Asianet Suvarna News Asianet Suvarna News

Daily Horoscope: ಈ ರಾಶಿಯವರು ದುಡುಕಿನ ನಿರ್ಧಾರದಿಂದ ನೆಮ್ಮದಿ ಹಾಳು ಮಾಡಿಕೊಳ್ಳುವರು..

4 ಜನವರಿ 2022, ಮಂಗಳವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ತುಲಾ ರಾಶಿಯ ಅವಿವಾಹಿತರಿಗೆ ಸಂಬಂಧ ಅರಸಿ ಬರುವುದು..ಉಳಿದ ರಾಶಿಗಳ ಫಲ ಏನಿದೆ?

Daily horoscope of January 4th 2022 in Kannada SKR
Author
Bangalore, First Published Jan 4, 2022, 5:11 AM IST
  • Facebook
  • Twitter
  • Whatsapp

ಮೇಷ(Aries): ಬಹಳ ಕಾಲದಿಂದ ಎದುರು ನೋಡುತ್ತಿದ್ದ ವಾರ್ತೆಯೊಂದು ಅವಿವಾಹಿತರಿಗೆ ಸಿಕ್ಕು ಅಚ್ಚರಿ, ಸಂತೋಷಕ್ಕೆ ಕಾರಣವಾಗಬಹುದು. ನಿರುದ್ಯೋಗಿಗಳಿಗೆ ಒಂದಕ್ಕೂ ಹೆಚ್ಚು ಅವಕಾಶಗಳು ಬಂದು ಆಯ್ಕೆಯಲ್ಲಿ ಗೊಂದಲವಾಗಬಹುದು. ಕೇವಲ ಹಣವೊಂದನ್ನೇ ನೋಡದೆ, ಎಲ್ಲ ರೀತಿಯಲ್ಲಿ ಯಾವುದು ಲಾಭಕರವಾಗಿದೆ ನೋಡಿ ಆಯ್ಕೆ ಮಾಡಿ. ಶಿವ ಶಕ್ತಿಯರ ಪ್ರಾರ್ಥನೆ ಮಾಡಿ.

ವೃಷಭ(Taurus): ಶ್ರಮವಿಲ್ಲದೆ ಯಾವುದೂ ಬರಲಾರದು. ಅದೃಷ್ಟದ ಬಲದಿಂದ ಬಂದರೂ ಅದನ್ನು ಉಳಿಸಿಕೊಳ್ಳಲಾದರೂ ಶ್ರಮ ಹಾಕಲೇಬೇಕು ಎಂಬುದನ್ನು ನೆನಪಿಟ್ಟರೆ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುವುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಶಾರದಾಂಬೆ ಸ್ಮರಣೆ ಮಾಡಿ. 

ಮಿಥುನ(Gemini): ವ್ಯಾಪಾರ, ಉದ್ದಿಮೆಗಳಲ್ಲಿ, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಆಯ್ಕೆಗಳು ಹೆಚ್ಚಲಿವೆ. ಆದಷ್ಟು ಎಚ್ಚರದಿಂದ ಲಾಭನಷ್ಟ ಅಳೆದು ತೂಗಿ ಸರಿಯಾದುದನ್ನು ಆರಿಸಿ. ಉದ್ಯೋಗದಲ್ಲಿ ಹೊಸತನ ಕಾಣಬಹುದು. ಮಕ್ಕಳ ಪ್ರಗತಿ ಸಂತೋಷ ತರಲಿದೆ. ಆಂಜನೇಯನಿಗೆ ಕೆಂಪು ಹೂವು ಅರ್ಪಿಸಿ.

ಕಟಕ(Cancer): ದುಡುಕಿನ ನಿರ್ಧಾರದಿಂದ ನೆಮ್ಮದಿ ಹಾಳು ಮಾಡಿಕೊಳ್ಳುವಿರಿ. ತಾಳ್ಮೆ ಕಳೆದುಕೊಳ್ಳಬೇಡಿ. ತಾಳ್ಮೆಯಿಂದ ಯೋಚಿಸಿದರೆ ತಪ್ಪಾದುದನ್ನೂ ಸರಿ ಮಾಡುವ ಅವಕಾಶಗಳು ಕಾಣಿಸಬಹುದು. ಮಾತಿನಲ್ಲಿ ಹಿಡಿತ ಇರಲಿ. ಆರೋಗ್ಯವು ಚೆನ್ನಾಗಿರಲಿದೆ. ಲಲಿತಾ ಸಹಸ್ರನಾಮ ಹೇಳಿಕೊಳ್ಳಿ.

Feng Shui Tips: ಮನೆಯಲ್ಲಿ ಸಂತೋಷ, ನೆಮ್ಮದಿ ಇಲ್ಲವೇ? ಹಾಗಿದ್ರೆ ಈಗ್ಲೇ ಮಾಡಿ ಈ ಕೆಲಸ

ಸಿಂಹ(Leo): ಸ್ನೇಹಿತವರ್ಗದವರ ಆಮಿಷಗಳಿಗೆ ಬಲಿಯಾಗಿ ಬೇಡದ ಚಟ ರೂಢಿಸಿಕೊಳ್ಳಬೇಡಿ. ಪ್ರಾಮಾಣಿಕ ಕಾರ್ಯ ವಿಧಾನಗಳಿಂದ ಹಣದ ಆದಾಯ ಹೆಚ್ಚಲಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಧಿಕ ವ್ಯಯ ಮಾಡುವಿರಿ. ಸರಸ್ವತಿ ಸ್ಮರಣೆ ಮಾಡಿ. 

ಕನ್ಯಾ(Virgo): ಮನೆಯ ಸದಸ್ಯರ ನಂಬಿಕೆ ಪಡೆದುಕೊಳ್ಳುವತ್ತ ಗಮನ ಹರಿಸಿ. ಅವರನ್ನು ಕೊರೆಯುತ್ತಿರುವ ಚಿಂತೆ ಏನೆಂದು ವಿಚಾರಿಸಿ. ಅದಕ್ಕೆ ಪರಿಹಾರ ಒದಗಿಸುವತ್ತ ಗಮನ ಹರಿಸಿ. ದೇವತಾ ಕಾರ್ಯಗಳಲ್ಲಿ ಭಾಗಿ ಸಾಧ್ಯತೆ. ಉದ್ಯೋಗದಲ್ಲಿ ಕೆಲ ತಪ್ಪುಗಳು ತಲೆನೋವು ತರಬಹುದು. 

ತುಲಾ(Libra): ಅವಿವಾಹಿತರು ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಂಡರೆ ಉತ್ತಮ ಸಂಬಂಧವೇ ಸಿಗಲಿದೆ. ಅಳುಕು, ಭಯ ಬಿಟ್ಟು ಮುನ್ನುಗ್ಗಿ. ಬ್ಯಾಂಕ್ ಕೆಲಸಗಳು ಆಗಿ ಸಮಾಧಾನ ತರಲಿದೆ. ತಂದೆಯ ಕಡೆಯಿಂದ ಆಸ್ತಿಯಲ್ಲಿ ಪಾಲು ಸಿಗಬಹುದು. ಮಹಾಲಕ್ಷ್ಮೀ ಆರಾಧನೆ ಮಾಡಿ. 

Weekly Horoscope: ಕನ್ಯಾ ರಾಶಿಗೆ ಈ ವಾರ ರಾಜಯೋಗ, ಕುಂಭಕ್ಕೆ ಹೆಚ್ಚುವ ಖರ್ಚು

ವೃಶ್ಚಿಕ(Scorpio): ಹೊಸ ತಂತ್ರಜ್ಞಾನ ಕುರಿತು ಜ್ಞಾನವನ್ನು ಪಡೆಯುವ ಬಯಕೆ ಇರುತ್ತದೆ. ಆರೋಗ್ಯ ಸಾಮಾನ್ಯವಾಗಿರುತ್ತದೆ. ಹೊಸ ಕಲಿಕೆ, ಹೊಸ ಜನರ ಭೇಟಿ ಉಲ್ಲಾಸ ತರಲಿದೆ. ಮನೆಯ ಸದಸ್ಯರ ಪ್ರೀತಿ ಗಳಿಸಲು ಪ್ರಯತ್ನ ಹಾಕಿ. ನಿರ್ವಿಕಾರ ಭಾವ ಬೇಡ. ವಿಷ್ಣು ಸಹಸ್ರನಾಮ ಹೇಳಿ. 

ಧನುಸ್ಸು(Sagittarius): ಸಂತೋಷದ ಅನ್ವೇಷಣೆಯಲ್ಲಿ ಖರ್ಚು ಹೆಚ್ಚಿಸಿ ಕೊರಗುವಂತೆ ಮಾಡಿಕೊಳ್ಳಬೇಡಿ. ಉದ್ಯೋಗ ಹಾಗೂ ಮನೆಯಲ್ಲಿ ಸಂತೋಷ ಹುಡುಕಿ. ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ನೀವು ಬಯಸಿದ್ದೆಲ್ಲ ತಾನಾಗೇ ದೊರಕುತ್ತದೆ. ಹನುಮಾನ್ ಚಾಳೀಸ್ ಹೇಳಿಕೊಳ್ಳಿ. 

ಮಕರ(Capricorn): ಶೇರು, ಇನ್ಶೂರೆನ್ಸ್ ಮುಂತಾದ ಹಣ ಉಳಿತಾಯ ಹಾಗೂ ಹಣದ ಸಂಬಂಧಿ ಯೋಜನೆಗಳು ಲಾಭ ತರಲಿವೆ. ಮನೆ, ಜಮೀನು ಖರೀದಿ ಕೆಲಸಗಳು ಮುಂದುವರಿಯಲಿವೆ. ಜೀವನ ಸಂಗಾತಿಯಿಂದ ಪ್ರೀತಿ ಮತ್ತು ಸಹಕಾರದ ವಿಷಯದಲ್ಲಿ ದಿನವು ಅದ್ಭುತವಾಗಿದೆ. ನವಗ್ರಹ ಪ್ರಾರ್ಥನೆ ಮಾಡಿ. 

ಕುಂಭ(Aquarius): ಕೆಲವು ವಿಚಾರಗಳಲ್ಲಿ ಪಾಲುದಾರರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆಯಿದೆ. ಮಾತಿನಲ್ಲಿ ಹಿಡಿತ ತಪ್ಪದಂತೆ ಎಚ್ಚರ ವಹಿಸಿ. ಅವಿವಾಹಿತರಿಗೆ ಮಾಂಗಲ್ಯಭಾಗ್ಯಕ್ಕೆ ಸಮಯ ಒದಗಿ ಬರುವುದು. ದೂರ ಪ್ರಯಾಣ ಮಾಡುವ ಮುನ್ನ ಮನೆದೇವರ ಪ್ರಾರ್ಥನೆ ಮಾಡಿ.

ಮೀನ(Pisces): ವೃತ್ತಿರಂಗದಲ್ಲಿ ವಿವೇಚನೆಯಿಂದ ನಡೆಯಿರಿ. ತಾಳಿದವನು ಬಾಳಿಯಾನು ಎಂಬ ಮಾತನ್ನು ಆಗಾಗ ಹೇಳಿಕೊಂಡು ಮುನ್ನಡೆಯುವುದರಿಂದ ಯಶಸ್ಸಿನತ್ತ ನಡೆಯಿರಿ,.
ವ್ಯಾಪಾರ- ವ್ಯವಹಾರದಲ್ಲಿ ಅಭಿವೃದ್ಧಿದಾಯಕ ಆದಾಯ. ಕೃಷ್ಣನಿಗೆ ತುಳಸಿ ಅರ್ಪಿಸಿ. 

Follow Us:
Download App:
  • android
  • ios