Asianet Suvarna News Asianet Suvarna News

Chanakya Niti: ಗಂಡ- ಹೆಂಡತಿ ಮಧ್ಯೆ ವಯಸ್ಸಿನ ಅಂತರ ಹೆಚ್ಚಿದ್ದರೆ ಹೀಗೆಲ್ಲಾ ಆಗುತ್ತೆ ಹುಷಾರ್!

ಪತಿ ಪತ್ನಿಯರ ನಡುವಿನ ವಯಸ್ಸಿನ ವ್ಯತ್ಯಾಸ ಅತಿಯಾಗಬಾರದು ಎನ್ನುತ್ತಾನೆ ಚಾಣಕ್ಯ. ಚಾಣಕ್ಯ ನೀತಿಯ ಪ್ರಕಾರ, ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸಿನ ಭಾರೀ ವ್ಯತ್ಯಾಸವು ಜೀವನದಲ್ಲಿ ಅನೇಕ ರೀತಿಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.

Chanakya Niti married life will not be good if husband and wife have too much age gap
Author
First Published Jul 27, 2024, 11:35 AM IST | Last Updated Jul 27, 2024, 11:35 AM IST

ಆಚಾರ್ಯ ಚಾಣಕ್ಯನು ಪ್ರಾಚೀನ ಭಾರತದ ಶ್ರೇಷ್ಠ ರಾಜನೀತಿಜ್ಞ ಮತ್ತು ರಾಜತಾಂತ್ರಿಕ. ಆತ ರಾಜತಾಂತ್ರಿಕತೆ, ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಆಳವಾದ ಜ್ಞಾನವನ್ನು ಹೊಂದಿದ್ದ. ಚಾಣಕ್ಯನ ತತ್ವಗಳನ್ನು ಅನುಸರಿಸಿ ಅನೇಕ ಜನರು ಯಶಸ್ವಿಯಾಗಿದ್ದಾರೆ. ಪ್ರಸಿದ್ಧ ಪುಸ್ತಕ ಚಾಣಕ್ಯ ನೀತಿ ಚಾಣಕ್ಯನ ಜೀವನದ ಅನುಭವಗಳ ಸಂಗ್ರಹ. ಈತ ಸಂಬಂಧಗಳು, ಗೆಳೆತನ, ಪತಿ- ಪತ್ನಿ ಬಾಂಧವ್ಯ, ಇತ್ಯಾದಿಗಳ ಬಗ್ಗೆಯೂ ಸೂತ್ರಗಳನ್ನು ನೀಡಿದ್ದಾನೆ. ಚಾಣಕ್ಯ ನೀತಿಯಲ್ಲಿ ತಿಳಿಸಲಾದ ತತ್ವಗಳನ್ನು ಅನುಸರಿಸುವ ಮೂಲಕ ನೀವು ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಮತ್ತು ಸಂತೋಷದ ವೈವಾಹಿಕ ಜೀವನವನ್ನು ಆನಂದಿಸಬಹುದು. ಪತಿ-ಪತ್ನಿಯರ ಸಂಬಂಧಕ್ಕೆ ಸಂಬಂಧಿಸಿದಂತೆ ಚಾಣಕ್ಯ ಹಲವು ಪ್ರಮುಖ ವಿಷಯಗಳನ್ನು ಹೇಳಿದ್ದಾನೆ. 

ಅವುಗಳಲ್ಲಿ ಒಂದು, ಗಂಡ ಮತ್ತು ಹೆಂಡತಿ ನಡುವಿನ ವಯಸ್ಸಿನ ವ್ಯತ್ಯಾಸ. ಸಂತೋಷದ ಜೀವನವನ್ನು ನಡೆಸಲು ಸಂಸಾರದಲ್ಲಿ ಅಗತ್ಯವಾದ ಪ್ರಮುಖ ವಿಷಯಗಳನ್ನು ಸಹ ಉಲ್ಲೇಖಿಸುತ್ತಾನೆ. ಪತಿ-ಪತ್ನಿಯರ ವಯಸ್ಸಿನ ವ್ಯತ್ಯಾಸವನ್ನು ಅವಲಂಬಿಸಿ ವೈವಾಹಿಕ ಜೀವನದಲ್ಲಿ ಸಂತೋಷವು ಬದಲಾಗುತ್ತದಂತೆ. ಪತಿ ಪತ್ನಿಯರ ನಡುವಿನ ವಯಸ್ಸಿನ ವ್ಯತ್ಯಾಸ ಅತಿಯಾಗಬಾರದು ಎನ್ನುತ್ತಾನೆ ಚಾಣಕ್ಯ. ಚಾಣಕ್ಯ ನೀತಿಯ ಪ್ರಕಾರ, ಗಂಡ ಮತ್ತು ಹೆಂಡತಿಯ ನಡುವಿನ ವಯಸ್ಸಿನ ಭಾರೀ ವ್ಯತ್ಯಾಸವು  ಜೀವನದಲ್ಲಿ ಅನೇಕ ರೀತಿಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಅವು ಯಾವುವು ಎಂಬುದನ್ನು ಇಲ್ಲಿ ನೋಡಿ. 

ನ್ಯಾಯ, ಧೈರ್ಯದಲ್ಲಿ ಮಾತ್ರವಲ್ಲ, ಸೆಕ್ಸ್ ವಿಷಯದಲ್ಲೂ ಮಹಿಳೆಯರೇ ಮುಂದು ಅಂತಾನೆ ಚಾಣಕ್ಯ!

ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ಗಂಡ ಮತ್ತು ಹೆಂಡತಿಯ ನಡುವಿನ ಸಮಾನ ವಯಸ್ಸು ಬಹಳ ಮುಖ್ಯ. ಇಬ್ಬರ ನಡುವೆ ದೊಡ್ಡ ವಯಸ್ಸಿನ ವ್ಯತ್ಯಾಸವಿದ್ದರೆ ದಾಂಪತ್ಯ ಜೀವನದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಮುದುಕ ಯುವತಿಯನ್ನು ಮದುವೆಯಾಗಬಾರದು. ಅಂತಹ ಮದುವೆಯು ಯಾವುದೇ ರೀತಿಯಲ್ಲಿ ಸಂತೋಷದಾಯಕವಲ್ಲ. ಈ ಸಂಬಂಧವು ಯಾವಾಗಲೂ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಂತಹ ಮದುವೆಗಳು ಎಂದಿಗೂ ಸಂತೋಷವಾಗಿರುವುದಿಲ್ಲ. ಅಂತಹ ಮದುವೆ ಮುರಿದು ಬೀಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಚಾಣಕ್ಯ ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ, ಇಬ್ಬರೂ ಪರಸ್ಪರರನ್ನು ಎಲ್ಲಾ ರೀತಿಯಲ್ಲಿ ತೃಪ್ತಿಪಡಿಸಬೇಕು ಎಂದು ಹೇಳುತ್ತಾನೆ. ಮುದುಕ ಗಂಡ, ಯುವತಿ ಹೆಂಡತಿಯನ್ನು ತೃಪ್ತಿಪಡಿಸಲಾರ. ಯುವತಿಗೆ ಹುಚ್ಚು ಕುದುರೆಯಂಥ ಕೆನೆಯುವ ಪ್ರಾಯವಿದ್ದಾಗ, ಗಂಡ ಮುದುಕನಾಗಿದ್ದಾರೆ, ಆಕೆಯ ಆಶಯಗಳಿಗೆ ತಕ್ಕಂತೆ ಕುಣಿಯಲಾರ. ಆಗ ದಾಂಪತ್ಯ ನೀರಸವಾಗುತ್ತದೆ. ಪತ್ನಿ ಬೇರೊಬ್ಬ ಯುವಕನಲ್ಲಿ ತನ್ನ ತೃಪ್ತಿಯನ್ನು ಕಂಡುಕೊಳ್ಳುತ್ತಾರೆ. (ಈ ಮಾತಿಗೆ ಅಪವಾದಗಳು ತುಂಬಾ ಇವೆ. ಸಂತೋಷವಾಗಿರುವ ಯುವತಿ- ವೃದ್ಧ ದಂಪತಿಗಳೂ ಇದ್ದಾರೆ.) 

ಇನ್ನು ಹೆಂಡತಿ ತುಂಬಾ ದೊಡ್ಡವಳಾಗಿದ್ದು, ಗಂಡ ಯುವಕನಾಗಿದ್ದರೆ, ಆಗಲೂ ದಾಂಪತ್ಯ ಸುಖಕರವಾಗಿರುವುದಿಲ್ಲ. ಯುವಕ ಸದಾ ಪ್ರಣಯದ ಮೂಡ್‌ನಲ್ಲಿರುತ್ತಾನೆ. ಆದರೆ ಹೆಣ್ಣು ಹಾಗಿರುವುದಿಲ್ಲ. ಅವಳಲ್ಲಿ ಆಗಿರುವ ದೈಹಿಕ ಬದಲಾವಣೆಗಳು, ಅವಳನ್ನು ಹಾಗಿರಲು ಬಿಡುವುದಿಲ್ಲ. ಅವನ ಅಗತ್ಯಗಳಿಗೆ ತಕ್ಕಂತೆ ಆಕೆ ಸ್ಪಂದಿಸದಿದ್ದರೆ, ಗಂಡ ಬೇರೊಬ್ಬಳನ್ನು ಹುಡುಕಿಕೊಂಡು ಹೋಗಬಹುದು.

ಅಪ್ಪಿತಪ್ಪಿಯೂ ಈ ಜನರಿಗೆ ಸಲಹೆ ನೀಡೋದಕ್ಕೆ ಹೋಗ್ಬೇಡಿ… ನಿಮಗೆ ತೊಂದ್ರೆ ತಪ್ಪಿದ್ದಲ್ಲ
  
ವಯಸ್ಸಿನಲ್ಲಿ ದೊಡ್ಡ ವ್ಯತ್ಯಾಸವಿದ್ದರೆ, ಅವರ ಅಭಿಪ್ರಾಯಗಳು ಯಾವಾಗಲೂ ಸಮಾನವಾಗಿರುವುದಿಲ್ಲ. ಅವರು ಒಂದೇ ರೀತಿ ಯೋಚಿಸದಿರಬಹುದು. ವಯಸ್ಸಿನ ವ್ಯತ್ಯಾಸವು ಅವರ ದೇಹ ಮತ್ತು ಮನಸ್ಸನ್ನು ಸಂಯೋಜಿಸಲು ಅನುಮತಿಸುವುದಿಲ್ಲ. ಮುದುಕ ಯುವತಿಯನ್ನು ಮದುವೆಯಾದರೆ ಅಂತಹ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತವೆ. 

ಪರಸ್ಪರ ಮೋಸ ಮಾಡುವ ಸಾಧ್ಯತೆಗಳು:  ವೈವಾಹಿಕ ಜೀವನದಲ್ಲಿ ಸಂತೋಷವನ್ನು ಕಂಡುಕೊಳ್ಳಲು ಪತಿ ಮತ್ತು ಪತ್ನಿ ಪರಸ್ಪರ ಮೋಸ ಮಾಡಬಾರದು ಎಂದು ಚಾಣಕ್ಯ ಹೇಳುತ್ತಾನೆ. ಈ ಪವಿತ್ರ ಸಂಬಂಧದ ಘನತೆಯನ್ನು ಕಾಪಾಡಲು ಗಂಡ ಮತ್ತು ಹೆಂಡತಿ ಪರಸ್ಪರ ಬೆಂಬಲಿಸಬೇಕು. ಗಂಡ ಹೆಂಡತಿ ಯಾವತ್ತೂ ಒಬ್ಬರಿಗೊಬ್ಬರು ಮೋಸ ಮಾಡಬಾರದು. ಅಂತಹ ಕುಟುಂಬದ ವೈವಾಹಿಕ ಜೀವನವು ಶೀಘ್ರದಲ್ಲೇ ಒಡೆಯಲು ಪ್ರಾರಂಭಿಸುತ್ತದೆ. ಒಡನಾಟದ ಅಗತ್ಯವನ್ನು ನಿರ್ಲಕ್ಷಿಸಬಾರದು. ಪತಿ-ಪತ್ನಿಯರ ನಡುವಿನ ಸಂಬಂಧವು ಅತ್ಯಂತ ಪವಿತ್ರವಾಗಿದೆ ಮತ್ತು ಈ ಬಂಧವನ್ನು ಕಾಪಾಡಿಕೊಳ್ಳಲು, ಪತಿ ಮತ್ತು ಪತ್ನಿ ಪರಸ್ಪರರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಬೇಕು ಎನ್ನುತ್ತಾನೆ ಚಾಣಕ್ಯ. ಪತಿ-ಪತ್ನಿಯರ ನಡುವೆ ಪ್ರೀತಿ, ಸೌಹಾರ್ದತೆ ಇರಬೇಕು. ಅವರ ಅಭಿರುಚಿಗಳು ಒಂದೇ ಆಗಿರಬೇಕಾದರೆ ಅವರ ತಲೆಮಾರುಗಳೂ ಒಂದೇ ಆಗಿರಬೇಕು. ಆಗ ಸೊಗಸಾದ ದಾಂಪತ್ಯ ಸಾಧ್ಯವಾಗುತ್ತದೆ ಎನ್ನುತ್ತಾನೆ. 

Latest Videos
Follow Us:
Download App:
  • android
  • ios