Asianet Suvarna News Asianet Suvarna News

Kadalekai Parishe 2022: ವಿಶ್ವ ವಿಖ್ಯಾತ ಬಸವನಗುಡಿ ಕಡಲೆಕಾಯಿ ಪರಿಷೆಗೆ ದಿನಗಣನೆ

ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಯ ಜನ ಕಾತುರದಿಂದ ಕಾಯುವ ವಿಶ್ವವಿಖ್ಯಾತ ಬಸವನಗುಡಿ ಕಡಲೆಕಾಯಿ ಪರಿಷೆಗೆ ದಿನಗಣನೆ ಶುರುವಾಗಿದೆ. ಬಸವನಗುಡಿ ಪರಿಷೆ ನವೆಂಬರ್ ತಿಂಗಳ 21 ರಂದು ಪ್ರಾರಂಭವಾಗಲಿದೆ.

Basavanagudi Kadalekai Parishe 2022 November 21st to November 23rd gow
Author
First Published Nov 17, 2022, 5:23 PM IST | Last Updated Nov 17, 2022, 5:23 PM IST

ವರದಿ: ವಿದ್ಯಾಶ್ರೀ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ನ.17): ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಯ ಜನ ಕಾತುರದಿಂದ ಕಾಯುವ ವಿಶ್ವವಿಖ್ಯಾತ ಬಸವನಗುಡಿ ಕಡಲೆಕಾಯಿ ಪರಿಷೆಗೆ ದಿನಗಣನೆ ಶುರುವಾಗಿದೆ. ಬಸವನಗುಡಿ ಪರಿಷೆ ನವೆಂಬರ್ ತಿಂಗಳ 21 ರಂದು ಪ್ರಾರಂಭವಾಗಲಿದೆ. ಈ ಬಾರಿ ಮೂರು ದಿನಗಳ ಕಾಲ ನಡೆಯುವ  ಪರಿಷೆಗೆ ನವೆಂಬರ್ 20ರ ಸಂಜೆಯೇ ಚಾಲನೆ ದೊರೆಯಲಿದೆ. ಪ್ರತಿ ವರ್ಷದಂತೆ ಈ ವರ್ಷವೂ  ಕಡೆ ಕಾರ್ತಿಕ ಸೋಮವಾರಗಳಲ್ಲಿ  ಕಡಲೆಕಾಯಿ ಪರಿಷೆ ನಡೆಯಲಿದೆ. ವಾರಾಂತ್ಯದ  ಶನಿವಾರವೇ  ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಡಲೆಕಾಯಿ ಪರಿಷೆಗೆ ಬರುವ ಕಾರಣ ದೇವಸ್ಥಾನ ಹಾಗೂ ದೇವಸ್ಥಾನದ ಆವರಣದಲ್ಲಿ ಪೂರ್ವ ಸಿದ್ಧತೆಗಳನ್ನು ಮಾಡಕೊಳ್ಳಲಾಗುತ್ತಿದೆ. ಆದ್ರ ಜೊತೆಗೆ ದೊಡ್ಡ ಬಸವಣ್ಣನಿಗೆ 150 ಕೆ.ಜಿ ಕಡಲೆಕಾಯಿ ಇಂದ ಅಭಿಷೇಕ ಮಾಡಲಾಗುವುದು... ಇನ್ನು ನವೆಂಬರ್ 20 ಭಾನುವಾರ ಸಂಜೆ ಪರಿಷೆಗೆ ಚಾಲನೆ ನೀಡಿ ಸೋಮವಾರದಿಂದ ಜನರು ಯಾವುದೇ ತೊಡಕುಗಳಿಲ್ಲದೆ ಕಡಲೆಕಾಯಿ ಪರಿಷೆಯನ್ನು ಕಣ್ತುಂಬಿಕೊಳ್ಳುವಂತೆ ಮಾಡಲು ಅಧಿಕಾರಿಗಳು ಸಜ್ಜಾಗಿದ್ದಾರೆ.

ದಶಕದ ಬಳಿಕ ಕೆಂಪಾಂಬುಧಿ ಕೆರೆಯಲ್ಲಿ ನಂದಿ ತೆಪ್ಪೋತ್ಸವ: 
ದಶಕದ ಬಳಿಕ ಬಸವನಗುಡಿ ಪರಿಷೆಯಲ್ಲಿ ಈ ಬಾರಿ ಮತ್ತೆ ತೆಪ್ಪೋತ್ಸವ ಆರಂಭವಾಗಲಿದೆ. ಇದು ಪರಿಷೆಯ ಮುಖ್ಯ ಆಕರ್ಷಣೆಯಾಗಲಿದೆ. 2008ರಲ್ಲಿ ಕೆಂಪಾಂಬುಧಿ ಕೆರೆಯಲ್ಲಿ ನಂದಿ ತೆಪ್ಪೋತ್ಸವ ಆಗಿತ್ತು. ಆದಾದ ಬಳಿಕ ನಾನಾ ಕಾರಣಗಳಿಂದ ತೆಪ್ಪೋತ್ಸವ ನಡೆಸಿರಲಿಲ್ಲ. ಈ ಬಾರಿ ಮತ್ತೆ ಅದು ಆರಂಭವಾಗುತ್ತಿದೆ. ಇದು ಪರಿಷೆಗೆ ಹೊಸ ಮೆರಗು ನೀಡಲಿದೆ. ಇನ್ನು ತೆಪ್ಪೋತ್ಸವಕ್ಕೆ ಈಗಾಗಲೇ ಸಿದ್ಧತೆ ನಡೆಯುತ್ತಿದ್ದು, ಕೆರೆಯಲ್ಲಿನ ಪಾಚಿ, ತ್ಯಾಜ್ಯವನ್ನು ಹೊರಹಾಕಲಾಗುತ್ತಿದೆ. ಇದರ ಜೊತೆಗೆ ಬ್ಯೂಗಲ್‌ ರಾಕ್‌ ಮತ್ತು ನರಸಿಂಹಸ್ವಾಮಿ ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಎಂತೆಂಥಾ ದಾಖಲೆ: ಮೂಗಿನಿಂದಲೇ ಕಡಲೆಕಾಯಿಯ ಬೆಟ್ಟ ಹತ್ತಿಸಿದ ಭೂಪ

1537 ರಲ್ಲಿ ಆರಂಭವಾಗಿರುವ ಕಡಲೆಕಾಯಿ ಪರಿಷೆ:
1537 ರಲ್ಲಿ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಬಸವನಗುಡಿ ಬೆಟ್ಟದ ಮೇಲೆ ದೊಡ್ಡ ಬಸವ ದೇವಾಲಯವನ್ನು ಸ್ಥಾಪಿಸಿದರು. ಈ ದೇವಾಲಯವನ್ನು ಸದ್ಯ ಬುಲ್ ಟೆಂಪಲ್ ಎಂದು ಕರೆಯಲಾಗುತ್ತಿದೆ. 1537 ಕ್ಕೂ ಹಿಂದೆ ಸ್ವರ್ಗದಿಂದ ನಂದಿ ಬಂದು ದೇವಸ್ಥಾನದ ಸುತ್ತಮುತ್ತಲು ರೈತರು ಬೆಳೆಯುತ್ತಿದ್ದ ಬೆಳೆಯನ್ನ ತಿಂದು ಹೋಗುತ್ತಿತ್ತು. ಹಿನ್ನಲೆ ಬೆಟ್ಟದ ಮೇಲೆ ದೊಡ್ಡ ಬಸವಣ್ಣವ ದೇವಾಲಯ ಸ್ಥಾಪಿಸಿ ಪ್ರತಿವರ್ಷ ತಾವು ಬೆಳೆದ ಕಡಲೆಕಾಯಿಯನ್ನ ನಂದಿಗೆ ಅರ್ಪಿಸಲು ಶುರುಮಾಡಿದರು ಎನ್ನುವ ಪ್ರತೀತಿ ಇದೆ. ಹಿನ್ನಲೆ ಅಂದಿನಿಂದ ಇಲ್ಲಿಗೆ ಸುತ್ತಲಿನ ಗ್ರಾಮಗಳ ರೈತರು ಪ್ರತಿ ವರ್ಷ  ಬಂದು ತಮ್ಮ ವಾರ್ಷಿಕ ಕಡಲೆಕಾಯಿಯನ್ನು ಬಸವಣ್ಣನಿಗೆ ಅರ್ಪಿಸುತ್ತಾರೆ. ಆ ಸಂಪ್ರದಾಯ ಇಂದಿಗೂ ಮುಂದುವರೆಯುತ್ತಿದೆ.

ನ.21ರಿಂದ ಬಸವನಗುಡಿ ಕಡ್ಲೆಕಾಯಿ ಪರಿಷೆ: ಈ ಬಾರಿ ತೆಪ್ಪೋತ್ಸವ

ಕಡಲೆಕಾಯಿ ಪರಿಷೆಯಲ್ಲಿ ವಿವಿಧ ಬಗೆಯ  ಕಡಲೆಕಾಯಿ ದೊರೆಯುತ್ತದೆ. ಎರಡು ಬೀಜಗಳಿರುವ, ಮೂರು ಬೀಜಗಳಿರುವ ಕಾಯಿಗಳ ಜೊತೆಗೆ ಒಂಟಿ ಬೀಜದ ಕಾಯಿಗಳು ದೊರೆಯುತ್ತದೆ.  ಗಡಂಗ್, ಸಾಮ್ರಾಟ್, ಬಾದಾಮ್, ಹಸಿ ಕಡಲೆಕಾಯಿ, ಹುರಿದ ಕಡಲೆಕಾಯಿ, ಬೆಯಿಸಿದ ಕಡಲೆಕಾಯಿ ಸೇರಿದಂತೆ ಹಲವು ವಿಧಗಳ ಕಡಲೆಕಾಯಿ ಇಲ್ಲಿ ಸಿಗುತ್ತದೆ.

Latest Videos
Follow Us:
Download App:
  • android
  • ios