Asianet Suvarna News Asianet Suvarna News

Business Astro: ಕ್ಲಿಕ್ ಆಗೋಕೆ ಜ್ಯೋತಿಷ್ಯದ ಟಿಪ್ಸ್

ಕೆಲವರು ಶಕ್ತಿ ಮೀರಿ ಪ್ರಯತ್ನಿಸಿದರೂ ವ್ಯಾಪಾರದಲ್ಲಿ ಲಾಭವಾಗುವುದಿಲ್ಲ. ಹಣ ಮಾಡಬೇಕೆಂಬ ಅವರ ಉದ್ದೇಶ ಫಲಿಸುವುದಿಲ್ಲ. ಇದಕ್ಕಾಗಿ ಅವರು ದೇವರ ಮೊರೆಯನ್ನೂ ಹೋಗಿರುತ್ತಾರೆ. ಆದರೆ, ಜೊತೆಗೆ ಒಂದಷ್ಟು ಜ್ಯೋತಿಷ್ಯ ಶಾಸ್ತ್ರದ ನಿಯಮಗಳನ್ನು ಅನುಸರಿಸಿದರೆ ಲಾಭವನ್ನು ಪಡೆಯಬಹುದಾಗಿದೆ. ಅದು ಯಾವುದು ಎಂಬ ಬಗ್ಗೆ ತಿಳಿಯೋಣ ಬನ್ನಿ...

Astrological tips to get success in business
Author
Bangalore, First Published Dec 29, 2021, 7:30 PM IST

ವ್ಯಾಪಾರದಲ್ಲಿ (Business ) ಯಶಸ್ಸು (Success) ಗಳಿಸುವುದು ವ್ಯಾಪಾರಸ್ಥರ (Businessman) ಕನಸಾಗಿರುತ್ತದೆ (Dream). ಅಂದುಕೊಂಡ ಲಾಭ (Profit) ಪಡೆಯಲು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಾರೆ (Effort). ಇಷ್ಟು ಕಷ್ಟಪಟ್ಟರೂ ಲಾಭ ಪಡೆಯುವುದು ಮರೀಚಿಕೆಯಾಗಿರಲಿದೆ. ಇದಕ್ಕಾಗಿ ಸಾಕಷ್ಟು ಕಷ್ಟಪಟ್ಟಿರುತ್ತಾರೆ. ಏನೇ ಮಾಡಿದರೂ ವ್ಯಾಪಾರ ಮಾತ್ರ ಕೈಗೆ ಹತ್ತುತ್ತಿಲ್ಲ. ಮಾಡಿಕೊಂಡ ಹರಕೆಗಳಿಲ್ಲ, ಹೋದ ದೇವಸ್ಥಾನಗಳಿಲ್ಲ ಎನ್ನುವ ಪರಿಸ್ಥಿತಿ. ಹಾಗಾದರೆ ಇದ್ಕಕೆ ಪರಿಹಾರ ಇಲ್ಲವೇ..? ಖಂಡಿತಾ ಇದೆ. ಆದರೆ ಜ್ಯೋತಿಷ್ಯ ಶಾಸ್ತ್ರದ (Astrology) ಕೆಲವು ಉಪಾಯಗಳನ್ನು (Tips) ಅನುಸರಿಸಬೇಕು. (Follow).  ಹೀಗೆ ಮಾಡಿದರೆ ಲಾಭ ಕಟ್ಟಿಟ್ಟ ಬುತ್ತಿ. ಹಾಗಾದರೆ ಬಿಸ್ನೆಸ್ ಅಂದುಕೊಂಡಂತೆ ನಡೆಯಲು, ವ್ಯಾಪಾರದಲ್ಲಿ ಹೆಚ್ಚು ಲಾಭ ಪಡೆಯಲು, ಯೋಜನೆಗಳು ಕೈಗೂಡಲು ನಾವು ಏನು ಮಾಡಬಹುದು..? ಏನು ಮಾಡಿದರೆ ಅದರಿಂದ ಲಾಭವನ್ನು ಪಡೆದುಕೊಳ್ಳಬಹುದು..? ಎಂಬ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ನೀಡುವ ಕೆಲವು ಸಲಹೆಗಳ ಬಗ್ಗೆ ತಿಳಿಯೋಣ.....

ಅರಳಿ ಮರದ ಎಲೆಯ ಉಪಾಯ (Sacred fig)
ಪ್ರತಿ ಮಂಗಳವಾರ (Tuesday ) ಅರಳಿಮರದ ಹನ್ನೊಂದು (Eleven) ಎಲೆಗಳನ್ನು (Leaf) ತೆಗೆದುಕೊಳ್ಳಬೇಕು. ನಂತರ  ಅದರ ಮೇಲೆ ಚಂದನದಲ್ಲಿ ರಾಮ - ರಾಮ (Rama) ಎಂದು ಬರೆದು ಹನುಮಂತನ (Hanuman) ದೇವಸ್ಥಾನಕ್ಕೆ (Temple) ಅರ್ಪಿಸಬೇಕು. ಹೀಗೆ ಮಾಡಿದರೆ ವ್ಯಾಪಾರದಲ್ಲಿ ಅಂದುಕೊಂಡ ಲಾಭ (Profit) ಪಡೆಯಲು ಸಾಧ್ಯವಾಗುತ್ತದೆ. ಈ ಕ್ರಿಯೆಯನ್ನು ನಿರಂತರವಾಗಿ ಮಾಡಬೇಕಿದೆ. ಆದರೆ, ಇದನ್ನು ರಹಸ್ಯವಾಗಿ (Suspense) ಮಾಡುವುದು ಒಳಿತು (Good). ನೀವು ಕೈಗೊಳ್ಳುವ ಈ ಪ್ರಕ್ರಿಯೆಯು ನಿಮ್ಮ ಕುಟುಂಬದವರಿಗೆ ಮಾತ್ರ ತಿಳಿದಿದ್ದರೆ ಸಾಕು. 

ಈ ಉಪಾಯದಿಂದ ಲಾಭ (Tips for profit)
ವ್ಯಾಪಾರದ ಸಂದರ್ಭದಲ್ಲಿ ವಸ್ತುಗಳನ್ನು (Things) ಖರೀದಿಸಲು (Purchase) ಹೊರಡುವ ಸಮಯದಲ್ಲಿ (Time) 21 ರೂಪಾಯಿಯನ್ನು (Rupees) ಗುಪ್ತ (ಯಾರಿಗೂ ತಿಳಿಯದ) ಸ್ಥಳದಲ್ಲಿ (Secret place) ಎತ್ತಿಡಬೇಕು. ಆನಂತರ ವಸ್ತುಗಳನ್ನು ಖರೀದಿಸಿ ಹಿಂತಿರುಗಿದ ಮೇಲೆ ಆ 21 ರೂಪಾಯಿಯನ್ನು ಸಾಧುಗಳಿಗೆ (Sadhu), ಪಂಡಿತರಿಗೆ (Priest) ಅಥವಾ ಹಿರಿಯರಿಗೆ (Senior) ದಾನವಾಗಿ (Donate) ನೀಡಬೇಕು. ಹೀಗೆ ಮಾಡುವುದರಿಂದ ವ್ಯಾಪಾರದಲ್ಲಿ ಲಾಭ ಸಿಗುತ್ತದೆ. 

ಪರಿಮಳ ಬೀರುವ ಅಗರಬತ್ತಿ ಹಚ್ಚಿಡಿ (Incense)
ವ್ಯಾಪಾರದ ಸ್ಥಳದಲ್ಲಿ ದೇವರ (God) ಅನುಷ್ಠಾನಗಳನ್ನು (Worship) ಮಾಡಬೇಕು. ಸಾಧ್ಯವಾದಲ್ಲಿ ಅಲ್ಲೇ ಸಂಧ್ಯಾವಂದನೆಯನ್ನು (Sandhya vandana) ಮಾಡಬೇಕು. ಅಷ್ಟೆ ಅಲ್ಲದೆ ಪ್ರತಿನಿತ್ಯ ದೀಪ ಬೆಳಗಿಸಿ (Lightining) ಅಗರಬತ್ತಿ ಹಚ್ಚಿ ಇಡಬೇಕು. ಇದರಿಂದ ಆ ಸ್ಥಳದಲ್ಲಿ ಸಕಾರಾತ್ಮಕ ಶಕ್ತಿ (Positive energy) ಹೆಚ್ಚುತ್ತದೆ. 

ಇದನ್ನು ಓದಿ: New Year Mantra: ಹೊಸ ವರ್ಷದ ಸುಖ-ಸಮೃದ್ಧಿಗೆ ಗ್ರಹದೋಷ ನಿವಾರಣಾ ಮಂತ್ರಗಳು!

ಕುಂಕುಮ ಮತ್ತು ಕರ್ಪೂರದಿಂದ (Camphor) ಹೀಗೆ ಮಾಡಿ 
ಕರ್ಪೂರಕ್ಕೆ ಕುಂಕುಮವನ್ನು ಸೇರಿಸಿ ಹಚ್ಚಬೇಕು. ನಂತರ ಅದನ್ನು ದೀಪಾವಳಿಯ ದಿನ ಈ ಪುಡಿಯನ್ನು ಕಟ್ಟಿ ತಾಯತದಂತೆ ಮಾಡಿಕೊಂಡು ಕಟ್ಟಿಕೊಳ್ಳಬೇಕು. ಇದರಿಂದ ವ್ಯಾಪಾರಕ್ಕೆ ಕೆಟ್ಟದೃಷ್ಟಿ ಸಾಕಿದ್ದರೆ ಅದು ನಿವಾರಣೆಯಾಗುತ್ತದೆ. 

ಇದನ್ನು ಓದಿ : ಅತ್ತೆ-ಸೊಸೆ ಜಗಳ ಹೆಚ್ಚಾಗಿದ್ರೆ ಈ Vaastu Tips ಪಾಲಿಸಿ ನೋಡಿ..

ಸರಳ ಉಪಾಯಗಳು 
ಪ್ರತಿ ಶನಿವಾರ (Saturday) ವ್ಯಾಪಾರದ ಸ್ಥಳದಲ್ಲಿ ನಿಂಬೆಹಣ್ಣು (Lemon) ಮತ್ತು 7 ಹಸಿಮೆಣಸಿನ (Chilli) ಕಾಯಿಯನ್ನು ಕಟ್ಟಬೇಕು.
ವ್ಯಾಪಾರದ ಸ್ಥಳದಲ್ಲಿ ಮಂತ್ರಿಸಿದ ತೆಂಗಿನಕಾಯಿಯನ್ನು (Coconut) ಕೆಂಪು ಬಟ್ಟೆಯಲ್ಲಿ ಕಟ್ಟಿ ಇಡಬೇಕು.
ಪ್ರತಿನಿತ್ಯ ಸಂಜೆ (Evening) ಲಕ್ಷ್ಮೀ ದೇವಿಯ ಎದುರಿಗೆ ದೀಪವನ್ನು ಹಚ್ಚಿಡಬೇಕು. 
ಸಾಧ್ಯವಾದಲ್ಲಿ ವ್ಯಾಪಾರದ ಸ್ಥಳದಲ್ಲಿ ದಕ್ಷಿಣ ದಿಕ್ಕಿಗೆ (South direction)  ಶಿವಲಿಂಗವನ್ನು ಪ್ರತಿಷ್ಠಾಪಿಸಬೇಕು. ಇಂತಹ ಸಣ್ಣ ಸಣ್ಣ ಕೆಲಸಗಳು ನಿಮಗೆ ಹೆಚ್ಚಿನ ಧನಲಾಭವನ್ನು ತಂದುಕೊಡುತ್ತದೆ.

Follow Us:
Download App:
  • android
  • ios