Asianet Suvarna News Asianet Suvarna News

ನಾಳೆ ಸಂಜೆ ಐತಿಹಾಸಿಕ ಬಸವನಗುಡಿ ಕಡ್ಲೆಕಾಯಿ ಪರಿಷೆಗೆ ಸಿಎಂ ಚಾಲನೆ

ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಯ ಜನ ಕಾತುರದಿಂದ ಕಾಯುವ ವಿಶ್ವವಿಖ್ಯಾತ ಬಸವನಗುಡಿ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ ಶುರುವಾಗಿದೆ. ಕಡೇ ಕಾರ್ತಿಕ ಸೋಮವಾರದ ಮುನ್ನ ದಿನ ಭಾನುವಾರ ನ. 20ರ ಸಂಜೆ 6.30ಕ್ಕೆ  ಕಡಲೆಕಾಯಿ ಪರಿಷೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. 

CM will drive to historic Basavanagudi Kadlekai Parishe tomorrow evening
Author
First Published Nov 19, 2022, 5:25 PM IST | Last Updated Nov 19, 2022, 5:35 PM IST

ವರದಿ; ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ನ.19); ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಯ ಜನ ಕಾತುರದಿಂದ ಕಾಯುವ ವಿಶ್ವವಿಖ್ಯಾತ ಬಸವನಗುಡಿ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ ಶುರುವಾಗಿದೆ. ದೇಸೀ ಹಬ್ಬ ಕಡ್ಲೆಕಾಯಿ ಪರಿಷೆಗೆ ನಾಳೆ ಅದ್ದೂರಿ ಚಾಲನೆ ಸಿಗಲಿದೆ. ಬೆಂಗಳೂರಿಗರಿಗೆ ಹಬ್ಬದ ಸಂಭ್ರಮ ನೀಡುತ್ತಿದ್ದ ಪರಿಷೆ ಕೋವಿಡ್ ಕರಿನೆರಳಿನಿಂದ ಕಳೆದೆರಡು ವರ್ಷಗಳಿಂದ ನಡೆದಿರಲಿಲ್ಲ. ಹೀಗಾಗಿ ಈ ಬಾರಿ ಕಡ್ಲೆಕಾಯಿ ಪರಿಷೆ ಎಂಜಾಯ್ ಮಾಡಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ಕಡೇ ಕಾರ್ತಿಕ ಸೋಮವಾರದ ಮುನ್ನ ದಿನ ಭಾನುವಾರ (ನ. 20ರ) ಸಂಜೆ 6.30ಕ್ಕೆ  ಕಡಲೆಕಾಯಿ ಪರಿಷೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.

ವಾಡಿಕೆಯಂತೆ ಬಸವನಗುಡಿಯ ದೊಡ್ಡ ಬಸವೇಶ್ವರ ದೇವಾಲಯ (Dodda Basaveswara Temple)ಆವರಣದಲ್ಲಿ ಪ್ರತಿ ವರ್ಷವೂ ಕೂಡ ಕಡೇ ಕಾರ್ತಿಕ ಸೋಮವಾರದಿಂದ ಕಡ್ಲೆಕಾಯಿ ಪರಿಷೆ (Groundnut Fair) ನಡೆಯುತ್ತದೆ. ಆದರೆ, ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಕಡಲೆಕಾಯಿ ಪರಿಷೆಗೆ ಬರುವ ಕಾರಣ ದೇವಸ್ಥಾನ ಹಾಗೂ ದೇವಸ್ಥಾನದ ಆವರಣದಲ್ಲಿ ಪೂರ್ವ ಸಿದ್ಧತೆ (Preperation)ಗಳನ್ನು ಮಾಡಕೊಳ್ಳಲಾಗಿದೆ. ಈಗಾಗಲೆ  ಚಿತ್ರದುರ್ಗ, ದಾವಣಗೆರೆ, ಕೋಲಾರ ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ 500 ಕ್ಕೂ ಹೆಚ್ಚು ರೈತರು (Farmers) ಕಡ್ಲೆಕಾಯಿ ಪರಿಷೆಯಲ್ಲಿ ಅಂಗಡಿಗಳನ್ನು ಹಾಕಿ ವ್ಯಾಪಾರ  ಶುರು ಮಾಡಿದ್ದಾರೆ. ನಾಳೆಯಿಂದ ಕಡ್ಲೆಕಾಯಿ ಜಾತ್ರೆ ಶುರುವಾಗಲಿದ್ದು, ನಾಲ್ಕು ದಿನ ನಡೆಯಲಿದೆ. ಅದಕ್ಕೂ ಮುನ್ನ ಬೆಳಿಗ್ಗೆ ದೊಡ್ಡಗಣೇಶನಿಗೆ 1 ಸಾವಿರ ಕೆಜಿ ಕೆ.ಜಿ ಕಡಲೆಕಾಯಿಯಿಂದ ಅಭಿಷೇಕ ಮಾಡಲಾಗುವುದು.

ದಶಕದ ಬಳಿಕ ಕೆಂಪಾಂಬುಧಿ ಕೆರೆಯಲ್ಲಿ ನಂದಿ ತೆಪ್ಪೋತ್ಸವ: ದಶಕದ ಬಳಿಕ ಬಸವನಗುಡಿ ಪರಿಷೆಯಲ್ಲಿ ಈ ಬಾರಿ ಮತ್ತೆ ತೆಪ್ಪೋತ್ಸವ ಆರಂಭವಾಗಲಿದೆ. ಇದು ಪರಿಷೆಯ (Fair) ಮುಖ್ಯ ಆಕರ್ಷಣೆಯಾಗಲಿದೆ. 2008ರಲ್ಲಿ ಕೆಂಪಾಂಬುಧಿ ಕೆರೆಯಲ್ಲಿ (Kempambudhi lake) ನಂದಿ ತೆಪ್ಪೋತ್ಸವ ಆಗಿತ್ತು. ಆದಾದ ಬಳಿಕ ನಾನಾ ಕಾರಣಗಳಿಂದ ತೆಪ್ಪೋತ್ಸವ (Teppotsava) ನಡೆಸಿರಲಿಲ್ಲ. ಈ ಬಾರಿ ಮತ್ತೆ ಅದು ಆರಂಭವಾಗುತ್ತಿದೆ. ಇದು ಪರಿಷೆಗೆ ಹೊಸ ಮೆರಗು ನೀಡಲಿದೆ. ಇನ್ನು ತೆಪ್ಪೋತ್ಸವಕ್ಕೆ ಈಗಾಗಲೇ ಸಿದ್ಧತೆ ನಡೆಯುತ್ತಿದ್ದು, ಕೆರೆಯಲ್ಲಿನ ಪಾಚಿ, ತ್ಯಾಜ್ಯವನ್ನು ಹೊರಹಾಕಲಾಗುತ್ತಿದೆ. ಕಡ್ಲೆಕಾಯಿ ಪರಿಷೆ ನಡೆಯೋ ನಾಲ್ಕು ದಿನ ನಿತ್ಯ ರಾತ್ರಿ 7.30ರಿಂದ 8.30 ರವರೆಗೆ ಒಂದು ಗಂಟೆ ಕಾಲ ಜನರಿಗೆ ತೆಪ್ಪೋತ್ಸವಕ್ಕೆ ಅವಕಾಶವಿದೆ. ಇದರ ಜೊತೆಗೆ ಬ್ಯೂಗಲ್‌ ರಾಕ್‌ (Bugle rock) ಮತ್ತು ನರಸಿಂಹಸ್ವಾಮಿ ಉದ್ಯಾನದಲ್ಲಿ ಸಾಂಸ್ಕೃತಿಕ (Cultural) ಕಾರ್ಯಕ್ರಮಗಳು ನಡೆಯಲಿವೆ.

ನ.21ರಿಂದ ಬಸವನಗುಡಿ ಕಡ್ಲೆಕಾಯಿ ಪರಿಷೆ: ಈ ಬಾರಿ ತೆಪ್ಪೋತ್ಸವ

ಪ್ಲಾಸ್ಟಿಕ್ ಮುಕ್ತ ಪರೀಷೆಗೆ ಆದ್ಯತೆ: ಎರಡು ವರ್ಷದ ಬಳಿಕ ನಡೆಯುತ್ತಿರುವ ಕಡ್ಲೆಕಾಯಿ (Groundnut) ಪರಿಷೆಗೆ ಒಂದಷ್ಟು ನಿಯಮಗಳನ್ನು ಪಾಲಿಕೆ (Palike) ತಂದಿದೆ. ಈ ಬಾರಿ ವಿಶೇಷವಾಗಿ ಪ್ಲಾಸ್ಟಿಕ್ ಮುಕ್ತ (Plastic Free) ಪರಿಷೆಗೆ ಬಿಬಿಎಂಪಿ‌ ನಿರ್ಧರಿಸಿದೆ. ಹೀಗಾಗಿ ಪ್ರತಿ ಅಂಗಡಿಗೂ ಪಾಲಿಕೆಯಿಂದ ಪರಿಸರ ಸ್ನೇಹಿ ಬ್ಯಾಗ್ (Natula Bags) ವಿತರಣೆ ಮಾಡುತ್ತಿದೆ. ಅಲ್ಲದೆ ಸಾರ್ವಜನಿಕರು ತಾವೇ ಕೈಚೀಲಗಳನ್ನು (Hand bags) ತರುವಂತೆ ಬಿಬಿಎಂಪಿ ಮನವಿ ಮಾಡಿದೆ. ಇನ್ನು ಹುರಿದಿರುವ ಕಡಲೆಕಾಯಿ ಸೇರಿಗೆ 30 ರೂ. ಹಾಗೂ ಲೀಟರ್ ಗೆ 60 ರೂ ಲಭ್ಯವಾಗಲಿದೆ. ಇನ್ನು ಹಸಿ ಕಡ್ಲೆಕಾಯಿ ಸೇರಿಗೆ 30 ರೂ ಹಾಗೂ ಲೀಟರ್ ಗೆ 50 ರೂ.ಗೆ ಸಿಗುತ್ತಿದೆ. ಬೆಂಗಳೂರು ಪಾರಂಪರಿಕ ಕಡಲೆಕಾಯಿ ಪರಿಷೆಗೆ ಸುಮಾರು 500 ವರ್ಷಗಳ ಇತಿಹಾಸವಿದ್ದು, ಈ ಜಾತ್ರೆ ಸಂಭ್ರಮವನ್ನು ನೋಡಲು ಬೆಂಗಳೂರು ನಗರ, ಗ್ರಾಮೀಣ ಸೇರಿದಂತೆ ರಾಜ್ಯದ ಇತರೆಡೆಗಳಿಂದ 3 ರಿಂದ 4 ಲಕ್ಷ ಜನ ಸೇರುವ ನಿರೀಕ್ಷೆ ಪಾಲಿಕೆಗಿದೆ.

 

Kadalekai Parishe 2022: ವಿಶ್ವ ವಿಖ್ಯಾತ ಬಸವನಗುಡಿ ಕಡಲೆಕಾಯಿ ಪರಿಷೆಗೆ ದಿನಗಣನೆ

ಐತಿಹಾಸಿಕ ಕಡಲೇಕಾಯಿ ಪರಿಷೆಯ ಹಿನ್ನೆಲೆ: ಮಾಗಡಿ ಕೆಂಪೇಗೌಡರು 1,537 ನಿರ್ಮಿಸಿದ ಈ ಗ್ರಾಮಕ್ಕೆ ಸುಂಕೇನಹಳ್ಳಿ (Sunkenahalli) ಗ್ರಾಮ ಎಂದು ಹೆಸರಿಟ್ಟಿದ್ದರು.  ಇಲ್ಲಿನ ರೈತರು ಕಡಲೇಕಾಯಿ ಬೆಳೆಯುತ್ತಿದ್ದರು. ಈ ಕಡಲೆಯನ್ನು ಬಸವ (Basava) ತಿನ್ನುತ್ತಿದ್ದುದನ್ನು ತಪ್ಪಿಸಲು ರೈತರು ತಮ್ಮ ಮೊದಲ ಫಸಲನ್ನು ಬಸವೇಶ್ವರ ದೇವರಿಗೆ ನೀಡುತ್ತಿದ್ದರು. ಇದರಿಂದಾಗಿಯೇ ಬಸವಣ್ಣನ 12 ಅಡಿ ಎತ್ತರ ಹಾಗೂ 20 ಅಡಿ ಉದ್ದ ಬಸವಣ್ಣ ಬೆಳೆಯುತ್ತಿದ್ದಾನೆ ಎಂದು ಅನೇಕರ ನಂಬಿಕೆಯಾಗಿದೆ. ಬಸವಣ್ಣನ ಕೆಳಗಡೆ ವೃಷಾಭವತಿ ನದಿ ಉದ್ಭವಿಸುತ್ತದೆ ಎಂದು ಅನೇಕರ ನಂಬಿಕೆಯಾಗಿದೆ.

Latest Videos
Follow Us:
Download App:
  • android
  • ios