ನಿಮ್ಮ ಹೆಸರು A ಅಕ್ಷರದಿಂದ ಶುರುವಾಗುತ್ತಾ? ಅದು ನಿಮ್ಮ ಬಗ್ಗೆ ಏನು ಹೇಳ್ತಿದೆ ಗೊತ್ತಾ?
ಎ ಅಕ್ಷರದಿಂದ ಹೆಸರು ಆರಂಭವಾಗುವವರ ವ್ಯಕ್ತಿತ್ವ ಹೇಗಿರುತ್ತದೆ? ಅವರಿಗೆ ಹೊಂದುವ ವೃತ್ತಿಗಳು ಯಾವುವು? ಎಲ್ಲ ತಿಳಿಯೋಣ ಬನ್ನಿ.
400 ವರ್ಷದ ಹಿಂದೆ ಷೇಕ್ಸ್‌ಪಿಯರ್ ಕೇಳಿದ್ದ- ಹೆಸರಲ್ಲೇನಿದೆ, ರೋಸ್ ಗೆ ರೋಸ್ ಎಂದರೂ ಬೇರೆ ಹೆಸರಿ(name)ನಿಂದ ಕರೆದರೂ ಅದು ಅದೇ ಹೂವಾಗಿರುತ್ತದೆ ಹೊರತು ಮತ್ತೇನೂ ಆಗಿರುವುದಿಲ್ಲ ಎಂದು. ಆದರೆ, ಹೆಸರಲ್ಲಿ ಸಾಕಷ್ಟಿರುತ್ತದೆ. ಹೆಸರು ವ್ಯಕ್ತಿಯ ಗುರುತಾಗಿರುತ್ತದೆ. ಆ ಹೆಸರನ್ನು ಕರೆದಾಗ ಉಂಟಾಗುವ ಕಂಪನ ನಿಮ್ಮ ವ್ಯಕ್ತಿತ್ವ(Personality)ದ ಮೇಲೆ ಪರಿಣಾಮ ಬೀರುತ್ತದೆ. ಈಗ ಎ ಅಕ್ಷರವನ್ನೇ ನೋಡೋಣ. ಎ ಇಂದ ಹೆಸರು ಆರಂಭವಾಗುವವರ ಸ್ವಭಾವ ಹೇಗಿರುತ್ತದೆ ನೋಡೋಣ.
ಎ ಮತ್ತು ನಂಬರ್ 1ಗೆ ಒಂದೇ ಗುಣಗಳು
ಎ ಮತ್ತು ನಂಬರ್ 1(number 1) ಎರಡೂ ತಮ್ಮ ವರ್ಗಗಳಲ್ಲಿ ಮೊದಲನೆಯವು. ಹಾಗಾಗಿ, ಅವು ತುಂಬಾ ಪವರ್‌ಫುಲ್ ಮತ್ತು, ತಾವೇ ಎಲ್ಲದರ ಮುಂದಾಳತ್ವ ವಹಿಸಲು ಬಯಸುವವು. ಯಾವುದೇ ಸಂದರ್ಭವನ್ನು ಮುನ್ನಡೆಸುವ ಶಕ್ತಿ ಇರುವವರು ಎ ಅಕ್ಷರದಿಂದ ಹೆಸರು ಆರಂಭವಾಗುವವರಾಗಿರುತ್ತಾರೆ. ಹೆಚ್ಚು ಪ್ರಾಕ್ಟಿಕಲ್ಲಾಗಿರುವ ಇವರು, ಯಾರೋ ಆಡಿದ ಮಾತನ್ನು ಸುಮ್ಮನೇ ನಂಬುವವರೂ ಅಲ್ಲ, ಅದಕ್ಕೆ ತಲೆ ಕೆಡಿಸಿಕೊಳ್ಳುವವರೂ ಅಲ್ಲ.
ತಾಳ್ಮೆ(patience) ಕಡಿಮೆ
ಬಹಳ ತಾಳ್ಮೆಯನ್ನು ಒಗ್ಗೂಡಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸುತ್ತಾರೆ. ಆದರೆ, ಯಾವುದೇ ಸನ್ನಿವೇಶಕ್ಕೆ ತಕ್ಷಣ ಪ್ರತಿಕ್ರಿಯಿಸಿಬಿಡುತ್ತಾರೆ.
ಸ್ವ ಉದ್ಯಮಿಗಳು
ಮುಂದಾಳತ್ವ ವಹಿಸುವ ಗುಣ ಇರುವುದರಿಂದ ಎ ಅಕ್ಷರದಿಂದ ಹೆಸರು ಆರಂಭವಾಗುವವರು ತಮ್ಮದೇ ಆದ ನಿಯಮ ರೂಪಿಸಿ ಅದರಂತೆ ನಡೆವವರು, ನಡೆಸುವವರು. ತಮಗಿಷ್ಟ ಬಂದಂತೆ ಬದುಕನ್ನು ನಡೆಸುವವರು. ಹಾಗೆ ಮಾಡಲು ಬೇಕಾದ ಆತ್ಮವಿಶ್ವಾಸ(confidence) ಇವರಲ್ಲಿ ಜಾಸ್ತಿ ಇರುತ್ತದೆ. ಧೈರ್ಯ ಹಾಗೂ ಬದ್ಧತೆಯೂ ಹೆಚ್ಚು.
ಸಾಹಸಿ ಪ್ರವೃತ್ತಿ
ಎಲ್ಲಿ ಮಜಾ ಮತ್ತು ಸಾಹಸ ಒಟ್ಟಾಗಿರುತ್ತದೆಯೋ ಅಲ್ಲಿಗೆ ಓಡುವವರು. ಬಹಳ ಸಂತೋಷದಿಂದ ಚಟುವಟಿಕೆಯುಕ್ತವಾಗಿರುವವರು. ಸದಾ ತಮ್ಮ ವ್ಯಕ್ತಿತ್ವವನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳುವ ಹಪಹಪಿ ಇವರದು. ಯಾವುದಾದರೂ ಗುರಿ ಇಟ್ಟುಕೊಂಡರೆ ಅದನ್ನು ಸಾಧಿಸುವವರೆಗೂ ಸುಮ್ಮನಾಗದ ಛಲದಂಕ ಮಲ್ಲರು ಇವರು.
Weekly Horoscope: ಸಿಂಹಕ್ಕೆ ನಿರಾಸೆ, ಒತ್ತಡದ ವಾರ, ಮಿಥುನಕ್ಕೆ ಬಡ್ತಿ
ಬೋಲ್ಡಾಗಿ ಕಾಣಿಸಿಕೊಳ್ಳಲು ಇಷ್ಟ
ಎ ಅಕ್ಷರದಿಂದ ಹೆಸರು ಆರಂಭವಾಗುವವರಲ್ಲಿ ಆತ್ಮವಿಶ್ವಾಸ ಹೆಚ್ಚು. ಕೆಲವೊಮ್ಮೆ ಭಯ, ದುಃಖ ಕಾಣಿಸಬಹುದು. ಆದರೆ, ಮೇಲಿನಿಂದ ಬೋಲ್ಡಾಗಿರುವಂತೆಯೇ ತೋರಿಸಿಕೊಳ್ಳುವವರು. ಧೈರ್ಯವಂತ(courage)ರಂತೆ ತೋರಿಸುವುದು ಇವರಿಗಿಷ್ಟ. ಯಾವುದೇ ಸಂದರ್ಭದಲ್ಲೂ ಮನಸ್ಸಿನೊಳಗಿನ ಅಳುಕನ್ನು ಬಿಟ್ಟು ಕೊಡದವರು ಇವರು. ಎಷ್ಟೇ ಬೋಲ್ಡಾಗಿ ಕಾಣಿಸಿಕೊಂಡರೂ ತಮ್ಮ ಫೀಲಿಂಗ್ಸ್ ಹೇಳಿಕೊಳ್ಳುವಲ್ಲಿ ಮಾತ್ರ ಹಿಂದೆ ಬೀಳುತ್ತಾರೆ.
ತೆರೆದ ಮನಸ್ಸಿನವರು
ಇವರ ಅತ್ಯುತ್ತಮ ಗುಣವಿದು. ಸದಾ ಓಪನ್ ಮೈಂಡೆಡ್ ಆಗಿರುವ ಇವರು ಸಮಾಜದ ಯಾವುದೇ ಹೊಸ ವಿಷಯಗಳಿರಲಿ, ವ್ಯಕ್ತಿಗತ ವಿಷಯವಿರಲಿ- ಜಜ್ಡ್ ಮಾಡದೇ ಅದನ್ನು ತೆರೆದ ಮನಸ್ಸಿನಿಂದ ಸ್ವೀಕಾರ ಮಾಡುತ್ತಾರೆ. ತಮ್ಮ ಅಭಿಪ್ರಾಯ, ಇಷ್ಟಕಷ್ಟಗಳಂತೆ ಇತರರದೂ ಇರುತ್ತದೆ ಎಂದು ನಂಬಿ ಅದನ್ನು ಗೌರವಿಸುವ ಗುಣ ಇವರಲ್ಲಿರುತ್ತದೆ. ಆದರೆ, ಸಂಗಾತಿಯ ವಿಷಯಕ್ಕೆ ಬಂದಾಗ ಕೊಂಚ ನಿಯಂತ್ರಣ ಸಾಧಿಸಲು ಬಯಸುತ್ತಾರೆ.
Eyebrows ನೋಡಿ ವ್ಯಕ್ತಿತ್ವ ಹೇಳ್ಬೋದು!
ಈ ರಾಶಿಗೆ ಹೊಂದುವ ವೃತ್ತಿಗಳು(careers)
ಮುಂದಾಳತ್ವ ವಹಿಸಲು ಅವಕಾಶ ಇರುವ ಯಾವುದೇ ವೃತ್ತಿಯೂ ಇವರಿಗೆ ಹೊಂದುತ್ತದೆ. ಇತರರಿಗೆ ದಾರಿ ತೋರಿಸಿ, ತಾವು ಆದರ್ಶಪ್ರಾಯರಾಗಲು ಬಯಸುವವರು. ಉದ್ಯಮಿ, ಟೀಚರ್, ಸಂಶೋಧಕ ಅಥವಾ ಯಾವುದೇ ನಾಯಕತ್ವ ಬೇಕಾದ ವೃತ್ತಿಗಳು.
ನಕಾರಾತ್ಮಕ ಅಂಶ
ಯಾವಾಗಲೂ ಪೂರ್ತಿ ಎನರ್ಜಿಯಿಂದಿರುವುದರಿಂದ ಇತರರ ಬದ್ಧತೆ, ಪ್ರಯತ್ನಗಳು ಇವರಿಗೆ ಸಾಲದೆನಿಸುತ್ತದೆ. ಅವರನ್ನು ನಿರುತ್ಸಾಹಗೊಳಿಸುವ ಅರಿವಿಲ್ಲದೆ, ಅವರ ಪ್ರಯತ್ನಗಳೆಲ್ಲ ಲೆಕ್ಕಕ್ಕಿಲ್ಲದಂತೆ ವರ್ತಿಸಿಬಿಡುತ್ತಾರೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.