Feng Shui Tips: ಮನೆಯಲ್ಲಿ ಸಂತೋಷ, ನೆಮ್ಮದಿ ಇಲ್ಲವೇ? ಹಾಗಿದ್ರೆ ಈಗ್ಲೇ ಮಾಡಿ ಈ ಕೆಲಸ
ಒತ್ತಡದ ಜೀವನದಲ್ಲಿ ಸಂತೋಷವನ್ನು ಹುಡುಕುವಂತಾಗಿದೆ. ಕೆಲವೊಮ್ಮೆ ಎಲ್ಲವೂ ಇದ್ದರೂ ಏನೂ ಇಲ್ಲ ಎಂಬ ನಿರಾಸೆಯಿರುತ್ತದೆ. ಇದಕ್ಕೆ ಮನೆಯ ವಾಸ್ತು ಕೂಡ ಕಾರಣವಾಗುತ್ತದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಓಡಿ ಹೋಗ್ಬೇಕೆಂದ್ರೆ ಏನು ಮಾಡ್ಬೇಕು ಗೊತ್ತಾ?
ಸುಂದರ ಅಕ್ವೇರಿಯಂ (Aquarium) ಗಮನ ಸೆಳೆಯುತ್ತವೆ. ಇತ್ತೀಚಿನ ದಿನಗಳಲ್ಲಿ ಮನೆ ಹಾಗೂ ಕಚೇರಿಗಳಲ್ಲಿ ಅಕ್ವೇರಿಯಂ ಇಡುವುದು ಫ್ಯಾಷನ್(Fashion) ಆಗಿದೆ. ಸಣ್ಣ ಅಕ್ವೇರಿಯಂನಿಂದ ಹಿಡಿದು ದೊಡ್ಡ ದೊಡ್ಡ ಅಕ್ವೇರಿಯಂ, ಬೇರೆ ಬೇರೆ ಡಿಸೈನ್ ಅಕ್ವೇರಿಯಂ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಅಕ್ವೇರಿಯಂ ಮನೆ ಹಾಗೂ ಕಚೇರಿಯಲ್ಲಿ ಇಡುವುದರಿಂದ ಸೌಂದರ್ಯ ಹೆಚ್ಚುವುದಲ್ಲದೆ, ಮನಸ್ಸಿಗೆ ಉಲ್ಲಾಸ ಸಿಗುತ್ತದೆ. ಒತ್ತಡದಲ್ಲಿರುವ ವ್ಯಕ್ತಿ ಅಕ್ವೇರಿಯಂ ಬಳಿ ಬಂದಾಗ ಅಲ್ಲಿ ಇಲ್ಲಿ ಈಜುವ ಬಣ್ಣಬಣ್ಣದ ಮೀನು (ಮೀನು)ಗಳು ಆತನ ಮನಸ್ಸನ್ನು ಬದಲಾಯಿಸುತ್ತವೆ. ನೋವು, ಒತ್ತಡ ಕಡಿಮೆಯಾಗಿ ಮನಸ್ಸಿಗೆ ರಿಲ್ಯಾಕ್ಸ್ ಸಿಗುತ್ತದೆ. ಅಕ್ವೇರಿಯಂಗೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಮಹತ್ವ ಸ್ಥಾನವಿದೆ. ಫೆಂಗ್ ಶುಯ್ (Feng Shui )ಯಲ್ಲೂ ಅಕ್ವೇರಿಯಂ ಬಗ್ಗೆ ಹೇಳಲಾಗಿದೆ.
ಫೆಂಗ್ ಶುಯ್ ಪ್ರಕಾರ ಮನೆಯಲ್ಲಿ ಅಕ್ವೇರಿಯಂ ಇದ್ದರೆ ಏನು ಲಾಭ ?
ಫೆಂಗ್ ಶೂಯಿ ಪ್ರಕಾರ, ಅಕ್ವೇರಿಯಂನಲ್ಲಿರುವ ಮೀನು ಸಂತೋಷವನ್ನು ನೀಡುತ್ತದೆ. ಮನೆಯ ಸದಸ್ಯರ ಮೇಲೆ ಬರುವ ಎಲ್ಲಾ ವಿಪತ್ತುಗಳನ್ನು ತಪ್ಪಿಸುತ್ತದೆ. ಮನೆಯಲ್ಲಿ ಹಣದ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತದೆ. ಸದಾ ಆರ್ಥಿಕ ವೃದ್ಧಿಯಾಗುವಂತೆ ಮಾಡಲು ಶಕ್ತಿಯನ್ನು ಅಕ್ವೇರಿಯಂ ಹೊಂದಿದೆ. ಫೆಂಗ್ ಶುಯ್ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು, ನೀವು ಅಕ್ವೇರಿಯಂನ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು. ತಪ್ಪು ದಿಕ್ಕಿನಲ್ಲಿ ಅಕ್ವೇರಿಯಂ ಇರಿಸಿದರೆ, ಅದರ ಪರಿಣಾಮವು ಋಣಾತ್ಮಕವಾಗಿರುತ್ತದೆ. ಅಕ್ವೇರಿಯಂ ಅನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಅದರಲ್ಲಿ ಚಲಿಸುವ ಮೀನುಗಳು ಮನೆಯ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ. ನಿಮ್ಮ ಮನೆಯಲ್ಲಿ ಸಣ್ಣ ಅಕ್ವೇರಿಯಂನಲ್ಲಿ ಮೀನುಗಳನ್ನು ಇಡುವುದು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಫೆಂಗ್ ಶುಯ್ ಪ್ರಕಾರ, ಮೀನು ವ್ಯಾಪಾರದಲ್ಲಿ ಯಶಸ್ಸು ಮತ್ತು ಬೆಳವಣಿಗೆಯ ಸಂಕೇತವಾಗಿದೆ.
ಮನೆಯಲ್ಲಿ ಅಕ್ವೇರಿಯಂ ಇಡುವವರು ಏನು ಮಾಡ್ಬೇಕು?
ಮನೆಯ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಮೀನಿನ ಅಕ್ವೇರಿಯಂ ಇಡಬೇಕು. ಇದರಿಂದ ಮನೆಗೆ ಒಳ್ಳೆಯದಾಗುತ್ತದೆ. ಇದನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯ ಈ ದಿಕ್ಕುಗಳಲ್ಲಿ ಅಕ್ವೇರಿಯಂ ಇಡುವುದರಿಂದ ಅಲ್ಲಿನ ಧನಾತ್ಮಕ ಶಕ್ತಿ ಹೆಚ್ಚುತ್ತದೆ.
ಅಡುಗೆಮನೆಯಲ್ಲಿ ಅಕ್ವೇರಿಯಂನ್ನು ಎಂದಿಗೂ ಇಡಬಾರದು ಎಂಬುದನ್ನು ನೆನಪಿನಲ್ಲಿಡಿ. ಅಡುಗೆಮನೆಯಲ್ಲಿ ಬೆಂಕಿಯ ಅಂಶವಿರುತ್ತದೆ. ಅಕ್ವೇರಿಯಂ ನೀರಿನ ಅಂಶದ ಸಂಕೇತವಾಗಿದೆ. ವಾಸ್ತು ಪ್ರಕಾರ, ಬೆಂಕಿ ಮತ್ತು ನೀರನ್ನು ಒಂದೇ ಸ್ಥಳದಲ್ಲಿ ಇಡುವುದರಿಂದ ಪರಸ್ಪರ ಅಪಶ್ರುತಿಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಎಷ್ಟೇ ಚೆಂದ ಕಾಣ್ತಿದೆ ಎಂದರೂ ಅಡುಗೆ ಮನೆಯಲ್ಲಿ ಅಕ್ವೇರಿಯಂ ಇಡುವ ತಪ್ಪು ಮಾಡ್ಬೇಡಿ.
Vaastu: ಜಸ್ಟ್ ಮ್ಯಾರೀಡ್ ಕಪಲ್ ಕೋಣೆ ಹೀಗಿರಲಿ..!
ಅಕ್ವೇರಿಯಂ ಮನೆಗೆ ತಂದರೆ ಸಾಲದು. ಅದ್ರಲ್ಲಿರುವ ಮೀನಿನ ಸಂಖ್ಯೆ ಕೂಡ ನಿಮಗೆ ತಿಳಿದಿರಬೇಕು. ಅಕ್ವೇರಿಯಂನಲ್ಲಿರುವ ಮೀನುಗಳ ಸಂಖ್ಯೆ ಕನಿಷ್ಠ ಒಂಬತ್ತು ಆಗಿರಬೇಕು. ಇವುಗಳಲ್ಲಿ ಎಂಟು ಮೀನುಗಳು ಕೆಂಪು ಮತ್ತು ಚಿನ್ನದ ಬಣ್ಣದ್ದಾಗಿರಬೇಕು ಮತ್ತು ಒಂದು ಮೀನು ಕಪ್ಪು ಬಣ್ಣದಲ್ಲಿರಬೇಕು. ಕಪ್ಪು ಬಣ್ಣದ ಮೀನು ರಕ್ಷಣೆಯ ಸಂಕೇತವಾಗಿದೆ. ಇದು ನಕಾರಾತ್ಮಕ ಶಕ್ತಿಗಳಿಂದ ಮನೆಯನ್ನು ರಕ್ಷಿಸುತ್ತದೆ.
ಅಕ್ವೇರಿಯಂನಲ್ಲಿರುವ ಮೀನುಗಳು ಸಾಯುವುದು ಸಾಮಾನ್ಯ ಸಂಗತಿ. ಅಕ್ವೇರಿಯಂನಲ್ಲಿ ಮೀನುಗಳ ಸತ್ತ ತಕ್ಷಣ ಅವುಗಳನ್ನು ತೆಗೆದುಹಾಕಬೇಕು. ಸತ್ತ ಮೀನಿನ ಬಣ್ಣದ ಹೊಸ ಮೀನುಗಳನ್ನು ಅಕ್ವೇರಿಯಂಗೆ ತಂದು ಹಕಬೇಕು. ಫೆಂಗ್ ಶೂಯಿ ಪ್ರಕಾರ, ಅಕ್ವೇರಿಯಂನಲ್ಲಿ ಮೀನು ಸತ್ತಾಗ, ಅದು ತನ್ನೊಂದಿಗೆ ನಕಾರಾತ್ಮಕ ಶಕ್ತಿಗಳನ್ನು ತೆಗೆದುಕೊಳ್ಳುತ್ತದೆ.
Transgender Funeral : ರಾತ್ರಿ ನಡೆಯುವ ಶವಯಾತ್ರೆ ನೋಡಿದ್ರೆ ಏನಾಗುತ್ತೆ?
ಅಕ್ವೇರಿಯಂ ನೀರಿನ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ಅಕ್ವೇರಿಯಂ ಮೂಲಕ ಮನೆಯನ್ನು ಧನಾತ್ಮಕ ಶಕ್ತಿ ಪ್ರವೇಶ ಮಾಡಬೇಕು,ಮನೆಯಲ್ಲಿ ಸದಾ ನೆಮ್ಮದಿ ನೆಲೆಸಿರಬೇಕೆಂದರೆ ಅಕ್ವೇರಿಯಂ ಸ್ವಚ್ಛತೆ ಮಹತ್ವ. ಅಕ್ವೇರಿಯಂನಲ್ಲಿರುವ ನೀರನ್ನು ಕಾಲಕಾಲಕ್ಕೆ ಬದಲಾಯಿಸಬೇಕಾಗುತ್ತದೆ.
ಮೊದಲೇ ಹೇಳಿದಂತೆ ಮನೆಯಲ್ಲಿ ದೊಡ್ಡ ಅಕ್ವೇರಿಯಂ ಇಡಬೇಡಿ. ಸಣ್ಣ ಅಕ್ವೇರಿಯಂಗೆ ಆದ್ಯತೆ ನೀಡಿ. ಇದು ಮನೆಯ ಅದೃಷ್ಟವನ್ನು ಬದಲಿಸುತ್ತದೆ. ಮನೆಯ ಸುಖ,ಶಾಂತಿ,ನೆಮ್ಮದಿಗೆ ಕಾರಣವಾಗುತ್ತದೆ.