ಸೋಮವಾರ
ಸೋಮ ಅಂದರೆ ಚಂದ್ರ. ಚಂದ್ರನು ಶಾಂತಿಕಾರಕನು ಹಾಗೆಯೇ, ಮನಸ್ಸಿನಲ್ಲಿ ಉಂಟಾಗುವ ವಿಕಲ್ಪಗಳನ್ನು ನಿಯಂತ್ರಿಸುವವನು. ನಿಮಗೆ ಹುಣ್ಣಿಮೆ ಅಮಾವಾಸ್ಯೆಗಳಂದು ಸ್ವಲ್ಪ ಭಾವನಾತ್ಮಕ ತೊಂದರೆ ಕಾಡಬಹುದು. ಆದರೆ ಸೋಮವಾರಗಳಂದು ನಿಮ್ಮ ಅದೃಷ್ಟ ಖುಲಾಯಿಸುತ್ತದೆ. ಸೋಮವಾರಗಳಂದು ಹಿಡಿದ ಕೆಲಸ ಬೇಗನೆ ಕೈಗೂಡುತ್ತದೆ. ನಿಮ್ಮ ಜಾತಕದಲ್ಲಿ ಸೂರ್ಯನು ತುಂಭಾ ದೂರದಲ್ಲಿದ್ದಾಗ ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಸ್ವಲ್ಪ ಸಮಸ್ಯೆಗಳು ಉಂಟಾಗುತ್ತವೆ. ಸೂರ್ಯನ ಪ್ರಭಾವ ಹತ್ತಿರದಲ್ಲಿದ್ದಾಗ ಒಲ್ಳೆಯ ಆರೋಗ್ಯ ಹಾಗೂ ಹಣಕಾಸು ನಿಮಗೆ ಸಿಗುತ್ತದೆ.

ಮಂಗಳವಾರ
ನಿಮ್ಮ ಹುಟ್ಟಿದ ದಿನದಲ್ಲಿ ಮಂಗಳವೇ ಇದ್ದರೂ ನಿಮ್ಮ ವೃತ್ತಿಯಲಲ್ಲೂ ಬದುಕಿನಲ್ಲೂ ಮಂಗಳವನ್ನು ಕಾಣಲು ನೀವು ತುಂಬಾ ಒದ್ದಾಡಬೇಕಾಗಿ ಬರುತ್ತದೆ. ಶಿವನ ಸ್ಮರಣೆ, ನಾಮಜಪ ಹಾಗೂ ಪೂಜನದಿಂದ ನಿಮಗೆ ಅದೃಷ್ಟ ಒಲಿಯುತ್ತದೆ. ವೃತ್ತಿಕ್ಷೇತ್ರದಲ್ಲಿ ಸದಾ ಮಾತ್ಸರ್ಯ, ಹಿರಿಯ ಸಹೋದ್ಯೋಗಿಗಳಿಂದ ದಬ್ಬಾಳಿಕೆ, ನಿಂದನೆ ಎದುರಿಸಬೇಕಾಗಬಹುದು. ಸ್ವಂತ ಉದ್ಯಮ ಹೊಂದಿದವರಿಗೆ ಅಧಿಕಾರಿಗಳ ಕಿರುಕುಳ ಇದ್ದರೂ ಆಂಜನೇಯನನ್ನು ಪ್ರಾರ್ಥಿಸುವುದರಿಂದ ಲಾಭವಿದೆ. 

ಬುಧವಾರ
ಸೌರವ್ಯೂಹದಲ್ಲಿ ನಿಮ್ಮ ಬುಧಗ್ರಹ ಅತ್ಯಂತ ಚಿಕ್ಕದು ಹಾಗೂ ಕಡಿಮೆ ಪ್ರಭಾವಶಾಲಿಯಾದುದು. ಆದ್ದರಿಂದ ನೀವು ಜೀವಮಾನ ಪರ್ಯಂತ ಜನರ ಗಮನ ಸೆಳೆಯಲು ತುಂಬಾ ಹೋರಾಡಬೇಕಾಗುತ್ತದೆ. ಗ್ರಹದ ಬಲದಿಂದಲ್ಲ, ನಿಮ್ಮ ಸ್ವಂತ ದುಡಿಮೆಯ ಬಲದಿಂದಲೇ ನೀವು ಜೀವನ ಕಟ್ಟಿಕೊಳ್ಳಬೇಕಾಗುತ್ತದೆ. ಸೂರ್ಯನು ನಿಮ್ಮ ಜನ್ಮಜಾತಕದ ಮನೆಯ ಅತ್ಯಂತ ಸಮೀಪದಲ್ಲಿದ್ದಾಗ ನಿಮಗೆ ತುಂಬಾ ಒಳ್ಳೆಯ ದಿನಗಳಿರುತ್ತವೆ. ಒಳ್ಳೆಯ ಸಂಪಾದನೆ, ಕುಟುಂಬದಲ್ಲಿ ಹೆಚ್ಚಿನ ಪ್ರೀತಿ ಇತ್ಯಾದಿಗಳನ್ನು ಕಾಣಬಹುದು. 

ಗುರುವಾರ 
ಗುರುವು ದೇವತೆಗಳಿಗೆಲ್ಲ ಉಪದೇಶ ನೀಡುವಷ್ಟು ತಿಳಿದವನು. ನೀವು ಜ್ಞಾನ ಕ್ಷೇತ್ರದಲ್ಲಿ ಬೆಳೆಯುವಿರಿ ಹಾಗೂ ತುಂಬಾ ಹೆಸರು ಮಾಡುವಿರಿ. ಸಾಹಿತ್ಯ ಸಂಗೀತ ಲಲಿತಕಲೆ ಇತ್ಯಾದಿಗಳಲ್ಲಿ ನಿಮಗೆ ಕೌಶಲ ಹಾಗೂ ಕಾರ್ಯಸಿದ್ಧಿ ಆಗುವ ಸಾಧ್ಯತೆ ಇದೆ. ಜ್ಞಾನಕ್ಕೆ ಅಧಿದೇವತೆಯಾದ ಗಣಪತಿ ಹಾಗೂ ಸರಸ್ವತಿಯರ ಆರಾಧನೆ ಹಾಗೂ ಅನುಗ್ರಹಗಳಿಂದ ನೀವು ಉನ್ನತವಾದದ್ದನ್ನು ಜೀವನದಲ್ಲಿ ಸಾಧಿಸಬಲ್ಲಿರಿ. ನಿಮ್ಮನ್ನು ತುಂಬಾ ಮಂದಿ ಓಲೈಸುತ್ತಾರೆ, ತಿಳಿವು ಪಡೆಯುತ್ತಾರೆ.

ಶುಕ್ರವಾರ
ಶುಕ್ರಗ್ರಹವು ಮುಂಜಾನೆಯ ಹೊತ್ತಿನಲ್ಲಿ ಸೂರ್ಯನು ಮೂಡುವುದಕ್ಕಿಂತಲೂ ಮೊದಲು ಆಕಾಶದಲ್ಲಿ ಪೂರ್ವದಲ್ಲಿ ಜಾಜ್ವಲ್ಯಮಾನವಾಗಿ ಹೊಳೆಯುವುದು. ಹಾಗೆಯೇ ನಿಮ್ಮ ಅದೃಷ್ಟ ಕೂಡ ನಿಮಗೆ ಬರುವ ಸೂಚನೆಯನ್ನು ಮುಂಚಿತವಾಗಿಯೇ ಕೊಡುವುದು. ಕುಟುಂಬದಲ್ಲ ನಿಮಗೆ ಸದಾ ಏರಿಳಿತವಿಲ್ಲದ ಸೌಖ್ಯದ ದಿನಗಳಿರುತ್ತವೆ. ವೃತ್ತಿಯಲ್ಲಿ ಸ್ವಲ್ಪ ಕಷ್ಟ ಆಗಾಗ ಎದುರಾಗುತ್ತದೆ. ಆದರೂ ನೀವು ಉನ್ನತ ಸ್ಥಾನಗಳಿಗೆ ಹೋಗುತ್ತೀರಿ. ನಿಮ್ಮ ಹೆತ್ತವರ ಹಾಗೂ ಮಕ್ಕಳ ಕಣ್ಣಿನಲ್ಲಿ ನೀವು ಹೀರೋ ಎನಿಸಿಕೊಳ್ಳುತ್ತೀರಿ.

ಶನಿವಾರ
ಶನಿಯು ಇತರರಿಗೆ ಸಾಕಷ್ಟು ಕಾಟವನ್ನು ನೀಡಿ, ದೇವರನ್ನು ನೆನೆಯುವಂತೆ ಮಾಡುವು ಸ್ವಭಾವದವನು, ಈತನ ಪ್ರಭಾವ ನಿಮ್ಮ ಮೇಲೂ ಆಗದೆ ಇಲ್ಲ. ಕಪ್ಪು ನಿಮ್ಮ ಅದೃಷ್ಟದ ಬಣ್ಣ. ಜೀವನದ ಒಂದು ಹಂತದಲ್ಲಿ ನೀವು ಕೈಹಾಕಿದ ಕೆಲಸಗಳೆಲ್ಲ ಸಕ್ಸಸ್ ಆಗುತ್ತವೆ. ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ. ಅಂಥ ಹೊತ್ತಿನಲ್ಲಿ ಸ್ವಂತ ಉದ್ಯಮ ಆರಂಭಿಸಲು ಸಕಾಲ. ಆಂಜನೇಯ ಹಾಗೂ ಶನೀಶ್ವರನನ್ನು ಆರಾಧಿಸಿ ನಿಮ್ಮ ಕೆಲಸಗಳಿಗೆ ಮುಂದಡಿ ಇಡಿ. 

ಭಾನುವಾರ 
ಸೂರ್ಯನು ನಿಮ್ಮ ಅಧಿದೇವತೆ. ಈತನು ಯಾವಾಗಲೂ ಪ್ರಖರನಾಗಿರುವನು. ಜೀವನದಲ್ಲೂ ಹಾಗೇ, ನೀವು ಕ್ಷಿಪ್ರಗತಿಯಲ್ಲಿ ಮೇಲುಮೇಲಕ್ಕೆ ಹೋಗುತ್ತೀರಿ. ಅಲ್ಲಿಂದ ಕೆಳಗಿಳಿಯುವುದು ಸುಲಭವಲ್ಲ. ಅಧಿಕಾರದಲ್ಲಿದ್ದಷ್ಟು ಕಾಲ ಎಲ್ಲರೂ ನಿಮ್ಮನ್ನು ನಾನು ತಾನೆಂದು ಓಲೈಸುತ್ತಾರೆ. ಪ್ರೀತಿ ಹಾಗೂ ಕೆಲಸ ಮಾಡಿಸಿಕೊಳ್ಳುವ ಜಾಣ್ಮೆಗಳು ಪರರಿಂದ ನಿಮಗೆ ಬೇಕಾದುದನ್ನು ಚೆನ್ನಾಗಿ ಮಾಡಿಸುತ್ತವೆ. ಸರಕಾರಿ ಕೆಲಸ ಕಾರ್ಯಗಳು ನೀವು ಊಹಿಸಿದಂತೆಯೇ ಆಗುತ್ತವೆ.