Asianet Suvarna News Asianet Suvarna News

Weekly Horoscope: ಕನ್ಯಾ ರಾಶಿಗೆ ಈ ವಾರ ರಾಜಯೋಗ, ಕುಂಭಕ್ಕೆ ಹೆಚ್ಚುವ ಖರ್ಚು

ದಿನಾಂಕ 2 ರಿಂದ 8 ಜನವರಿ 2022ರವರೆಗಿನ ವಾರ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ? ಯಾವ ರಾಶಿಗೆ ಎಚ್ಚರ ಅಗತ್ಯ? ಯಾವ ರಾಶಿ ಬದಲಾವಣೆ ಕಾಣುತ್ತದೆ?
ಕಟಕ ರಾಶಿಗೆ ಸರ್ಕಾರಿ ಕೆಲಸ ದೊರಕುವ ಸಾಧ್ಯತೆ, ನಿಮ್ಮ ರಾಶಿಗೇನಿದೆ ನೋಡಿ..

Weekly horoscope of January 2nd to 8th 2022 in Kannada
Author
Bangalore, First Published Jan 2, 2022, 9:22 AM IST

ಮೇಷ(Aries)
ಆರೋಗ್ಯದ ಬಗ್ಗೆ ಕಾಳಜಿ ಮಾಡಿ. ಕೆಲವೊಂದು ಸನ್ನಿವೇಶದಲ್ಲಿ ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸಬಹುದು. ಕುಟುಂಬದಲ್ಲಿ ಕಲಹ ಉಂಟಾಗಬಹುದು. ಹೀಗಾಗಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ನಿಮ್ಮ ಕುಟುಂಬದೊಂದಿಗೆ ನೀವು ಪ್ರಯಾಣಿಸುವ ಸಾಧ್ಯತೆಗಳಿವೆ. ವಾರದ ಕೊನೆಯಲ್ಲಿ ನಿಮ್ಮ ಸಂಗಾತಿಯಿಂದಲೂ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿದ್ದೆಗೆಡಬೇಡಿ.

ವೃಷಭ(Taurus)
ನಿಮ್ಮಲ್ಲಿ ಸಾಕಷ್ಟು ಬದಲಾವಣೆಗಳಾಗಬಹುದು. ಆರ್ಥಿಕವಾಗಿ ಈ ವಾರ ಉತ್ತಮವಾಗಿರುತ್ತದೆ. ಮಕ್ಕಳಿಂದ ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ಭಾರಿ ಲಾಭವನ್ನು ಗಳಿಸುತ್ತೀರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಜಾಗರೂಕರಾಗಿರಿ. ಸದ್ಯಕ್ಕೆ ಜಮೀನು, ಮನೆ ಖರೀದಿಸಬೇಡಿ. ವ್ಯವಹಾರದಲ್ಲಿ ವಿವಾದಗಳು ಧೃತಿಗೆಡಿಸಬಹುದು.

ಮಿಥುನ(Gemini)
ಈ ವಾರ ನಿಮ್ಮ  ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯದ ಕಡೆ ಗಮನ ಕೊಡಿ. ಕುಟುಂಬದಲ್ಲಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಕುಟುಂಬದಿಂದ ಉತ್ತಮ ಬೆಂಬಲ ಪಡೆಯುತ್ತೀರಿ. ಕೆಲಸ ಕಾರ್ಯದಲ್ಲಿ ಸ್ವಲ್ಪ ವಿಳಂಬವಾಗಬಹುದು. ನಿಮ್ಮ ಸಂಬಂಧಿಕರೊಂದಿಗೆ ಸಮಸ್ಯೆ ಎದುರಾಗಬಹುದು. ನೀವು ವಿದೇಶ ಪ್ರವಾಸ ಮಾಡಬಹುದು. ಕೊಂಚ ಹೊಂದಾಣಿಕೆ ಮಾಡಿಕೊಂಡರೆ ನೆಮ್ಮದಿಯ ವಾರ.

Career Prediction 2022: ಹೊಸ ವರ್ಷದಲ್ಲಿ ಯಾವ ರಾಶಿಗೆ ಉದ್ಯೋಗದಲ್ಲಿ ಏಳ್ಗೆ?

ಕಟಕ(Cancer)
ಹೊಸ ಕೆಲಸ, ಅದರಲ್ಲೂ ಸರ್ಕಾರಿ ನೌಕರಿ ಸಿಗುವ ಸಾಧ್ಯತೆಗಳಿವೆ. ಉದ್ಯೋಗವನ್ನು ಹುಡುಕುತ್ತಿದ್ದರೆ, ಕೆಲಸ ಬದಲಿಸಲು ಇದು ಉತ್ತಮ ಸಮಯ. ಮುಂಬರುವ ತಿಂಗಳಲ್ಲಿ ನಿಮ್ಮ ಜೀವನದಲ್ಲಿ ನೀವು ಸಾಕಷ್ಟು ಸುಧಾರಣೆಗಳನ್ನು ಕಾಣುವಿರಿ. ವಿದೇಶ ಪ್ರವಾಸ ಮಾಡುವ ಸಾಧ್ಯತೆಗಳಿವೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವಿಮೆ ಅಥವಾ ಷೇರು ಮಾರುಕಟ್ಟೆಯಿಂದ ಪ್ರಯೋಜನ ಪಡೆಯುವಿರಿ.

ಸಿಂಹ(Leo)
ಶಿಕ್ಷಣ, ವ್ಯಾಪಾರ ಮತ್ತು ಮಕ್ಕಳ ವಿಷಯದಲ್ಲಿ ಲಾಭ ಕಾಣುವಿರಿ. ಸಾಲವನ್ನು ತೆಗೆದುಕೊಂಡಿದ್ದರೆ, ಮರುಪಾವತಿಸಲು ಸಾಧ್ಯವಾಗುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ವೃತ್ತಿಪರರಾಗಿದ್ದರೆ, ಕೆಲಸದ ಹೊರೆ ಕಡಿಮೆಯಾಗುವುದನ್ನು ನೋಡುತ್ತೀರಿ. ಗ್ಯಾಸ್, ಮಲಬದ್ಧತೆ, ಅಜೀರ್ಣ, ಅತಿಸಾರದಂತಹ ಸಮಸ್ಯೆಗಳಿಂದ ಬಳಲಬಹುದು. ಸ್ನೇಹಿತರಿಂದ ಸಹಾಯ.

ಯಾವ ರಾಶಿಯ ಅವಿವಾಹಿತರಿಗೆ 2022ರಲ್ಲಿ Life Partner ಸಿಗ್ತಾರೆ?

ಕನ್ಯಾ(Virgo)
ಜೀವನ ಎಲ್ಲಾ ರೀತಿಯ ಆರ್ಥಿಕ ತೊಂದರೆಗಳು ನಿವಾರಣೆಯಾಗುತ್ತವೆ. ಆರ್ಥಿಕ ಸಮೃದ್ಧಿಯನ್ನು ನೋಡುತ್ತೀರಿ. ರಾಜಯೋಗವಿದೆ. ಅದೃಷ್ಟ ನಿಮ್ಮ ಪರವಾಗಿರಲಿದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತೀರಿ. ನೀವು ಎಲ್ಲೋ ಹಣವನ್ನು ಹೂಡಿಕೆ ಮಾಡಿದ್ದರೆ, ನಿಮಗೆ ಬಹಳಷ್ಟು ಲಾಭವಾಗುತ್ತದೆ. ಕೆಲಸದ ಸ್ಥಳದಲ್ಲಿ ಸಹಕಾರ ಕಡಿಮೆಯಾಗುವುದು ವಿಳಂಬಕ್ಕೆ ಕಾರಣವಾಗಬಹುದು.

ತುಲಾ(Libra)
ವೈವಾಹಿಕ ಜೀವನದಲ್ಲಿ ಅನುಕೂಲಕರ ಪರಿಸ್ಥಿತಿಗಳನ್ನು ನೋಡುತ್ತೀರಿ. ವ್ಯವಹಾರದಲ್ಲಿ ನೀವು ಪ್ರಗತಿಯನ್ನು ನೋಡುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುವ ಸಾಧ್ಯತೆಯಿದೆ. ಈ ತಿಂಗಳು ನೀವು ಉತ್ತಮ ಮಾರ್ಗದರ್ಶನವನ್ನು ಪಡೆಯುತ್ತೀರಿ. ಅದು ಭವಿಷ್ಯದಲ್ಲಿ ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ವ್ಯಾಪಾರ ಅಥವಾ ಉದ್ಯೋಗದಲ್ಲಿ ಯಶಸ್ಸನ್ನು ಪಡೆಯುತ್ತೀರಿ.

ವೃಶ್ಚಿಕ(Scorpio)
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿದ್ದರೆ, ಯಶಸ್ಸನ್ನು ಪಡೆಯುತ್ತೀರಿ. ಕುಟುಂಬದಿಂದ ಸಂಪೂರ್ಣ ಬೆಂಬಲ ಇರುತ್ತದೆ. ಅತಿಥಿಗಳ ಆಗಮನದ ಸಾಧ್ಯತೆಗಳಿವೆ. ಕುಟುಂಬದಲ್ಲಿ  ಉತ್ತಮ ಸ್ಥಿತಿ ಇದ್ದರೂ, ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ಯಾವುದೇ ಕಾರಣವಿಲ್ಲದೆ ತಪ್ಪು ತಿಳುವಳಿಕೆ ಉಂಟಾಗಬಹುದು. ನಿಮ್ಮ ಆರೋಗ್ಯ ಗಮನಾರ್ಹವಾಗಿ ಸುಧಾರಿಸುತ್ತದೆ.

ಧನು(Saggitarius)
ಗುರಿ ಸಾಧಿಸಲು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ. ಸ್ನೇಹಿತರ ಬೆಂಬಲವೂ ನಿಮ್ಮ ಬೆನ್ನಿಗಿರುತ್ತದೆ. ಕೌಟುಂಬಿಕ ಸಂಬಂಧಗಳು ಉತ್ತಮವಾಗಿರುತ್ತವೆ. ನಿಮಗೆ ಕೆಲಸದ ಹೊರೆ ಬೀಳುತ್ತದೆ. ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ಮನೆ ಅಥವಾ ವಾಹನವನ್ನು ಖರೀದಿಸಲು ಬಯಸಿದರೆ, ಇದು ಉತ್ತಮ ಸಮಯ. ದೂರ ಪ್ರವಾಸ ಯೋಗವಿದೆ.  

ಮಕರ(Capricorn)
ಬಹಳಷ್ಟು ಜನರಿಗೆ ಸಹಾಯ ಮಾಡುವಿರಿ. ಧಾರ್ಮಿಕ ಕಾರ್ಯಗಳಿಗೆ ಸಮಯ ವಿನಿಯೋಗಿಸುವಿರಿ. ಪೂರ್ವಿಕರ ಆಸ್ತಿಯಿಂದ ಲಾಭವನ್ನು ಪಡೆಯುತ್ತೀರಿ. ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳು ನಡೆಯಲಿವೆ. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ತಿಂಗಳ ಕೊನೆಯಲ್ಲಿ ನಿಮಗೆ ಹೊಸ ಕೆಲಸ ಸಿಗಬಹುದು. ವ್ಯಾಪಾರದಲ್ಲಿ ಹೆಚ್ಚು ಖರ್ಚು ಮಾಡಬೇಡಿ, ನಷ್ಟವಾಗಬಹುದು.

ಕುಂಭ(Aquarius)
ನೀವು ಮದುವೆಯ ಪ್ರಸ್ತಾಪವನ್ನು ಹುಡುಕುತ್ತಿದ್ದರೆ, ನಿಮಗೆ ಶುಭವಾಗಲಿದೆ. ಹಣ ಹೂಡಿಕೆ ಮಾಡಲು ಬಯಸಿದರೆ, ಬಹಳ ಜಾಗರೂಕರಾಗಿರಿ. ಖರ್ಚುಗಳು ಹೆಚ್ಚಾಗುತ್ತವೆ.  ಶತ್ರುಗಳು ಹಾನಿ ಮಾಡಲು ಪ್ರಯತ್ನಿಸಬಹುದು. ಹೊಸದನ್ನು ಮಾಡಲು ಯೋಜಿಸಿದರೆ, ನಿಮ್ಮ ದಾರಿಯಲ್ಲಿ ಅಡೆತಡೆಗಳು ಬರುತ್ತವೆ. ಈ ಸಮಯದಲ್ಲಿ ನೀವು ಸಾಕಷ್ಟು ಪ್ರಯಾಣಿಸುತ್ತೀರಿ. ಪೋಷಕರಿಂದ ಬೆಂಬಲ.

ಮೀನ(Pieces)
ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳು ನಡೆಯಲಿವೆ. ನಿಮ್ಮ ಒಡಹುಟ್ಟಿದವರೊಂದಿಗೆ ಕೆಲವು ಭಿನ್ನಾಭಿಪ್ರಾಯಗಳಿರಬಹುದು. ನಿಮ್ಮ ವೃತ್ತಿಜೀವನದ ಬಗ್ಗೆ ನೀವು ಸ್ವಲ್ಪ ಚಿಂತಿಸುತ್ತಿರಬಹುದು. ಕೆಲಸದ ಸ್ಥಳದಲ್ಲಿ ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ವ್ಯಾಪಾರ ಮಾಡಿದರೆ, ಬಹಳಷ್ಟು ಲಾಭವನ್ನು ಪಡೆಯುತ್ತೀರಿ. ಶತ್ರುಗಳಿಂದ ಹಾನಿಯ ಸಾಧ್ಯತೆ. 
 

Follow Us:
Download App:
  • android
  • ios