ಶನಿ ದೋಷ, ಮಂಗಳ ದೋಷದಿಂದ ಮುಕ್ತರಾಗಲು ಸರಳೋಪಾಯ Hanuman Chalisa

ಹನುಮಾನ್ ಚಾಲೀಸಾ ಹಿಂದೂಗಳಿಗೆ ಧೈರ್ಯ, ಶಕ್ತಿ ನೀಡುವ ಮಂತ್ರ. ಇದರಲ್ಲಿ 40 ಕೀರ್ತನೆಗಳಿವೆ. ಹನುಮಾನ್ ಚಾಲೀಸಾ ಹೇಳಿಕೊಳ್ಳುವುದರಿಂದ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?

Astrological Benefits of Hanuman Chalisa skr

ಹನುಮಾನ್ ಚಾಲೀಸಾ ಮಂತ್ರದ ಶಕ್ತಿ ಅನನ್ಯ. 40 ಪದ್ಯಗಳನ್ನೊಳಗೊಂಡಿರುವ ಈ ಶಕ್ತಿ ಮಂತ್ರವು ಒಂದು ಆಧ್ಯಾತ್ಮಿಕ ಕಾವ್ಯವಾಗಿದೆ. ರಾಮಾಯಣ ರಚಿಸಿರುವ ಸಂತ ವಾಲ್ಮೀಕಿಯ ಮರುಜನ್ಮ ಎಂದೇ ಪರಿಗಣಿತರಾಗಿರುವ ತುಳಸೀದಾಸರು ಹನುಮಾನ್ ಚಾಲೀಸಾ(Hanuman Chalisa)ವನ್ನು ರಚಿಸಿದ್ದಾರೆ. ಮೊಘಲ್ ಚಕ್ರವರ್ತಿ ಔರಂಗಜೇಬ(Mughal emperor Aurangzeb)ನು ತುಳಸೀದಾಸ(Tulsidas)ರನ್ನು ಬಂಧಿಸಿಟ್ಟ ಸಂದರ್ಭದಲ್ಲಿ ಅವರು ಈ ಶ್ಲೋಕಗುಚ್ಛವನ್ನು ರಚಿಸಿದರು. ಅವರೇ ಹೇಳುವಂತೆ, ಈ ಶ್ಲೋಕವನ್ನು ಹೇಳುವವರಿಗೆ ಆಂಜನೇಯನ ಸಂಪೂರ್ಣ ಆಶೀರ್ವಾದ ಇರುತ್ತದೆ. ನಾವು ಆಂಜನೇಯನೆಂದರೆ ಸಂಕಟ ಮೋಚನ ಎನ್ನುತ್ತೇವೆ. ಅವನನ್ನು ಸ್ಮರಿಸುವ ಹನುಮಾನ್ ಚಾಲೀಸಾವು ನಮ್ಮೆಲ್ಲ ಸಮಸ್ಯೆಗಳನ್ನು ಎದುರಿಸುವ ಶಕ್ತಿ ನೀಡುತ್ತದೆ.

ವಿಶೇಷವೆಂದರೆ ಹನುಮಾನ್ ಚಾಲೀಸಾವು ಸೂರ್ಯ ಹಾಗೂ ಭೂಮಿ ನಡುವಿನ ದೂರವನ್ನು ಊಹಿಸುತ್ತದೆ ಎನ್ನಲಾಗುತ್ತದೆ. ಹನುಮಾನ್ ಚಾಲೀಸಾದಲ್ಲಿರುವ ಸ್ತೋತ್ರವೊಂದು ಈ ದೂರವನ್ನು ಹೇಳುತ್ತದೆ.
ಅದು ಹೀಗಿದೆ:  
ಯುಗ ಸಹಸ್ರ ಯೋಜನಾ ಪರ ಭಾನು
ಲೀಲ್ಯೋ ತಾಹಿ ಮಧುರ ಫಲ ಜಾನು

16ನೇ ಶತಮಾನದಲ್ಲೇ ತುಳಸೀದಾಸರು ಭೂಮಿ ಹಾಗೂ ಸೂರ್ಯನ ನಡುವಿನ ಈ ದೂರವನ್ನು ಇಲ್ಲಿ ಬರೆದುದನ್ನು ನೋಡಿ ವಿಜ್ಞಾನಿಗಳೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 

ಹನುಮಾನ್ ಚಾಲೀಸಾ ಪ್ರತಿ ದಿನ ಪಠಣ ಮಾಡುವುದರಿಂದ ಜ್ಯೋತಿಷ್ಯ ಶಾಸ್ತ್ರದ ಅನುಗುಣವಾಗಿ ಹಲವಾರು ಲಾಭಗಳಿವೆ. ಅವೇನೆಂದು ನೋಡೋಣ.

ಶನಿದೋಷವಿದ್ದರೆ
ಹನುಮಾನ್ ಚಾಲೀಸಾವನ್ನು ಸುಮಾರು ನಲವತ್ತು ದಿನಗಳವರೆಗೆ ಪಠಿಸುವುದರಿಂದ ಶನಿ(Saturn)ಯ ಕಠಿಣ ಪರಿಣಾಮಗಳು ವ್ಯಕ್ತಿಯ ಜಾತಕದಲ್ಲಿದ್ದರೆ ಅವನ್ನು ತಗ್ಗಿಸಬಹುದು. ಶನಿಯನ್ನು ಜಾತಕದಲ್ಲಿ ದೋಷಪೂರಿತ ಸ್ಥಾನದಲ್ಲಿ ಹೊಂದಿರುವವರು, ಸಾಡೇಸಾತಿಯಲ್ಲಿರುವವರು ಹನುಮಾನ್ ಚಾಲೀಸಾವನ್ನು ಪ್ರತಿ ಶನಿವಾರ ಪಠಿಸಬೇಕು. ಇದರಿಂದ ಶನಿಯ ಅತಿ ಹೆಚ್ಚಾದ ಹಾನಿಕಾರಕ ಪರಿಣಾಮಗಳು ತಗ್ಗಿ ವ್ಯಕ್ತಿಯು ಸಮಾಧಾನದ ನಿಟ್ಟುಸಿರಿಡುವಂತಾಗುತ್ತದೆ. 

Rudrabhishek Puja: ನಿಮ್ಮೆಲ್ಲ ಆಸೆ ಈಡೇರಬೇಕಂದ್ರೆ ಪ್ರತಿ ಸೋಮವಾರ ಹೀಗೆ ಮಾಡಿ

ಮಂಗಳ(Mars)ದೋಷವಿದ್ದರೆ
ನೀವು ಮಂಗಳ ದೋಷದಿಂದ ಬಳಲುತ್ತಿದ್ದರೆ ಹನುಮಾನ್ ಚಾಲೀಸಾ ಪಠಣವು ನಿಮ್ಮ ಕೈ ಹಿಡಿಯುತ್ತದೆ. ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ನೀವು ಮಂಗಳನ ಧನಾತ್ಮಕ ಪ್ರಭಾವ ಮತ್ತಷ್ಟು ಹೆಚ್ಚುತ್ತದೆ. ಮಂಗಳನ ಉತ್ತಮ ಗುಣಗಳಾದ ಶಕ್ತಿ, ಧೈರ್ಯ, ಬಲ ಹಾಗೂ ಚೈತನ್ಯವು ಈ ಮಂತ್ರ ಪಠಣದಿಂದ ವ್ಯಕ್ತಿಯಲ್ಲಿ ಹೆಚ್ಚುತ್ತದೆ. ಇನ್ನು ಮಂಗಳನ ತೊಂದರೆ ಇದ್ದರೆ ಬಹುತೇಕ ನಿವಾರಣೆಯಾಗುತ್ತದೆ. ಇದಕ್ಕಾಗಿ ಪ್ರತಿ ಮಂಗಳವಾರ ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

ಸಾಮಾನ್ಯನಿಗೆ
ಯಾವುದೇ ದೋಷವಿಲ್ಲದಿದ್ದರೂ ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ಹನುಮಾನ್ ಚಾಲೀಸಾ ಹೇಳಿಕೊಳ್ಳುವ ಅಭ್ಯಾಸ ಅತ್ಯುತ್ತಮ ಫಲಿತಾಂಶ ನೀಡಲಿದೆ. ಈ ಶ್ಲೋಕ ಪಠಣಕ್ಕೆ ಕೇವಲ 10 ನಿಮಿಷಗಳು ಸಾಕಾಗಿದ್ದು, ಇದರ ಅಭ್ಯಾಸದಿಂದ ವ್ಯಕ್ತಿಯಲ್ಲಿ ಧೈರ್ಯ, ಆತ್ಮವಿಶ್ವಾಸ ಹೆಚ್ಚುತ್ತದೆ. ಆತನನ್ನು ದೈಹಿಕ ಹಾಗೂ ಮಾನಸಿಕವಾಗಿ ಇದು ಶುದ್ಧೀಕರಿಸಲಿದೆ. ವ್ಯಕ್ತಿಯ ಇಂದ್ರಿಯ ಚೈತನ್ಯ ಹೆಚ್ಚಲಿದೆ. ಹನುಮಾನ್ ಚಾಲೀಸಾ ಪಠಣವು ವ್ಯಕ್ತಿಯನ್ನ ಮುಂಬರುವ ಅಪಾಯಗಳಿಂದ ತಡೆಯುವ ಜೊತೆಗೆ, ಆತನಲ್ಲಿ ಬದುಕಿನ ಬಗೆಗೆ ಭರವಸೆ ತುಂಬುತ್ತದೆ. ದುಷ್ಟ ಗ್ರಹಗಳನ್ನು ದೂರ ಓಡಿಸಿ, ನಕಾರಾತ್ಮಕ ಶಕ್ತಿಗಳಿಂದ ವ್ಯಕ್ತಿಗೆ ರಕ್ಷಣೆ ನೀಡುತ್ತದೆ ಈ ಮಹಾಮಂತ್ರ.

Vastu Tips : ಬೆಳ್ ಬೆಳ್ಗೆ ಇವನ್ನೆಲ್ಲ ನೋಡಿ ದಿನ ಹಾಳು ಮಾಡ್ಕೋಬೇಡಿ!

ಮೋಕ್ಷ
ಹನುಮಾನ್ ಚಾಲೀಸಾವನ್ನು 100 ದಿನಗಳ ಕಾಲ ನಿರಂತರ ಹೇಳುವವನು, ಹುಟ್ಟು ಸಾವುಗಳ ಚಕ್ರದಿಂದ ಮುಕ್ತನಾಗಿ, ಮೋಕ್ಷ ಅನುಭವಿಸುತ್ತಾನೆ ಎಂಬ ನಂಬಿಕೆಯಿದೆ. ಹನುಮಾನ್ ಚಾಲೀಸಾದ 40 ಪದ್ಯಗಳಲ್ಲಿ ಪ್ರತೀ ಪದ್ಯವೂ ಒಂದೊಂದು ರೀತಿಯ ಆಶೀರ್ವಾದಕ್ಕೆ ಕಾರಣವಾಗುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios