Asianet Suvarna News Asianet Suvarna News

Samudrika Shastra: ಈ 'ಲಕ್ಷಣಗಳಲ್ಲಿ' ಅರ್ಧದಷ್ಟು ಗುಣವಿದ್ದರೂ ಆತನನ್ನು ಕಣ್ಣು ಮುಚ್ಚಿ ವಿವಾಹವಾಗಿ!

ಯುವಕನನ್ನು ಜೀವನ ಸಂಗಾತಿಯಾಗಿ ಆರಿಸುವಾಗ ಹುಡುಗಿಯರು ನೋಡಬೇಕಾದ 20 ಲಕ್ಷಣಗಳನ್ನು ಸಾಮುದ್ರಿಕಾ ಶಾಸ್ತ್ರ ಹೇಳುತ್ತದೆ. ಆ ಲಕ್ಷಣಗಳಲ್ಲಿ ಹತ್ತಾದರೂ ನೀವು ನೋಡಿದವನಲ್ಲಿದ್ದರೆ, ಆತನನ್ನು ಕಣ್ಣು ಮುಚ್ಚಿ ವಿವಾಹವಾಗಬಹುದು. 

Blindly marry a man who has even half of these 20 characteristics skr
Author
First Published Mar 8, 2022, 10:36 AM IST

ಪಾಂಚಾಲಿ ತನ್ನ ಹಿಂದಿನ ಜನ್ಮದಲ್ಲಿ ತನ್ನ ಹುಡುಗನಾದವನಲ್ಲಿರಬೇಕಾದ ಗುಣಗಳ ಪಟ್ಟಿಯನ್ನು ಪರಶಿವನ ಎದುರಿಗಿಟ್ಟಳಂತೆ. ಈ ಎಲ್ಲ ಗುಣವೂ ಒಬ್ಬನಲ್ಲೇ ಇರುವುದು ಅಸಾಧ್ಯ ಎಂದೇ ಶಿವ ಆಕೆಗೆ ಐವರನ್ನು ಕಟ್ಟಿಕೊಂಡು ಆಸೆ ಈಡೇರಿಸಿಕೊಳ್ಳುವಂತೆ ಮಾಡಿದನಂತೆ.
ಆರೇಂಜ್ ಮ್ಯಾರೇಜ್ ಆಗಲೀ, ಲವ್ ಮ್ಯಾರೇಜೇ ಆಗಲಿ, ಹುಡುಗನನ್ನು ಆರಿಸುವಾಗ ಯುವತಿಯರು ಬಹಳ ಗೊಂದಲಕ್ಕೊಳಗಾಗುತ್ತಾರೆ. ಅವರಿಗೆ ಒಬ್ಬನಲ್ಲೇ ಎಲ್ಲವೂ ಇರಬೇಕು. ಆದರೆ, ಅಂಥ ಪರ್ಫೆಕ್ಟ್ ಯುವಕ ಈ ಜಗತ್ತಿನಲ್ಲೇ ಇರುವುದು ಸಾಧ್ಯವಿಲ್ಲ. ಮನುಷ್ಯರ ವಿಚಾರ ಹೋಗಲಿ, ದೇವರ ವಿಷಯಕ್ಕೆ ಹೋದರೂ ಒಬ್ಬೊಬ್ಬ ದೇವರದ್ದು ಒಂದೊಂದು ಗುಣವೇ. ಆದರೆ, ಹುಡುಗನನ್ನು ಸಂಗಾತಿಯಾಗಿ ಆರಿಸುವಾಗ ಹುಡುಗಿಯರಿಗೆ ಸುಲಭವಾಗಲಿ ಎಂದು ಸಾಮುದ್ರಿಕಾ ಶಾಸ್ತ್ರ(Samudrika Shastra) ಕೆಲವು ಗುಣಗಳ ಪಟ್ಟಿ ಮಾಡಿದೆ. ನಿಮಗೇ ಗೊತ್ತಿರುವಂತೆ ಸಾಮುದ್ರಿಕಾ ಶಾಸ್ತ್ರವು ಮುಖ ಮೈ ಲಕ್ಷಣ, ವ್ಯಕ್ತಿತ್ವ ಎಲ್ಲವನ್ನೂ ಅಧ್ಯಯನ ಮಾಡುತ್ತದೆ. ಅದರ ಪ್ರಕಾರ, ಸಂಗಾತಿಯನ್ನು ಆರಿಸುವಾಗ ಆತನಲ್ಲಿ 20 ಲಕ್ಷಣಗಳಿಗಾಗಿ ಹುಡುಕಬೇಕು. ಆ 20ರಲ್ಲಿ 10 ಗುಣಗಳು ನೀವು ನೋಡಿದವನಲ್ಲಿದ್ದರೂ ಆತನನ್ನು ಕಣ್ಣು ಮುಚ್ಚಿ ವಿವಾಹವಾಗಬಹುದು ಎನ್ನುತ್ತದೆ ಲಕ್ಷಣಶಾಸ್ತ್ರ. 

1. ಧೈರ್ಯ(courage) ಹಾಗೂ ಸಂಯಮ ಉಳ್ಳವನು. ಕೆಲಸ ಚಿಕ್ಕದಾದರೂ, ದೊಡ್ಡದಾದರೂ ಆತ ಅದಕ್ಕಾಗಿ ತನ್ನ ಸಂಪೂರ್ಣ ಚೈತನ್ಯ ಬಳಸುವಂತವನು.

2. ವ್ಯಕ್ತಿಯು ತನ್ನ ಜೀವನದಲ್ಲಿ ಎಲ್ಲದರ ಬಗ್ಗೆ ಮತ್ತು ಅವನಿಗೆ ಹೆಚ್ಚು ಮುಖ್ಯವಾದವರ ಬಗ್ಗೆ ಹೆಚ್ಚು ಜಾಗರೂಕನಾಗಿರಬೇಕು. 

3. ಹುಡುಗ ಆರೋಗ್ಯ ಹಾಗೂ ಕೆಲಸಗಳ ದೃಷ್ಟಿಯಿಂದ ಬೆಳಗ್ಗೆ ಬೇಗ ಏಳುತ್ತಾನೆ ಹಾಗೂ ಇತರರಿಗೂ ಬೇಗ ಏಳಲು ಪ್ರೇರೇಪಿಸುವವನಾಗಿರುತ್ತಾನೆ ಎಂದರೆ ಇದೊಂದು ಅತ್ಯುತ್ತಮ ಗುಣ.

Saturn Transit 2022: ಶನಿ ಗೋಚಾರದಿಂದ ಈ ರಾಶಿಗಳಿಗೆ ರಾಜಯೋಗ!

4. ಕಷ್ಟದ ಕೆಲಸಗಳನ್ನು ಮಾಡಲು ಹಾಗೂ ಪರಿಶ್ರಮ(hard work) ಹಾಕಲು ಹೆದರದವನು. 

5. ಹುಡುಗನು ಕೆಲಸಗಳನ್ನೂ ಅದರಿಂದ ಬರುವ ಫಲವನ್ನೂ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಮಾನವಾಗಿ ಹಂಚಿಕೊಳ್ಳಬೇಕು ಎಂಬ ಬಯಕೆ ಹೊಂದಿರಬೇಕು. 

6.  ತನ್ನ ಸಂಗಾತಿಯ ಅಗತ್ಯ, ಆಸೆಗಳನ್ನು ಈಡೇರಿಸಬೇಕೆಂಬ ಮನೋಭಿಲಾಷೆ ಇರುವವನು. ಆಕೆಯ ಮಾತುಗಳನ್ನು ಕೇಳಿಸಿಕೊಳ್ಳುವವನು. 

7. ವೈಯಕ್ತಿಕ ಜೀವನ ಹಾಗೂ ಔದ್ಯೋಗಿಕ ಬದುಕನ್ನು ಪ್ರತ್ಯೇಕವಾಗಿಟ್ಟುಕೊಳ್ಳಲು ಅರಿತವನು. 

8. ತನ್ನ ಲವ್ ಲೈಫ್ ಕುರಿತಾದ ವಿಷಯಗಳ ಬಗ್ಗೆ ಗೌರವ ಹೊಂದಿದ್ದು, ಅದನ್ನು ಖಾಸಗಿ ವಿಷಯ ಎಂದು ನಂಬುವವನು. 

9. ಉದ್ಯಮದ ವಿಷಯದಲ್ಲಿ ತಾಳ್ಮೆ ಹಾಗೂ ಭರವಸೆ ಹೊಂದಿದವನು. 

10. ತಾನು ಸಂಪಾದಿಸಿದ ಜನರು ಹಾಗೂ ನೆನಪುಗಳೇ ವಸ್ತುಗಳಿಗಿಂತ ಹೆಚ್ಚು ಎಂದು ನಂಬಿದವನು. ಬೇಡದ ವಸ್ತುಗಳ ಸಂಗ್ರಹದಿಂದ ದೂರ ಇರುವವನು.

11. ಅಹಂಕಾರ ಇಲ್ಲದವನು, ತನ್ನ ಆಸ್ತಿಪಾಸ್ತಿ, ಯಶಸ್ಸಿನ ಬಗ್ಗೆ ಕೊಚ್ಚಿಕೊಳ್ಳದೆ ವಿನಯದಿಂದ ಇರುವವನು.

12. ಮಹತ್ವಾಕಾಂಕ್ಷೆ ಉಳ್ಳವನು ಹಾಗೂ ಸುತ್ತಲಿನ ಜನರೊಂದಿಗೆ ನಯವಿನಯದಿಂದ ವರ್ತಿಸುವವನು. 

ಶನಿ ದೋಷ, ಮಂಗಳ ದೋಷದಿಂದ ಮುಕ್ತರಾಗಲು ಸರಳೋಪಾಯ Hanuman Chalisa

13. ಇಲ್ಲದ್ದರ ಬಗ್ಗೆ ಹಳಿಯುವುದು ಬಿಟ್ಟು ತನ್ನ ಬಳಿ ಇರುವುದರ ಬಗ್ಗೆ ತೃಪ್ತಿ ಹೊಂದಿದವನು ಹಾಗೂ ಸಾಧಿಸುವ ಛಲವುಳ್ಳವನು. 

14. ಆಹಾರದ ಬಗ್ಗೆ ಹೆಚ್ಚು ಗಮನ ವಹಿಸುವವನು. ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕನಾಗಿರುವವನು ಹಾಗೂ ಇತರರಿಗೂ ಉತ್ತಮ ಆಹಾರ ತಿನ್ನಲು ಪ್ರೇರೇಪಿಸುವವನು. 

15. ಅತಿಯಾಗಿ ಮಲಗದೆ, ಯಾವಾಗಲೂ ತಾಜಾತನದಿಂದ ಉತ್ಸಾಹಭರಿತನಾಗಿರುವವನು.

16. ಕರುಣೆ, ಇತರರ ಬಗ್ಗೆ ಗೌರವ ಉಳ್ಳವನು, ಯಾರ ಬಗ್ಗೆಯೂ ಕೆಟ್ಟ ಮಾತನ್ನಾಡದವನು.

17. ಹೇಡಿತನ ಇಲ್ಲದೆ, ಯಾವುದೇ ವಿಷಯಕ್ಕೂ ಪಲಾಯನವಾದ ಅನುಸರಿಸದವನು. 

18. ಖುಷಿಯಿಂದ ಕೆಲಸ ಮಾಡುವವನು, ಕೆಲಸ ಮಾಡದಿರಲು ನೆಪಗಳನ್ನು ಹುಡುಕದವನು. ದುಡಿದು ತಿನ್ನಬೇಕೆಂಬ ಛಲ, ಸ್ವಾಭಿಮಾನ ಇರುವವನು.

19. ಯಾರೊಂದಿಗೇ ವಾಗ್ವಾದವಾದರೂ ಹೊಡೆತ, ಕೆಟ್ಟ ಬೈಗುಳಗಳ ಮೊರೆ ಹೋಗದವನು. ಜಗಳದ ಬಳಿಕ ಕುಟುಂಬಸ್ಥರು, ಸ್ನೇಹಿತರನ್ನು ದೂರ ಮಾಡದವನು. 

20. ಆಶಾವಾದ ಹೊಂದಿದ್ದು, ಯಾವಾಗಲೂ ಒಳಿತಾಗಲಿದೆ ಎಂಬ ನಂಬಿಕೆಯವನು. ಕನಸನ್ನು ಸಣ್ಣ ಪುಟ್ಟ ವಿಷಯಕ್ಕೆ ಬಿಟ್ಟುಕೊಡದೆ ನನಸು ಮಾಡಲು ಬಯಸುವವನು. 

Follow Us:
Download App:
  • android
  • ios