Asianet Suvarna News Asianet Suvarna News

ಮಿಲಿಂದ್‌ ಸೋಮನ್‌ನನ್ನು ಮದುವೆಯಾದ ಹುಡುಗಿಯ ಕ್ಯೂಟ್‌ ಲವ್‌ ಸ್ಟೋರಿ! ಜನ ಏನಂದ್ರು ನೋಡಿ!

2018ರಲ್ಲಿ ಖ್ಯಾತ ಮಾಡೆಲ್‌ ಮಿಲಿಂದ್‌ ಸೋಮನ್‌ ಮತ್ತು ಅಂಕಿತಾ ಕೋನ್ವರ ಎಂಬ ಹುಡುಗಿ ಪ್ರೀತಿಸಿ ಮದುವೆಯಾದರು. ಆಗ ಮಿಲಿಂದ್‌ ವಯಸ್ಸು 52, ಅಂಕಿತಾ ಪ್ರಾಯ 26. ಇವರ ಪ್ರೇಮ ಮತ್ತು ಮದುವೆ ಹೇಗೆ ಸಾಧ್ಯವಾಯಿತು? ಫೇಸ್‌ಬುಕ್‌ನಲ್ಲಿ ಅಂಕಿತಾ ಕೋನ್ವರ್‌ ಅವರೇ ಹೇಳಿಕೊಂಡ ಪ್ರೇಮಕತೆ ಇಲ್ಲಿದೆ

Milind and Ankitha love story told by Ankitha
Author
First Published Sep 28, 2022, 2:16 PM IST

ನಾನು ಏರ್‌ ಟ್ರಾವೆಲ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಭಾರತದಿಂದ ಆಚೆ ಮಲೇಷ್ಯಾದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಏರ್ ಏಷ್ಯಾದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ಆ ಸಮಯದಲ್ಲಿ ನನ್ನ ಆಗಿನ ಗೆಳೆಯ ಇದ್ದಕ್ಕಿದ್ದಂತೆ ತೀರಿಹೋದ. ಇದರಿಂದ ನನ್ನ ಹೃದಯ ಒಡೆದುಹೋಯಿತು. ನಾನು ದೇಶಕ್ಕೆ ಹಿಂತಿರುಗಿ ಬರುವುದಿಲ್ಲ ಎಂದು ಭಾವಿಸಿದೆ. ಒಂದೆರಡು ತಿಂಗಳ ನಂತರ ನನಗೆ ಚೆನ್ನೈನಲ್ಲಿ ಕೆಲಸ ಸಿಕ್ಕಿತು. ಇದಾಗಿ ಕೆಲವು ತಿಂಗಳ ಬಳಿಕ, ನಾನು ನನ್ನ ಸಹೋದ್ಯೋಗಿಗಳೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದೆ. ಒಂದು ದಿನ, ಲಾಬಿಯಲ್ಲಿ, ನಾನು ಈ ಎತ್ತರದ, ಒರಟಾದ ಮನುಷ್ಯನನ್ನು ನೋಡಿದೆ. ಅದು ಯಾರೆಂದು ನನಗೆ ತಕ್ಷಣ ತಿಳಿಯಿತು- ಮಿಲಿಂದ್ ಸೋಮನ್! ನಾನು ಆತನ ಭಯಂಕರ ಅಭಿಮಾನಿಯಾಗಿದ್ದೆ! ಹಾಗಾಗಿ ನಾನು ಹಲೋ ಹೇಳಲು ಹೋದೆ. ಆದರೆ ಅವನು ಬ್ಯುಸಿಯಾಗಿದ್ದ. ಕೆಲವು ದಿನಗಳ ನಂತರ, ನನ್ನ ಸ್ನೇಹಿತರು ಮತ್ತು ನಾನು ಹೋಟೆಲ್‌ನ ನೈಟ್‌ಕ್ಲಬ್‌ಗೆ ಹೋದೆವು. ಅಲ್ಲಿ ನಾನು ಅವನನ್ನು ಮತ್ತೆ ನೋಡಿದೆ.

ಅವನೂ ನನ್ನನ್ನೇ ದಿಟ್ಟಿಸುತ್ತಿದ್ದಾನೆ ಎಂದು ಅರಿವಾಯಿತು. ನಾನು ಅವನತ್ತ ನೋಡುತ್ತಲೇ ಇದ್ದೆ! ನನ್ನ ಸ್ನೇಹಿತರು ಇದನ್ನು ಗಮನಿಸಿದರು ಮತ್ತು ಅವನೊಂದಿಗೆ ಮಾತನಾಡಲು ನನ್ನನ್ನು ಒತ್ತಾಯಿಸಿದರು. ನನ್ನ ಜತೆ ಡ್ಯಾನ್ಸ್‌ ಮಾಡುತ್ತೀಯಾ ಎಂದು ನಾನು ಅವನನ್ನು ಕೇಳಿದೆ. ಅವನು ಸಂತೋಷದಿಂದ ಒಪ್ಪಿಕೊಂಡ. ನಮ್ಮಿಬ್ಬರ ನಡುವೆ ಒಂದು ಕಂಪನ ಇರುವುದು ನನ್ನ ಅರಿವಿಗೆ ಬಂತು!

ಆದರೆ ನಾನು ಅಷ್ಟು ಬೇಗ, ನನ್ನ ಬಾಯ್‌ಫ್ರೆಂಡ್‌ ಸತ್ತ ಕೆಲವೇ ತಿಂಗಳಿನಲ್ಲಿ, ಮತ್ತೊಂದು ಪ್ರೇಮದಲ್ಲಿ ಬೀಳಲು ಬಯಸಿರಲಿಲ್ಲ. ಹಾಗಾಗಿ ನಾನು ಭಾರವಾದ ಹೃದಯದಿಂದ ಮಿಲಿಂದ್‌ನಿಂದ ಅಂತರ ಕಾಪಾಡಿಕೊಂಡೆ. ಅವನು ನನ್ನನ್ನು ಮರೆತುಬಿಡುತ್ತಾನೆ ಎಂದು ನಾನು ಭಾವಿಸಿದೆ. ಆದರೆ ಸ್ವಲ್ಪ ಸಮಯದ ನಂತರ ಅವನು ನನ್ನನ್ನು ಹುಡುಕುತ್ತಾ ಬಂದ. ಆತ ನನ್ನ ಮೊಬೈಲ್‌ ಸಂಖ್ಯೆ ಕೇಳಿದ. ನನ್ನ ಫೋನ್ ನನ್ನ ಬಳಿ ಇರಲಿಲ್ಲ. ನಂಬರ್‌ ಕೂಡ ಗೊತ್ತಿರಲಿಲ್ಲ. ಹಾಗಾಗಿ ಅವನು ನನ್ನ ಸ್ನೇಹಿತರೊಬ್ಬರಿಗೆ ತನ್ನ ನಂಬರ್ ನೀಡಿದ. ಅವನಿಗೆ ನನ್ನ ನಂಬರ್‌ ಮೆಸೇಜ್ ಮಾಡಲು ಹೇಳಿದ.

ಇದೇ ನನ್ನ ರೂಮ್, ಬೆಡ್ ಎನ್ನುತಾ ಪೂಲ್‌ನಲ್ಲಿ ಹಾಟ್ ಅವತಾರ ತಾಳಿದ ಖ್ಯಾತ ನಟಿ

ಕೆಲವು ದಿನಗಳು ಕಳೆದವು. ಅವನನ್ನು ನನ್ನ ಮನಸ್ಸಿನಿಂದ ಹೊರಹಾಕಲು ನನಗೆ ಸಾಧ್ಯವಾಗಲಿಲ್ಲ. ನಾನು ಅವನಿಗೆ ಸಂದೇಶ ಕಳುಹಿಸಿದೆ. ಅವನು ನನ್ನನ್ನು ಊಟಕ್ಕೆ ಕರೆದ. ನಾವು ಮತ್ತೆ ಭೇಟಿ(Meet)ಯಾದೆವು. ಅದರ ನಂತರ, ನಾವು ನಿರಂತರವಾಗಿ ಮೆಸೇಜ್‌ ಕಳಿಸತೊಡಗಿದೆವು. ಸಾಧ್ಯವಾದಾಗಲೆಲ್ಲಾ ಭೇಟಿಯಾದೆವು. ಆದರೂ ನನಗೆ ಇದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದು ದಿನ ಇದರ ಬಗ್ಗೆ ಆತನೇ ಕೇಳಿದ. ನಾನು ಹಿಂದಿನ ಪ್ರೇಮ(Love)ದ ವಿಚಾರಗಳನ್ನು ಹೇಳಿದೆ. ʻ‘ನಾನು ನಿನ್ನನ್ನು ಪ್ರೀತಿಸುವುದು ಎಂದರೆ, ನಿನ್ನ ಪ್ರತಿಯೊಂದು ಭಾಗವನ್ನೂ ಪ್ರೀತಿಸುವುದು. ಅದರಲ್ಲಿ ನಿನ್ನ ಹಿಂದಿನ ಭೂತಕಾಲವೂ ಇದೆ. ಆದ್ದರಿಂದ ನೀನು ಆತಂಕಪಡುವ ಅಗತ್ಯವಿಲ್ಲ. ನಾವು ಒಟ್ಟಿಗಿರೋಣʼʼ ಎಂದ. ಈತ ನನ್ನವನು ಎಂಬುದು ನನಗೆ ಆಗ ಅರಿವಾಯಿತು.

ಜಾನ್ವಿ ಕಪೂರ್ ಔಟ್‌ಡೋರ್‌ ಶೂಟಿಂಗ್‌ ಬಗ್ಗೆ ನಟಿಯ ಬಾಯ್‌ಫ್ರೆಂಡ್‌ ಅಸಮಾಧಾನ?

ಅದರ ನಂತರ ನಾವು 5 ವರ್ಷಗಳ ಕಾಲ ಡೇಟಿಂಗ್(Dating) ಮಾಡಿದೆವು. ಮುಂದಿನ ಹೆಜ್ಜೆಯಾಗಿ ಮದುವೆಯಾಗಲು ನಿರ್ಧರಿಸಿದೆವು. ನಮ್ಮ ನಡುವಿನ ವಯಸ್ಸಿನ ಅಂತರ(Age gap)ದಿಂದಾಗಿ ನನ್ನ ಕುಟುಂಬದವರು ಚಿಂತಿತರಾಗಿದ್ದರು. ಆದರೆ ಇದು ನಮಗೆ ಎಂದಿಗೂ ಸಮಸ್ಯೆಯಾಗಲಿಲ್ಲ! ನಾವು ಒಟ್ಟಿಗಿದ್ದಾಗ ನಾವಿಬ್ಬರೂ ತುಂಬಾ ಸಂತೋಷದಿಂದ ಇರುವುದನ್ನು ಕುಟುಂಬದವರು ಗಮನಿಸಿದ ಮೇಲಂತೂ ಕುಟುಂಬದವರೂ ಒಪ್ಪಿಕೊಂಡರು!

ನೀವು ನಂಬಿ ಅಥವಾ ಬಿಡಿ, ನಾವು ಮೂರು ಬಾರಿ ಮದುವೆ(Wedding)ಯಾಗಿದ್ದೇವೆ! ಆಲಿಬಾಗ್‌ನಲ್ಲಿ ಸಾಂಪ್ರದಾಯಿಕ ವಿವಾಹ, ನಂತರ ಸ್ಪೇನ್‌ನಲ್ಲಿ ಜಲಪಾತದ ಅಡಿಯಲ್ಲಿ ವಿವಾಹ, ಮತ್ತು ಮೂರನೆಯದು ಬೇರೊಂದು ಕಡೆ. ಮಿಲಿಂದ್‌ ನನಗೆ ಸದಾ ಪ್ರೀತಿ(Love)ಯಲ್ಲಿ ಬೀಳಲು, ಸಂತೋಷ(Happiness)ವಾಗಿರಲು ಕಲಿಸಿದ.

ಇದು ಅಂಕಿತಾ ಹೇಳಿದ ಕತೆ. ಇದನ್ನು ಓದಿ ಹಲವರು ಹಲವು ರೀತಿಯಲ್ಲಿ ಕಮೆಂಟ್‌(Comment) ಮಾಡಿದ್ದಾರೆ. ʼʼನೀವಿಬ್ಬರೂ ಸಂತೋಷವಾಗಿರಿʼʼ ʼʼಪ್ರೇಮಕ್ಕೆ ವಯಸ್ಸಿನ ಹಂಗಿಲ್ಲʼʼ ಎಂಬತ್ಯಾದಿ ಖುಷಿ ನೀಡುವ ಮೆಸೇಜ್‌(Message)ಗಳಿವೆ. ಅದರ ಜತೆಗೆ ʼʼಮಿಲಿಂದ್‌ನಂಥ ಶ್ರೀಮಂತ ವ್ಯಕ್ತಿ ಗಂಡನಾಗುವುದಾದರೆ ಆತನಿಗೆ ಎಷ್ಟೇ ವಯಸ್ಸಾದರೂ ಒಪ್ಪುವ ಹೆಣ್ಣುಗಳು ಇರುತ್ತಾರಲ್ಲವೇ?ʼʼ ಎಂದು ಕಟಕಿಯಾಡಿದ ಕಮೆಂಟ್‌ಗಳು ಕೂಡ ಬಂದಿವೆ.

Follow Us:
Download App:
  • android
  • ios