Chanakya Niti: ಈ ಕೆಲಸದ ನಂತರ ಸ್ನಾನ ಮಾಡಲೇಬೇಕು ಅನ್ನುತ್ತಾರೆ ಆಚಾರ್ಯ ಚಾಣಕ್ಯ!
ಆಚಾರ್ಯ ಚಾಣಕ್ಯರು ದಿನಚರಿಯಲ್ಲಿ ಸ್ನಾನದ ಮಹತ್ವವನ್ನು ವಿವರಿಸಿದ್ದಾರೆ. ಕೆಲವು ಕೆಲಸಗಳ ನಂತರ ತಕ್ಷಣ ಸ್ನಾನ ಮಾಡಬೇಕೆಂದು ಅವರು ಹೇಳುತ್ತಾರೆ, ಇಲ್ಲದಿದ್ದರೆ ಅಶುಭ ಫಲಿತಾಂಶಗಳು ಉಂಟಾಗಬಹುದು.
ಆಚಾರ್ಯ ಚಾಣಕ್ಯರನ್ನು ಭಾರತೀಯ ರಾಜಕಾರಣದ ಮತ್ತು ಅರ್ಥಶಾಸ್ತ್ರದ ಪಿತಾಮಹ ಎಂದು ಕರೆಯಲಾಗುತ್ತದೆ. ಅವರು ಜೀವನದ ಪ್ರತಿಯೊಂದು ಅಂಶದ ಬಗ್ಗೆಯೂ ಮಾತನಾಡಿದ್ದಾರೆ. ಜೀವನದ ಅನೇಕ ಆಳವಾದ ವಿಷಯಗಳನ್ನು ಹೇಳಿದ್ದಾರೆ. ಚಾಣಕ್ಯ ಅರ್ಥಶಾಸ್ತ್ರದ ಬಗ್ಗೆ ಸಾಕಷ್ಟು ಬರೆದಿದ್ದರೂ, ಜೀವನದ ಪ್ರಗತಿಯ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ. ಇದನ್ನು ಅನುಸರಿಸುವ ಮೂಲಕ ನೀವು ಸಹ ನಿಮ್ಮ ಜೀವನದಲ್ಲಿ ಸಂತೋಷ ಪಡೆಯಬಹುದು.
ಆಚಾರ್ಯ ಚಾಣಕ್ಯರು ನಮ್ಮ ದಿನಚರಿಗೆ ಸಂಬಂಧಿಸಿದ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ. ಇವುಗಳಲ್ಲಿ ಒಂದು ಸ್ನಾನದ ಬಗ್ಗೆ. ನಾವು ಯಾವ ಸಮಯದಲ್ಲಿ ಸ್ನಾನ ಮಾಡಬೇಕು ಮತ್ತು ಯಾವ ಸಮಯದಲ್ಲಿ ಸ್ನಾನ ಮಾಡಬಾರದು ಎಂಬುದನ್ನು ಚಾಣಕ್ಯ ಹೇಳುತ್ತಾರೆ. ಕೆಲವು ಕೆಲಸಗಳನ್ನು ಮಾಡುವ ಮೊದಲು ಮತ್ತು ನಂತರ ಸ್ನಾನ ಮಾಡಬೇಕು. ಇದನ್ನು ಮಾಡದಿದ್ದಲ್ಲಿ, ಅದರ ಪರಿಣಾಮದಲ್ಲಿ ವ್ಯಕ್ತಿಗೆ ಅಶುಭವಾಗಬಹುದು. ಚಾಣಕ್ಯ ನೀತಿಯ ಎಂಟನೇ ಅಧ್ಯಾಯದ ಆರನೇ ಶ್ಲೋಕದಲ್ಲಿ, ಒಬ್ಬ ವ್ಯಕ್ತಿಯು ಈ 4 ಕಾರ್ಯಗಳನ್ನು ಮಾಡಿದ ನಂತರ ತಕ್ಷಣ ಸ್ನಾನ ಮಾಡಬೇಕು ಎಂದು ಹೇಳಿದ್ದಾರೆ.
ಆ ಶ್ಲೋಕ ಹೀಗಿದೆ:
ತೈಲಾಭ್ಯಂಗೇ ಚಿತಾಧೂಮೇ ಮೈಥುನೇ ಕ್ಷೌರಕರ್ಮಣಿ ।
ತಾವದ್ ಭವತಿ ಚಂಡಾಲೋ ಯಾವತ್ ಸ್ನಾನಂ ನ ಚಚೇರೇತ್ ।
ಈ ಶ್ಲೋಕದ ಅರ್ಥವೇನೆಂದರೆ, ಒಬ್ಬ ವ್ಯಕ್ತಿಯು ಎಣ್ಣೆ ಮಸಾಜ್ ಮಾಡಿದ ನಂತರ, ಸ್ಮಶಾನದ ಸ್ಥಳದಲ್ಲಿ ಚಿತೆಯ ಹೊಗೆ ದೇಹದ ಮೇಲೆ ಪಸರಿಸಿದ ಬಳಿಕ, ಲೈಂಗಿಕ ಸಂಭೋಗದ ನಂತರ, ಕ್ಷೌರ ಮಾಡಿಸಿಕೊಂಡ ನಂತರ ಸ್ನಾನ ಮಾಡತಕ್ಕದ್ದು.
ಸಂಭೋಗದ ನಂತರ ಪುರುಷ ಮತ್ತು ಮಹಿಳೆ ಸ್ನಾನ ಮಾಡಬೇಕು ಎಂಬುದು ಇದರಲ್ಲಿ ಮುಖ್ಯವಾದುದು. ಆಚಾರ್ಯ ಚಾಣಕ್ಯರು ಈ ಶ್ಲೋಕದ ಮೂಲಕ ಪುರುಷರು ಮತ್ತು ಮಹಿಳೆಯರು ಇಬ್ಬರೂ ಪ್ರಣಯದ ನಂತರ ಸ್ನಾನ ಮಾಡಬೇಕು ಎಂದು ಉಲ್ಲೇಖಿಸಿದ್ದಾರೆ. ಏಕೆಂದರೆ ಇದರಿಂದ ದೇಹ ಅಶುದ್ಧವಾಗುತ್ತದೆ ಎಂಬುದು ಈ ಹಿಂದಿನ ಕಾಲದ ಪರಿಕಲ್ಪನೆ. ಇದಾದ ನಂತರ ಯಾವುದೇ ಪವಿತ್ರ ಕೆಲಸವನ್ನು ಮಾಡಲಾಗುವುದಿಲ್ಲ. ಆದ್ದರಿಂದ, ದೇಹದ ಶುದ್ಧತೆಯನ್ನು ಕಾಪಾಡಿಕೊಳ್ಳಲು, ಸೆಕ್ಸ್‌ನ ನಂತರ ಸ್ನಾನವನ್ನು ಮಾಡಬೇಕು. ಆದರೆ ಇಂದು ಹೆಚ್ಚಾಗಿ ರಾತ್ರಿ ಸೆಕ್ಸ್ ಬಳಿಕ ಗಂಡ ಹೆಂಡತಿ ನಿದ್ರೆ ಮಾಡುತ್ತಾರೆ. ಅದೇನೋ ಸರಿ, ಆದರೆ ನಿದ್ರೆಯಿಂದ ಎದ್ದ ಬಳಿಕವಾದರೂ ಸ್ನಾನ ಮಾಡಬೇಕು.
Sadguru Talks: ಶಾಶ್ವತವಾದ ಆರ್ಗ್ಯಾಸಂ ಸಾಧಿಸುವುದು ಹೇಗೆ? ಸದ್ಗುರು ಹೇಳ್ತಾರೆ ಕೇಳಿ
ದೇಹವನ್ನು ಎಣ್ಣೆಯಿಂದ ಮಸಾಜ್ ಮಾಡಿದ ನಂತರ ಸ್ನಾನ ಮಾಡುವುದು ಅವಶ್ಯಕ. ನಮ್ಮ ದೇಹಕ್ಕೆ ಸಾಕಷ್ಟು ಎಣ್ಣೆಯ ಅಗತ್ಯವಿದೆ. ಏಕೆಂದರೆ ಅದು ನಮ್ಮ ದೇಹವನ್ನು ಹೊಳಪು ಮತ್ತು ಆರೋಗ್ಯಕರವಾಗಿಸುತ್ತದೆ. ಆದ್ದರಿಂದ ವಾರಕ್ಕೊಮ್ಮೆಯಾದರೂ ಎಣ್ಣೆಯಿಂದ ಮಸಾಜ್ ಮಾಡಬೇಕು. ಆದರೆ ಎಣ್ಣೆ ಮಸಾಜ್ ಮಾಡಿದ ತಕ್ಷಣ ಸ್ನಾನ ಮಾಡಬೇಕು ಎಂಬುದನ್ನು ಸಹ ನೆನಪಿನಲ್ಲಿಡಬೇಕು. ಹೀಗೆ ಮಾಡುವುದರಿಂದ ನಿಮ್ಮ ದೇಹದ ಎಲ್ಲಾ ಕೊಳೆ ಹೊರಹೋಗುತ್ತದೆ. ತ್ವಚೆಯು ಹೊಳೆಯುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ.
ಕ್ಷೌರದ ನಂತರ ಸ್ನಾನ ಮಾಡಲು ಮರೆಯದಿರಿ. ನಮ್ಮ ತಲೆಕೂದಲನ್ನು ಕತ್ತರಿಸಿದಾಗ, ಸ್ನಾನ ಮಾಡದೆ ತೆಗೆಯಲಾಗದ ಸಣ್ಣ ಕೂದಲುಗಳು ನಮ್ಮ ದೇಹಕ್ಕೆ ಅಂಟಿಕೊಂಡಿರುತ್ತವೆ. ಅದಕ್ಕಾಗಿಯೇ ನಾವು ಸ್ನಾನ ಮಾಡಬೇಕು. ಇದರಿಂದ ನಮಗೆ ಯಾವುದೇ ಆರೋಗ್ಯ ಸಂಬಂಧಿ ಸಮಸ್ಯೆ ಆಗುವುದಿಲ್ಲ.
ಶವಸಂಸ್ಕಾರದಿಂದ ಹಿಂದಿರುಗಿದ ನಂತರ ಸ್ನಾನ ಮಾಡುವುದು ಅವಶ್ಯಕ. ಶವಯಾತ್ರೆಯಿಂದ ಅಥವಾ ಸ್ಮಶಾನದಿಂದ ಹಿಂತಿರುಗಿದ ತಕ್ಷಣ ಸ್ನಾನ ಮಾಡಬೇಕು. ಸ್ನಾನ ಮಾಡದೆ ಮನೆಯೊಳಗೆ ಬರಬಾರದು. ಸ್ಮಶಾನಕ್ಕೆ ಹೋದಾಗ, ಅಲ್ಲಿ ಹಲವಾರು ರೀತಿಯ ಸೂಕ್ಷ್ಮಜೀವಿಗಳು ನಿಮ್ಮ ದೇಹಕ್ಕೆ ಅಂಟಿಕೊಳ್ಳುತ್ತವೆ. ನಿಮ್ಮ ಮನೆಯಲ್ಲಿ ಆ ರೋಗಾಣುಗಳು ಹರಡದಂತೆ ನೀವು ಹಿಂತಿರುಗಿದ ತಕ್ಷಣ ಸ್ನಾನ ಮಾಡಬೇಕು. ನಿಮ್ಮ ಮತ್ತು ಕುಟುಂಬದ ಯಾವುದೇ ಸದಸ್ಯರ ಆರೋಗ್ಯದ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರಬಾರದು.
Chanakya Neeti: ಚಾಣಕ್ಯ ಹೇಳುವ ಪ್ರಕಾರ, ಹೆಂಡತಿ ತನ್ನ ಗಂಡನಿಗೆ ಯಾವಾಗ ಸುಳ್ಳು ಹೇಳ್ತಾಳೆ ಗೊತ್ತಾ?