ಜೂನ್‌ನಲ್ಲಿ ಹುಟ್ಟಿದೋರ ಭವಿಷ್ಯ, ಗುಣ-ಸ್ವಭಾವ ತಿಳಿಯಿರಿ!
ಒಂದೇ ತಿಂಗಳಿನಲ್ಲಿ ಜನಿಸುವವರು ಹಲವರು ಸಿಗುತ್ತಾರೆ. ಅವರ ಸ್ವಭಾವ ಸಹ ಭಿನ್ನವಾಗಿ ಇರಬಹುದು. ಆದರೆ, ಈ ಗುಣ - ಸ್ವಭಾವದಲ್ಲಿ ಕೆಲವು ಅಂಶಗಳು ಮಾತ್ರ ಒಂದೇ ಆಗಿರುತ್ತವೆ. ಕಾರಣ ಅವರು ಹುಟ್ಟಿದ ತಿಂಗಳಾಗಿರುತ್ತದೆ. ಹೀಗಾಗಿ ಜೂನ್‌ನಲ್ಲಿ ಹುಟ್ಟಿದವರ ಬಗ್ಗೆ ತಿಳಿಯೋಣ.
ಎಲ್ಲರಿಗೂ ಅವರವರ ಹಾಗೂ ಮಕ್ಕಳ (Child) ಭವಿಷ್ಯದ ಬಗ್ಗೆ ಚಿಂತೆ, ಕುತೂಹಲ ಇದ್ದೇ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ (Astrology) ಮೂಲಕ ಯಾವುದೇ ವ್ಯಕ್ತಿಯ ಜನನ ದಿನಾಂಕ, ಸಮಯ, ತಿಥಿಗಳ ಆಧಾರದಲ್ಲಿ ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಹಾಗೆಯೇ ವರ್ಷದ ಹನ್ನೆರೆಡು ತಿಂಗಳಿನಲ್ಲಿ ಜನಿಸಿದವರ ವ್ಯಕ್ತಿತ್ವ (Personality), ಗುಣ-ಸ್ವಭಾಗಳೂ ಭಿನ್ನವಾಗಿರುತ್ತದೆ.
ಜೂನ್‌ನಲ್ಲಿ (June) ಹುಟ್ಟಿದವರ ಗುಣ ಹಾಗೂ ಸ್ವಭಾವಗಳು, ಜೊತೆಗೆ ಅವರಲ್ಲಿ ಇರುವ ಅತ್ಯುತ್ತಮ ಅಂಶಗಳು ಯಾವುವು..? ಅಲ್ಲದೆ, ಅವರಲ್ಲಿ ಇರುವ ಆಸಕ್ತಿಯುತ ವಿಷಯಗಳು ಏನು ಎಂಬುದರ ಬಗ್ಗೆ ನೋಡೋಣ....
ಬುಧನ (Mercury) ಪ್ರಭಾವ ಹೆಚ್ಚಿರುತ್ತೆ
ಜೂನ್‌ನಲ್ಲಿ ಹುಟ್ಟಿದವರ ಜಾತಕದಲ್ಲಿ ಬುಧನ ಪ್ರಭಾವ (Effect) ಹೆಚ್ಚಿರುತ್ತದೆ. ಸಾತ್ವಿಕ ಭಾವವನ್ನು ಹೊಂದಿರುವ ಬುಧಗ್ರಹವು ನಮ್ಮ ಮನಸ್ಸು (Mind), ಬುದ್ಧಿ, ಸ್ಮೃತಿಗೆ ಸಂಬಂಧಪಟ್ಟಂತೆ ಪ್ರಭಾವ ಬೀರುತ್ತದೆ. ಗಣಪತಿ ಈ ಗ್ರಹದ ಅಧಿಪತಿ ದೇವರಾಗಿದ್ದು, ಈ ಎಲ್ಲ ಪ್ರಭಾವಗಳೂ ಸಹ ಈ ತಿಂಗಳಲ್ಲಿ ಜನಿಸಿದವರ ಜಾತಕದ (Horoscope) ಮೇಲಾಗುತ್ತದೆ.
ಬಹಳ ಬುದ್ಧಿವಂತರು (Intelligent)
ಜೂನ್ ತಿಂಗಳಿನಲ್ಲಿ ಹುಟ್ಟಿದವರು ಬಹಳ ಬುದ್ಧಿವಂತರಾಗಿರುತ್ತಾರೆ. ಜೊತೆಗೆ ಇವರ ಸ್ವಭಾವ ಬಹಳ ಸಾತ್ವಿಕ ಆಗಿರಲಿದ್ದು, ಹೆಚ್ಚು ಚಿಂತನಾಶೀಲರೂ ಆಗಿರುತ್ತಾರೆ. ಇವರಿಗೆ ಅವಸರ (Hurry) ಆಗಿಬರದು. ಯಾವುದೇ ಕೆಲಸವಿದ್ದರೂ ಸಾಕಷ್ಟು ಸಮಯವನ್ನು (Time) ತೆಗೆದುಕೊಂಡು ತಮ್ಮಿಷ್ಟದಂತೆಯೇ ಮಾಡುತ್ತಾರೆ. ಹಲವು ಬಾರಿ ಇವರ ಈ ಸ್ವಭಾವವು ಯಶಸ್ಸಿಗೆ ಕಾರಣ ಆಗಿರುತ್ತದೆ.
ಕನಸಿನ ಲೋಕ (Dream) ಇವರದ್ದು
ಇವರು ಹೆಚ್ಚಾಗಿ ಕನಸಿನ ಲೋಕದಲ್ಲಿ ಇರುತ್ತಾರೆ. ದೊಡ್ಡಮಟ್ಟದ ಕನಸನ್ನೇ ಕಾಣುತ್ತಾರೆ. ಇವರ ಕಲ್ಪನೆ ಜೊತೆಗೆ ಬುದ್ಧಿವಂತಿಕೆಯೂ ಕೈಜೋಡಿಸುವುದರಿಂದ ಜೀವನದಲ್ಲಿ ಮುಂದೆ ಬರಲು ಸಹ ಇದು ಸಹಾಯಕವಾಗುತ್ತದೆ. ಬಹಳ ಪರಿಶ್ರಮಿಗಳಾಗಿದ್ದು, ಅದಕ್ಕಾಗಿ ಸಾಕಷ್ಟು ಪ್ರಯತ್ನವನ್ನು ಹಾಕುತ್ತಾರೆ. ಒಮ್ಮೊಮ್ಮೆ ಆಪ್ತರ ಬಳಿ ತಮ್ಮ ಕಲ್ಪನೆ, ಕನಸುಗಳ ಬಗ್ಗೆ ಹೇಳಿ ಅಪಹಾಸ್ಯಕ್ಕೂ ಈಡಾಗುತ್ತಾರೆ.
ಚಂಚಲ ಸ್ವಭಾವ (Fickle nature)
ಜೂನ್‌ನಲ್ಲಿ ಹುಟ್ಟಿದವರು ಸ್ವಾಭಿಮಾನಿಗಳಾಗಿದ್ದು, ಇನ್ನೊಬ್ಬರ ಹಂಗಿನಲ್ಲಿ ಇರಲು ಬಯಸುವವರಲ್ಲ. ತಮ್ಮ ಮೇಲೆ ಹಕ್ಕು ಚಲಾಯಿಸುವವರ ಜೊತೆಗೆ ಇರಲು ಇವರು ಇಷ್ಟಪಡುವುದಿಲ್ಲ. ಇವರದ್ದು ಉತ್ತಮ ಸ್ವಭಾವದ ವ್ಯಕ್ತಿತ್ವ ಆಗಿರುತ್ತದೆ. ಇವರು ಒಪ್ಪಿಕೊಂಡ ಕೆಲಸವನ್ನು ಪ್ರಾಮಾಣಿಕತೆಯಿಂದ (Honesty) ಮಾಡಿ ಮುಗಿಸುತ್ತಾರೆ. ಸ್ವಲ್ಪ ಭಾವುಕ ವ್ಯಕ್ತಿತ್ವನ್ನೂ ಹೊಂದಿರುವ ಇವರಿಗೆ, ಕೋಪ ಸಹ ಹೆಚ್ಚಿದೆ. ಹೀಗಾಗಿ ಈ ಕೋಪದ ಸ್ವಭಾವದಿಂದ ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ.
ಇದನ್ನು ಓದಿ: ಈ ಸೂಚನೆಗಳು ಕಂಡರೆ, ದೇವರು ನಿಮ್ಮ ಮೇಲೆ ಕೃಪೆ ತೋರುತ್ತಿದ್ದಾನೆಂದರ್ಥ!
ಧಾರ್ಮಿಕ ನಂಬಿಕೆ (Religious Faith)
ಧಾರ್ಮಿಕ ವಿಚಾರಗಳಿಗೆ ಮಹತ್ವವನ್ನು ನೀಡುವ ಈ ವ್ಯಕ್ತಿಗಳು, ಹೆಚ್ಚು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುತ್ತಾರೆ. ಇವರು ಮಾನಸಿಕ ಮತ್ತು ಆಧ್ಯಾತ್ಮಿಕ ಶಾಂತಿಯನ್ನು ಬಯಸುವವರಾಗಿರುತ್ತಾರೆ.
ಚಿಂತಿಸಿ ನಿರ್ಧಾರ (Think about the decision)
ಜೂನ್ 9ರಿಂದ 15ರೊಳಗೆ ಜನಿಸಿರುವ ವ್ಯಕ್ತಿಗಳ ಸ್ವಭಾವದಲ್ಲಿ ಕರುಣೆಯ ಭಾವ ಹೆಚ್ಚಾಗಿ ಇರುತ್ತದೆ. ಇವರು ಬಡವರು, ನಿರ್ಗತಿಕರು ಸೇರಿದಂತೆ ದುರ್ಬಲ ವರ್ಗದವರಿಗೆ ಸಹಾಯವನ್ನು ಆಗಾಗ ಮಾಡುತ್ತಿರುತ್ತಾರೆ. ಇದಲ್ಲದೆ, ಈ ವ್ಯಕ್ತಿಗಳು ಯೋಚನೆಯನ್ನು ಮಾಡದೇ ಯಾವುದೇ ನಿರ್ಧಾರವನ್ನು ಸಹ ತೆಗೆದುಕೊಳ್ಳುವುದಿಲ್ಲ.
ಸಂಗಾತಿಗೆ (Partner) ಸಿಗುತ್ತೆ ಹೆಚ್ಚಿನ ಮನ್ನಣೆ
ಜೂನ್ 23ರಿಂದ 30ರ ಮಧ್ಯದ ಅವಧಿಯಲ್ಲಿ ಜನಸಿದವರಿದ್ದರೆ ಅವರು ತಮ್ಮ ಸಂಗಾತಿಯನ್ನು ಅತ್ಯಂತ ಆಪ್ಯಾಯತೆಯಿಂದ ನೋಡಿಕೊಳ್ಳುತ್ತಾರೆ. ಈ ವಾರದಲ್ಲಿ ಜನಿಸಿದವರ ಜಾತಕದ ಪ್ರಕಾರ ಬಹಳ ಸಂವೇದನಾಶೀಲ ಗುಣವನ್ನು ಹೊಂದಿರುತ್ತಾರೆ.
ಇದನ್ನು ಓದಿ: ಮಗು ಹುಟ್ಟಿದ ವಾರದ ಪ್ರಕಾರ ಭವಿಷ್ಯ ಹೇಗಿದೆ ನೋಡಿ..
ಉಳಿತಾಯದ (Saving) ಗುಣ
ಜೂನ್‌ನಲ್ಲಿ ಜನಿಸಿದವರು ಉಳಿತಾಯ ಮಾಡುವುದರಲ್ಲಿ ನಿಸ್ಸೀಮರು. ಸ್ವಲ್ಪ ಜಿಪುಣತನವನ್ನು ತೋರುವ ಇವರು, ಇದರ ಬಗ್ಗೆ ಯಾರು ಏನೇ ಹೇಳಿದರೂ ಯೋಚಿಸುವುದಿಲ್ಲ. ತಮ್ಮ ಖುಷಿ ಜೊತೆಗೆ ಬೇರೆಯವರೂ ಖುಷಿಯಾಗಿರಬೇಕೆಂದು (Happy) ಇಷ್ಟಪಡುತ್ತಾರೆ.