ಲಕ್ಷ್ಮೀ ನಾರಾಯಣ ಯೋಗದಿಂದ ಈ ನಾಲ್ಕು ರಾಶಿಗಳಿಗೆ ಬಂಪರ್ ಅದೃಷ್ಟ
ವೃಷಭ ರಾಶಿಯಲ್ಲಿ 'ಲಕ್ಷ್ಮೀ ನಾರಾಯಣ ಯೋಗ' ಶೀಘ್ರದಲ್ಲೇ ರಚನೆಯಾಗಲಿದೆ. ಇದರಿಂದ ಈ ನಾಲ್ಕು ರಾಶಿಚಕ್ರಗಳ ಸಂತೋಷ ಮತ್ತು ಅದೃಷ್ಟದಲ್ಲಿ ಹೆಚ್ಚಳವಾಗುತ್ತದೆ.
ಗ್ರಹಗಳು(planets) ಒಂದು ರಾಶಿಯಿಂದ ಇನ್ನೊಂದು ರಾಶಿಗೆ ತಮ್ಮದೇ ಗತಿಯಲ್ಲಿ ಚಲಿಸುವುದು ತಿಳಿದಿರುವುದೇ. ಹೀಗೆ ಚಲಿಸುವಾಗ ಅಪರೂಪಕ್ಕೆ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಸಂಚಾರ ಮಾಡುತ್ತವೆ. ಹೀಗೆ ಒಟ್ಟು ಸೇರಿದ ಗ್ರಹಗಳೆರಡೂ ಒಂದಕ್ಕೊಂದು ವೈರಿ ಗ್ರಹಗಳಾಗಿದ್ದರೆ ಅದರಿಂದ ಸಾಕಷ್ಟು ನಕಾರಾತ್ಮಕ ಪರಿಣಾಮಗಳು(inauspecious effects) ಜೀವಿಗಳ ಮೇಲಾಗುತ್ತವೆ. ಅದೇ, ಎರಡೂ ಗ್ರಹಗಳು ಶುಭಗ್ರಹಗಳೂ ಆಗಿದ್ದು, ಸ್ನೇಹಿಗ್ರಹಗಳಾಗಿದ್ದರೆ ಆಗ ಉತ್ತಮ ಯೋಗವೊಂದು ಸೃಷ್ಟಿಯಾಗುತ್ತದೆ. ಈಗ ಸಧ್ಯ ಇಂಥದೊಂದು ಅಪರೂಪದ ಉತ್ತಮ ಯೋಗ ಉಂಟಾಗುತ್ತಿದೆ. ಅದೇ ಲಕ್ಷ್ಮೀ ನಾರಾಯಣ ಯೋಗ(Lakshmi Narayan Yoga).
ಹೌದು, ಸಧ್ಯ ಬುಧ ಗ್ರಹ(Mercury)ವು ವೃಷಭ ರಾಶಿಯಲ್ಲಿದೆ. ಜೂನ್ 18ರಂದು ಶುಕ್ರ ಗ್ರಹ ಕೂಡಾ ವೃಷಭಕ್ಕೆ ಪ್ರವೇಶಿಸುತ್ತಿದೆ. ಜ್ಯೋತಿಷ್ಯದಲ್ಲಿ, ಶುಕ್ರ ಗ್ರಹ(Venus)ವನ್ನು ಸಂತೋಷ, ವೈಭವ, ಪ್ರಣಯ, ಆನಂದ ಮತ್ತು ಐಷಾರಾಮಿ ಜೀವನ ಕರುಣಿಸುವ ಗ್ರಹವೆಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ಬುಧ ಗ್ರಹವನ್ನು, ಮಾತು, ಸಂವಹನ(communication), ಬುದ್ಧಿವಂತಿಕೆ, ತಾರ್ಕಿಕ ಸಾಮರ್ಥ್ಯ ಮತ್ತು ವ್ಯವಹಾರದ ಅಂಶವೆಂದು ಪರಿಗಣಿಸಲಾಗುತ್ತದೆ. ಇಂಥ ಎರಡು ಅತ್ಯಂತ ಶುಭ ಗ್ರಹಗಳು ವೃಷಭ ರಾಶಿಯಲ್ಲಿ ಒಟ್ಟಾಗುವುದರಿಂದ ಲಕ್ಷ್ಮೀ ನಾರಾಯಣ ಯೋಗ ಉಂಟಾಗುತ್ತಿದೆ. ಈ ಯೋಗಕ್ಕೆ ಮಹಾಲಕ್ಷ್ಮೀ ಯೋಗ ಎಂದೂ ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರ(Astrology)ದ ಪ್ರಕಾರ, ಈ ಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಈ ಯೋಗದ ಪ್ರಭಾವದಿಂದಾಗಿ,ಅತ್ಯಂತ ಬಡವರು ಕೂಡ ದಿಢೀರ್ ಶ್ರೀಮಂತರಾಗುತ್ತಾರೆ. ಈ ಯೋಗವು ಜೂನ್ 18 ರಿಂದ ಜುಲೈ 2 ರವರೆಗೆ ವೃಷಭ ರಾಶಿಯಲ್ಲಿ ಉಳಿಯುತ್ತದೆ. ಈ ಯೋಗದ ಪರಿಣಾಮ ವೃಷಭ ರಾಶಿಯವರಿಗೆ ಅತ್ಯಂತ ಮಂಗಳಕರವಾಗಿರಲಿದೆ. ಅದರ ಹೊರತಾಗಿ ಇನ್ನೂ ಮೂರು ರಾಶಿಗಳು ಲಕ್ಷ್ಮೀ ನಾರಾಯಣ ಯೋಗದ ಫಲ ಪಡೆಯಲಿವೆ. ಈ ಅದೃಷ್ಟಶಾಲಿ ರಾಶಿಚಕ್ರಗಳು(Zodiac signs) ಯಾವುವು ತಿಳಿಯೋಣ.
ವೃಷಭ ರಾಶಿ(Taurus): ಈ ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗದ ಸಂದರ್ಭದಲ್ಲಿ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ವಿಶೇಷ ಆಶೀರ್ವಾದ ಇರುತ್ತದೆ. ನಿಮ್ಮ ಸಂತೋಷ ಮತ್ತು ಅದೃಷ್ಟ(happiness and luck) ಹೆಚ್ಚಾಗುತ್ತದೆ. ದಾಂಪತ್ಯ ಜೀವನದಲ್ಲಿ ಪ್ರೀತಿ ಹೆಚ್ಚಲಿದೆ. ಮಕ್ಕಳ ನಿರೀಕ್ಷೆಯಲ್ಲಿರುವ ದಂಪತಿಗೆ ಶುಭ ಸುದ್ದಿ ಸಿಗಲಿದೆ. ಶಿಕ್ಷಣ ಕ್ಷೇತ್ರದಲ್ಲೂ ನಿಮ್ಮ ಸಾಧನೆ ಉತ್ತಮವಾಗಿರುತ್ತದೆ. ಈ ಯೋಗವು ನಿಮ್ಮಲ್ಲಿ ಪ್ರಣಯ ಮತ್ತು ಕಲಾತ್ಮಕ ಪ್ರವೃತ್ತಿಯನ್ನು ಮಾಡುತ್ತದೆ. ಒಟ್ಟಾರೆಯಾಗಿ, ಈ ಸಮಯವು ನಿಮಗೆ ಅದ್ಭುತವಾಗಿರಲಿದೆ.
Shukra Gochar 2022: ಈ ಮೂರು ರಾಶಿಗಳ ಕಷ್ಟಗಳೆಲ್ಲ ಇನ್ನು 7 ದಿನದಲ್ಲಿ ತೀರಲಿದೆ!
ಕರ್ಕಾಟಕ ರಾಶಿ(Cancer): ಈ ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗವು ಮಂಗಳಕರವಾಗಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಮಹತ್ತರವಾದ ಸುಧಾರಣೆ ಕಂಡುಬರುವುದು. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು(Success) ಸಿಗಲಿದೆ. ವ್ಯಾಪಾರಸ್ಥರು ಕೂಡ ಒಳ್ಳೆಯ ಸುದ್ದಿ ಕೇಳುವರು. ಹೊಸ ಕೆಲಸವನ್ನು ಪ್ರಾರಂಭಿಸಲು ಸಮಯ ಅನುಕೂಲಕರವಾಗಿದೆ. ನೀವು ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಬಹುದು.
ಕನ್ಯಾ ರಾಶಿ(Virgo): ಯೋಗದ ಪರಿಣಾಮವಾಗಿ ಈ ರಾಶಿಯವರಿಗೆ ಒಳ್ಳೆಯ ಸುದ್ದಿ ಸಿಗಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಸ್ವಂತ ಗುರುತನ್ನು ಮೂಡಿಸಲು ನಿಮಗೆ ಸಾಧ್ಯವಾಗುತ್ತದೆ. ಆದಾಯ(income)ವನ್ನು ಹೆಚ್ಚಿಸುವ ಬಲವಾದ ಸಾಧ್ಯತೆಯಿದೆ. ಬಡ್ತಿ ಅವಕಾಶಗಳಿವೆ. ಆರೋಗ್ಯವು ಉತ್ತಮವಾಗಿ ಉಳಿಯುತ್ತದೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಎಲ್ಲೋ ವರ್ಷಗಳಿಂದ ಸಿಲುಕಿಕೊಂಡಿರುವ ಹಣವನ್ನು ಪಡೆಯಬಹುದು. ನಿರುದ್ಯೋಗಿಗಳಿಗೆ ಉತ್ತಮ ಕೆಲಸ ಸಿಗುವ ಸಾಧ್ಯತೆಗಳಿವೆ.
ದಿರಿಸು ಖರೀದಿಸೋ ದಿನದಿಂದ ಧರಿಸೋ ತನ್ಕ Vastu ಏನನ್ನುತ್ತೆ ಕೇಳಿ..
ವೃಶ್ಚಿಕ ರಾಶಿ(Scorpio): ಈ ರಾಶಿಯವರಿಗೆ ಈ ಯೋಗವು ಮಂಗಳಕರವಾಗಿರುತ್ತದೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಒಂದಕ್ಕಿಂತ ಹೆಚ್ಚು ಮಾಧ್ಯಮಗಳ ಮೂಲಕ ಹಣವನ್ನು ಪಡೆಯಬಹುದು. ಪ್ರೇಮ ಜೀವನ(Love life)ಕ್ಕೂ ಸಮಯ ಉತ್ತಮವಾಗಿರುತ್ತದೆ. ಯಾವುದೇ ಹಳೆಯ ಕಾಯಿಲೆಯಿಂದ ನೀವು ಪರಿಹಾರವನ್ನು ಪಡೆಯಬಹುದು. ಸಂಪತ್ತು ಹೆಚ್ಚಾಗುವ ಬಲವಾದ ಸಾಧ್ಯತೆಯಿದೆ.