ಅಕ್ಟೋಬರ್‌ವರೆಗೆ 6 ರಾಶಿಯವರಿಗೆ ರಾಹುವಿನ ವಕ್ರ ದೃಷ್ಟಿ; ಪ್ರತಿ ಹೆಜ್ಜೆಯಲ್ಲೂ ಸವಾಲು..!

ರಾಹುವನ್ನು ವೈದಿಕ ಜ್ಯೋತಿಷ್ಯದಲ್ಲಿ ನೆರಳಿನ ಗ್ರಹ ಎಂದು ಪರಿಗಣಿಸಲಾಗಿದೆ. ಆದರೂ ಸಹ ಅದರ ಪ್ರಭಾವ ಎಲ್ಲ ರಾಶಿಗಳ ಮೇಲೆ ಇರುತ್ತದೆ ಎಂದು ಹೇಳಲಾಗುತ್ತದೆ. ರಾಹು ಮೇಷ ರಾಶಿಯಲ್ಲಿ ಅಕ್ಟೋಬರ್ 30, 2023 ರ ವರೆಗೆ ಇರಲಿದ್ದಾನೆ. ಇದು 6 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.

Rahu Transit in Aries 2023 Effects of Aries Taurus Leo Virgo Capricorn Pisces suh

ರಾಹುವನ್ನು ವೈದಿಕ ಜ್ಯೋತಿಷ್ಯದಲ್ಲಿ ನೆರಳಿನ ಗ್ರಹ ಎಂದು ಪರಿಗಣಿಸಲಾಗಿದೆ. ಆದರೂ ಸಹ ಅದರ ಪ್ರಭಾವ ಎಲ್ಲ ರಾಶಿಗಳ ಮೇಲೆ ಇರುತ್ತದೆ ಎಂದು ಹೇಳಲಾಗುತ್ತದೆ. ರಾಹು ಮೇಷ ರಾಶಿಯಲ್ಲಿ ಅಕ್ಟೋಬರ್ 30, 2023 ರ ವರೆಗೆ ಇರಲಿದ್ದಾನೆ. ಇದು 6 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.

ವೈದಿಕ ಜ್ಯೋತಿಷ್ಯದಲ್ಲಿ ಒಟ್ಟು 9 ಗ್ರಹಗಳನ್ನು ಉಲ್ಲೇಖಿಸಲಾಗಿದೆ. ಅದರಲ್ಲಿ ರಾಹು ಮತ್ತು ಕೇತು ಎರಡು ಗ್ರಹಗಳಾಗಿದ್ದು, ಇವುಗಳನ್ನು ನೆರಳು ಗ್ರಹಗಳು ಎಂದು ಕರೆಯಲಾಗುತ್ತದೆ. ರಾಹು ಮೇಷ ರಾಶಿಯಲ್ಲಿ ಕ್ಟೋಬರ್ 30, 2023 ರವರೆಗೆ ಇರಲಿದ್ದಾನೆ. ಇದರಿಂದ ಕೆಲವು ರಾಶಿಯವರು ಎಚ್ಚರದಿಂದ ಇರಬೇಕು. ಈ ಕುರಿತು ಇಲ್ಲಿದೆ ಮಾಹಿತಿ.


ಮೇಷ ರಾಶಿ (Aries)

ನಿಮ್ಮ ರಾಶಿಯಲ್ಲಿ ರಾಹು ಸಂಚಾರವು ಹಠಾತ್ ಘಟನೆಗಳು ಮತ್ತು ಅಪಘಾತಗಳನ್ನು ಉಂಟುಮಾಡುತ್ತದೆ. ನೀವು ಅವಮಾನಗಳನ್ನು ತಪ್ಪಿಸಬೇಕು. ಇದಲ್ಲದೆ, ಇಲ್ಲಿ ನೆಲೆಗೊಂಡಿರುವ ರಾಹು ರೋಗ ಮತ್ತು ದುಃಖವನ್ನು ನೀಡುತ್ತದೆ. ಇದು ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಕೋಲಾಹಲವನ್ನು ಸೃಷ್ಟಿಸುತ್ತದೆ. ನೀವು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಕೆಲಸದ ಮೇಲೆ ಮಾತ್ರ ಗಮನ ಹರಿಸಿ. ಅರ್ಥಹೀನ ಚರ್ಚೆಗಳಿಂದ ದೂರವಿರಿ.
 
ವೃಷಭ ರಾಶಿ (Taurus)

ನಿಮ್ಮ ರಾಶಿಯ 12ನೇ ಮನೆಗೆ ರಾಹು ಪ್ರವೇಶಿಸಿದರೆ, ಅದು ಖರ್ಚುಗಳನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ನೀವು ವಿದೇಶಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ಮಾಡುತ್ತಿದ್ದರೆ ನೀವು ಹೆಚ್ಚು ಜಾಗರೂಕರಾಗಿರಬೇಕು, ನಷ್ಟ ಸಂಭವಿಸಬಹುದು. ನೀವು ಕೆಲಸ ಮಾಡುತ್ತಿದ್ದರೆ, ವಾದಗಳಿಂದ ದೂರವಿರಿ.

ಜ್ಞಾನವಾಪಿ ಮಸೀದಿ ವಿವಾದ; ಮಣ್ಣಲ್ಲಿ ಹೂತು ಹೋಗಿದೆಯಾ ಶಿವನ ದೇವಾಲಯ..?

 

ಸಿಂಹ ರಾಶಿ (Leo)

ಈ ಅವಧಿಯಲ್ಲಿ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಪ್ರಯಾಣಕ್ಕೆ ಹೆಚ್ಚಿನ ವೆಚ್ಚವಾಗಲಿದೆ. ಅದೃಷ್ಟ ಸಹಕರಿಸುವುದಿಲ್ಲ. ಉದ್ಯೋಗ-ವ್ಯವಹಾರದಲ್ಲಿ ಸವಾಲುಗಳು ಮತ್ತು ಹೆಚ್ಚಿನ ಹೋರಾಟಗಳು ಇರಬಹುದು.

ಕನ್ಯಾರಾಶಿ (Virgo)

ರಾಹು ನಿಮ್ಮ ಎಂಟನೇ ಮನೆಗೆ ಸಾಗುತ್ತಿದ್ದಾರೆ. ಈ ಅವಧಿಯಲ್ಲಿ ನಿಗೂಢ ರಹಸ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಬಹುದು. ವ್ಯವಹಾರದಲ್ಲಿ ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಈ ಅವಧಿಯು ನಿಮಗೆ ಸವಾಲುಗಳಿಂದ ತುಂಬಿದೆ.

ಮನೆಯಲ್ಲಿ ಈ ಏಳು ವಸ್ತುಗಳಿದ್ದರೆ ಅಶುಭ; ನಿಮ್ಮ ಅವನತಿ ಗ್ಯಾರೆಂಟಿ..!


 
ಮಕರ ರಾಶಿ  (Capricorn)
ನಿಮ್ಮ ರಾಶಿಯ 4 ನೇ ಮನೆಯಲ್ಲಿ ರಾಹು ಸಂಚಾರವು ಸಂಘರ್ಷಗಳನ್ನು ಉಂಟುಮಾಡುತ್ತದೆ. ಈ ಅವಧಿಯು ವೃತ್ತಿ, ಉದ್ಯೋಗ, ರಿಯಲ್ ಎಸ್ಟೇಟ್ ಮತ್ತು ತಾಯಿಯ ಆರೋಗ್ಯಕ್ಕೆ ಉತ್ತಮವಲ್ಲ. ರಾಹುವಿನ ಪ್ರಭಾವದಿಂದಾಗಿ, ಉದ್ಯೋಗ ಮತ್ತು ಆಸ್ತಿ ಸೇರಿದಂತೆ ಇತರ ವಿಷಯಗಳಲ್ಲಿ ನೀವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಮೀನ ರಾಶಿ  (Pisces)

ರಾಹು ನಿಮ್ಮ ಎರಡನೇ ಮನೆಗೆ ಸಂಚಾರ ಮಾಡುತ್ತಿದ್ದಾನೆ. ಈ ಅವಧಿಯಲ್ಲಿ ನೀವು ಕೆಲವು ಹಠಾತ್ ಖರ್ಚುಗಳನ್ನು ಎದುರಿಸಬಹುದು. ನಿಮ್ಮ ಮಾತಿನಲ್ಲಿ ಕಹಿ ಇರಬಹುದು. ಕುಟುಂಬದಲ್ಲಿ ಯಾರೊಂದಿಗಾದರೂ ಸಂಬಂಧಗಳು ಹದಗೆಡಬಹುದು. ಗಂಟಲು ಮತ್ತು ಹಲ್ಲುಗಳಲ್ಲಿ ಸಮಸ್ಯೆಗಳಿರಬಹುದು. ನೀವು ಎಚ್ಚರದಿಂದಿರಬೇಕು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios