Asianet Suvarna News Asianet Suvarna News

Money Dreams: ಈ ರೀತಿಯ ಕನಸು ಕೈ ತುಂಬಾ ಹಣ ಬರೋ ಮುನ್ಸೂಚನೆ!

ಈ ಕನಸುಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ಕೆಲವೊಮ್ಮೆ ಕೆಟ್ಟ ಕನಸಾಗಿ ಕಂಡಿದ್ದು, ಶುಭ ಸೂಚನೆಯಾಗಿರಬಹುದು. ಒಳ್ಳೆಯದಾಗಿ ಕಂಡಿದ್ದು ಕೆಟ್ಟ ಶಕುನದ ಸೂಚನೆ ಇರಬಹುದು.. ಈ ಕೆಲವು ಕನಸುಗಳೇ ನೋಡಿ, ಇಂಥ ಕನಸು ನಿಮಗೆ ಬಿದ್ದರೆ ಹಣ ನಿಮ್ಮತ್ತ ಹರಿದು ಬರುತ್ತಿರುವುದರ ಮುನ್ಸೂಚನೆ..

dreams believed to mean you will get rich soon skr
Author
First Published Sep 12, 2022, 1:32 PM IST

ಕೆಲವು ಕನಸುಗಳು ತುಂಬಾ ಚೆನ್ನಾಗಿರುತ್ತವೆ, ಅವುಗಳಿಂದ ನೀವು ಎಂದಿಗೂ ಎಚ್ಚರಗೊಳ್ಳಲು ಬಯಸುವುದಿಲ್ಲ. ಭರವಸೆಗಳು ಮತ್ತು ಆಕಾಂಕ್ಷೆಗಳು, ಹಳೆಯ ಅನುಭವಗಳು, ಹಾಗೆಯೇ ನಿಮ್ಮ ಚಿಂತೆಗಳು ಮತ್ತು ಹತಾಶೆಗಳು  ಕನಸುಗಳ ರೂಪದಲ್ಲಿ ವ್ಯಕ್ತವಾಗುತ್ತವೆ ಎಂದು ನಂಬುತ್ತಾರೆ ಜ್ಯೋತಿಷಿಗಳು ಮತ್ತು ಮನಶ್ಶಾಸ್ತ್ರಜ್ಞರು. ಅಷ್ಟೇ ಅಲ್ಲ, ಕೆಲ ಕನಸುಗಳು ಮುಂದಾಗಲಿರುವ ಘಟನೆಗಳ ಮುನ್ಸೂಚನೆ ನೀಡುತ್ತವೆ ಎಂದೂ ನಂಬಲಾಗುತ್ತದೆ. 
ನಾವು ಕಾಣುವ ಪ್ರತಿಯೊಂದು ಕನಸಿಗೂ ಒಂದು ನಿರ್ದಿಷ್ಟ ಅರ್ಥವಿರುತ್ತದೆ. ಪ್ರತಿಯೊಂದು ಕನಸಿಗೂ ಒಂದು ನಿರ್ದಿಷ್ಟ ಕಾರಣವಿರುತ್ತದೆ. ವಿಜ್ಞಾನದ ಪ್ರಕಾರ, ಕನಸುಗಳು ಮನಸ್ಸಿನ ಸ್ಥಿತಿಯನ್ನು ಬಹಿರಂಗಪಡಿಸುತ್ತವೆ. ಮತ್ತು ಜ್ಯೋತಿಷ್ಯದಲ್ಲಿ ಕನಸುಗಳು ನಿಮ್ಮ ಸಮಯ ಹೇಗೆ ಹೋಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ. ಆದ್ದರಿಂದ ಜ್ಯೋತಿಷ್ಯದ ಪ್ರಕಾರ, ನಿಮ್ಮ ಭವಿಷ್ಯದ ದಿನಗಳು ಕನಸುಗಳ ಮೇಲೆ ಬಹಳಷ್ಟು ಅವಲಂಬಿತವಾಗಿವೆ.

ಎಷ್ಟೋ ಜನಕ್ಕೆ ದೇವರು ಕನಸಿನ ರೂಪದಲ್ಲಿ ಬಂದು ಮರೆತ ಹರಕೆಗಳನ್ನು ಎಚ್ಚರಿಸಿದ್ದಿದೆ, ದೇವಸ್ಥಾನ ಕಟ್ಟಿಸಲು ಹೇಳಿದ್ದಿದೆ. ಮತ್ತೆ ಕೆಲ ಕನಸುಗಳು ಗುರಿ ಸಾಧನೆಗೆ ಪ್ರೇರೇಪಿಸಿದ್ದಿದೆ. ಅಂತೆಯೇ ಕೆಲ ಕನಸುಗಳು ಅವುಗಳಲ್ಲಿ ಕಾಣಿಸಿಕೊಳ್ಳುವ ವಸ್ತುಗಳು, ವ್ಯಕ್ತಿಗಳು ಕೆಲವೊಂದರ ಸೂಚಕವಾಗಿರುತ್ತಾರೆ. ಹಾಗೆ ಮುಂದೆ ಕೈ ತುಂಬಾ ಹಣ ಬರಲಿರುವುದರ ಸೂಚಕವಾಗಿ ಬೀಳುವ ಕನಸುಗಳು ಯಾವುವು ನೋಡೋಣ.. 

ನಿಮ್ಮದೇ ರಕ್ತ ಕಂಡರೆ
ನೀವು ನಿಮ್ಮ ಸ್ವಂತ ರಕ್ತವನ್ನು ಕನಸಿನಲ್ಲಿ ಕಂಡರೆ ಭಯ ಪಡಬೇಡಿ. ಇದು ನಿಮಗೆ ಒಳ್ಳೆಯ ಸಮಯ ಬರಲಿದೆ ಎಂಬುದನ್ನು ಹೇಳುತ್ತಿದೆ. ಈ ಕನಸಿನ ಅರ್ಥ ನೀವು ಭವಿಷ್ಯದಲ್ಲಿ ಬಹಳಷ್ಟು ಹಣವನ್ನು ಗಳಿಸುವಿರಿ ಅಥವಾ ಬಹಳಷ್ಟು ಹಣ ನಿಮ್ಮ ಕೈಗೆ ಬರುತ್ತದೆ. ಗೌರವವನ್ನೂ ಪಡೆಯಬಹುದು. ಇಂತಹ ಕಾಲ ಸಮೀಪಿಸುತ್ತಿದ್ದಾಗ ಕೈಕಾಲುಗಳನ್ನು ತಾನೇ ಕತ್ತರಿಸಿಕೊಂಡು ರಕ್ತಸ್ರಾವವಾಗುವ ಕನಸು ಕಾಣಬಹುದು.

Surya Gochar 2022: ಸೂರ್ಯನ ಸಂಕ್ರಮಣದಿಂದ ಅಶುಭ ಯೋಗ, ಆದರೂ ಈ ಮೂರು ರಾಶಿಗಳಿಗೆ ಶುಭ ಫಲ!

ಹಣದ ಕನಸುಗಳು(Money dreams)
ನೀವು ಬಹಳಷ್ಟು ಹಣದ ಮೇಲೆ ಕುಳಿತಿದ್ದೀರಿ ಅಥವಾ ಹಣದ ರಾಶಿಯೇ ಎದುರಿರುವಂತೆ ಕನಸು ಕಂಡ ನಂತರ ನೀವು ಎಚ್ಚರಗೊಂಡರೆ, ಸ್ವಲ್ಪವೂ ಚಿಂತಿಸಬೇಡಿ. ಏಕೆಂದರೆ ಈ ಕನಸು ನಿಮ್ಮ ಒಳ್ಳೆಯ ದಿನಗಳು ಬರಲಿವೆ ಎಂದು ಹೇಳುತ್ತದೆ. ಶೀಘ್ರದಲ್ಲೇ ನೀವು ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲಿದ್ದೀರಿ, ಎಲ್ಲ ಆರ್ಥಿಕ ಸಂಕಷ್ಟಗಳು ಮುಗಿಯಲಿವೆ ಎಂಬುದನ್ನು ಸೂಚಿಸುತ್ತದೆ. 

ಬೇರೆಯವರು ಬೆಂಕಿಯಲ್ಲಿದ್ದರೆ
ಬೇರೊಬ್ಬರು ಬೆಂಕಿಯಲ್ಲಿ ಉರಿಯುತ್ತಿರುವುದನ್ನು ನೀವು ನೋಡಿದರೆ, ನಂತರ ಚಿಂತೆ ಮಾಡಲು ಏನೂ ಇಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಮಂಗಳಕರ. ಏಕೆಂದರೆ ಕನಸಿನ ವಿಜ್ಞಾನದ ಪ್ರಕಾರ, ಈ ಕನಸು ಹಣದ ಆಗಮನದ ಸಂದೇಶವನ್ನು ನೀಡುತ್ತದೆ.

ಧಾನ್ಯಗಳು(grains)
ಧಾನ್ಯಗಳನ್ನು ಭೂಮಿಯ ಸಮೃದ್ಧ ವರಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಸಮೃದ್ಧ ಸುಗ್ಗಿಯು ಸಾಮಾನ್ಯವಾಗಿ ಲಾಭ, ಸಂಪತ್ತು ಮತ್ತು ಸಂತೋಷದೊಂದಿಗೆ ಸಂಬಂಧಿಸಿದೆ. ಧಾನ್ಯಗಳ ಬಗ್ಗೆ ಕನಸು ಕಾಣುವುದು ಎಂದರೆ ಅದೃಷ್ಟವು ನಿಮಗಾಗಿ ಹೇರಳವಾಗಿ ಕಾಯುತ್ತಿದೆ ಎಂದರ್ಥ.

ಪಿತೃಪಕ್ಷ: ಪೂರ್ವಜರನ್ನು ಸಂತೃಪ್ತಿ ಪಡಿಸಲು ಈ ತಪ್ಪು ಮಾಡಬೇಡಿ!

ಸಂಖ್ಯೆ 8(Number 8)
ನಿಮ್ಮ ಕನಸಿನಲ್ಲಿ 8ನೇ ಸಂಖ್ಯೆಯನ್ನು ನೋಡುವುದು ಎಂದರೆ ಸಂಪತ್ತು, ಯಶಸ್ಸು ಮತ್ತು ಭೌತಿಕ ಲಾಭಗಳು ನಿಮಗೆ ಹಾದಿಯಲ್ಲಿವೆ ಎಂದರ್ಥ. ಚೈನೀಸ್ ಮತ್ತು ಇತರ ಏಷ್ಯನ್ ಸಂಸ್ಕೃತಿಗಳು, ಎಂಟು ಸಂಖ್ಯೆಯನ್ನು ಅದೃಷ್ಟದ ಸಂಖ್ಯೆ ಎಂದು ಪರಿಗಣಿಸುತ್ತವೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios