ಮಾರ್ಚ್ 2026ರ ಚೀನೀ ರಾಶಿ ಭವಿಷ್ಯದ ಪ್ರಕಾರ, ಈ ತಿಂಗಳು ಹುಲಿ ಶಕ್ತಿಯ ಪ್ರಭಾವದಿಂದ ಕೂಡಿರುತ್ತದೆ. ಇದು ಕೆಲವು ರಾಶಿಯವರಿಗೆ ವಿಶೇಷವಾಗಿ ಅದೃಷ್ಟವನ್ನು ತರಲಿದೆಯಂತೆ. ವೃತ್ತಿ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳು ಬರಲಿವೆ. ನೀವೂ ಇದೀರಾ? ನಿಮ್ಮದು ಯಾವ ರಾಶಿ? ಗಮನಿಸಿ.  

2026ರ ಮಾರ್ಚ್ ತಿಂಗಳು ಆರಂಭವಾಗುತ್ತಿದೆ. ಚೀನೀ ರಾಶಿ ಭವಿಷ್ಯವನ್ನು ಅಧ್ಯಯನ ಮಾಡುವ ಜ್ಯೋತಿಷಿಗಳು ಈ ತಿಂಗಳು ನಿಮ್ಮ ಎನರ್ಜಿಯಲ್ಲಿ ಹೊಸ ಬದಲಾವಣೆ ತರುತ್ತದೆ ಎಂದು ಹೇಳುತ್ತಿದ್ದಾರೆ. ಈ ಬದಲಾವಣೆ ಯಾರಿಗೆ ಎಂದರೆ, ಧೈರ್ಯದಿಂದ ಮುಂದೆ ಸಾಗುವವರಿಗೆ ಮತ್ತು ತಮ್ಮನ್ನು ತೋರಿಸಿಕೊಳ್ಳುವವರಿಗೆ ಅನುಕೂಲಕರವಾಗಿದೆ. ವಿಶೇಷವಾಗಿ ಹುಲಿ (Tiger), ಕುದುರೆ (Horse) ಮತ್ತು ಡ್ರ್ಯಾಗನ್‌ (Dragon) ರಾಶಿಯವರಿಗೆ ಈ ತಿಂಗಳಲ್ಲಿ ಹೆಚ್ಚು ಅದೃಷ್ಟ ಮತ್ತು ಉತ್ತಮ ಅವಕಾಶಗಳು ದೊರೆಯುವ ಸಾಧ್ಯತೆ ಇದೆ.

ಚೀನೀ ಜ್ಯೋತಿಷ್ಯ ಪ್ರಕಾರ, ಈ ತಿಂಗಳು ವೃಷಭ (Ox) ಶಕ್ತಿಯಿಂದ ಹುಲಿ (Tiger) ಶಕ್ತಿಗೆ ಬದಲಾಗುತ್ತದೆ. ಇದು ಧೈರ್ಯ, ನಾಯಕತ್ವ ಮತ್ತು ತಕ್ಷಣ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಸೂಚಿಸುತ್ತದೆ. ವಿಶೇಷವಾಗಿ ಮಾರ್ಚ್ 8ರಂದು ಹುಲಿ ಶಕ್ತಿ ಅತ್ಯಂತ ಬಲವಾಗಿರುತ್ತದೆ. ಮಾರ್ಚ್ ಮೊದಲ ಭಾಗದಲ್ಲಿ ವೃಷಭ ಶಕ್ತಿ ಶಾಂತಿ ಮತ್ತು ಸ್ಥಿರತೆಯನ್ನು ಸೂಚಿಸುತ್ತದೆ. ಆದರೆ ಮಾರ್ಚ್ 8ರಿಂದ ಹುಲಿ ಶಕ್ತಿ ಸಂಪೂರ್ಣವಾಗಿ ಪ್ರಭಾವ ಬೀರುತ್ತದೆ. ಹುಲಿ ಎಂದರೆ ಧೈರ್ಯ, ನಾಯಕತ್ವ ಮತ್ತು ಸಾಹಸವನ್ನು ಸೂಚಿಸುತ್ತದೆ.

ಜ್ಯೋತಿಷಿಗಳು ಈ ತಿಂಗಳಲ್ಲಿ ಕೆಂಪು ಬಣ್ಣವನ್ನು ಬಳಸುವುದು, ಜನರೊಂದಿಗೆ ಸಂಪರ್ಕ ಬೆಳೆಸುವುದು ಮತ್ತು ಸಂಘಟನೆಯಲ್ಲಿ ನಿಮ್ಮ ಸಾಮರ್ಥ್ಯವನ್ನು ತೋರಿಸುವುದು ಉತ್ತಮ ಎಂದು ಹೇಳುತ್ತಾರೆ. ಕೆಂಪು ಬಣ್ಣವು ಚೀನೀ ಸಂಪ್ರದಾಯದಲ್ಲಿ ಸಮೃದ್ಧಿ ಮತ್ತು ಶಕ್ತಿಯ ಸಂಕೇತವಾಗಿದೆ.

ಹುಲಿ ರಾಶಿ: ನಾಯಕತ್ವದಿಂದ ಗೌರವ

ಹುಲಿ ರಾಶಿಯಲ್ಲಿ ಜನಿಸಿದವರಿಗೆ ಮಾರ್ಚ್ 2026 ಅತ್ಯಂತ ಶುಭಕರವಾಗಿದೆ. ಈ ತಿಂಗಳಲ್ಲಿ ಅವರ ನಾಯಕತ್ವ ಗುಣಗಳು ಹೆಚ್ಚು ಗಮನ ಸೆಳೆಯುತ್ತವೆ. ಕೆಲಸದ ಸ್ಥಳದಲ್ಲಿ ಪ್ರಶಂಸೆ ಮತ್ತು ಹೊಸ ಜವಾಬ್ದಾರಿಗಳು ದೊರೆಯಬಹುದು. ಪದೋನ್ನತಿ ಅಥವಾ ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ತಮ್ಮ ಪ್ರತಿಭೆಯನ್ನು ಧೈರ್ಯದಿಂದ ತೋರಿಸುವುದು ಉತ್ತಮ.

ಶುಭ ದಿನಗಳು: ಮಾರ್ಚ್ 1, 3, 8, 11, 14, 16, 23, 26, 28

ಕುದುರೆ ರಾಶಿ: ಸಾಮಾಜಿಕ ಮತ್ತು ವೃತ್ತಿ ಬೆಳವಣಿಗೆ

ಕುದುರೆ ರಾಶಿಯವರು ಉತ್ಸಾಹ ಮತ್ತು ಚುರುಕಿನ ಸ್ವಭಾವ ಹೊಂದಿರುತ್ತಾರೆ. ಈ ತಿಂಗಳಲ್ಲಿ ಅವರ ಸಾಮಾಜಿಕ ಸಂಪರ್ಕಗಳು ಮತ್ತು ವೃತ್ತಿ ಅವಕಾಶಗಳು ಹೆಚ್ಚಾಗಬಹುದು. ಹೊಸ ಯೋಜನೆಗಳಲ್ಲಿ ಭಾಗವಹಿಸುವ ಅವಕಾಶ ಸಿಗಬಹುದು. ಹೊಸ ಸ್ನೇಹಿತರು ಮತ್ತು ಸಂಪರ್ಕಗಳು ಬೆಳೆಯಬಹುದು. ತಕ್ಷಣ ನಿರ್ಧಾರ ತೆಗೆದುಕೊಳ್ಳುವುದು ಲಾಭಕರವಾಗಿರುತ್ತದೆ.

ಶುಭ ದಿನಗಳು: ಮಾರ್ಚ್ 1, 3, 16, 26, 28

ಸರ್ಪ ರಾಶಿ: ಪ್ರಭಾವ ಮತ್ತು ಯೋಜನೆ

ಸರ್ಪ ರಾಶಿಯವರಿಗೆ ಈ ತಿಂಗಳು ಪ್ರಭಾವ ಮತ್ತು ಭವಿಷ್ಯದ ಯೋಜನೆಗೆ ಉತ್ತಮ ಸಮಯವಾಗಿದೆ. ಅವರ ಆಲೋಚನೆಗಳಿಗೆ ಗೌರವ ಸಿಗಬಹುದು. ಹಣಕಾಸು ಮತ್ತು ವ್ಯವಹಾರ ಸಂಬಂಧಿತ ಅವಕಾಶಗಳು ಬರಬಹುದು. ಶಾಂತವಾಗಿ ಯೋಜನೆ ಮಾಡಿ ಮುಂದುವರಿದರೆ ಭವಿಷ್ಯದಲ್ಲಿ ಉತ್ತಮ ಫಲ ಸಿಗುತ್ತದೆ.

ಶುಭ ದಿನಗಳು: ಮಾರ್ಚ್ 1, 6, 18, 26, 30

ಈ ತಿಂಗಳ ಅದೃಷ್ಟ ಶಕ್ತಿಯನ್ನು ಹೇಗೆ ಬಳಸುವುದು?

ಈ ಮೇಲಿನ ಮೂರು ರಾಶಿಗಳಿಗೆ ಸಾಮಾನ್ಯವಾಗಿರುವ ಒಂದು ಸಂದೇಶ ಎಂದರೆ- ಧೈರ್ಯದಿಂದ ಮುಂದುವರಿಯಿರಿ. ಕೆಂಪು ಬಣ್ಣವನ್ನು ಬಳಸುವುದು ಉತ್ತಮ. ಹೊಸ ಜನರನ್ನು ಭೇಟಿ ಮಾಡಿ ಸಂಪರ್ಕ ಬೆಳೆಸುವುದು ಲಾಭಕರ. ನಿಮ್ಮ ಆಲೋಚನೆಗಳನ್ನು ಧೈರ್ಯದಿಂದ ಹಂಚಿಕೊಳ್ಳಬೇಕು. ವೃತ್ತಿ, ವೈಯಕ್ತಿಕ ಜೀವನ ಅಥವಾ ಸೃಜನಾತ್ಮಕ ಕೆಲಸಗಳಲ್ಲಿ ಮುಂದಾಗುವವರಿಗೆ ಈ ತಿಂಗಳು ಉತ್ತಮ ಫಲ ನೀಡುತ್ತದೆ.

ಯಾವ ರಾಶಿಗಳು ಹೆಚ್ಚು ಅದೃಷ್ಟಶಾಲಿ?

ಹುಲಿ, ಕುದುರೆ ಮತ್ತು ಸರ್ಪ ರಾಶಿಯವರು ಈ ತಿಂಗಳಲ್ಲಿ ಹೆಚ್ಚು ಅದೃಷ್ಟ ಮತ್ತು ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ. ಮಾರ್ಚ್ 8 ವಿಶೇಷ ದಿನ. ಅಂದು ಹುಲಿ ಶಕ್ತಿ ಅತ್ಯಂತ ಬಲವಾಗಿರುತ್ತದೆ. ಹೊಸ ಕೆಲಸ ಆರಂಭಿಸಲು ಅಥವಾ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಇದು ಅತ್ಯಂತ ಶುಭ ದಿನ ಎಂದು ಪರಿಗಣಿಸಲಾಗಿದೆ.

ಯಾವ ವರ್ಷಕ್ಕೆ ಯಾವ ರಾಶಿ?

ನೀವು ಯಾವ ವರ್ಷದಲ್ಲಿ ಜನಿಸಿದ್ದೀರೋ, ಅದಕ್ಕೆ ಹೊಂದುವ ಪ್ರಾಣಿಯೇ ನಿಮ್ಮ ಚೀನೀ ರಾಶಿಯಾಗಿರುತ್ತದೆ. ಈ ರಾಶಿಯ ಆಧಾರದಲ್ಲಿ ನಿಮ್ಮ ಸ್ವಭಾವ, ಅದೃಷ್ಟ ಮತ್ತು ಭವಿಷ್ಯದ ಬಗ್ಗೆ ಚೀನೀ ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಅದು ಈ ಕೆಳಗಿನಂತಿದೆ:

Rat (ಇಲಿ) 1972, 1984, 1996, 2008, 2020

Ox (ಎಮ್ಮೆ) 1973, 1985, 1997, 2009, 2021

Tiger (ಹುಲಿ) 1974, 1986, 1998, 2010, 2022

Rabbit (ಮೊಲ) 1975, 1987, 1999, 2011, 2023

Dragon (ಡ್ರಾಗನ್) 1976, 1988, 2000, 2012, 2024

Snake (ಹಾವು) 1977, 1989, 2001, 2013, 2025

Horse (ಕುದುರೆ) 1978, 1990, 2002, 2014, 2026

Goat (ಮೇಕೆ) 1979, 1991, 2003, 2015, 2027

Monkey (ಕೋತಿ) 1980, 1992, 2004, 2016, 2028

Rooster (ಕೋಳಿ) 1981, 1993, 2005, 2017, 2029

Dog (ನಾಯಿ) 1970, 1982, 1994, 2006, 2018, 2030

Pig (ಹಂದಿ) 1971, 1983, 1995, 2007, 2019, 2031