ಚಾತುರ್ಮಾಸದಲ್ಲಿ ನೀವೇನು ಮಾಡಬೇಕು ಎಂಬುದ ತಿಳಿಯಿರಿ..
ನಾಲ್ಕು ತಿಂಗಳುಗಳ ಕಾಲ ಆಚರಿಸುವ ವ್ರತಕ್ಕೆ ಚಾತುರ್ಮಾಸವೆಂದು ಕರೆಯುತ್ತಾರೆ. ದೇವತೆಗಳು ನಿದ್ರಿಸುವ ಕಾಲವೇ ದಕ್ಷಿಣಾಯಣ ಆಗಿರುತ್ತದೆ. ಅಂದರೆ ದಕ್ಷಿಣಾಯಣವು ದೇವತೆಗಳಿಗೆ ರಾತ್ರಿಯಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಕೆಲವು ಶುಭ ಕಾರ್ಯಗಳನ್ನು ನೆಡೆಸುವುದಿಲ್ಲ. ಧಾರ್ಮಿಕ ಕಾರ್ಯಗಳಿಂದ ಈ ಮಾಸದಲ್ಲಿ ಪುಣ್ಯ ಪ್ರಾಪ್ತಿಯಾಗುತ್ತದೆ. ಚಾತುರ್ಮಾಸ ವ್ರತಾಚರಣೆಯ ಬಗ್ಗೆ ತಿಳಿಯೋಣ...
ಹಿಂದೂ ಧರ್ಮದಲ್ಲಿ ಆಚರಿಸಿಕೊಂಡು ಬಂದ ಅನೇಕ ವ್ರತೋಪವಾಸಗಳಿಗೆ ಅವುಗಳದ್ದೇ ಆದ ವಿಶೇಷತೆ (Speciality) ಇದೆ. ಮಾನವರಿಗೆ ಒಂದು ಸಂವತ್ಸರವಾದರೆ (Year) ದೇವತೆಗಳಿಗೆ ಅದು ಒಂದು ದಿನವಾಗಿರುತ್ತದೆ. ಆ ಒಂದು ವರ್ಷದಲ್ಲಿ ದೇವತೆಗಳಿಗೆ ಆರು ತಿಂಗಳು ಹಗಲು ಮತ್ತು ರಾತ್ರಿಯಾಗಿ ವಿಭಾಗಿಸಲ್ಪಡುತ್ತದೆ. ಅದನ್ನೇ ಶಾಸ್ತ್ರದಲ್ಲಿ ಉತ್ತರಾಯಣ ಮತ್ತು ದಕ್ಷಿಣಾಯಣವೆಂದು ಕರೆಯುವುದು.
ದೇವತೆಗಳ ನಿದ್ರಾ ಕಾಲವು ಆರಂಭವಾಗುವ ಸಮಯವೇ ದಕ್ಷಿಣಾಯಣವಾಗಿರುತ್ತದೆ. ಇದರ ಆರಂಭವು ಸೂರ್ಯನು (Sun) ಕರ್ಕಾಟಕ ರಾಶಿಯನ್ನು ಪ್ರವೇಶಮಾಡಿದಾಗ ಆಗುತ್ತದೆ. ಕರ್ಕಾಟಕ ಮಾಸದಲ್ಲಿ ಬರುವ ಆಷಾಢ ಶುಕ್ಲ ಏಕಾದಶಿಯಂದು ಚಾತುರ್ಮಾಸ ಆರಂಭವಾಗುತ್ತದೆ. ಕಾರ್ತೀಕ ಶುಕ್ಲ ಏಕಾದಶೀ ಅಥವಾ ಹುಣ್ಣಿಮೆಯಂದು ಚಾತುರ್ಮಾಸವು ಸಮಾಪ್ತಿಗೊಳ್ಳುತ್ತದೆ. ಶ್ರಾವಣ, ಭಾದ್ರಪದ, ಅಶ್ವಯುಜ ಮತ್ತು ಕಾರ್ತೀಕ ಮಾಸಗಳನ್ನೇ ಚಾತುರ್ಮಾಸವೆಂದು ಕರೆಯಲಾಗುತ್ತದೆ. ನಾಲ್ಕು (Four) ಮಾಸಗಳ (Month) ಕಾಲ ಆಚರಿಸುವ ವ್ರತವನ್ನು ಚಾತುರ್ಮಾಸ ವ್ರತವೆಂದು ಕರೆಯಲಾಗುತ್ತದೆ.
ಸ್ಕಂದ ಪುರಾಣದ ಪ್ರಕಾರ ಚಾತುರ್ಮಾಸ (Chaturmasa)
ಚಾತುರ್ಮಾಸ ವ್ರತವು ಪುಣ್ಯಗಳಿಸಲು (Punya) ಪ್ರಶಸ್ತವಾದ ಮಾಸವಾಗಿದೆ. ಈ ವ್ರತವ್ನನು ಸರ್ವರೂ ಆಚರಿಸಬಹುದೆಂದು ಶಾಸ್ತ್ರ ಹೇಳುತ್ತದೆ. ಈ ವ್ರತಾಚರಣೆಯಿಂದ ಸಮಸ್ತ ಪಾಪಗಳು ನಾಶವಾಗುತ್ತವೆ. ಪುಣ್ಯ ಸಂಪಾದನೆಯ ಮಾರ್ಗವಾದ ಚಾತುರ್ಮಾಸ ವ್ರತಾಚರಣೆಯ (Vrata) ಬಗ್ಗೆ ಸ್ಕಂದಪುರಾಣದಲ್ಲಿ ಹೀಗೆ ಉಲ್ಲೇಖಿಸಲಾಗಿದೆ.
ಇದನ್ನು ಓದಿ: ರವಿ ಯೋಗದಲ್ಲಿ ಚಾತುರ್ಮಾಸ ಆರಂಭ ಈ ಮೂರು ರಾಶಿಯವರಿಗೆ ಧನಲಾಭ
ಇದಂ ವ್ರತಂ ಮಹಾಪುಣ್ಯಂ ಸರ್ವಪಾಪಹರಂ ಶುಭಮ್/ ಸರ್ವಾಪರಾಧಶಮನಂ ಸರ್ವೋಪದ್ರವನಾಶನಮ್/ ಸರ್ವೈರವಶ್ಯಂ ಕರ್ತವ್ಯಂ ಚತುರಾಶ್ರಮವಾಸಿಭಿಃ
ಚಾತುರ್ಮಾಸ ವ್ರತ ಆಚರಣೆ ಮಾಡುವುದರಿಂದ ಪುಣ್ಯವು ಸಿಗುತ್ತದೆ. ಸರ್ವ ಪಾಪಗಳನ್ನು (Sin) ನಾಶಗೊಳಿಸುವ ಶಕ್ತಿ ಈ ವ್ರತಕ್ಕಿದೆ. ಚಾತುರ್ಮಾಸ ವ್ರತವನ್ನು ಶ್ರದ್ಧೆಯಿಂದ ಆಚರಣೆ ಮಾಡಿದರೆ ಪರಮಾತ್ಮನು ಎಲ್ಲ ರೀತಿಯ ಅಪರಾಧವನ್ನು ಮನ್ನಿಸುವನು, ಈ ವ್ರತಾಚರಣೆಯಿಂದ ಎಲ್ಲ ತೊಂದರೆಗಳಿಂದ ಮುಕ್ತಿ ದೊರಕುತ್ತದೆ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸವೆಂದು ಕರೆಯುವ ನಾಲ್ಕು ಆಶ್ರಮಕ್ಕೊಳಪಟ್ಟವರೂ ಈ ವ್ರತವನ್ನು ಆಚರಿಸಬೇಕೆಂದು ಶಾಸ್ತ್ರ ತಿಳಿಸುತ್ತದೆ. ಈ ವ್ರತವನ್ನು ಎಲ್ಲಾ ವರ್ಣದವರೂ ಆಚರಿಸಬಹುದಾಗಿಯೂ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ.
ಚಾತುರ್ಮಾಸದಲ್ಲಿ ಪುಣ್ಯಫಲ ಪಡೆಯಲು ಹೀಗೆ ಮಾಡಿ
- ಚಾತುರ್ಮಾಸದಲ್ಲಿ ದೇವಾಲಯವನ್ನು (Temple) ಗುಡಿಸುವುದು, ಸ್ವಚ್ಛಗೊಳಿಸುವುದು, ಗೋಮಯದಿಂದ ನೆಲವನ್ನು ಶುಚಿ ಮಾಡುವುದು, ದೇವಾಲಯದ ಇತರ ಕಾರ್ಯಗಳಲ್ಲಿ ಕೈ ಜೋಡಿಸುವುದು, ಮುಂತಾದ ಕೆಲಸಗಳನ್ನು ಮಾಡಿದರೆ ಸುಜನ್ಮ ಅಂದರೆ ಉತ್ತಮ ಜನ್ಮ ಪ್ರಾಪ್ತಿಯಾಗುತ್ತದೆ ಎಂದು ಪದ್ಮಪುರಾಣ (Padma purana) ಉಲ್ಲೇಖಿಸುತ್ತದೆ.
- ಈ ಮಾಸದಲ್ಲಿ ಹಾಲು, ತುಪ್ಪ, ಮೊಸರು, ಜೇನುತುಪ್ಪ ಮತ್ತು ಸಕ್ಕರೆಯಿಂದ ದೇವರಿಗೆ ಅಭಿಷೇಕ ಮಾಡಿದವರು ಐಷಾರಾಮಿ ಜೀವನವನ್ನು ಪಡೆಯುತ್ತಾರೆ. ಇಂದ್ರದೇವನು ಸ್ವರ್ಗದಲ್ಲಿ ವೈಭವಯುತವಾಗಿ (Luxury) ಇರುವಂತೆ, ಸುಖ- ಸಮೃದ್ಧ ಜೀವನ (Life) ಪಡೆಯಬಹುದೆಂದು ಹೇಳಲಾಗುತ್ತದೆ.
-ಚಾತುರ್ಮಾಸದಲ್ಲಿ ದೇವರಿಗೆ ಧೂಪ, ದೀಪ, ಪತ್ರೆ - ಪುಷ್ಪಗಳಿಂದ ದೇವರಿಗೆ ಅರ್ಚನೆ ಮತ್ತು ನೈವೇದ್ಯವನ್ನು ಮಾಡಿ ಅರ್ಪಿಸಿದವರು, ಅನಂತ ಸುಖವನ್ನು ಅನುಭವಿಸುತ್ತಾರೆ ಎಂದು ಪದ್ಮ ಪುರಾಣ ತಿಳಿಸುತ್ತದೆ.
- ಅಶ್ವತ್ಥ ಮರಕ್ಕೆ ಪ್ರತಿದಿನ ಪ್ರದಕ್ಷಿಣೆ ಹಾಕುವುದು ಮತ್ತು ಜಲವನ್ನು(Water) ಅರ್ಪಣೆಯನ್ನು ಯಾವ ಸಮಯದಲ್ಲಿ ಮಾಡಿದರೂ ಪುಣ್ಯ ಪ್ರಾಪ್ತಿಯಾಗುತ್ತದೆ. ಅದೇ ಚಾತುರ್ಮಾಸದಲ್ಲಿ ಮಾಡಿದರೆ ವಿಶೇಷ ಪುಣ್ಯಕ್ಕೆ ಭಾಜನರಾಗಬಹುದಾಗಿದೆ. ದೇವಸ್ಥಾನಕ್ಕೆ ಘಂಟೆಯನ್ನು ದಾನವಾಗಿ ನೀಡುವುದು, ಬ್ರಾಹ್ಮಣರಿಗೆ ಗೌರವ ನೀಡುವುದು ಮ್ತತು ನಿರ್ಗತಿಕರಿಗೆ ಅಗತ್ಯವಸ್ತುಗಳನ್ನು ಕೊಡುವುದು, ಅವಶ್ಯಕ ವಸ್ತುಗಳನ್ನು ಸಜ್ಜನರಿಗೆ ದಾನ ನೀಡುವುದರಿಂದ ಜೀವನದಲ್ಲಿ ಎಂದೂ ಯಾವ ವಸ್ತುವಿಗೂ ಕೊರತೆ ಬರುವುದಿಲ್ಲವೆಂದು ಶಾಸ್ತ್ರ ಹೇಳುತ್ತದೆ.
- ಚಾತುರ್ಮಾಸ ವ್ರತವನ್ನು ಮುಕ್ತಾಗೊಳಿಸುವ ದಿನ ಅನ್ನ, ವಸ್ತ್ರ ಮತ್ತು ಹಾಸಿಗೆಯನ್ನು ದಾನವಾಗಿ ನೀಡುವುದರಿಂದ ಸರ್ವ ಸುಖವನ್ನು ಹೊಂದುತ್ತಾರಲ್ಲದೆ, ಅಕ್ಷಯ ಧನ- ಧಾನ್ಯ ಸಂಪತ್ತನ್ನು ಹೊಂದುತ್ತಾರೆ.
ಇದನ್ನು ಓದಿ: ಮನೆಯ ಸುಖ ಶಾಂತಿಗಿರಲಿ ಶಂಖಪುಷ್ಪ, ಹೂವಲ್ಲೇನಿದೆ ವಿಶೇಷ!
- ಈ ಮಾಸದಲ್ಲಿ ಫಲವನ್ನು ದಾನವಾಗಿ ನೀಡುವುದರಿಂದ ಉತ್ತಮ ಜೀವನ (Good life) ಪ್ರಾಪ್ತಿಯಾಗುತ್ತದೆ.
- ಚಾತುರ್ಮಾಸ ವ್ರತಾಚರಣೆಗೆ ಕೆಲವು ನಿಯಮಗಳಿವೆ. ಆ ನಿಯಮದಂತೆ ದಿನಕ್ಕೆ ಒಂದೇ ಬಾರಿ ಭೋಜನ ಮಾಡಬೇಕು, ಹಸಿದವರಿಗೆ ಅನ್ನ ನೀಡುವುದು, ನಿಯಮ ಬದ್ಧರಾಗಿರುವುದು, ಭೋಜನ ಮಾಡುವ ಸಮಯದಲ್ಲಿ ಮೌನವಾಗಿರುವುದು, ನೆಲದ ಮೇಲೆ ನಿದ್ರಿಸುವುದು ಶ್ರೇಯಸ್ಕರವೆಂದು ಶಾಸ್ತ್ರ ಹೇಳುತ್ತದೆ. ಅಷ್ಟೇ ಅಲ್ಲದೆ ಜೀವನದಲ್ಲಿ ಗೌರವ (Respect) ಮತ್ತು ಕೀರ್ತಿಯನ್ನು ಪಡೆಯ ಬಹುದಾಗಿರುತ್ತದೆ.
ಚಾತುರ್ಮಾಸದಲ್ಲಿ ಮಾಡಬೇಕಾದ ಕೆಲಸಗಳಿವು..
ಧಾರ್ಮಿಕ ಕಾರ್ಯಗಳಿಗೆ, ವ್ರತ – ಅನುಷ್ಠಾನಗಳಿಗೆ ಚಾತುರ್ಮಾಸವು ಪ್ರಶಸ್ತವಾದ ಮಾಸವಾಗಿದೆ.ಶಾಸ್ತ್ರ ಹೇಳುವ ಪ್ರಕಾರ ಈ ಮಾಸದಲ್ಲಿ ಹೆಚ್ಚು ದೇವರ ಕಾರ್ಯಗಳನ್ನು ಮಾಡಬೇಕು. ಧಾರ್ಮಿಕ ಅನುಷ್ಠಾನ, ಶ್ರೀಮದ್ಭಾಗವತ ಜ್ಞಾನ ಯಜ್ಞ, ಶ್ರೀ ರಾಮಾಯಣ ಮತ್ತು ಭಗವದ್ಗೀತೆಯ ಕಥೆ ಪಠಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದು ಅಥವಾ ಪಾಲ್ಗೊಳ್ಳುವುದು ಶ್ರೇಯಸ್ಕರವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಶ್ರಾವಣ ಮಾಸದಲ್ಲಿ ಮಾಡುವ ಧಾರ್ಮಿಕ ಕಾರ್ಯಗಳಿಗೆ ಹೆಚ್ಚಿನ ಫಲ ದೊರೆಕುತ್ತದೆ.