ಯುದ್ಧದಲ್ಲಿ ಗೆಲುವು ಬಲಕ್ಕಿಂತ ಬುದ್ಧಿವಂತಿಕೆಯಿಂದ ಸಾಧ್ಯ ಎಂದು ಚಾಣಕ್ಯ ಹೇಳುತ್ತಾರೆ. ಆತ ತಿಳಿಸುವ ಏಳು ಸೂತ್ರಗಳು ಶತ್ರುವನ್ನು ಯುದ್ಧವಿಲ್ಲದೆಯೇ ಜಯಿಸುವುದು, ಯುದ್ಧವಾದರೆ ಜಯಿಸುವುದು- ಎರಡೂ ಬಗೆಯಲ್ಲಿ ಹೇಗೆ-  ಎಂದು ತಿಳಿಸುತ್ತವೆ. ಭಾರತ- ಪಾಕ್‌ ಯುದ್ಧದ ಹಿನ್ನೆಲೆಯಲ್ಲಿ ಇದನ್ನು ಗಮನಿಸಬಹುದು.  

ಪಹಲ್ಗಾಂ ಭಯೋತ್ಪಾದಕ ದಾಳಿಯಿಂದಾಗಿ, ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡಗಳು ದಟ್ಟವಾಗಿವೆ. ಭಾರತ ಯಾವಾಗ ಬೇಕಿದ್ದರೂ ಪಾಕ್‌ ಮೇಲೆ ದಾಳಿ ಮಾಡಲಿದೆ ಎಂಬ ಸನ್ನಿವೇಶ ಸೃಷ್ಟಿಯಾಗಿದೆ. ನಿಜಕ್ಕೂ ಎಂಥ ಸನ್ನಿವೇಶದಲ್ಲಿ ದಾಳಿ ಮಾಡಬೇಕು, ಯಾವಾಗ ಯುದ್ಧಕೆಕ ಇಳಿದರೆ ಜಯವಾಗುತ್ತದೆ, ಪ್ರಬಲ ವೈರಿಯನ್ನು ಮಣ್ಣು ಮುಕ್ಕಿಸುವುದು ಹೇಗೆ- ಇದೆಲ್ಲವನ್ನೂ ನಮ್ಮ ಪ್ರಾಚೀನ ಗ್ರಂಥ ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಆಚಾರ್ಯ ಚಾಣಕ್ಯರು ಸ್ವತಃ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಲು ನೆರವಾದ ಚಾಣಾಕ್ಷ. ಅವರ ನೀತಿ ಈಗಲೂ ಪರಿಣಾಕಾರಿಯಾಗಿ ಲಾಗೂ ಆಗುವಂಥದ್ದು. 

ಯುದ್ಧದಲ್ಲಿ ಗೆಲುವು ಅತ್ಯಂತ ಜೋರಾಗಿ ಆಡುವವರಿಗಲ್ಲ, ಬದಲಾಗಿ ಅತ್ಯಂತ ತೀಕ್ಷ್ಣ ಬುದ್ಧಿವಂತರಿಗೆ ಸೇರಿದ್ದು ಎಂದು ಚಾಣಕ್ಯ ಶತಮಾನಗಳ ಹಿಂದೆಯೇ ಅರ್ಥ ಮಾಡಿಕೊಂಡಿದ್ದ. ಅವನ ತಂತ್ರಗಳು ಗೆಲ್ಲುವುದು ಹೇಗೆ ಎಂಬ ಬಗ್ಗೆಯೇ ಇವೆ. ಜೀವನ ಕೂಡ ಯುದ್ಧಭೂ. ಚಾಣಕ್ಯನ ಬುದ್ಧಿವಂತಿಕೆ ನಿಮ್ಮ ಮನಸ್ಸನ್ನೂ ಚುರುಕುಗೊಳಿಸಬಲ್ಲುದು. 

1) ಶತ್ರುವನ್ನು ಗೆಲ್ಲುವ ಮೊದಲು, ಅವರ ಬಗ್ಗೆ ಪೂರ್ತಿ ತಿಳಿಯಿರಿ

ಇದು ಚಾಣಕ್ಯನ ತಂತ್ರದ ಅಡಿಪಾಯ. ನಿಮ್ಮ ಮೊದಲ ಕೆಲಸ ದಾಳಿ ಮಾಡುವುದಲ್ಲ- ಗಮನಿಸುವುದು. ಜನರು ತಮ್ಮ ದೌರ್ಬಲ್ಯಗಳನ್ನು ಮಾದರಿಗಳ ಮೂಲಕ ಬಹಿರಂಗಪಡಿಸುತ್ತಾರೆ. ಅವುಗಳನ್ನು ನಿರಂತರವಾಗಿ, ಸದ್ದಿಲ್ಲದೆ ಅಧ್ಯಯನ ಮಾಡಿ. ಅವರು ಮಾಡುವ ಪ್ರತಿಯೊಂದು ನಡೆಯನ್ನೂ ನೀವು ಸ್ಕೆಚ್‌ ಹಾಕಿಕೊಳ್ಳಿ. ಈ ಸಮಯದಲ್ಲಿ ನೀವು ನಿರ್ಲಕ್ಷ್ಯದಿಂದ ಇದ್ದೀರಿ ಎಂದು ಅವರು ಭಾವಿಸಲಿ. ಅವರು ಯಾವುದನ್ನು ಹೆಚ್ಚು ಬಯಸುತ್ತಾರೆ? ಅವರು ಯಾವುದಕ್ಕೆ ಹೆದರುತ್ತಾರೆ? ಅವರು ಎಲ್ಲಕ್ಕಿಂತ ಹೆಚ್ಚಾಗಿ ರಕ್ಷಿಸುವ ವಿಷಯ ಯಾವುದು? ಇದೆಲ್ಲ ಗಮನಿಸಿ. ನೀವು ಅದರ ಜ್ಞಾನವನ್ನು ಹೊಂದಿದರೆ, ಅವರಿಗೆ ತಿಳಿದಿರದ ತಂತಿಗಳನ್ನು ನೀವು ಮೀಟಬಹುದು.

2) ಮರೆಯಲ್ಲಿ ಇರಿ, ವಂಚನೆಯನ್ನು ಬಳಸಿ

"ಮನುಷ್ಯ ತುಂಬಾ ಪ್ರಾಮಾಣಿಕನಾಗಿರಬಾರದು. ಯಾಕೆಂದರೆ ನೇರ ಮರಗಳನ್ನೇ ಮೊದಲು ಕತ್ತರಿಸಲಾಗುತ್ತದೆ. ಪ್ರಾಮಾಣಿಕ ಜನರನ್ನು ಮೊದಲು ಕೆಡವಲಾಗುತ್ತದೆ" ಎಂಬುದು ಒಂದು ಗಾದೆ. ನಿಜವೇ? ಖಂಡಿತ. ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯು ನಿಮ್ಮ ಬಗ್ಗೆ ಶತ್ರುವಿಗೆ ಎಲ್ಲ ತಿಳಿಯುವಂತೆ ಮಾಡುತ್ತದೆ. ನೀವು ನಿಮ್ಮ ನಿಜವಾದ ಉದ್ದೇಶಗಳನ್ನು ಎಂದಿಗೂ ಬಹಿರಂಗಪಡಿಸಬಾರದು. ನಿಮ್ಮ ಕಾರ್ಯಗಳು ಆಳದಲ್ಲಿ ಕತ್ತರಿಸುತ್ತಿರಲಿ, ಆದರೆ ನಿಮ್ಮ ಮಾತುಗಳು ಅವರ ದಾರಿ ತಪ್ಪಿಸಲಿ. ಅವರ ಆಲೋಚನೆಗಳನ್ನು ಹೊಗಳಿ, ಅವರ ಪ್ರಯತ್ನಗಳನ್ನು ಶ್ಲಾಘಿಸಿ. ಅವರ ಶ್ರೇಷ್ಠತೆಯ ಹೊಳಪಿನಲ್ಲಿ ಅವರು ಮುಳುಗಲು ಬಿಡಿ. ಈ ಮಧ್ಯೆ ಸದ್ದಿಲ್ಲದೆ ಅವರ ಅಡಿಪಾಯವನ್ನು ದುರ್ಬಲಗೊಳಿಸುತ್ತಾ ಹೋಗಿ. ನೀವು ಅವರನ್ನು ಎತ್ತರಕ್ಕೆ ಏರಿಸಿದ ಪೀಠದಿಂದ ಅವರು ನೋಟವನ್ನು ಆನಂದಿಸುವ ಹೊತ್ತಿಗೇ ಅವರು ನಿರೀಕ್ಷಿಸದ ಕಡೆಯಿಂದ ನಿಮ್ಮ ಹೊಡೆತ ಬರಲಿ. 

3) ಜನರನ್ನು ನಂಬಿಸಿ, ನಿರೂಪಣೆಯನ್ನು ನಿಯಂತ್ರಿಸಿ 

ಚಾಣಕ್ಯನಿಗೆ ಕಥೆ ಕೂಡ ವಾಸ್ತವದಷ್ಟೇ ಮುಖ್ಯ ಎಂದು ತಿಳಿದಿತ್ತು. ನೀವು ಯಾರನ್ನಾದರೂ ಸೋಲಿಸಲು ಬಯಸಿದರೆ, ನೀವು ಹೇಳುತ್ತಿರುವ ಕಥೆಯನ್ನು ನಿಯಂತ್ರಿಸಬೇಕು. ಸುಳ್ಳಿನಂತೆ ಧ್ವನಿಸುವ ಸತ್ಯಗಳನ್ನು ಮತ್ತು ಸತ್ಯಗಳಂತೆ ಭಾಸವಾಗುವ ಸುಳ್ಳುಗಳನ್ನು ಪಿಸುಗುಟ್ಟಿ. ಅನುಮಾನವೇ ಇಲ್ಲದ ಕಡೆಯಲ್ಲಿ ಅನುಮಾನವನ್ನು ಹುಟ್ಟುಹಾಕಿ. ಅದು ನಿಮ್ಮ ಉದ್ದೇಶವನ್ನು ಪೂರೈಸುವಂತಿರಲಿ. ಉದಾಹರಣೆಗೆ, ಯಾರೊಬ್ಬರ ಉನ್ನತಿ ನಿಮ್ಮ ಸ್ಥಾನಕ್ಕೆ ಬೆದರಿಕೆಯೊಡ್ಡಿದರೆ, ಅವರ ಮೇಲೆ ನೇರವಾಗಿ ದಾಳಿ ಮಾಡಬೇಡಿ. ಬದಲಾಗಿ, ಇತರರು ಅವರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿ. ಉತ್ತಮ ಸ್ಥಾನದಲ್ಲಿರುವವರ ಹೇಳಿಕೆ, ಸಾಂದರ್ಭಿಕ ಜಾಣ್ಮೆ, ಪ್ರತಿಸ್ಪರ್ಧಿಗೆ ಸಮಯೋಚಿತ ಅಭಿನಂದನೆ- ಇವೆಲ್ಲದರ ಮೂಲಕ ನೀವು ಪ್ರಾಮಾಣಿಕ ಎಂದು ಬಿಂಬಿಸಿ. 

4) ಭೇದ ನೀತಿ- ವಿಭಜಿಸಿ ವಶಪಡಿಸಿಕೊಳ್ಳಿ 

ಇದನ್ನೇ ಬ್ರಿಟಿಷರು ಭಾರತದಲ್ಲಿ ಮಾಡಿದ್ದು. ಚಾಣಕ್ಯನ ಪ್ರತಿಭೆ ಮೈತ್ರಿಗಳನ್ನು ಮುರಿಯುವ ಅವನ ಸಾಮರ್ಥ್ಯದಲ್ಲಿದೆ. ನೀವು ಶತ್ರುಗಳಲ್ಲಿ ಒಡಕು ಉಂಟುಮಾಡಿದರೆ ಅವರನ್ನು ಸುಲಭವಾಗಿ ಗೆಲ್ಲಬಹುದು. ಯಾರೂ ಅಜೇಯರಲ್ಲ. ಅವರ ಸಂಬಂಧಗಳಲ್ಲಿ ಬಿರುಕುಗಳನ್ನು ಹುಡುಕಿ - ಅಸೂಯೆ, ಅಪನಂಬಿಕೆ, ಗುಪ್ತ ಕುಂದುಕೊರತೆಗಳು - ಇವುಗಳನ್ನು ಕಂಡುಹಿಡಿಯಿರಿ. ಅವರ ನಡುವೆ ಅನುಮಾನದ ಬೀಜಗಳನ್ನು ಬಿತ್ತಿ. ಗುಂಪನ್ನು ಮುನ್ನಡೆಸುವವರ ವಲಯದೊಳಗೆ ಬೇರೊಬ್ಬರನ್ನು ಮೇಲಕ್ಕೆತ್ತಿ, ಸ್ಪರ್ಧೆಯನ್ನು ಸೃಷ್ಟಿಸಿ. ನಿಮ್ಮ ಪ್ರತಿಸ್ಪರ್ಧಿ ತಮ್ಮದೇ ಆದ ಬೆಂಬಲ ವ್ಯವಸ್ಥೆಯು ಅವರ ವಿರುದ್ಧ ತಿರುಗಿಬೀಳುವವರೆಗೂ ಅವರು ಸೋಲುತ್ತಿದ್ದಾರೆಂದು ಅರಿತುಕೊಳ್ಳುವುದಿಲ್ಲ.

5) ತಾಳ್ಮೆಯೇ ಶಕ್ತಿ: ಪರಿಪೂರ್ಣ ಕ್ಷಣಕ್ಕಾಗಿ ಕಾಯಿರಿ

ಎಂದಿಗೂ ಜಗಳ ಕಾಯಲು ಆತುರಪಡಬೇಡಿ. ಮೊದಲು ಹೊಡೆಯುವ ವ್ಯಕ್ತಿ ಹೆಚ್ಚಾಗಿ ಸೋಲುತ್ತಾನೆ. ಅತ್ಯಂತ ಕುತಂತ್ರಿ ಆಟಗಾರರಿಗೆ ಸಮಯವೇ ಅವರ ಶ್ರೇಷ್ಠ ಮಿತ್ರ ಎಂದು ತಿಳಿದಿದೆ. ನಿಮ್ಮ ಎದುರಾಳಿಯು ಸಂತೃಪ್ತನಾಗಲಿ. ಅವರು ಗೆದ್ದಿದ್ದಾರೆ ಎಂದು ಅವರು ನಂಬಲಿ. ಅವರು ವಿಚಲಿತರಾಗಿದ್ದಾಗ ನೀವು ಹೊಡೆಯಿರಿ. ಸಮಯವೇ ಎಲ್ಲವೂ. ಅವಸರವು ಗೆಲುವಿನ ಶತ್ರು. ಚಾಣಕ್ಯ ಇದನ್ನು ಬೇಟೆಯು ಹತ್ತಿರ ಬರಲು ಕಾಯುತ್ತಿರುವ ಹುಲಿಗೆ ಹೋಲಿಸಿದನು. ಹುಲಿ ಅಜಾಗರೂಕತೆಯಿಂದ ಬೆನ್ನಟ್ಟುವುದಿಲ್ಲ. ಅಡಗಿಕೊಂಡು, ಸಮಚಿತ್ತದಿಂದ ಸಿದ್ಧವಾಗಿರುತ್ತದೆ. 

6) ನಿಮ್ಮ ನಡೆ ಅನಿರೀಕ್ಷಿತವಾಗಿರಲಿ 

ಹಾವು ವಿಷಕಾರಿಯಲ್ಲದಿದ್ದರೂ, ಅದು ವಿಷಕಾರಿ ಎಂದು ನಟಿಸಬೇಕಂತೆ. ಒಂದು ವೇಳೆ ನೀವು ದುರ್ಬಲರಾಗಿದ್ದರೂ, ಸಬಲನಂತೆ ಕಾಣಿಸಿಕೊಳ್ಳಿ. ನಿಮ್ಮ ವಿಧಾನಗಳಳು ಅವರಿಗೆ ಅರ್ಥ ಆಗದಿರಲಿ. ನಿಮ್ಮನ್ನು ಎದುರಿಸಲು ಅವರಿಗೆ ಮಾರ್ಗ ಕಾಣದಿರಲಿ. ನಿಯಮಗಳನ್ನು ಬದಲಾಯಿಸಿ, ನಿಮ್ಮ ತಂತ್ರಗಳನ್ನು ಬದಲಾಯಿಸಿ. ಒಂದು ಹೆಜ್ಜೆ ಮುಂದೆ ಇರಿ. ಅವರು ನೀವು ಆಕ್ರಮಣಕಾರಿ ಎಂದು ನಿರೀಕ್ಷಿಸಿದರೆ, ಹಿಂದೆ ಸರಿಯಿರಿ. ಅವರು ನೀವು ಸುಮ್ಮನಿರುವಿರೆಂದು ನಿರೀಕ್ಷಿಸಿದರೆ, ಎರಡು ಪಟ್ಟು ಕೆಲಸ ಮಾಡಿ. ಅನಿರೀಕ್ಷಿತತೆಯು ಭಯವನ್ನು ಹುಟ್ಟುಹಾಕುತ್ತದೆ. ಭಯವು ನಿಯಂತ್ರಣದ ಅತ್ಯಂತ ಪ್ರಬಲ ಸಾಧನವಾಗಿದೆ.

2030ರಲ್ಲಿ ಮತ್ತೆ ಜಗತ್ತನ್ನು ಕಾಡಲಿದೆ ಕೋವಿಡ್: ಜಪಾನಿನ ಬಾಬಾ ವಂಗಾ ಭಯಾನಕ ಭವಿಷ್ಯ

7) ಹೋರಾಟವಿಲ್ಲದೆ ಗೆಲ್ಲಿರಿ 

ನಿಮ್ಮ ಎದುರಾಳಿಯು ತಾನು ಸೋತಿದ್ದೇನೆಂದು ಅರಿತುಕೊಳ್ಳದಿರುವುದೇ ಅತ್ಯಂತ ದೊಡ್ಡ ಗೆಲುವು. ಇದು ಚಾಣಕ್ಯನ ಬುದ್ಧಿವಂತಿಕೆಯ ಪರಾಕಾಷ್ಠೆ. ನಿಜವಾದ ಶಕ್ತಿ ಸೂಕ್ಷ್ಮವಾದುದು. ನಾಟಕೀಯ ಮುಖಾಮುಖಿಗಳಿಗೆ ಶಕ್ತಿಯನ್ನು ವ್ಯರ್ಥ ಮಾಡಬೇಡಿ. ಬದಲಾಗಿ, ನಿಮ್ಮ ಪ್ರತಿಸ್ಪರ್ಧಿ ತಮ್ಮದೇ ಆದ ನಿರ್ಧಾರಗಳಿಂದ ಸೋಲುವಂತೆ ಕೌಶಲ್ಯದಿಂದ ಕುಶಲತೆಯಿಂದ ವರ್ತಿಸಿ. ನೀವು ಅವರನ್ನು ಸದ್ದಿಲ್ಲದೆ ಸೋಲಿನತ್ತ ಮುನ್ನಡೆಸಿ. ಅವರೇ ಆ ಫಲಿತಾಂಶವನ್ನು ಆರಿಸಿಕೊಂಡಿದ್ದಾರೆ ಎಂದು ಅವರು ನಂಬಲಿ. ಅತ್ಯಂತ ಸಿಹಿಯಾದ ಗೆಲುವು ಯಾವುದೆಂದರೆ, ನೀವು ನಿಮ್ಮ ಬೆರಳನ್ನೂ ಎತ್ತದೆ ಎದುರಾಳಿ ಕುಸಿದು ಬೀಳುವಂತೆ ಮಾಡುವುದು.

ಸೆಕೆಂಡ್‌ನಲ್ಲಿ ವಯಸ್ಸು ಹೆಚ್ಚಿಸುವ ವೈರಸ್ ಜನರನ್ನು ಕೊಲ್ಲುತ್ತೆ, ಬಾಬಾ ವಂಗಾ ಭವಿಷ್ಯ ಸಖತ್ ವೈರಲ್