶಿಚಕ್ರ ಚಿಹ್ನೆಗಳ ಜಾತಕದಲ್ಲಿ ಹಣದ ಹೊಳೆ ಹರಿಯಲಿದೆ.
ಗ್ರಹಗಳ ಸ್ಥಾನವು ಅನೇಕ ಬಾರಿ ಮಂಗಳಕರ ಯೋಗವನ್ನು ಸೃಷ್ಟಿಸುತ್ತದೆ. ಈ ಯೋಗದ ಪರಿಣಾಮವು ಎಲ್ಲಾ ರಾಶಿಗಳ ಮೇಲೆ ಕಂಡುಬರುತ್ತದೆ. ಆದರೆ ಕೆಲವು ರಾಶಿಚಕ್ರ ಚಿಹ್ನೆಗಳು ವಿಶೇಷ ಪ್ರಯೋಜನಗಳನ್ನು ಪಡೆಯುತ್ತವೆ. ಜುಲೈ 26ರಂದು ಈ ರಾಶಿಚಕ್ರ ಚಿಹ್ನೆಗಳ ಜಾತಕದಲ್ಲಿ ಹಣದ ಹೊಳೆ ಹರಿಯಲಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕವನ್ನು ನೋಡಿ ಎಲ್ಲ ವಿಚಾರಗಳನ್ನು ತಿಳಿಯಬಹುದಾಗಿದೆ. ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವ, ಅದೃಷ್ಟ ಮತ್ತು ಯೋಗಗಳನ್ನು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲದೆ ಜಾತಕದಿಂದ ವ್ಯಕ್ತಿಯು ಎಷ್ಟು ಧನಸಂಪತ್ತನ್ನು ಹೊಂದುತ್ತಾನೆ ಎಂಬ ಬಗ್ಗೆ ಸಹ ಅರಿಯಬಹುದು. ಹಣವಿಲ್ಲದೆ ಬದುಕು ಸಾಧ್ಯವಿಲ್ಲ. ಕೆಲವರು ಹೆಚ್ಚು ಧನ ಸಂಪತ್ತನ್ನು ಹೊಂದಿದ್ದರೆ ಮತ್ತೆ ಕೆಲವರಿಗೆ ಹಣ ಸಂಪಾದನೆ ಅತ್ಯಂತ ಕಷ್ಟಕರವಾಗಿರುತ್ತದೆ. ಜಾತಕದಲ್ಲಿ ಗ್ರಹಗಳ ಸ್ಥಿತಿ -ಗತಿಗಳನ್ನು ಪರಿಶೀಲಿಸಿ ವ್ಯಕ್ತಿಯ ಅದೃಷ್ಟದ ಬಗ್ಗೆ ತಿಳಿಯಬಹುದು.
ಜುಲೈ 26ರಂದು ಧನ ಯೋಗದ ರಚನೆಯೊಂದಿಗೆ, ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಸಂಪತ್ತು ಮತ್ತು ಆರ್ಥಿಕ ಸಮೃದ್ಧಿ ಹೆಚ್ಚಾಗಲಿದೆ. ಧನ ಯೋಗವು ಯಾವ ರಾಶಿಯವರಿಗೆ ಅದ್ಭುತ ಬದಲಾವಣೆಗಳನ್ನು ತರುತ್ತದೆ ಎಂದು ಮಾಹಿತಿ ಇಲ್ಲಿದೆ
ವೃಷಭ ರಾಶಿ (Taurus)
ವೃಷಭ ರಾಶಿಯವರಿಗೆ ವೃತ್ತಿಪರ ಪ್ರಯತ್ನಗಳಲ್ಲಿ ಯಶಸ್ಸು ಸಿಗುತ್ತದೆ. ಈ ಅವಧಿಯು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಬಹಳ ಮುಖ್ಯವಾಗಿದೆ, ಏಕೆಂದರೆ ಪ್ರಗತಿಗೆ ಅವಕಾಶಗಳನ್ನು ಕಾಣಬಹುದು. ಆರ್ಥಿಕತೆಯು ಸ್ಥಿರವಾಗಿರುತ್ತದೆ. ಕೆಲಸದಲ್ಲಿ ಮಾಡಿದ ಪ್ರಯತ್ನಗಳು ಪ್ರಶಂಸಿಸಲ್ಪಡುತ್ತವೆ ಮತ್ತು ಅವರ ವೈವಾಹಿಕ ಜಿವನವು ಸಂತೋಷದಿಂದ ತುಂಬಿರುತ್ತದೆ.
ಕುಟುಂಬದ ಸದಸ್ಯರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಪ್ರಯೋಜನಕಾರಿಯಾಗಿದೆ. ಇದಲ್ಲದೆ ಸಮಾಜದಲ್ಲಿ ಗೌರವ ಹಾಗೂ ಮನ್ನಣೆ ಹೆಚ್ಚುತ್ತದೆ.
ಮಿಥುನ ರಾಶಿ (Gemini )
ಮಿಥುನ ರಾಶಿಯವರಿಗೆ ಹಣಕಾಸಿನ ವಹಿವಾಟು ಮತ್ತು ಹೂಡಿಕೆಗಳಿಗೆ ಸಮಯವು ಮಂಗಳಕರವಾಗಿದೆ. ಈ ಅವಧಿಯಲ್ಲಿ ಮಾಡಿದ ಯಾವುದೇ ಹೂಡಿಕೆಯು ಲಾಭದಾಯಕ ಫಲಿತಾಂಶಗಳನ್ನು ನೀಡುವ ಸಾಧ್ಯತೆ ಇದದೆ. ಧನ ಯೋಗವು ಜೀವನದ ಆರ್ಥಿಕ ಅಂಶವನ್ನು ಬಲಪಡಿಸುತ್ತದೆ ಮತ್ತು ವಿತ್ತೀಯ ಪ್ರಯೋಜನಗಳನ್ನು ತರುತ್ತದೆ. ವೃತ್ತಿ ಮತ್ತು ವ್ಯಾಪಾರ ಎರಡೂ ಅಭಿವೃದ್ಧಿ ಹೊಂದುವುದು ಖಚಿತ ಮತ್ತು ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ.
ಸಾವಿಗೂ ಮುಂಚೆ ಸಿಗುತ್ತೆ ಮುನ್ಸೂಚನೆ; ಈ 6 ಲಕ್ಷ್ಮಣಗಳು ಕಂಡರೆ 6 ತಿಂಗಳಲ್ಲಿ ಮರಣ
ಸಿಂಹ ರಾಶಿ (Leo)
ಆರ್ಥಿಕ ಲಾಭಗಳು ಸಂಭವಿಸಲಿವೆ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುದಾರಿಸುತ್ತದೆ. ತಮ್ಮ ವೃತ್ತಿಯಲ್ಲಿ ಪ್ರಗತಿಯನ್ನು ಬಯಸುವ ಅಥವಾ ವ್ಯಾಪಾರದೊಂದಿಗೆ ಸಂಬಂಧ ಹೊಂದಿರುವ ಸಿಂಹ ರಾಶಿಯವರಿಗೆ ಈ ಸಮಯವು ವರದಾನವಾಗಿದೆ. ಅವರ ಗೌರವ ಹೆಚ್ಚಾಗುತ್ತದೆ ಮತ್ತು ಕ್ಷೇತ್ರಗಳಲ್ಲಿ ಪ್ರಗತಿ ಇರುತ್ತದೆ. ಕೆಲಸದ ಸ್ಥಳದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಪ್ರಯೋಜನಕಾರಿಯಾಗಿದೆ.
ಧನು ರಾಶಿ (Sagittarius)
ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಇದು ಅನೂಕೂಲಕರ ಸಮಯ. ಏಕೆಂದರೆ ಅವರಿಗೆ ನಕ್ಷತ್ರಗಳು ಬೆಂಬಲ ನೀಡುತ್ತವೆ. ಅವರ ವೃತ್ತಿಜೀವನದಲ್ಲಿ ಬಡ್ತಿ ಮತ್ತು ಪ್ರಗತಿಯ ಹೆಚ್ಚಿನ ಸಾಧ್ಯತೆಯೂ ಇದೆ. ಧನು ರಾಶಿಯವರ ವೈವಾಹಿಕ ಜಿವನವು ಸಂತೋಷದಿಂದ ಕೂಡಿರುತ್ತದೆ. ಅವರು ತಮ್ಮ ವೃತ್ತಿಪರ ಕ್ಷೇತ್ರದಲ್ಲಿ ಪ್ರಶಂಸೆ ಮತ್ತು ಮೆಚ್ಚುಗೆಯನ್ನು ಪಡೆಯುತ್ತಾರೆ.
ಅಕ್ಟೋಬರ್‌ವರೆಗೆ 6 ರಾಶಿಯವರಿಗೆ ರಾಹುವಿನ ವಕ್ರ ದೃಷ್ಟಿ; ಪ್ರತಿ ಹೆಜ್ಜೆಯಲ್ಲೂ ಸವಾಲು..!
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.