Asianet Suvarna News Asianet Suvarna News

ಅತ್ತೆ-ಸೊಸೆ ಜಗಳ ಹೆಚ್ಚಾಗಿದ್ರೆ ಈ Vaastu Tips ಪಾಲಿಸಿ ನೋಡಿ..

ಮನೆಯೆಂದ ಮೇಲೆ ಜಗಳಗಳು ಸಾಮಾನ್ಯ. ಆದರೆ, ಜಗಳವೇ ಬದುಕಾಗಬಾರದು. ಕೆಲವರು ಇಂಥ ವರ್ತನೆಯಿಂದ ಬೇಸತ್ತು ಹೋಗಿರುತ್ತಾರೆ. ಹಾಗಾದರೆ, ಇವುಗಳಿಗೆ ಪರಿಹಾರ ಇಲ್ಲವೇ..? ವಿವಾದವೇ ಇಲ್ಲದೇ ಬದುಕಲು ಸಾಧ್ಯವಿಲ್ಲವೇ ಎಂದು ನೋಡುವುದಾದರೆ ಖಂಡಿತಾ ಸಾಧ್ಯವಿದೆ. ಇದಕ್ಕೆ ವಾಸ್ತು ನಿಯಮಗಳನ್ನು ಅನುಸರಿಸಬೇಕು. ನೀವು ಹೀಗೆ ಮಾಡಿದ್ದೇ ಆದಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಇವುಗಳಿಂದ ಹೊರಬರಬಹುದು. ಹಾಗಾದರೆ ಅವುಗಳ ಬಗ್ಗೆ ನೋಡೋಣ ಬನ್ನಿ....

vastu tips to strengthen relationship with Mother-in-law
Author
Bangalore, First Published Dec 28, 2021, 11:03 AM IST

ಕುಟುಂಬ (Family) ಎಂದರೆ ಅದರಲ್ಲಿ ಎಲ್ಲರೂ ಬರುತ್ತಾರೆ. ಗಂಡ – ಹೆಂಡತಿ (Husband and Wife), ಮಕ್ಕಳು (Children), ತಂದೆ – ತಾಯಿ (Father and Mother), ಅತ್ತೆ – ಮಾವ (Father in law) ಹೀಗೆ ಸಂಬಂಧಗಳ ಕೊಂಡಿಯೊಂದಿಗೆ ಬದುಕುವುದು, ಜೀವನವನ್ನು (Life) ನಡೆಸಿಕೊಂಡು ಹೋಗುವುದು ರೂಢಿ. ಇದರಲ್ಲೇ ಆನಂದವನ್ನು ಕಾಣಬೇಕಾಗುತ್ತದೆ. ಒಂದು ಮನೆಗೆ ಸೊಸೆಯಾಗಿ ಕಾಲಿಡುವವಳು ತಾನು ಅತ್ತೆಯಾದ ಮೇಲೆ ತಾನು ಅನುಭವಿಸಿದಂತೆ ಪುನಃ ತನ್ನ ಸೊಸೆಗೆ ಕಾಟವನ್ನು ಕೊಡಲು ಶುರು ಮಾಡುವುದನ್ನೂ ನಾವು ನೋಡಿರುತ್ತೇವೆ. ಆಕೆ ಸೊಸೆಯಾಗಿದ್ದಾಗ ಅತ್ತೆಯ ವರ್ತನೆಗೆ ಎಷ್ಟು ಬಾರಿ ಶಪಿಸಿದ್ದಳೋ ಏನೋ, ತಾನು ಅತ್ತೆಯಾದಾಗ ಅದನ್ನು ಮರೆತುಬಿಟ್ಟಿರುತ್ತಾಳೆ. ಆದರೆ, ಇನ್ನು ಕೆಲವು ಅತ್ತೆಯಂದಿರು ತಮ್ಮ ಸೊಸೆಯಂದಿರನ್ನು ಅತ್ಯಂತ ಅಕ್ಕರೆಯಿಂದ ಸ್ವಂತ ಮಗಳಂತೆ (Daughter) ನೋಡಿಕೊಳ್ಳುತ್ತಾರೆ. ಆ ಸೊಸೆಯೂ ಸಹ ಅವರೊಂದಿಗೆ ಮಗಳಂತೆಯೇ ಇರುತ್ತಾರೆ. ಹೀಗಿರಲು ವಾಸ್ತು ಸಲಹೆಗಳನ್ನು ಅನುಸರಿಸಬೇಕು. ಹಾಗಾದರೆ ನೀವೇನು ಮಾಡಬಹುದು ಎಂಬುದನ್ನು ನೋಡೋಣ ಬನ್ನಿ... ವಾಸ್ತುವಿನ ಬದಲಾವಣೆಯಿಂದ ಬದಾಲಾಗಲಿ ನಿಮ್ಮ ಶೈಲಿ...

ನೈರುತ್ಯದಲ್ಲಿರಲಿ ಹಿರಿಯರ ಕೋಣೆ
ಕುಟುಂಬದ ಹಿರಿಯರ ಕೊಠಡಿಯು ಪೂರ್ವ (East) ಮತ್ತು ನೈರುತ್ಯ (South West) ದಿಕ್ಕಿನಲ್ಲಿ ಇರಬೇಕು. ಇದರಿಂದ ಅವರ ಆರೋಗ್ಯ ಸಹ ಉತ್ತಮವಾಗಿರುತ್ತದೆ. ಇನ್ನು ಸೊಸೆಯ ಕೋಣೆಯು ಪಶ್ಚಿಮ (west) ಅಥವಾ ದಕ್ಷಿಣ (South) ದಿಕ್ಕಿನಲ್ಲಿದ್ದರೆ ಅತ್ತೆ (Mother – in – Law) – ಸೊಸೆ (Daughter-in-law) ನಡುವೆ ಬಾಂಧವ್ಯ ಗಟ್ಟಿಯಾಗಲಿದೆ ಎಂದು ಹೇಳಲಾಗಿದೆ. 

ಈಶಾನ್ಯ ದಿಕ್ಕು (North East)
ಈಶಾನ್ಯ ದಿಕ್ಕು ದೈವ ಶಕ್ತಿಗಳಿಗೆ (Divine) ಹೆಚ್ಚು ಸೂಕ್ತ ಎಂದು ಹೇಳಲಾಗುತ್ತದೆ. ಇಲ್ಲಿ ಹೆಚ್ಚಿನ ಧನಾತ್ಮಕ (Positive) ಶಕ್ತಿಯು ಪಸರಿಸುತ್ತದೆ. ಈ ಭಾಗದಲ್ಲಿ ದೇವರ (God) ಕೋಣೆ ಇಲ್ಲವೇ ಧ್ಯಾನ (Meditation) ಕೊಠಡಿಯನ್ನು (Room) ಬಳಸಿದ್ದೇ ಆದಲ್ಲಿ ಮನೆಯಲ್ಲಿ (Home) ಸದಾ ಪ್ರಶಾಂತತೆಯು ನೆಲೆಸಿರುತ್ತದೆ. ಆದರೆ, ಈ ಒಂದು ಸಂಗತಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ಈ ದಿಕ್ಕಿನಲ್ಲಿ ಅಡುಗೆ ಮನೆಯನ್ನು ನಿರ್ಮಿಸಬಾರದು. ಕಾರಣ, ಅದು ಆಕ್ರಮಣಕಾರಿ (Aggressive) ಮನೋಭಾವ (Behaviour) ಮತ್ತು ನಡವಳಿಕೆಗೆ ಕಾರಣವಾಗುತ್ತದೆ. ಇದು ಅತ್ತೆ-ಸೊಸೆಯ ಸಂಬಂಧಗಳ ಮೇಲೆ ಪರಿಣಾಮವನ್ನು ಬೀರುತ್ತದೆ.

ಇದನ್ನು ಓದಿ: Planetary Influence: ಈ ಗ್ರಹಗಳ ಪ್ರಭಾವದಿಂದ ಅಪರಾಧಿಗಳಾದೀರಿ ಹುಷಾರ್!

ನಿಮ್ಮ ಮಲಗುವ ದಿಕ್ಕು ಹೀಗಿರಲಿ (Sleeping Direction) 
ಮಲಗುವಾಗಲು ದಿಕ್ಕು ಪ್ರಾಮುಖ್ಯತೆ ವಹಿಸಿಕೊಳ್ಳುತ್ತದೆ. ದಕ್ಷಿಣ (South) ದಿಕ್ಕಿನಲ್ಲಿ ತಲೆ (Head) ಇಟ್ಟು ಮಲಗುವುದು ಹೆಚ್ಚು ಸೂಕ್ತ ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ. ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿದರೆ ತಿಳಿವಳಿಕೆ ಮಟ್ಟವೂ ಹೆಚ್ಚುತ್ತದೆ. ಅಲ್ಲದೆ, ಇದು ಅತ್ತೆ-ಮಾವಂದಿರೊಂದಿಗಿನ ಸಂಬಂಧವನ್ನು ವೃದ್ಧಿಸುತ್ತದೆ. 

ನಿಮ್ಮ ಕೋಣೆಗಳ ಬಣ್ಣ (Colour) ಹೇಗಿರಬೇಕು ಗೊತ್ತಾ..?
ಇಲ್ಲಿ ಅತ್ತೆ ಮತ್ತು ಸೊಸೆಯ ಕೋಣೆಗಳ ಗೋಡೆಗಳಿಗೆ (Wall) ಯಾವ ಬಣ್ಣವನ್ನು ಹೊಡೆಯಲಾಗಿದೆ ಎನ್ನುವುದು ಮುಖ್ಯವಾಗುತ್ತದೆ. ಇಬ್ಬರೂ ತಮ್ಮ ಕೋಣೆಗಳಿಗೆ ತಿಳಿ ಬಣ್ಣಗಳನ್ನೇ (Light colours) ಬಳಿಸಿಕೊಳ್ಳಬೇಕು. ನೀಲಿ ಬಣ್ಣವನ್ನು ಬಳಸಿದರೆ ಅದಕ್ಕೆ ಶಾಂತ ಸ್ವಭಾವವನ್ನು ನೀಡುವ ಶಕ್ತಿ ಇರುತ್ತದೆ. ಹೀಗಾಗಿ ನೀವು ತಿಳಿ ಬಣ್ಣಗಳು ಅಥವಾ ತಿಳಿ ನೀಲಿ (Blue) ಬಣ್ಣಗಳನ್ನು ಬಳಸಬಹುದು. ಗಾಢ ಬಣ್ಣಗಳು (Dark colours) ಅಥವಾ ಕೆಂಪು ಬಣ್ಣಗಳನ್ನು ಬಳಸದಿದ್ದರೆ ಒಳಿತು. ಇಲ್ಲದಿದ್ದರೆ ಮನೆಯಲ್ಲಿ ಮತ್ತೆ ಕಾದಾಟಗಳು ನಡೆಯಲಿವೆ.

ಇದನ್ನು ಓದಿ: New Year Mantra: ಹೊಸ ವರ್ಷದ ಸುಖ-ಸಮೃದ್ಧಿಗೆ ಗ್ರಹದೋಷ ನಿವಾರಣಾ ಮಂತ್ರಗಳು!

ಮೂಡಲಿ ಧಾರ್ಮಿಕ ಚಿಂತನೆ
ಟಿವಿಯಲ್ಲಿ ಸೀರಿಯಲ್‌ಗಳನ್ನು (Tv serial) ನೋಡುವ ಬದಲು ಧಾರ್ಮಿಕಕ್ಕೆ (Religious) ಸಂಬಂಧಪಟ್ಟ ಇಲ್ಲವೇ ಮನೋರಂಜನಾತ್ಮಕ (Entertainment) ಕಾರ್ಯಕ್ರಮಗಳನ್ನು (Program) ಹೆಚ್ಚು ವೀಕ್ಷಿಸಿ. ಇದರಿಂದ ಅತ್ತೆ – ಸೊಸೆಯ ಸಂಬಂಧವು ಸದಾ ಸಂತೋಷದಿಂದ (Happy) ಕೂಡಿರುತ್ತದೆ. 

Follow Us:
Download App:
  • android
  • ios