ನಿಮ್ಮಿಷ್ಟದ ಉದ್ಯೋಗ ಪಡೆಯೋಕೆ ಆಂಜನೇಯನನ್ನು ಹೀಗೆ ಮೆಚ್ಚಿಸಿ..

ಮನಸ್ಸಿಗೆ ಕಷ್ಟವಾದ, ನೆಮ್ಮದಿ ಇಲ್ಲದ ಕೆಲಸದಲ್ಲಿದ್ದರೆ, ಕನಸಿನ ಉದ್ಯೋಗವನ್ನು ಪಡೆಯಬೇಕೆಂದು ಬಯಸುತ್ತಿದ್ದರೆ, ಅಂಥವರು ಇಲ್ಲಿ ಹೇಳಿದ ಕೆಲವು ಸರಳ ಉಪಾಯಗಳನ್ನು ಪಾಲಿಸಬೇಕಾಗುತ್ತದೆ. ಶ್ರದ್ಧಾ ಭಕ್ತಿಯಿಂದ ಪಾಲಿಸಿದಲ್ಲಿ ಅಂದುಕೊಂಡ ಕೆಲಸ ಸಿಗುವುದು ಖಚಿತ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ ಅವು ಯಾವುವು ಎಂಬುದನ್ನು ತಿಳಿಯೋಣ... 

Astrological remedies to get into your dream job skr

ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಉದ್ಯೋಗಕ್ಕೆ ಸೇರುವುದು ಎಲ್ಲರ ಕನಸಾಗಿರುತ್ತದೆ. ಅದರಲ್ಲೂ ಇಂಥದ್ದೇ ಕೆಲಸ ಬೇಕೆಂದು ಅದನ್ನೇ ಹುಡುಕಿಕೊಂಡು ಅಲೆಯುವವರೇ ಹೆಚ್ಚು. ಆದರೆ ಅಂದುಕೊಂಡದ್ದು ಒಂದಾದರೆ ಆಗುವುದು ಮತ್ತೊಂದಾಗಿರುತ್ತದೆ. ಅಷ್ಟಾದರೂ ಬೇಕಾದ ಕೆಲಸ ಸಿಗದಿದ್ದಾಗ ಇಷ್ಟವಾಗಿರುವ ಕೆಲಸ ಪಡೆಯಲು ಕಷ್ಟ ಪಡಲೇ ಬೇಕು ಎಂದು ಸಮಾಧಾನ ಮಾಡಿಕೊಳ್ಳುವವರೇ ಹೆಚ್ಚು. ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಸರಳ ಉಪಾಯಗಳನ್ನು ಪಾಲಿಸಿದರೆ ಇಷ್ಟದ ಕೆಲಸವನ್ನು ಪಡೆಯುವ ಅದೃಷ್ಟ ಸಿಗುತ್ತದೆ.  

ಉದ್ಯೋಗ ಸಿಕ್ಕಿದರೂ ಅದು ಯೋಗ್ಯತೆಗೆ ತಕ್ಕದಾಗಿದ್ದರೆ ಮಾಡಲು ಮನಸ್ಸಿರುತ್ತದೆ. ಇಲ್ಲವಾದರೆ ಮನಸ್ಸಿಲ್ಲದೇ ಕೆಲಸ ಮಾಡುವ ಪರಿಸ್ಥಿತಿ ಎದುರಾಗುತ್ತದೆ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಜ್ಯೋತಿಷ್ಯದಲ್ಲಿ ತಿಳಿಸಿರುವ ಉಪಾಯಗಳ ಬಗ್ಗೆ ತಿಳಿಯೋಣ....

ಸೋಮವಾರ ಹೀಗೆ ಮಾಡಿ
ದೇವರ ಮೊರೆ ಹೋದರೆ ಕಷ್ಟಗಳಿಂದ ಮುಕ್ತಿ ಸಿಗುವುದು ಖಚಿತ. ಆದರೆ ಅದಕ್ಕೂ ಕೆಲವು ನಿಯಮಗಳಿರುತ್ತವೆ. ಆಯಾ ದೇವರಿಗೆ ಪ್ರಿಯವಾಗಿರುವಂತೆ ಮಾಡಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ಹಾಗಾಗಿ ಇಷ್ಟದ ಕೆಲಸ ಪಡೆಯಲು ಪ್ರತಿ ತಿಂಗಳ ಮೊದಲ ಸೋಮವಾರದಂದು ಬಿಳಿ ಬಣ್ಣದ ವಸ್ತ್ರದಲ್ಲಿ ಕಪ್ಪು ಅಕ್ಕಿಯನ್ನು ಹಾಕಿ ಅದನ್ನು ಕಾಳಿ ದೇವಸ್ಥಾನಕ್ಕೆ ಅರ್ಪಿಸಿ ಪ್ರಾರ್ಥಿಸಿಕೊಳ್ಳಬೇಕು. ಕಾಳಿ ದೇವಿಯ ಪಾದಗಳ ಮೇಲಿಟ್ಟು ಮನಸ್ಸಿನಲ್ಲಿರುವುದನ್ನು ಕೇಳಿಕೊಳ್ಳಬೇಕು. ಇದರಿಂದ ಕೆಲಸಕ್ಕೆ ಆಗುವ ತೊಡಕುಗಳು ನಿವಾರಣೆಯಾಗುತ್ತವೆ. ಅಷ್ಟೇ ಅಲ್ಲದೆ ಪ್ರತಿ ಮುಂಜಾನೆ ಪಕ್ಷಿಗಳಿಗೆ ಏಳು ಬಗೆಯ ಧಾನ್ಯಗಳನ್ನು ಕೊಡಬೇಕು. ಹೀಗೆ ಮಾಡುವುದರಿಂದ ಸಹ ಕೆಲಸ ಬೇಗ ಸಿಗುತ್ತದೆ ಎಂಬ ನಂಬಿಕೆ ಇದೆ. ಪ್ರತಿ ಸೋಮವಾರ ಶಿವಲಿಂಗಕ್ಕೆ ಜಲವನ್ನು ಮತ್ತು ಅಕ್ಷತೆಯನ್ನು ಅರ್ಪಿಸಿದರೆ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ.

ಇದನ್ನು ಓದಿ: ಚಾತುರ್ಮಾಸದಲ್ಲಿ ನೀವೇನು ಮಾಡಬೇಕು ಎಂಬುದ ತಿಳಿಯಿರಿ..

ಆಂಜನೇಯನ ಕೃಪೆ
ಆಂಜನೇಯನನ್ನು ಪ್ರಾರ್ಥಿಸಿಕೊಳ್ಳುವುದರಿಂದ ಅಡಚಣೆಗಳು ದೂರವಾಗುತ್ತವೆ. ಕೆಲಸಕ್ಕೆ ತೊಂದರೆ ಆದಾಗ, ಕೆಲಸದ ಸ್ಥಳದಲ್ಲಿ ಕಿರಿಕಿರಿ ಆಗುತ್ತಿದ್ದರೆ, ಕಾರ್ಯ ಸ್ಥಳದಲ್ಲಿ ಮನಸ್ಸಿಗೆ ನೆಮ್ಮದಿ ಇಲ್ಲದಿದ್ದರೆ, ಅಂಥ ಸಮಯದಲ್ಲಿ ಮನೆಯಲ್ಲಿ ಹನುಮಂತನು ಹಾರುತ್ತಿರುವ ಭಂಗಿಯ ಫೋಟೋವನ್ನು ಇಟ್ಟುಕೊಳ್ಳಬೇಕು. ಅಷ್ಟೇ ಅಲ್ಲದೆ ಆಂಜನೇಯನನ್ನು ಪ್ರತಿ ನಿತ್ಯ ಭಜಿಸಬೇಕು ಹಾಗು ಪ್ರತಿ ಮಂಗಳವಾರ ಹನುಮಂತನಿಗೆ ಸಂಬಂಧಿಸಿದ ಸ್ತ್ರೋತ್ರಗಳನ್ನು ಪಠಣ ಮಾಡಬೇಕು. ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಅಂದುಕೊಂಡ ಕೆಲಸಗಳು ಸಿದ್ಧಿಸುತ್ತವೆ.

ಕೆಲಸಕ್ಕೆ ಆಗುವ ತೊಂದರೆಗಳ ನಿವಾರಣೆಗೆ ಹೀಗೆ ಮಾಡಿ. 
ಒಂದು ನಿಂಬೆ ಹಣ್ಣಿನಲ್ಲಿ ನಾಲ್ಕು ಲವಂಗವನ್ನು ಇಡಬೇಕು ನಂತರ 108 ಬಾರಿ “ಓಂ ಶ್ರೀ ಹನುಮತೇ ನಮಃ” ಎಂಬ ಮಂತ್ರವನ್ನು ಪಠಿಸಬೇಕು. ಆ ನಿಂಬೆ ಹಣ್ಣನ್ನು ಬ್ಯಾಗ್ ಅಥವಾ ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ಸಮಸ್ಯೆಗಳಿಂದ ಮುಕ್ತಿ ದೊರಕುತ್ತದೆ.

ಇಷ್ಟದ ಕೆಲಸ ಪಡೆಯಲು
ನಿತ್ಯವೂ ಹನುಮಾನ್ ಚಾಲೀಸಾವನ್ನು ಪಠಿಸಿದರೆ ಉತ್ತಮ ಫಲ ಪ್ರಾಪ್ತಿಯಾಗುತ್ತದೆ. ಅದರಲ್ಲು ಸಂದರ್ಶನಕ್ಕೆ ಹೋಗುವ ದಿನ ಮನೆಯಿಂದ ಹೊರಡುವ ಮುನ್ನ ಹನುಮಾನ್ ಚಾಲೀಸಾ ಪಠಿಸಿದರೆ ಉದ್ದೇಶ ಸಫಲವಾಗುತ್ತದೆ.  ಹಾಗು ಸ್ನಾನ ಮಾಡುವ ನೀರಿಗೆ ಸ್ವಲ್ಪ ಅರಿಶಿಣವನ್ನು ಬೆರಸಬೇಕು. ನಂತರ ಆ ನೀರಿನಲ್ಲಿ ಸ್ನಾನ ಮಾಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. 

ಇದನ್ನು ಓದಿ: ಮನೆಯ ಸುಖ ಶಾಂತಿಗಿರಲಿ ಶಂಖಪುಷ್ಪ, ಹೂವಲ್ಲೇನಿದೆ ವಿಶೇಷ!

ದೇವರ ಆರಾಧನೆ
ಎಲ್ಲಕ್ಕಿಂತ ಮೊದಲು ಪ್ರತಿ ನಿತ್ಯ ಮನೆಯ ಕುಲದೇವರು ಅಥವಾ ಇಷ್ಟ ದೇವರನ್ನು ಪೂಜಿಸಿ ಆರಾಧಿಸುವುದರಿಂದ  ಕೆಲಸದಲ್ಲಿ ಸಫಲತೆ ಸಿಗುತ್ತದೆ. ಅಷ್ಟೇ ಅಲ್ಲದೇ ದೇವರ ಮುಂದೆ ಹನ್ನೊಂದು ಅಗರಬತ್ತಿಯನ್ನು ಮತ್ತು ದೀಪವನ್ನು ಬೆಳಗಬೇಕು. ಇದರಿಂದ ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ. ಮನೆಯಿಂದ ಕೆಲಸಕ್ಕೆ ಹೊರಡುವ ಮುನ್ನ ಎಡಗಾಲನ್ನು ಮೊದಲು ಹೊರಗಿಟ್ಟು ಹೊಸ್ತಿಲು ದಾಟಬೇಕು. ಉತ್ತಮ ಕಾರ್ಯಗಳಿಗೆ ಹೊರಗಡೆ ಹೋಗುವ ಮುನ್ನ ಸಿಹಿಯನ್ನಾಗಲಿ ಅಥವಾ ಮೊಸರು –ಸಕ್ಕರೆಯನ್ನಾಗಲಿ ತಿನ್ನಬೇಕು. ಇದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ.

Latest Videos
Follow Us:
Download App:
  • android
  • ios