ದುಷ್ಟ ಜಂತು ಎಂದು ನೀವು ಹಾವನ್ನು ಭಾವಿಸಿರಬಹುದಾದರೂ ಚಾಣಕ್ಯ ಹಾಗೆ ಭಾವಿಸಿಲ್ಲ. ಚಾಣಕ್ಯ ನೀತಿಯಲ್ಲಿ ಹಾವಿನ ಒಳ್ಳೆಯ ಗುಣಗಳನ್ನು ವಿವರಿಸಲಾಗಿದೆ. ಅದರಿಂದ ನೀವು ಈ ಕೆಳಗಿನ ಗುಣಗಳನ್ನು ಕಲಿತು ಅಳವಡಿಸಿಕೊಳ್ಳಬಹುದಂತೆ. 

ಸಾಮಾನ್ಯವಾಗಿ ಹಾವನ್ನು ಸಮಯ ಕಾದು ಕುಳಿತು ದಾಳಿ ಮಾಡುವ, ವಿಷ ಇಂಜೆಕ್ಟ್‌ ಮಾಡಿ ಸಾಯಿಸುವ ದುಷ್ಟ ಪ್ರವೃತ್ತಿಯ ವ್ಯಕ್ತಿಗಳಿಗೆ ಹೋಲಿಸುತ್ತೇವೆ. ʼಅವನು ಹಾವಿನ ಹಾಗಿರುವವನುʼ ಎಂದರೆ ಅವನಿಂದ ದೂರವಿರಿ ಎಂದರ್ಥ. ಹಾವಿನ ದ್ವೇಷ ಹನ್ನೆರಡು ವರುಷʼ ಎಂಬ ಗಾದೆಯೇ ಇದೆ. ಆದರೆ, ಆಚಾರ್ಯ ಚಾಣಕ್ಯರು, ಹಾವಿನಿಂದಲೂ ಮನುಷ್ಯ ಕಲಿಯಬಹುದಾದ ಗುಣಗಳಿವೆ ಎನ್ನುತ್ತಾರೆ. ಚಾಣಕ್ಯ ನೀತಿಯಲ್ಲಿ ಹಾವಿನ ಹೋಲಿಕೆಯ ಮೂಲಕ ಹಲವು ವಿಷಯಗಳನ್ನು ವಿವರಿಸಲಾಗಿದೆ. ಹಾವಿನ ಹಾಗೆ ಅಪಾಯಕಾರಿ ವ್ಯಕ್ತಿಗಳನ್ನು ಗುರುತಿಸಿ ಅವರಿಂದ ದೂರವಿರಬೇಕೆಂದು ಹೇಳಲಾಗಿದೆ. ಅಲ್ಲದೆ, ಹಾವಿನಂತೆ ಕೆಲವು ಗುಣಗಳನ್ನು ಅಳವಡಿಸಿಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸು ಸಾಧಿಸಬಹುದೆಂದು ಸಹ ಹೇಳಲಾಗಿದೆ.

ವಿಷವಿರಲಿ, ಆದರೆ ಕಚ್ಚಬೇಡಿ

ನಿಮ್ಮಲ್ಲಿ ಶತ್ರುಗಳನ್ನು ನಾಶ ಮಾಡುವಷ್ಟು ಶಕ್ತಿ ಇರಲಿ. ಶಕ್ತಿ ಯಾವಾಗಲೂ ಸಂಗ್ರಹಿಸಿ ಇಟ್ಟುಕೊಂಡಿರಿ. ಆದರೆ ಯಾವಾಗಲೂ ಅದನ್ನು ಉಪಯೋಗಿಸಬೇಕು ಎಂದರ್ಥವಲ್ಲ. ಹಾವು ಯಾವತ್ತೂ ಅನಿವಾರ್ಯವಾದರೆ ಮಾತ್ರ ಕಚ್ಚುತ್ತದೆ. ಇಲ್ಲವಾದರೆ ಅಪಾಯವಿರುವ ಸ್ಥಳದಿಂದ ಓಡಿಹೋಗಲು ಪ್ರಯತ್ನಿಸುತ್ತದೆ.

ಸ್ವತ್ತುಗಳನ್ನು ರಕ್ಷಿಸಿಕೊಳ್ಳಿ

ಹಾವುಗಳು ನಿಧಿಯನ್ನು ಕಾಯುತ್ತವೆ ಎಂಬ ದಂತಕತೆಗಳು ಇವೆ. ಇವುಗಳಿಗೆ ಆಧಾರವೂ ಸಿಗುತ್ತದೆ. ನೀವೂ ಹಾಗೇ ನಿಮ್ಮ ಬೆಲೆಬಾಳುವ ಸ್ವತ್ತುಗಳನ್ನು ಕಾಯ್ದುಕೊಂಡಿರಬೇಕು. ಇಲ್ಲವಾದರೆ ಕಳ್ಳರು ದೋಚುತ್ತಾರೆ.

ಕೂಲ್‌ ಕೂಲ್‌

ಹಾವುಗಳು ಶೀತರಕ್ತ ಪ್ರಾಣಿಗಳು. ತಾವು ಇದ್ದೇವೆಂದು ತೋರಿಸಿಕೊಳ್ಳುವುದು ಅವುಗಳ ಸ್ವಭಾವ ಅಲ್ಲ. ಎಲ್ಲೋ ಒಂದು ಮೂಲೆಯಲ್ಲಿ ಸುಮ್ಮನೆ ಅವುಗಳ ಪಾಡಿಗೆ, ಇತರರಿಗೆ ತೊಂದರೆ ಕೊಡದೆ ಇರುವುದು ಎಂದರೆ ಅವುಗಳಿಗೆ ಪ್ರಿಯ. ನೀವೂ ಹಾಗೇ ಇರಿ.

ಕಚ್ಚುವ ಮೊದಲು ಎಚ್ಚರಿಸಿ

ಮನುಷ್ಯನೋ ಇತರ ಪ್ರಾಣಿಗಳೋ ತನಗೆ ಅಪಾಯ ಮಾಡಲು ಬರುತ್ತಿವೆ ಎಂದು ಗೊತ್ತಾದರೆ ಹಾವು ಮೊದಲು ಹೆಡೆ ತೆರೆದು ಭುಸ್‌ ಎಂದು ಭುಸುಗುಟ್ಟುತ್ತದೆ. ಈ ಭುಸುಗುಟ್ಟುವಕೆಯಲ್ಲಿ ಎಚ್ಚರಿಕೆ ಇರುತ್ತದೆ. ನನ್ನಿಂದ ದೂರವಿರು ಎಂಬ ಸಂಕೇತ ಅದು. ನೀವೂ ಹಾಗೇ ನಿಮಗೆ ಅಪಾಯ ಮಾಡಲು ಬರುವವರಿಗೆ ಮೊದಲು ಎಚ್ಚರಿಸಿ.

ಅಪಾಯಕಾರಿ ವ್ಯಕ್ತಿಗಳನ್ನು ಗುರುತಿಸಿ

ಚಾಣಕ್ಯರು ವಿಷಕಾರಿ ಹಾವಿಗಿಂತಲೂ ಅಪಾಯಕಾರಿ ವ್ಯಕ್ತಿಗಳ ಬಗ್ಗೆ ಎಚ್ಚರಿಸಿದ್ದಾರೆ. ಇಂತಹ ವ್ಯಕ್ತಿಗಳ ಮಾತುಗಳು ಮತ್ತು ನಡವಳಿಕೆಗಳು ಹಾನಿಕಾರಕವಾಗಿರುತ್ತವೆ. ಹಾವಿನಂತೆ ಅಪಾಯಕಾರಿ ವ್ಯಕ್ತಿಗಳನ್ನು ಗುರುತಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಮತ್ತು ಅವರಿಂದ ದೂರವಿರಬೇಕು ಎಂದು ಚಾಣಕ್ಯ ಹೇಳುತ್ತಾರೆ.

ಗುಣಗಳನ್ನು ಅಳವಡಿಸಿಕೊಳ್ಳುವುದು

ಹಾವಿನಿಂದ ಕೆಲವು ಗುಣಗಳನ್ನು ಅಳವಡಿಸಿಕೊಳ್ಳಬಹುದು, ಉದಾಹರಣೆಗೆ, ಎಚ್ಚರಿಕೆ, ಧೈರ್ಯ ಮತ್ತು ಸಮಯಪ್ರಜ್ಞೆ. ಈ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಸಾಧಿಸಬಹುದು. ಹಾವು ಸದಾ ತನ್ನ ಸುತ್ತಲಿನ ಪರಿಸರಕ್ಕೆ ಎಚ್ಚರವಾಗಿರುತ್ತದೆ. ಯಾವುದೇ ಪ್ರಾಣಿಯಿಂದ ಬೆದರಿಕೆ ಉಂಟಾಗದಂತೆ ಸುರುಳಿ ಸುತ್ತಿ ತನ್ನನ್ನು ಅಡಗಿಸಿಕೊಳ್ಳುತ್ತದೆ. ದೊಡ್ಡ ಪ್ರಾಣಿಯಿಂದ ಅಪಾಯ ಇದೆ ಎಂದು ಗೊತ್ತಾದರೆ ಥಟ್ಟನೆ ಅಲ್ಲಿಂದ ಪರಾರಿಯಾಗಿ ಬಿಲ ಸೇರಿಕೊಳ್ಳುತ್ತದೆ.

ಅವಶ್ಯಕತೆ

ಸಂಗಾತಿಯ ಜೊತೆಗೆ ಮಿಲನದ ಸಮಯದಲ್ಲಿ, ಆಹಾರ ಸೇವಿಸುವಾಗ, ನಿದ್ರೆಯಿಂದ ಈಗ ತಾನೆ ಎಚ್ಚರವಾದ ಮತ್ತು ಗಾಯಗೊಂಡ ಹಾವನ್ನು ಕೆಣಕಬಾರದು, ಏಕೆಂದರೆ ಅದು ಅಪಾಯಕಾರಿ. ಇದು ಮನುಷ್ಯರಿಗೂ ಅನ್ವಯ ಎಂದು ಗೊತ್ತಿರಬೇಕು. ಅಂಥ ಹೊತ್ತಿನಲ್ಲಿ ಹಾವು ಹೇಗೆ ವರ್ತಿಸುತ್ತದೆ ಮತ್ತು ಮನುಷ್ಯ ಹೇಗೆ ವರ್ತಿಸುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ.

Debt-Free Temples: ಸಾಲದ ಶೂಲದಲ್ಲಿ ಸಿಕ್ಕಿದ್ದರೆ ಈ ದೇವಸ್ಥಾನಕ್ಕೆ ವಿಸಿಟ್ ಮಾಡಿ, ರಿಲ್ಯಾಕ್ಸ್ ಆಗುತ್ತೆ ನೋಡಿ

ಸ್ನೇಹ ಸಾಧ್ಯವಿಲ್ಲ

ಚಾಣಕ್ಯರು ಒಂದೇ ರೀತಿಯ ಮನಸ್ಥಿತಿ ಇರುವವರ ಜೊತೆ ಸ್ನೇಹ ಬೆಳೆಸಬೇಕೆಂದು ಹೇಳುತ್ತಾರೆ. ಹಾವು ಮತ್ತು ಹಾವಿನಂತಹ ಇತರ ಪ್ರಾಣಿಗಳು ಸ್ನೇಹಿತರಾಗಲು ಸಾಧ್ಯವಿಲ್ಲ, ಹಾಗೆಯೇ ನಿಮ್ಮ ಮನಸ್ಥಿತಿಗೆ ಹೊಂದಿಕೆಯಾಗದವರೊಂದಿಗೆ ಸ್ನೇಹ ಮಾಡಬಾರದು. ಹಾವುಗಳು ಶೀತರಕ್ತ ಪ್ರಾಣಿಗಳು. ಮನುಷ್ಯರಲ್ಲಿಯೂ ಇಂಥ ಭಾವನೆಗಳೇ ಇಲ್ಲದ ವ್ಯಕ್ತಿಗಳಿರುತ್ತಾರೆ. ಅವರೊಂದಿಗೆ ಹುಷಾರಾಗಿರಬೇಕು. ಇವರು ಪಾಪಪ್ರಜ್ಷೆಯೇ ಇಲ್ಲದೆ ಅಪರಾಧ ಎಸಗಬಲ್ಲರು.

ಈ 3 ರಾಶಿಯವರು ಅದೃಷ್ಟವಂತರು, ನಾಳೆಯಿಂದ ಜುಲೈ ಕೊನೆವರೆಗೂ ರಾಜಯೋಗ, ಕೋಟ್ಯಾಧಿಪತಿ ಭಾಗ್ಯ