Saturn Transit 2022: ಶನಿ ಗೋಚಾರದಿಂದ ಈ ರಾಶಿಗಳಿಗೆ ರಾಜಯೋಗ!

ಗ್ರಹಗಳ ಗೋಚಾರದಿಂದ ವ್ಯಕ್ತಿಯ ಜೀವನದಲ್ಲಿ ಅನೇಕ ರೀತಿಯ ಪರಿಣಾಮಗಳು ಎದುರಾಗುತ್ತವೆ. ಇದೇ ಫೆಬ್ರವರಿಯಲ್ಲಿ ಆಗಿರುವ ಶನಿ ಗ್ರಹದ ಗೋಚಾರದಿಂದಾಗಿ ನಾಲ್ಕು ರಾಶಿಚಕ್ರದ ವ್ಯಕ್ತಿಗಳಿಗೆ ರಾಜಯೋಗವುಂಟಾಗಲಿದೆ. ಶನಿಯಿಂದಾಗಿ ರಾಜಯೋಗ ಪಡೆಯುವ  ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ...

Shani transit will bring Raja Yoga to the people of 4 zodiac signs

ಶನಿ ಗ್ರಹವೆಂದರೆ (Saturn) ಎಲ್ಲರಿಗೂ ಭಕ್ತಿಯೊಂದಿಗೆ ಭಯ ಜಾಸ್ತಿ. ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಶನಿ ಗ್ರಹಕ್ಕೆ ವಿಶೇಷ ಮಹತ್ವವಿದೆ. ನವಗ್ರಹಗಳಲ್ಲಿ ಒಂದಾದ ಶನಿಗ್ರಹವು ಜಾತಕದಲ್ಲಿ (Horoscope) ಹೆಚ್ಚಿನ ಪ್ರಭಾವವನ್ನು ಬೀರುತ್ತದೆ. ಶನಿ ಗ್ರಹದ ಚಲನೆ ಅತ್ಯಂತ ನಿಧಾನವಾಗಿದ್ದು, ಒಂದು ರಾಶಿಯಿಂದ ಮತ್ತೊಂದು ರಾಶಿಗೆ (Zodiac sign) ಚಲಿಸಲು ಅರ್ಧ ವರ್ಷ ಬೇಕಾಗುತ್ತದೆ. ಶಾಸ್ತ್ರದ ಪ್ರಕಾರ ಗ್ರಹ ಗೋಚಾರವಾದಾಗ ಅದರ ಪರಿಣಾಮ (Effect) ಎಲ್ಲ ರಾಶಿ ಚಕ್ರದ ವ್ಯಕ್ತಿಗಳ ಮೇಲೂ ಆಗುತ್ತದೆ.

ಹಾಗಾಗಿ ಇದೇ ಫೆಬ್ರವರಿ 24ರಂದು ಶನಿ ಗ್ರಹದ ಗೋಚಾರವಾಗಿದೆ (Transit). ಈ ಕಾರಣದಿಂದ ಕೆಲವು ರಾಶಿಯ ವ್ಯಕ್ತಿಗಳಿಗೆ ರಾಜಯೋಗವುಂಟಾಗುತ್ತದೆ (Rajayoga) ಎಂದು ಹೇಳಲಾಗುತ್ತದೆ. ಕೆಲವು ರಾಶಿಯ ವ್ಯಕ್ತಿಗಳಿಗೆ ವ್ಯಾಪಾರ (Business), ಉದ್ಯೋಗ (Job) ಮತ್ತು ರಾಜಕಾರಣ (Politics) ಕ್ಷೆತ್ರಗಳಲ್ಲಿ ಸಫಲತೆ (Success) ದೊರಕುತ್ತದೆ. ಅಷ್ಟೇ ಅಲ್ಲದೆ ಜೀವನವು (Life) ಸುಗಮವಾಗಿ ಸಾಗುತ್ತದೆ. ಹಾಗಾಗಿ ಶನಿ ಗ್ರಹದ ಗೋಚಾರದಿಂದಾಗಿ ಈ ನಾಲ್ಕು (Four) ರಾಶಿಯವರು ರಾಜಯೋಗವನ್ನು ಹೊಂದುತ್ತಾರೆ. ಅಷ್ಟೇ ಅಲ್ಲದೆ  ಆರೋಗ್ಯ (Health) ಸಮಸ್ಯೆಯಿಂದ (Difficulties) ಬಳಲುತ್ತಿದ್ದವರು ಸುಧಾರಣೆಯನ್ನು ಕಾಣುತ್ತಾರೆ. ಆ ನಾಲ್ಕು ರಾಶಿಗಳು ಯಾವುವು ತಿಳಿಯೋಣ...

ಮೇಷ ರಾಶಿ (Aries) 
ಈ ರಾಶಿಯ ವ್ಯಕ್ತಿಗಳಿಗೆ ಶನಿಯು ಹತ್ತನೇ ಮತ್ತು ಹನ್ನೊಂದನೇ  ಮನೆಯ ಅಧಿಪತಿಯಾಗಿದ್ದು, ಈ ಬಾರಿ ಈ ಗ್ರಹವು ಹತ್ತನೇ ಮನೆಯಲ್ಲಿ ಸ್ಥಿತವಾಗಿದೆ. ಹಾಗಾಗಿ ಈ ಸಮಯದಲ್ಲಿ ಮೇಷ ರಾಶಿಯವರು ತಮ್ಮ ಕೆಲಸಕ್ಕೆ (Work) ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಾರೆ. ಅಷ್ಟೇ ಅಲ್ಲದೆ ಹೊಸ ಹೊಸ ಉದ್ಯೋಗಾವಕಾಶಗಳು (Job opportunities) ಕೈ ಬೀಸಿ ಕರೆಯುತ್ತವೆ. ಇದರಿಂದ ಎಲ್ಲ ಇಚ್ಛೆಗಳು (Desire) ಈಡೇರುತ್ತವೆ. ಈಗಿರುವ ಉದ್ಯೋಗದಲ್ಲಿ ಬಡ್ತಿ (Promotion) ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಅದೇ ವ್ಯಾಪಾರದಲ್ಲಿ ಲಾಭ (Profit) ಮತ್ತು ನಷ್ಟಗಳ (Loss) ಮಿಶ್ರ ಪರಿಣಾಮ (Mixed Effects) ದೊರೆಯಲಿದೆ. ಸಂಬಂಧಗಳು ಉತ್ತಮವಾಗಿರಲಿದ್ದು, ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲಿದೆ. ಇದರಿಂದಾಗಿ ಸಂಗಾತಿಯೊಂದಿಗಿನ ಬಾಂಧವ್ಯ ಮಧುರವಾಗಲಿದೆ.

ಇದನ್ನು ಓದಿ: Personality Traits And Zodiacs: ಈ ನಾಲ್ಕು ರಾಶಿಯವರದು ಬಹಳ ಸೌಮ್ಯ ಸ್ವಭಾವ

ವೃಷಭ ರಾಶಿ (Taurus)
ಈ ರಾಶಿಯ ವ್ಯಕ್ತಿಗಳಿಗೆ ಶನಿಯು ಒಂಭತ್ತು (Nine) ಮತ್ತು ಹತ್ತನೇ ಮನೆಯ ಅಧಿಪತಿ ಗ್ರಹವಾಗಿದೆ. ಈ ಬಾರಿ ಈ ರಾಶಿಯವರಿಗೆ ಶನಿಯು ಒಂಭತ್ತನೇ ಮನೆಯಲ್ಲಿ ಸ್ಥಿತವಾಗಿದ್ದಾನೆ. ಇದರಿಂದಾಗಿ ವೃಷಭ ರಾಶಿಯ ವ್ಯಕ್ತಿಗಳು ಕೆಲಸದ ನಿಮಿತ್ತ ಹೆಚ್ಚು ಪ್ರಯಾಣ ಮಾಡುವ ಅಗತ್ಯ ಎದುರಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ಬಡ್ತಿ ಪಡೆಯುವ ಸಂಭವ ಹೆಚ್ಚಿರುತ್ತದೆ. ವ್ಯಾಪಾರದಲ್ಲಿ (Bussiness) ಸಹ ಹೆಚ್ಚಿನ ಲಾಭ ಪಡೆಯುವ ಅವಕಾಶಗಳು ಎದುರಾಗುತ್ತವೆ. ಆರ್ಥಿಕ ಸ್ಥಿತಿ (Economic) ಮತ್ತಷ್ಟು ಉತ್ತಮವಾಗುತ್ತದೆ. ಮನೆಯಲ್ಲಿ ಸಮೃದ್ಧಿ (Prosperity) ನೆಲೆಸುತ್ತದೆ. ಭಾಗ್ಯದಲ್ಲಿ ವೃದ್ಧಿಯಾಗಲಿದೆ. ಆರ್ಥಿಕವಾಗಿ ಹೆಚ್ಚಿನ ಸಬಲತೆ ಪ್ರಾಪ್ತವಾಗುತ್ತದೆ. ಶನಿ ಗ್ರಹಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ತೊಡಗಿಕೊಂಡವರಿಗೆ ಹೆಚ್ಚಿನ ಲಾಭ ದೊರಕುತ್ತದೆ. ಈ ಅವಧಿಯಲ್ಲಿ ಆರೋಗ್ಯ ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗಿನ (Partner) ಸಂಬಂಧ (Relationship) ಮಧುರವಾಗಲಿದೆ. ರಾಜಕಾರಣದಲ್ಲಿ (Politics) ಸಹ ಉತ್ತಮ ಪ್ರಗತಿಯನ್ನು ಪಡೆಯಬಹುದಾಗಿದೆ.

ಸಿಂಹ ರಾಶಿ (Leo)
ಈ ರಾಶಿಯ ವ್ಯಕ್ತಿಗಳ ಜಾತಕದಲ್ಲಿ ಶನಿಯು ಆರನೇ ಮತ್ತು ಏಳನೇ ಮನೆಯ ಅಧಿಪತಿ ಗ್ರಹವಾಗಿದ್ದು, ಈ ಬಾರಿ ಶನಿಯು ಸಿಂಹ ರಾಶಿ ವ್ಯಕ್ತಿಗಳ ಆರನೇ ಮನೆಯಲ್ಲಿ ಸ್ಥಿತವಾಗಿದ್ದಾನೆ. ಹಾಗಾಗಿ ಕೆಲಸ ಕಾರ್ಯಗಳಲ್ಲಿ ಸಫಲತೆಯನ್ನು ಕಾಣಲು ಹೆಚ್ಚಿನ ಪರಿಶ್ರಮ ಪಡುವ ಅಗತ್ಯವಿದೆ. ಅಷ್ಟೇ ಅಲ್ಲದೆ ಈ ಅವಧಿಯಲ್ಲಿ ಹೊಸ ಅವಕಾಶಗಳು ಎದುರಾಗುತ್ತವೆ. ರಾಜಕಾರಣದಲ್ಲಿ ಸಹ ಅವಕಾಶಗಳು ಲಭ್ಯವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸುವ ಯೋಗ ಸಹ ಈ ರಾಶಿಯವರಿಗಿದೆ. ಈ ಬಾರಿ ಮನೆಯನ್ನು ಕೊಳ್ಳುವ ಸುಯೋಗವು ಸಹ ಪ್ರಾಪ್ತವಾಗಲಿದೆ. ಸಂಗಾತಿಯೊಂದಿಗೆ ಹಲವಾರು ಪ್ರದೇಶಗಳಿಗೆ ತೆರಳಿ ಉತ್ತಮ ಸಮಯವನ್ನುಕಳೆಯುವ ಸಂದರ್ಭವು ಎದುರಾಗುತ್ತದೆ. ಇದರಿಂದ ಬಾಂಧವ್ಯ ಗಟ್ಟಿಗೊಳ್ಳಲಿದೆ. ಆರೋಗ್ಯ ಉತ್ತಮವಾಗಿರಲಿದೆ. 

ಇದನ್ನು ಓದಿ:  Sunday Born Personality: ಭಾನುವಾರ ಹುಟ್ಟಿದೋರು ಅಹಂಕಾರಿಗಳಾ? ಅವ್ರ್ ಲವ್ ಲೈಫ್ ಹೇಗೆ?

ವೃಶ್ಚಿಕ ರಾಶಿ (Scorpio)
ಈ ರಾಶಿಯ ವ್ಯಕ್ತಿಗಳಿಗೆ ಶನಿಯು ಮೂರನೇ ಮತ್ತು ನಾಲ್ಕನೇ ಮನೆಯ ಅಧಿಪತಿ ಗ್ರಹವಾಗಿದೆ. ಈ ಬಾರಿ ಶನಿಯು ಮೂರನೇ ಮನೆಯಲ್ಲಿ ಸ್ಥಿತನಾಗಿದ್ದಾನೆ. ಇದರಿಂದಾಗಿ ಆತ್ಮ - ವಿಕಸನದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದುವಂತಾಗುತ್ತದೆ. ಜೀವನದಲ್ಲಿ ಹೊಸ ಬದಲಾವಣೆಗಳನ್ನು ಕಾಣಲಿದ್ದಾರೆ. ಕಾರ್ಯಕ್ಷೇತ್ರದಲ್ಲಿ ಎಷ್ಟೇ ಒತ್ತಡವಿದ್ದರೂ, ಉತ್ತಮವಾಗಿ ಕೆಲಸ ಮಾಡುವಲ್ಲಿ ಸಕ್ಷಮರಾಗಿರುತ್ತಾರೆ. ವ್ಯಾಪಾರವು ವಿದೇಶಕ್ಕೆ ಸಂಬಂಧಿಸಿದ್ದಾದರೆ, ಹೆಚ್ಚಿನ ಲಾಭವನ್ನು ಪಡೆಯುವಂಥಾಗುತ್ತದೆ. ಕೆಲಸದ ನಿಮಿತ್ತರ ದೂರ ಪ್ರಯಾಣ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ವ್ಯಾಪಾರದಲ್ಲಿ ಹೊಸ ಬದಲಾವಣೆಗಳನ್ನು ತರಲು ಶಕ್ತರಾಗುತ್ತಾರೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗುತ್ತದೆ.

Latest Videos
Follow Us:
Download App:
  • android
  • ios