ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೈನಂದಿನ ಜೀವನದಲ್ಲಿ ಉಪಯುಕ್ತವಾದ ಅನೇಕ ವಸ್ತುಗಳ ಬಳಕೆಯು ಗ್ರಹಗಳನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಇವುಗಳಲ್ಲಿ ಒಂದು ಬಾರ್ಲಿ. ಬಾರ್ಲಿಯ ಈ ರೀತಿಯ ಬಳಕೆಯಿಂದ ಮನೆಯಲ್ಲಿ ಧನಧಾನ್ಯ ತುಂಬಿರುತ್ತದೆ. ಲಕ್ಷ್ಮೀದೇವಿಯ ಸಂಪೂರ್ಣ ಕೃಪೆ ಇರುತ್ತದೆ. 

ಮಾನವನ ಜೀವನದಲ್ಲಿ ಏರಿಳಿತಗಳಿರುತ್ತವೆ. ಆದರೆ ಹಲವು ಬಾರಿ ಕಷ್ಟಪಟ್ಟರೂ ಯಶಸ್ಸು ಸಿಗುವುದಿಲ್ಲ. ಅಂಥ ಪರಿಸ್ಥಿತಿಯಲ್ಲಿ, ಜ್ಯೋತಿಷ್ಯ(astrology)ದಲ್ಲಿ ಕೆಲವು ಪರಿಹಾರಗಳನ್ನು ನೀಡಲಾಗಿದೆ. ಅದು ನಿಮ್ಮ ಜೀವನದ ನಕಾರಾತ್ಮಕತೆಯನ್ನು ಹೋಗಲಾಡಿಸುತ್ತದೆ. 

ಜ್ಯೋತಿಷ್ಯದಲ್ಲಿ, ನಿಮ್ಮ ಸುತ್ತಲಿನ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ಮತ್ತು ಗ್ರಹಗಳ ಶುಭ ಪರಿಣಾಮಗಳನ್ನು ಹೆಚ್ಚಿಸಲು ಅನೇಕ ಪರಿಹಾರಗಳನ್ನು ನೀಡಲಾಗಿದೆ. ಅವುಗಳಲ್ಲಿ ಹೆಚ್ಚಿನವು ದೈನಂದಿನ ವಸ್ತುಗಳನ್ನು ಬಳಸಿಯೇ ದೇವರನ್ನು ಒಲಿಸುವಂಥವು. ಅವುಗಳಲ್ಲೊಂದು ಬಾರ್ಲಿ(barley). ಮಂಗಳಕರ ಮತ್ತು ಪವಿತ್ರವೆಂದು ಪರಿಗಣಿಸಲ್ಪಟ್ಟಿರುವ ಬಾರ್ಲಿಯು ಹವನ, ಪೂಜೆಯಂತಹ ಅನೇಕ ಶುಭ ಕಾರ್ಯಗಳಲ್ಲಿ ಬಳಸಲ್ಪಡುತ್ತದೆ. ಬಾರ್ಲಿಯನ್ನು ಬಳಸಿ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ಕೆಲವು ಪರಿಹಾರಗಳನ್ನು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಆ ಪರಿಹಾರಗಳ(remedies) ಬಗ್ಗೆ ತಿಳಿಯೋಣ.

ಆರೋಗ್ಯಕ್ಕಾಗಿ(For health)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆರೋಗ್ಯಕ್ಕಾಗಿ ಹುಣ್ಣಿಮೆ ಅಥವಾ ಅಮಾವಾಸ್ಯೆಯ ದಿನದಂದು ಬಾರ್ಲಿಯೊಂದಿಗೆ ಹವನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪರಿಣಾಮವನ್ನು ಕಡಿಮೆ ಮಾಡುವುದರೊಂದಿಗೆ, ಕುಟುಂಬದ ಸದಸ್ಯರ ಆರೋಗ್ಯವನ್ನು ಸುಧಾರಿಸುತ್ತದೆ. 

ವಂಚನೆಗೆ ಒಳಗಾದಾಗ ಯಾವ ರಾಶಿ ಹೇಗೆ ಪ್ರತಿಕ್ರಿಯಿಸುತ್ತೆ?

ಸಂಪತ್ತಿಗಾಗಿ(For wealth)
ಧರ್ಮಗ್ರಂಥಗಳ ಪ್ರಕಾರ, ಸಂಪತ್ತನ್ನು ಪಡೆಯಲು ಬಾರ್ಲಿಯನ್ನು ಚಿನ್ನದಂತೆ ಶುದ್ಧವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ, ಬಡವರಿಗೆ ಮತ್ತು ನಿರ್ಗತಿಕರಿಗೆ ಜವೆಗೋಧಿಯನ್ನು ಅಂದರೆ ಬಾರ್ಲಿ ದಾನ ಮಾಡುವುದರಿಂದ ಆರ್ಥಿಕ ಅಡಚಣೆಗಳು ದೂರವಾಗಿ ಧನ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.

ರಾಹುದೃಷ್ಟಿಯಿಂದ ದೂರಾಗಲು
ಜಾತಕದಲ್ಲಿ ರಾಹು(Rahu) ಗ್ರಹದ ಅಶುಭ ಪ್ರಭಾವದಿಂದಾಗಿ ಹಣ, ಕುಟುಂಬ, ವೃತ್ತಿ ಇತ್ಯಾದಿಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಜೀವನದಲ್ಲಿ ಉದ್ಭವಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ರಾಹುವಿನ ದುಷ್ಪರಿಣಾಮಗಳನ್ನು ತೊಡೆದುಹಾಕಲು, ಶನಿವಾರದ ದಿನ ಹರಿಯುವ ನೀರಿಗೆ ಬಾರ್ಲಿ, ಹಸಿ ಹಾಲು, ಎಳ್ಳು, ಕಲ್ಲಿದ್ದಲು, ದೂರ್ವೆ ಮತ್ತು ತಾಮ್ರವನ್ನು ಸುರಿಯಬೇಕು. ಇದಲ್ಲದೆ ಶನಿವಾರ ಪಾರಿವಾಳಕ್ಕೆ ಬಾರ್ಲಿಯನ್ನು ತಿನ್ನಿಸುವುದರಿಂದ ರಾಹು-ಕೇತುಗಳ ದುಷ್ಪರಿಣಾಮಗಳು ದೂರವಾಗುತ್ತವೆ.

ಸಂತೋಷ ಮತ್ತು ಸಮೃದ್ಧಿಗಾಗಿ
ಬಾರ್ಲಿಯನ್ನು ಪ್ರತಿ ದಿನ ಪೂಜೆಯ ಸಂದರ್ಭದಲ್ಲಿ ಭಗವಾನ್ ವಿಷ್ಣುವಿಗೆ ಅರ್ಪಿಸುವುದರಿಂದ, ವ್ಯಕ್ತಿಯು ಮನೆಯಲ್ಲಿ ಸಂತೋಷ(Happiness) ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾನೆ. ಬಾರ್ಲಿಯ ಪಾಯಸವನ್ನು ವಿಷ್ಣುವಿಗೆ ನೈವೇಧ್ಯವಾಗಿ ಅರ್ಪಿಸಬಹುದು.

Jyeshtha Purnima 2022: ಚಂದ್ರದೋಷದಿಂದ ದೂರಾಗಲು, ಲಕ್ಷ್ಮೀ ಕಟಾಕ್ಷಕ್ಕಾಗಿ ಹೀಗೆ ಮಾಡಿ

ಸಾಲಮುಕ್ತರಾಗಲು
ಸಿಕ್ಕಾಪಟ್ಟೆ ಸಾಲ ಇದ್ದರೆ ಹೀಗೆ ಮಾಡಿ. ಸಾಲದಿಂದ ಮುಕ್ತಿ ಹೊಂದಲು ರಾತ್ರಿ ಮಲಗುವ ಮುನ್ನ ಒಂದು ಹಿಡಿ ಬಾರ್ಲಿಯನ್ನು ತೆಗೆದುಕೊಂಡು ಕೆಂಪು ಬಟ್ಟೆಯಲ್ಲಿ ಕಟ್ಟಿ. ಇದರ ನಂತರ, ಅದನ್ನು ಹಾಸಿಗೆಯ ಕೆಳಗೆ ತಲೆಯಲ್ಲಿ ಇರಿಸಿ ಮತ್ತು ಮರು ದಿನ ಬೆಳಿಗ್ಗೆ ಪ್ರಾಣಿಗಳು ಮತ್ತು ಪಕ್ಷಿಗಳು ಅಥವಾ ಅಗತ್ಯವಿರುವವರಿಗೆ ವಿತರಿಸಿ.

ಲಕ್ಷ್ಮೀ ಕೃಪೆಗಾಗಿ
ತಾಯಿ ಲಕ್ಷ್ಮಿಯ ಕೃಪೆಯಿದ್ದರೆ ಮನೆಯಲ್ಲಿ ಸುಖ, ಶಾಂತಿ ಮತ್ತು ಸಂಪತ್ತು ಸದಾ ನೆಲೆಸಿರುತ್ತದೆ. ಹೀಗಾಗಿ, ಆಕೆ ಸದಾ ನಿಮ್ಮ ಮನೆಯಲ್ಲಿರಬೇಕೆಂದರೆ ಬಾರ್ಲಿಯ ಈ ಉಪಾಯ ಮಾಡಿ. ಮನೆಯಲ್ಲಿ ಯಾವುದೇ ಶುಭ ಕಾರ್ಯಕ್ರಮದ ಸಮಯದಲ್ಲಿ, ಬಾರ್ಲಿ ಧಾನ್ಯಗಳನ್ನು ಕಲಶ ಅಥವಾ ದೇವರ ವಿಗ್ರಹದ ಕೆಳಗೆ ಇಡುವುದರಿಂದ ಮನೆಯಲ್ಲಿ ಲಕ್ಷ್ಮಿ ದೇವಿಯ ವಾಸ ಸದಾ ಇರುತ್ತದೆ. ಆಕೆ ಇದ್ದ ಮೇಲೆ ಹಣಕಾಸಿನ ಸಮಸ್ಯೆಯಾಗದು.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.