ಶಾಪ ನಿಜ ಆಗುತ್ತಾ? ಶಾಪ ಇದೆಯಾ ತಿಳಿಯೋದು ಹೇಗೆ?

ಯಾರಾದರೂ ಹೊಟ್ಟೆಯುರಿಸಿದರೆ, ಅನ್ಯಾಯ ಮಾಡಿದರೆ, ಅವರನ್ನು ಎದುರಿಸಲು ನಮ್ಮಿಂದ ಸಾಧ್ಯ ಆಗದಿದ್ದರೆ ಶಾಪ ಹಾಕುವ ರೂಢಿ ಇದೆ. ಶಾಪ ನಿಜಕ್ಕೂ ವಾಸ್ತವ ಆಗುತ್ತಾ?

 

Curses are real and effective according to Astrology

ಶಾಪದ ಬಗ್ಗೆ ತುಂಬಾ ಕತೆಗಳಿವೆ ನಮ್ಮಲ್ಲಿ. ಉದಾಹರಣೆಗೆ, ಮೈಸೂರು ಅರಸರಿಗೆ ಸಂಬಂಧಪಟ್ಟಂತೆ ಅಲಮೇಲಮ್ಮನ ಶಾಪವನ್ನು ಹೇಳುತ್ತಾರೆ. ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂದು ಅಲಮೇಲಮ್ಮ ಶಾಪ ಹಾಕಿದಳೆಂದು ದಂತಕತೆಯಿದೆ. ಅದರ ಹಿಂದಿನ ಕತೆ ಹೀಗಿದೆ-

ವಿಜಯಯನಗರದ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣವನ್ನು ಆಳುತ್ತಿದ್ದ ಶ್ರೀರಂಗರಾಯನಿಗೆ ಬೆನ್ನುಪಣಿ ರೋಗ ಬಂದಿತ್ತು. ಅದರ ನಿವಾರಣೆಗೆ ಪೂಜೆ ಮಾಡಿಸಲ ತಲಕಾಡು ದೇವಸ್ಥಾನಕ್ಕೆ ಹೋಗಿದ್ದ. ಆಗ ಮೈಸೂರಿನ ಅರಸರು ದಾಳಿ ಮಾಡಿ, ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡರು. ಮನೋವ್ಯಥೆಯಿಂದ ಶ್ರೀರಂಗರಾಯ ತಲಕಾಡಿನಲ್ಲೇ ಮೃತನಾಗುತ್ತಾನೆ. ಬಳಿಕ ಆತನ ಪತ್ನಿ ಅಲಮೇಲಮ್ಮ ಮಾಲಂಗಿಯಲ್ಲಿ ನೆಲೆಸುತ್ತಾಳೆ. ಆದರೆ ಅಲ್ಲಿಗೂ ಮೈಸೂರು ಅರಸರು ದಾಳಿ ಮಾಡುತ್ತಾರೆ. ಇದರಿಂದ ನೊಂದ ಅಲಮೇಲಮ್ಮ ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂದು ಶಾಪ ನೀಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಪರಿಶೀಲಿಸಿ ನೋಡಿ ಬೇಕಿದ್ದರೆ- ಮೈಸೂರು ಅರಸರಿಗೆ ಹಲವು ತಲೆಮಾರುಗಳಿಂದ ಮಕ್ಕಳಾಗದಿರುವುದನ್ನೂ ಅವರು ದತ್ತು ತೆಗೆದುಕೊಂಡು ಅರಸೊತ್ತಗೆ ಮುಂದುವರಿಸುವುದನ್ನೂ ನೀವು ಗಮನಿಸಬಹುದು. ತಲಕಾಡು ಹೇಗೂ ಮರಳಾಗಿಯೇ ಇದೆ.

ನಮ್ಮ ಪುರಾಣಗಳು ಶಾಪ ಮತ್ತು ವರದ ಪ್ರಕರಣಗಳಿಂದಲೇ ತುಂಬಿಹೋಗಿವೆ. ಪಾಂಡವರು ಹುಟ್ಟಿದ್ದೂ ಒಂದು ಶಾಪದಿಂದ. ಪಾಂಡುವಿಗೆ ಪತ್ನಿಯನ್ನು ಕೂಡಲು ಸಾಧ್ಯವಿಲ್ಲ ಎಂಬ ಶಾಪವಿದ್ದುದರಿಂದ, ಆತನ ಪತ್ನಿ ಕುಂತಿ ದೇವತೆಗಳೊಂದಿಗೆ ಸೇರಿ ಪಾಂಡವರನ್ನು ಪಡೆದಳು. ಅಹಂಕಾರದಿಂದ ಕೊಬ್ಬಿದ ದುರ್ಯೋಧನನ ತೊಡೆ ತಟ್ಟಿದ್ದರಿಂದ ಆತನ ತೊಡೆಯನ್ನು ಭೀಮ ಮುರಿಯಲಿ ಎಂದು ಋಷಿಗಳು ಶಪಿಸಿದರು. ರಾಮಾಯಣದಲ್ಲೂ ಶಾಪಗಳಿವೆ. ಹೆಣ್ಣು ಒಲಿಯದೆ ಮುಟ್ಟಿದರೆ ಆತನ ತಲೆ ಚೂರಾಗಲಿ ಎಂದು ರಾವಣನಿಗೆ ಶಾಪವಿದ್ದುದರಿಂದ ಆತ ಸೀತೆಯನ್ನು ಬಲಾತ್ಕಾರಪಡಿಸಲು ಆಗಲಿಲ್ಲ. ದಶರಥನಿಗೆ ಶ್ರವಣಕುಮಾರನ ಶಾಪವಿದ್ದುದರಿಂದ ಆತ ತನ್ನ ಸಾವಿನ ಕಾಲದಲ್ಲಿ ಮಕ್ಕಳಿಂದ ವಿಯೋಗ ಅನುಭವಿಸಬೇಕಾಯಿತು. ಮಹಾವಿಷ್ಣು ಯುಗಯುಗದಲ್ಲೂ ನಾನಾ ಅವತಾರಗಳನ್ನೆತ್ತಿ ಬರಬೇಕಾದ ಸನ್ನಿವೇಶ ಉದ್ಭವಿಸಿದ್ದು ಅವನಿಗೆ ಭೃಗು ಮಹರ್ಷಿಗಳು ಶಾಪ ಕೊಟ್ಟಿದ್ದರಿಂದಲೇ. 

Curses are real and effective according to Astrology

ಅಮವಾಸ್ಯೆಯಂದು ಈ ವಸ್ತುಗಳನ್ನು ಮನೆಗೆ ತರುವುದು ಅಶುಭ..! 

ಶಾಪಗಳಿರುವುದು ನಿಜ. ಕೆಲವು ಮನೆತನಗಳು ಒಂದು ಕಾಲದಲ್ಲಿ ಶ್ರೀಮಂತವಾಗಿ ವೈಭವಯುತವಾಗಿ ಮೆರೆದು, ಕೊನೆಗೊಂದು ದಿನ ಉದುರಿಹೋಗುವುದನ್ನು ಕಾಣಬಹುದು. ಆಗ ಮನೆಯನ್ನು ರಿಪೇರಿ ಮಾಡಿಸಲೂ ಆ ಮನೆತನದವರಿಗೆ ದುಡ್ಡಿರುವುದಿಲ್ಲ. ಅದಕ್ಕೆ ಕಾರಣ, ಆ ಮನೆಯ ಯಾವುದೋ ಹೆಣ್ಣಿಗೆ ಅಲ್ಲಿನ ಯಜಮಾನನೋ ದುಷ್ಟನೋ ಕೊಟ್ಟ ಕಾಟ, ಅದರಿಂದ ನೊಂದ ಆಕೆ ಕೊಟ್ಟ ಶಾಪವೇ ಕಾರಣವಾಗಿರುತ್ತದೆ. ಇನ್ನು ಕೆಲವರು ತಾನುಂಟೋ ಮೂರು ಲೋಕವುಂಟೋ ಎಂದು ಮೆರೆದು, ಸಾಯುವ ಕಾಲದಲ್ಲಿ ಅಕ್ಕಪಕ್ಕ ನೋಡಿಕೊಳ್ಳುವವರ್ಯಾರೂ ಇಲ್ಲದೆ ಕೊರಗಿ ಸಾಯುವುದನ್ನು ಕಾಣುತ್ತೀರಿ. ಇವರೂ ಯವ್ವನ ಕಾಲದಲ್ಲಿ ಮಾಡಿದ ಪಾಪಗಳಿಗೆ ಪಡೆದ ಶಾಪವೇ ಕಾರಣವಾಗಿರುತ್ತದೆ. 

ಭಗವಂತನಿಗೆ ನೈವೇದ್ಯವನ್ನು ಯಾಕಾಗಿ ಇಡಬೇಕು? 

ಯಾರ ಶಾಪ ನಿಜಕ್ಕೂ ಫಲಿಸುತ್ತದೆ? ನಿಜಕ್ಕೂ ತೀರಾ ಅನ್ಯಾಯವಾಗಿದ್ದು, ಆ ಅನ್ಯಾಯದಿಂದ ನೊಂದು ಕಣ್ಣೀರುಗರೆಯತ್ತ ಹಾಕಿದ ಶಾಪಗಳು ಫಲಿಸದೆ ಹೋಗುವುದಿಲ್ಲ. ಆದರೆ ಹೀಗೆ ಶಾಪ ಹಾಕುವ ವ್ಯಕ್ತಿಯಲ್ಲಿ ಅನ್ಯಾಯದ ಲವಲೇಶವೂ ಇರಬಾರದು. ಹಾಗಿದ್ದರೆ ಶಾಪ ಫಲಿಸುವುದಿಲ್ಲ. ಕೆಲವೊಮ್ಮ ಮುಗ್ಧರು ಮೋಸ ವಂಚನೆಗೆ ಒಳಗಾಗಿ ಕಣ್ಣೀರು ಹಾಕಿದರೆ, ಅಂಥವರು ಶಾಪ ಹಾಕದೆ ಇದ್ದರೂ, ಅವರ ಕಣ್ಣೀರಿಗೆ ಕಾರಣವಾದವರಿಗೆ ಶಾಪ ತಟ್ಟುತ್ತದೆ. ಇಂಥವರು ಮಾತಿನಲ್ಲೇ ಶಾಪ ಹಾಕಬೇಕೆಂದಿಲ್ಲ. ಇವರು ನೊಂದ ನೋವೇ ಸಾಕು. ಕೆಲವೊಮ್ಮೆ ಮೈಸೂರು ಅರಸರಿಗೆ ಆದಂತೆ, ಶಾಪ ತಲೆಮಾರುಗಳ ಕಾಲಕ್ಕೂ ಮುಂದುವರಿಯಬಹುದು. ಅಂಥದ್ದನ್ನು ಕಂಡು ನಿವಾರಣೆ ಮಾಡಿಕೊಳ್ಳಲು ಅಷ್ಟಮಂಗಲ, ಅಂಜನ ಪ್ರಶ್ನೆ ನೆರವಾಗುತ್ತವೆ. ಕೆಲವು ತೀರ್ಥಕ್ಷೇತ್ರಗಳಿಗೆ ಹರಕೆ ಹೇಳಿಕೊಂಡು ಅದನ್ನು ತೀರಿಸಿದರೂ ಶಾಪದಿಂದ ನಿವೃತ್ತರಾಗಬಹುದು. ಉದಾಹರಣೆಗೆ, ಧರ್ಮಸ್ಥಳಕ್ಕೆ ಹೇಳಿಕೊಳ್ಳುವುದು ಅವುಗಳಲ್ಲಿ ಒಂದು.

ನೀವು ಹುಟ್ಟಿದ ವಾರಕ್ಕೂ ನಿಮ್ಮ ಅದೃಷ್ಟಕ್ಕೂ ಏನ್‌ ಸಂಬಂಧ? 

Latest Videos
Follow Us:
Download App:
  • android
  • ios