Asianet Suvarna News Asianet Suvarna News

Chanakya Niti: ಮಹಿಳೆಯರೇ ಸ್ಟ್ರಾಂಗು ಗುರು ಅಂತ ಹೇಳೋದು ಸುಮ್ಮನೇನಾ?

ಚಾಣಕ್ಯ ನಮಗೆ ಉಪಯುಕ್ತವಿರುವ ಅನೇಕ ಸಂಗತಿಗಳನ್ನು ಹೇಳಿದ್ದಾರೆ. ಚಾಣಕ್ಯ ನೀತಿಯಲ್ಲಿ ಮನುಷ್ಯರ ಸ್ವಭಾವದ ಬಗ್ಗೆಯೂ ಸಾಕಷ್ಟು ವಿಷ್ಯಗಳಿವೆ. ಚಾಣಕ್ಯ, ಮಹಿಳೆಯರ ಕುರಿತು ಕೆಲವೊಂದು ಆಸಕ್ತಿಯ ಸಂಗತಿ ಹೇಳಿದ್ದಾರೆ. 
 

Chanakya Niti Says Women Are Ahead Of Men I in courage and intelligent
Author
Bangalore, First Published Feb 4, 2022, 4:55 PM IST

ಆಚಾರ್ಯ ಚಾಣಕ್ಯ(Chanakya )ರ ನೀತಿ(Niti )ಗಳು ಇಂದಿನ ಯುಗದಲ್ಲೂ ಉಪಯುಕ್ತ. ಚಾಣಕ್ಯ ನಮ್ಮ ಜೀವನಕ್ಕೆ ಬೇಕಾದ ಅನೇಕ ವಿಷ್ಯಗಳನ್ನು ಹೇಳಿದ್ದಾರೆ. ಕಲಿಯುಗದಲ್ಲಿಯೂ ಅನೇಕರು ಚಾಣಕ್ಯನ ಆದರ್ಶಗಳನ್ನು ಪಾಲಿಸುತ್ತಾರೆ. ಚಾಣಕ್ಯ ನೀತಿಯಂತೆ ನಡೆದರೆ ಜೀವನ(Life)ದಲ್ಲಿ ಮುನ್ನಡೆ ಸಾಧಿಸಬಹುದೆಂದು ಅನೇಕರು ನಂಬಿದ್ದಾರೆ. ಇದೇ ಕಾರಣಕ್ಕೆ ಅದನ್ನು ಅನುಸರಿಸುತ್ತಿದ್ದಾರೆ. ಆಚಾರ್ಯ ಚಾಣಕ್ಯರನ್ನು ವಿಷ್ಣು ಗುಪ್ತ  ಕೌಟಿಲ್ಯ ಎಂದು ಕರೆಯಲಾಗುತ್ತದೆ. ಆರ್ಥಿಕ ವೃದ್ಧಿ (Economic Growth), ಮನೆ(Home), ಮನಸ್ಸು(mind), ದಾನ (Donationa) ಹೀಗೆ ಚಾಣಕ್ಯ ಅನೇಕ ಸಂಗತಿಗಳನ್ನು ಹೇಳಿದ್ದಾರೆ. ಮಹಿಳೆ (Women)ಯರ ಬಗ್ಗೆಯೂ ಅನೇಕ ವಿಷ್ಯಗಳು ಚಾಣಕ್ಯ ನೀತಿಯಲ್ಲಿವೆ. ಮಹಿಳೆಯರು ಹೇಗಿರಬೇಕು ಎಂಬುದರಿಂದ ಹಿಡಿದು, ಯಾವ ಮಹಿಳೆಯರು ಪುರುಷ (Male)ರಿಗಿಂತ ಚುರುಕಾಗಿರುತ್ತಾರೆ,ವೃತ್ತಿಯಲ್ಲಿ ಮುಂದಿರುತ್ತಾರೆ ಎಂಬುದನ್ನೂ ಅವರು ಹೇಳಿದ್ದಾರೆ. ಇಂದು ಪುರುಷರಿಗಿಂತ ಮಹಿಳೆಯರು ಯಾರು ವಿಷ್ಯದಲ್ಲಿ ಮುಂದಿರುತ್ತಾರೆ ಎಂಬುದನ್ನು ನಾವು ಹೇಳ್ತೆವೆ. 
ಚಾಣಕ್ಯ ``ಸ್ತ್ರೀಣಾಂ ದ್ವಿಗುಣ ಆಹಾರೋ ಲಜ್ಜಾ ಚಾಪಿ ಚತುರ್ಗುಣಾ | ಸಾಹಸಂ ಷಡ್ಗುಣಂ ಚೈವ ಕಾಮಶ್ಚಾಷ್ಟಗುಣಃ ಸ್ಮೃತಃ’’ ಶ್ಲೋಕದ ಮೂಲಕ ಮಹಿಳೆಯರು ಯಾವುದ್ರಲ್ಲಿ ಮುಂದಿರುತ್ತಾರೆಂಬ ಸಂಗತಿಯನ್ನು ಹೇಳಿದ್ದಾರೆ.

ಮಹಿಳೆಯರು ಪುರುಷರಿಗಿಂತ ಯಾವ ಗುಣದಲ್ಲಿ ಮುಂದಿದ್ದಾರೆ? (Women Better Than Men) :
ಹಸಿವು (Hungry): ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಶಕ್ತಿ ಬೇಕು. ಈ ವಿಷ್ಯವನ್ನು ಎಲ್ಲರೂ ಒಪ್ಪಲೇಬೇಕು. ಯಾಕೆಂದ್ರೆ ಮಹಿಳೆಯರು ಪುರುಷರಿಗಿಂತ ಹೆಚ್ಚು ಕೆಲಸ(Work)ವನ್ನು ಮಾಡ್ತಾರೆ. ಹಾಗಾಗಿ ಮಹಿಳೆಯರು ಹೆಚ್ಚು ಸೇವನೆ ಮಾಡಬೇಕಾಗುತ್ತದೆ. ಮಹಿಳೆಯರು ಪುರುಷರಿಗಿಂತ ಎರಡು ಪಟ್ಟು ಹಸಿವನ್ನು ಅನುಭವಿಸುತ್ತಾರೆ ಎಂದು ಚಾಣಕ್ಯ ತಮ್ಮ ಶ್ಲೋಕದ ಮೂಲಕ ವಿವರಿಸಿದ್ದಾರೆ.

ನಿಮದೆ ಟ್ರಾವೆಲಿಂಗ್ ಹುಚ್ಚಿದ್ಯಾ? ಈ ರಾಶಿಯವರ ಸ್ನೇಹ ಬೆಳೆಸಬಹುದು!

ಬುದ್ಧಿವಂತಿಕೆ (Smart) : ಬುದ್ಧಿಮತ್ತೆಯಲ್ಲಿ ಮಹಿಳೆಯರು ಪುರುಷರಿಗಿಂತ ಬಹಳ ಮುಂದಿದ್ದಾರೆ. ಮಹಿಳೆಯರಿಗೆ ಹೆಚ್ಚು ಬುದ್ಧಿವಂತಿಕೆ ಇರುತ್ತದೆ. ಪುರುಷರು ಕೆಲವೊಮ್ಮೆ ಆತುರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ತಾರೆ. ಆ ನಿರ್ಧಾರಗಳು ಕೆಲವೊಮ್ಮೆ ತಪ್ಪಾಗಿರುತ್ತವೆ. ಆದರೆ ಮಹಿಳೆಯರು ಬುದ್ಧಿವಂತಿಕೆಯಿಂದ ಕೆಲವು ಕೆಲಸಗಳನ್ನು ಮಾಡುತ್ತಾರೆ. ಮುಂದೇನಾಗಬಹುದು ಎಂಬುದನ್ನು ಮಹಿಳೆಯರು ಆಲೋಚನೆ ಮಾಡ್ತಾರೆ. ಶಾಂತ(peaceful)ವಾಗಿ ಆಲೋಚನೆ ಮಾಡಿ ನಂತ್ರ ನಿರ್ಧಾರ ತೆಗೆದುಕೊಳ್ತಾರೆ. ಬರಿ ಒಂದೇ ಕೋನದಲ್ಲಿ ಅವರು ಆಲೋಚನೆ ಮಾಡುವುದಿಲ್ಲ. ನಾಲ್ಕೈದು ಕೋನದಲ್ಲಿ ಆಲೋಚನೆ ಮಾಡಿ ನಂತ್ರ ತೀರ್ಮಾನ ತೆಗೆದುಕೊಳ್ತಾರೆ. ಹಾಗಾಗಿ ಅನೇಕ ಬಾರಿ ಪುರುಷರ ತೀರ್ಮಾನ(decision)ಕ್ಕಿಂತ ಮಹಿಳೆಯರ ತೀರ್ಮಾನ ಸರಿಯಾಗಿರುತ್ತದೆ. ಶ್ಲೋಕದಲ್ಲಿ ಮಹಿಳೆಯರು ಬುದ್ಧಿವಂತರು ಎಂಬುದನ್ನೂ ಚಾಣಕ್ಯ ಹೇಳಿದ್ದಾರೆ.

ಧೈರ್ಯ (Courage) : ಸ್ತ್ರೀಯರು ದೈಹಿಕ ಶಕ್ತಿಯಲ್ಲಿ ಪುರುಷರಿಗಿಂತ ದುರ್ಬಲ(Weak)ರಾಗಿರುತ್ತಾರೆ ಎಂಬುದು ಸತ್ಯ. ಆದರೆ ಪುರುಷರಿಗಿಂತ ಮಹಿಳೆಯರು ಅದಮ್ಯ ಧೈರ್ಯವನ್ನು ಹೊಂದಿರುತ್ತಾರೆ ಎಂದು ಚಾಣಕ್ಯ ಶ್ಲೋಕದ ಮೂಲಕ ಹೇಳಿದ್ದಾರೆ. ಆತ್ಮವಿಶ್ವಾಸ (Confidence) ಅನೇಕ ಕೆಲಸಗಳಿಗೆ ಅಗತ್ಯವಾಗುತ್ತದೆ. ಹಾಗೆ ಧೈರ್ಯದಿಂದ ಮುನ್ನುಗ್ಗಬೇಕಾಗುತ್ತದೆ. ದೈಹಿಕ ಶಕ್ತಿ ಇಲ್ಲದೆ ಹೋದ್ರೂ ಮಹಿಳೆಯರು ತಮ್ಮ ಧೈರ್ಯದ ಬಲದ ಮೇಲೆ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಸಿದ್ಧರಾಗುತ್ತಾರೆ. ಮಹಿಳೆಯರಿಗೆ ಪುರುಷರಿಗಿಂತ 6 ಪಟ್ಟು ಹೆಚ್ಚು ಧೈರ್ಯವಿರುತ್ತದೆ ಎಂದು ಚಾಣಕ್ಯ ಶ್ಲೋಕದಲ್ಲಿ ಹೇಳುತ್ತಾರೆ.

Lord Hanuman: ಸೂರ್ಯ ನಮಸ್ಕಾರ ಮೊದಲು ಕಂಡು ಹಿಡಿದದ್ದೇ ಆಂಜನೇಯ! ಈತನ ಕುರಿತ ಆಸಕ್ತಿಕರ ಸಂಗತಿಗಳಿಲ್ಲಿವೆ..

ಲೈಂಗಿಕತೆ (Sex): ಲೈಂಗಿಕ ವಿಷ್ಯ ಬಂದಾಗ ಎಲ್ಲರೂ ಬೊಟ್ಟು ಮಾಡುವುದು ಪುರುಷರನ್ನು. ಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ವಿಷ್ಯವೆಂದ್ರೆ ಪುರುಷರು ಸೆಕ್ಸ್ ನಲ್ಲಿ ಹೆಚ್ಚು ಆಸಕ್ತಿ (Interest) ಹೊಂದಿರುತ್ತಾರೆಂದು. ಆದ್ರೆ  ಚಾಣಕ್ಯ ನೀತಿಯಲ್ಲಿ ಇದ್ರ ಬಗ್ಗೆ ಭಿನ್ನವಾಗಿ ಹೇಳಲಾಗಿದೆ. ಚಾಣಕ್ಯ ಹೇಳಿರುವ ಶ್ಲೋಕದ ಪ್ರಕಾರ, ಮಹಿಳೆಯರು ಪುರುಷರಿಗಿಂತ ಎಂಟು ಪಟ್ಟು ಹೆಚ್ಚು ಲೈಂಗಿಕತೆಯನ್ನು ಹೊಂದಿರುತ್ತಾರಂತೆ. ಮಹಿಳೆಯರು ಈ ವಿಷ್ಯದಲ್ಲಿ ನಾಚಿಕೊಳ್ಳುವುದು ಹೆಚ್ಚು. ಹಾಗಾಗಿಯೇ ಅವರು ಇಂಥ ವಿಷ್ಯವನ್ನು ಮುಚ್ಚಿಡುವ ಪ್ರಯತ್ನ ನಡೆಸುತ್ತಾರೆಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. 

Follow Us:
Download App:
  • android
  • ios