Asianet Suvarna News Asianet Suvarna News

ನಿಮಗೆ ಟ್ರಾವೆಲಿಂಗ್ ಹುಚ್ಚಿದ್ಯಾ? ಈ ರಾಶಿಯವರ ಸ್ನೇಹ ಬೆಳೆಸಬಹುದು!

ಮೇಷ ರಾಶಿಯಿಂದ ಹಿಡಿದು ಮೀನ ರಾಶಿಯ ತನಕ ಹೆಚ್ಚಿನ ಪ್ರಯಾಣ ಮಾಡಲು ಬಯಸುವ ಹಾಗೂ ತಮ್ಮ ಸ್ನೇಹಿತರಿಗಾಗಿ ಒಳ್ಳೊಳ್ಳೆಯ ಅಡ್ವೆಂಚರಸ್‌ ಟ್ರಿಪ್‌ ಪ್ಲಾನ್‌ ಮಾಡುವ ಕೆಲವು ವಿಶೇಷ ರಾಶಿಗಳ ಪಟ್ಟಿ ಇಲ್ಲಿದೆ. ಇಮ್ಮ ರಾಶಿಯೂ ಕೂಡ ಇದರಲ್ಲಿದೆಯಾ?

Zodiac signs like Aries to Pisces love towards adventurous trips
Author
Bangalore, First Published Feb 4, 2022, 2:15 PM IST

ಈಗ ದೇಶದಲ್ಲಿ ಲಾಕ್‌ಡೌನ್ (Lockdown)ನಿಂದ ಕೆಲವು ರಿಯಾಯಿತಿಯನ್ನು ಕೊಡುತ್ತಾ ಬರುತ್ತಿದ್ದಾರೆ. ಅಂದ ಮೇಲೆ ಹೆಚ್ಚಿನವರಿಗೆ ಇದು ಪ್ರಯಾಣ ಹೋಗುವ ಸಮಯ. ಹೀಗೆ ಪ್ರಯಾಣ ಹೋಗಬೇಕು ಎಂದರೆ ಒಮ್ಮಿಂದೊಮ್ಮೆಲೆ ಹೊರಟು ಬಿಡಲು ಸಾಧ್ಯವಿಲ್ಲ, ಅದಕ್ಕಾಗಿ ಒಂದು ಪ್ಲಾನ್ (Plan) ಮಾಡಿಕೊಳ್ಳಬೇಕು. ಅದಕ್ಕಾಗಿ ಈ ರಾಶಿಯವರು ಬೆಸ್ಟ್ ಪ್ಲಾನ್ ಗಳನ್ನು ಮಾಡಿ ಹೆಚ್ಚಿನ ಮನೋರಂಜನೆ ನೀಡುವ ಪ್ರದೇಶಗಳಿಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ.

ಮಿಥುನ ರಾಶಿ (Gemini)
ಟ್ರಾವೆಲಿಂಗ್ ಹಾಗೂ ಮಿಥುನ ರಾಶಿಯವರು ಅವಳಿ-ಜವಳಿ (Twin) ಅನ್ನುವಷ್ಟರ ಮಟ್ಟಿಗೆ ಟ್ರಿಪ್ ಇಷ್ಟಪಡುತ್ತಾರೆ. ಹೊಸ ಹೊಸ ಪ್ರದೇಶಗಳಿಗೆ ಭೇಟಿ ನೀಡುವುದು ಅಲ್ಲಿರುವ ಜನಗಳಿಗೆ ಬೆರೆಯುವುದು ಅಲ್ಲಿನ ವಿಶೇಷ ಆಹಾರ ಪದ್ಧತಿಗೆ, ಉಡುಗೆ-ತೊಡುಗೆಗಳು ಹೊಂದಿಕೊಳ್ಳುವುದು ಅಂದರೆ ಇವರಿಗೆ ಎಲ್ಲಿಲ್ಲದ ಪ್ರೀತಿ. ಈ ರಾಶಿಯವರು ಯಾವುದೇ ಪ್ರದೇಶಕ್ಕೆ ಆದರೂ ಜೀವನದಲ್ಲಿ ಒಮ್ಮೆ ಭೇಟಿ ಕೊಡಲೇಬೇಕು ಎಂದು ಬಯಸುತ್ತಾರೆ, ಇವರ ಈ ಗುಣ ಈ ರಾಶಿಯವರು ಹೆಚ್ಚಿನ ಸಾಹಸ ಯುತವಾದ ಪ್ರಯಾಣವನ್ನು ಮಾಡುವಂತೆ ಉತ್ತೇಜನ ನೀಡುತ್ತದೆ.

Marriage Horoscope: ಈ ಐದು ರಾಶಿಯವರಿಗೆ ಹತ್ತಿರದಲ್ಲಿದೆ ವಿವಾಹ ಯೋಗ
 

ತುಲಾ ರಾಶಿ (Libra)
ತುಲಾ ರಾಶಿಯವರಿಗೆ ಅಡ್ವೆಂಚರಸ್ ಆಗಿರುವ ಟ್ರಿಪ್‌ಗಳನ್ನು ಆಯೋಜಿಸುವುದು ಎಂದರೆ ಹಾಗೂ ಅದರಲ್ಲಿ ಪಾಲ್ಗೊಳ್ಳುವುದು (Participate) ಎಂದರೆ ಬಹಳ ಅಚ್ಚುಮೆಚ್ಚಿನ ಕೆಲಸ. ಎಷ್ಟೇ ಸುಸ್ತು ಅಥವಾ ಬಿಡುವಿಲ್ಲದ ಜೀವನದ (Busy Life) ನಡುವೆಯಾದರೂ ಪ್ರಯಾಣ ಹೋಗುವ ವಿಚಾರ ಅಥವಾ ಪ್ರಸ್ತಾಪ ಮುಂದೆ ಬಂದರೆ, ಅದನ್ನು ಇಂದಿಗೂ ಇವರು ನಿರಾಕರಿಸುವ ಸಾಧ್ಯತೆ ಇರುವುದಿಲ್ಲ. ಸಾಹಸ ಯುದ್ಧವಾದ ಪ್ರಯಾಣ ಮಾಡುವುದು ಎಂದರೆ ಇವರಿಗೋ ಎಲ್ಲಿಲ್ಲದ ಉತ್ಸಾಹ. ತುಂಬಾ ಒಳಗಿನ ಪ್ರದೇಶ ಅಂದರೆ ಹಳ್ಳಿಗಳಂಥ ಜಾಗಗಳು ಅಥವಾ ಕಾಡುಗಳಿಗೆ ಭೇಟಿ ನೀಡಿ ಅಲ್ಲಿ ಫೋಟೋಗ್ರಫಿ ಮಾಡಿ ಸುಂದರ ದೃಶ್ಯಗಳನ್ನು ಸೆರೆ ಹಿಡಿಯುವುದರಲ್ಲಿ ಇವರು ನೈಪುಣ್ಯತೆ ಹೊಂದಿದ್ದಾರೆ.

ಧನು ರಾಶಿ (Sagittarius)
ಇವರು ಪ್ರಯಾಣ ಹೋಗುವ ರೀತಿಯೇ ವಿಭಿನ್ನ. ಪ್ರಯಾಣ ಹೋಗುವ ಹಲವು ದಿನಗಳ ಮುಂಚೆ ಅದಕ್ಕಾಗಿ ಸಿದ್ಧತೆ ನಡೆಸಿರುತ್ತಾರೆ ಎಲ್ಲಿಂದ ಎಲ್ಲಿಯ ತನಕ ಪ್ರಯಾಣ ಬೆಳೆಸಬೇಕು ಎಂಬ ಯೋಜನೆಯನ್ನು ಮುಂಚಿತವಾಗಿಯೇ ರೂಪಿಸಿ ಕೊಂಡಿರುತ್ತಾರೆ. ಆದರೆ ಧನು ರಾಶಿಯವರು ಸ್ವಲ್ಪ ವಿಭಿನ್ನ ಇವರು ಯಾವುದೇ ರೀತಿಯ ಯೋಜನೆ ಇಲ್ಲದೆ ತಮಗೆ ಎಲ್ಲಿಗೆ ಹೋಗಬೇಕು ಎಂದು ಅನಿಸುತ್ತದೆಯೋ, ಅಲ್ಲಿಗೆ ಒಮ್ಮಿಂದೊಮ್ಮೆಲೇ (Sudden) ಹೊರಟು ಬಿಡುತ್ತಾರೆ. ಈ ಧನು ರಾಶಿಯವರಿಗೆ ಇವರು ಯಾವುದೇ ರೀತಿಯ ಅಡ್ಜಸ್ಟ್ಮೆಂಟ್ ಗಳಿಗೂ ಸಿದ್ಧರಾಗಿರುತ್ತಾರೆ. ಹೆಚ್ಚು ತಾಳ್ಮೆ ಹೊಂದಿರುವ ಇವರು ಪ್ರತಿಯೊಂದು ಪ್ರದೇಶದಲ್ಲಿಯೂ ಆ ಸ್ಥಳದ ಪೂರ್ತಿ ಅನುಭೂತಿಯನ್ನು ಪಡೆಯಲು ಇಚ್ಚಿಸುತ್ತಾರೆ.
Personality Traits: ಶುಕ್ರವಾರ ಜನಿಸಿದವರ ವ್ಯಕ್ತಿತ್ವವೇ ಆಕರ್ಷಕ

ಕುಂಭ ರಾಶಿ (Aquarius)
ಇವರು ಕೂಡ ಬಹಳ ಅಡ್ವೆಂಚರಸ್ ಆಗಿರುವ ಕೆಲಸ ಮಾಡುವುದು ಹಾಗೂ ಟ್ರಿಪ್ ಹೋಗುವುದು ಎರಡರಲ್ಲಿಯೂ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಇವರಿಗೆ ಯಾವುದೇ ಒಂದು ಸ್ಥಳದ ಬಗ್ಗೆ ಹೊಸ ಹೊಸ (New) ಹೊಸ ವಿಚಾರಗಳನ್ನು ತಿಳಿದುಕೊಳ್ಳುವುದು ಹಾಗೂ ಅವರ ರೀತಿ ನೀತಿಗಳಲ್ಲಿ ಇವರು ಕೂಡ ಭಾಗಿಯಾಗುವುದು ಅಂದರೆ ಬಹಳ ಇಷ್ಟ. ಕುಂಭ ರಾಶಿಯವರ ವಿಶೇಷತೆ (Speciality) ಏನೆಂದರೆ ಇವರು ಹೆಚ್ಚು ಪ್ರಯಾಣ ಬೆಳೆಸುವ ಜೊತೆಗೆ ಹೊಸ ಪ್ರದೇಶಗಳಲ್ಲಿ ಸ್ವಯಂ ಆಸಕ್ತಿಯಿಂದ ಕೆಲಸಗಳನ್ನು ಅಥವಾ ಜನರಿಗೆ ಸೇವೆಗಳನ್ನು ಕೂಡ ಮಾಡಲು ಬಯಸುತ್ತಾರೆ.

ಎಲ್ಲ ರಾಶಿಗಳ ಜನರು ಟ್ರಾವೆಲಿಂಗ್ (Travelling) ಎಂದರೆ ಇನ್ನುಳಿದ ರಾಶಿಯವರಿಗೆ ಇಂತಹ ಒಂದು ಹೆಜ್ಜೆ ಮುಂದೆ ನಿಲ್ಲುತ್ತಾರೆ ಇವರಿಗೆ ಹೊಸ ಹೊಸ ಜಾಗಗಳನ್ನು ನೋಡುವುದು ಹೊಸ ಹೊಸ ಜನರನ್ನು ಪರಿಚಯಿಸಿಕೊಳ್ಳುವುದು ಹೊಸ ರೀತಿಯ ವೈಶಿಷ್ಟತೆಯನ್ನು ಕಣ್ತುಂಬಿಕೊಳ್ಳುವುದು ಎಂದರೆ ಹೆಚ್ಚಿನ ಆಸಕ್ತಿ ಇದರಲ್ಲಿ ನಿಮ್ಮ ರಾಶಿಯ ಇದೆ ಎಂದರೆ ನೀವು ನಿಮ್ಮ ಸ್ವತಹ ಅನುಭವವನ್ನು ನೆನಪಿಸಿಕೊಳ್ಳಬಹುದು.

Follow Us:
Download App:
  • android
  • ios